ನಯನತಾರಾ ಹುಟ್ಟುಹಬ್ಬಕ್ಕೆ ಪೋಷಕರಿಂದ ಸಿಕ್ತು ಸರ್ಪ್ರೈಸ್ ಗಿಫ್ಟ್
ದಕ್ಷಿಣ ಭಾರತೀಯ ಸಿನಿಮಾರಂಗದ ಖ್ಯಾತ ನಟಿ, ಲೇಡಿ ಸೂಪರ್ ಸ್ಟಾರ್ ಅಂತನೆ ಪ್ರಸಿದ್ಧಿಯಾಗಿರುವ ನಯನತಾರಾ ಇತ್ತೀಚಿಗಷ್ಟೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. 36ನೇ ವಂಸತಕ್ಕೆ ಕಾಲಿಟ್ಟಿರುವ ನಟಿ ನಯನತಾರಾಗೆ ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರಿಂದ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ.
ನಯನತಾರಾ ಹುಟ್ಟುಹಬ್ಬದ ಆಚರಣೆ ಹೇಗಿರಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿತ್ತು. ಭಾವಿ ಪತಿ, ಪ್ರಿಯತಮ ವಿಘ್ನೇಶ್ ಶಿವನ್ ಜೊತೆ ನಯನತಾರಾ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ ಎನ್ನುವ ಮಾತು ಕೇಳಿಬಂದಿತ್ತು. ಆದರೆ ವಿಘ್ನೇಶ್ ಬಿಟ್ಟು ಅಪ್ಪ-ಅಮ್ಮನ ಜೊತೆ ಈ ಬಾರಿಯ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿದ್ದಾರೆ.
ಮಗಳಿಗಾಗಿ ನಯನತಾರಾ ಅಪ್ಪ-ಅಮ್ಮ್ ವಿಶೇಷವಾಗಿ ಕೇಕ್ ಮಾಡಿಸಿ ಮಗಳ ಜನ್ಮದಿನವನ್ನು ಆಚರಣೆ ಮಾಡಿದ್ದಾರೆ. ಒಂದಲ್ಲ ಎರಡಲ್ಲ ಅನೇಕ ಭಗೆಯ ಕೇಕ್ ಗಳನ್ನು ಮಾಡಿಸಿದ್ದರು. ಮನೆ ತುಂಬಾ ಹೂ, ಬಲೂನ್ ನಿಂದ ಅಲಂಕಾರ ಮಾಡಿ ಮಗಳ ಹುಟ್ಟುಹಬ್ಬವನ್ನು ಸಂಭ್ರಮಿಸಿದ್ದಾರೆ. ಅಪ್ಪ-ಅಮ್ಮನ ಸರ್ಪ್ರೈಸ್ ನೋಡಿ ನಯನತಾರಾ ಫುಲ್ ಖುಷ್ ಆಗಿದ್ದಾರೆ.

ಕೇಕ್ ಕತ್ತರಿಸುತ್ತಿರುವ ಸುಂದರ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಫೋಟೋ ಜೊತೆಗೆ ಹುಟ್ಟುಹಬ್ಬ ಆಚರಣೆ ಬಗ್ಗೆಯೂ ಬರೆದುಕೊಂಡಿದ್ದಾರೆ. ಎಷ್ಟು ಸುಂದರವಾಗಿದೆ. ಅಪ್ಪ, ಅಮ್ಮ ಮತ್ತು ಸಹೋದರ ಲೆನು ಕುರಿಯನ್ ಅದ್ಭುತವಾದ ಸರ್ಪ್ರೈಸ್' ಎಂದು ಬರೆದುಕೊಂಡಿದ್ದಾರೆ.
ನಯನತಾರಾ ಸದ್ಯ ನೆಟ್ರಿಕಣ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರಕ್ಕೆ ಭಾವಿ ಪತಿ ವಿಘ್ನೇಶ್ ಶಿವನ್ ಬಂಡವಾಳ ಹೂಡಿಸಿದ್ದಾರೆ. ಹುಟ್ಟುಹಬ್ಬದ ಪ್ರಯುಕ್ತ ನೆಟ್ರಿಕಣ್ ಸಿನಿಮಾದ ಟೀಸರ್ ರಿಲೀಸ್ ಮಾಡಲಾಗಿದೆ. ಈ ಟೀಸರ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇತ್ತೀಚಿಗೆ ನಯನತಾರಾ ಮೂಕುತಿ ಅಮ್ಮನ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು.