ನಿಮ್ಮ ತುಟಿಯ ಕಾಂತಿ ಹೆಚ್ಚಿಸಬೇಕಾ? ನಟಿ ನಯನತಾರ ಬಳಿ ಇದೆ ಪರಿಹಾರ!
ನಟನೆಯ ಜೊತೆ ಜೊತೆಗೆ ಸಿನಿಮಾ ನಟ ನಟಿಯರು ಏನಾದರೂ ಉದ್ಯಮ, ಸೈಡ್ ಬ್ಯುಸಿನೆಸ್ ಅಂತ ತೊಡಗಿಸಿಕೊಂಡಿರುತ್ತಾರೆ. ಈ ಗಾಗಲೇ ಬಾಲಿವುಡ್‌ನ ಸಾಕಷ್ಟು ಸೆಲೆಬ್ರೆಟಿಗಳು ನಟನೆಯ ಜೊತೆ ಜೊತೆಗೆ ಉದ್ಯಮಕ್ಕೂ ಕಾಲಿಟ್ಟಿದ್ದಾರೆ. ಅಲ್ಲೂ ಕೋಟಿ ಕೋಟಿ ಹಣ ಸಂಪಾದನೆ ಮಾಡುತ್ತಿದ್ದಾರೆ. ಇದೀಗ ನಟನೆಯ ಜೊತೆಗೆ ಸೌತ್ ಬ್ಯೂಟಿ ಉದ್ಯಮಕ್ಕೆ ಕಾಲಿಟ್ಟಿದ್ದಾರೆ. ಈ ಉದ್ಯಮವನ್ನು ಇತ್ತೀಚೆಗೆ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದು, ಈ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ.
ಸೌತ್ ಬ್ಯೂಟಿ, ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ, ಮಹಿಳಾ ಪ್ರಧಾನ ಚಿತ್ರಗಳ ಮೂಲಕವೇ ಗಮನ ಸೆಳೆದಿರೋ ನಟಿ ನಯನ ತಾರ ಈಗ ಸಾಕಷ್ಟು ಸಿನಿಮಾಗಳಲ್ಲಿ ಬ್ಯೂಸಿಯಾಗಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ತೊಡಗಿಸಿಕೊಂಡಿರುವ ನಯನ ತಾರ ಇದೀಗ ಬ್ಯೂಟಿ ಉದ್ಯಮಕ್ಕೆ ಕಾಲಿಟ್ಟಿದ್ದಾರೆ. ಈ ಬಗ್ಗೆ ತನ್ನ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಾಕಿಕೊಂಡಿದ್ದು, ತನ್ನ ಉದ್ಯಮದ ಬಗ್ಗೆ ಸಾಕಷ್ಟು ಮಾಹಿತಿ ನೀಡಿದ್ದಾರೆ. ಬ್ಯೂಟಿ ಪ್ರಾಡಕ್ಟ್ ಲಿಪ್ ಬಾಮ್ ಉತ್ಪನ್ನವನ್ನು ಅವರು ಈಗಾಗಲೇ ಮಾರುಕಟ್ಟೆಗೆ ಪರಿಚಯಿಸಿದ್ದಾರೆ.
ನಯನತಾರ ಅವರ ಈ ಉದ್ಯಮಕ್ಕೆ ಡರ್ಮಟಾಲಜಿಸ್ಟ್ ಡಾ. ರಂಜಿತಾ ರಾಜನ್ ನೆರವಾಗಿದ್ದಾರೆ. ನಯನತಾರ ಮತ್ತು ಡಾ ರಂಜಿತಾ ರಾಜನ್ ಇಬ್ಬರು ಸೇರಿ "ದಿ ಲಿಪ್ ಬಾಮ್ ಕಂಪನಿ" ಹೊರತಂದಿದ್ದಾರೆ. "ದಿ ಲಿಪ್ ಬಾಮ್ ಕಂಪನಿ" ವಿಶೇಷ ಏನೆಂದರೇ ಜಗತ್ತಿನಲ್ಲೆ ಅತೀ ಹೆಚ್ಚು ಕಲೆಕ್ಷನ್ ಇರುವ ಸಂಸ್ಥೆ ಇದಾಗಿದ್ದು, ಮಹಿಳೆಯರು ಮತ್ತು ಪುರುಷರ ತುಟಿಯ ಕಂಡೀಷನ್‌ಗೆ ತಕ್ಕಂತೆ ಲಿಪ್ ಬಾಮ್‌ಗಳು ದೊರೆಯಲಿದೆ.

ಇನ್ನು ಈ ಬಗ್ಗೆ ಬರೆದುಕೊಂಡಿರುವ ನಯನತಾರ "ಎಲ್ಲಾ ಉತ್ತಮ ಕೆಲಸಗಳು ಸಮಯ ತೆಗೆದುಕೊಳ್ಳುತ್ತೆ ಮತ್ತು ಒಳ್ಳೆಯ ಕೆಲಸಗಳು ಸಂಬಂಧಗಳನ್ನು ಬೆಸೆಯುತ್ತೆ. ನಾನು ಈಗ ನಿಮ್ಮ ಮುಂದೆ 100 ವಿಧದ ಲಿಪ್ ಬಾಮ್ ಜೊತೆಗೆ ಬರುತ್ತಿದ್ದೇನೆ. ಯಾವುದೇ ತರಹದ ತುಟಿ ಇರಲಿ, ಡ್ರೈ, ಸೆನ್ಸಿಟಿವ್, ರಫ್ ತುಟಿಗಳಿಗೆ ಇದೇ ಪರಿಹಾರ. ಎಲ್ಲಾ ತುಟಿಗಳ ಸಮಸ್ಯೆಗೂ ಈ ಲಿಪ್ ಬಾಮ್ ಪರಿಹಾರ ಆಗಿರುತ್ತೆ. ಸಾಕಷ್ಟು ನೈಸರ್ಗಿಕ ಸಾಮಗ್ರಿಗಳನ್ನು ಬಳಸಲಾಗಿದೆ, ಹಾಗೂ ಇದು ಪರಿಸರ ಸ್ನೇಹಿಯಾಗಿದೆ. ಬಗೆ ಬಗೆಯ ಸುಗಂಧಗಳ ಲಿಪ್ ಬಾಮ್ ದೊರಕಲಿದ್ದು, ತುಟಿಗೆ ತುಂಬಾ ಅರೋಗ್ಯಕರವಾಗಿ ಇರುವಂತೆ ತಯಾರು ಮಾಡಲಾಗಿದೆ " ಎಂದು "ದಿ ಲಿಪ್ ಬಾಮ್ ಕಂಪನಿ" ಬಗ್ಗೆ ನಯನತಾರ ಮಾಹಿತಿ ನೀಡಿದ್ದಾರೆ.
ಮತ್ತು ಈ ಉತ್ಪನ್ನ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ನಯನತಾರ, ಸೌಂದರ್ಯವರ್ಧಕ ಪ್ರಾಡೆಕ್ಟ್‌ಗಳನ್ನು ಜನರ ಮುಂದೆ ಇಡುವಾಗ ಆ ಉತ್ಪನ್ನಗಳ ವಿಚಾರದಲ್ಲಿ ನಾವು ಯಾವತ್ತೂ ರಾಜಿ ಆಗುವುದಿಲ್ಲಾ. ಅತ್ಯದ್ಭುತ ಪ್ರಾಡಕ್ಟ್‌ಗಳನ್ನು ಜನರಿಗೆ ನೀಡಲು ಇಷ್ಟ ಪಡುತ್ತೇವೆ. ಈ ಎಲ್ಲಾ ವಿಚಾರಗಳನ್ನು ಗಮನದಲ್ಲಿ ಇಟ್ಟುಕೊಂಡು "ದಿ ಲಿಪ್ ಬಾಮ್ ಕಂಪನಿ"ಯನ್ನು ಹೊರತಂದಿದ್ದೇವೆ ಎಂದು ತಿಳಿಸಿದ್ದಾರೆ.

ಇನ್ನು ಇತ್ತೀಚೆಗಷ್ಟೇ ತನ್ನ ಹುಟ್ಟುಹಬ್ಬವನ್ನು ಗ್ರ್ಯಾಂಡ್ ಆಗಿ ಆಚರಿಸಿಕೊಂಡಿದ್ದ ನಯನತಾರ ಸದ್ಯ ಶೂಟಿಂಗ್‌ನಿಂದ ಬ್ರೇಕ್ ತೆಗೆದುಕೊಂಡು ಜಾಲಿ ಟ್ರಿಪ್‌ನಲ್ಲಿ ಬ್ಯುಸಿಯಾಗಿದ್ದಾರೆ. ತನ್ನ ಸೋಷಿಯಲ್ ಮೀಡಿಯಾದಲ್ಲಿ ವಿದೇಶದಲ್ಲಿ ತೆಗೆದಿರೋ ಫೋಟೊಗಳನ್ನು ಶೇರ್ ಮಾಡುತ್ತಿರುವ ನಟಿ ನಯನತಾರ, ಮುಂದಿನ ಸಿನಿಮಾದ ಬಗ್ಗೆ ಆದಷ್ಟು ಬೇಗ ಮಾಹಿತಿ ನೀಡುತ್ತೇನೆ ಎಂದು ಬರೆದುಕೊಂಡಿದ್ದಾರೆ.


Click it and Unblock the Notifications











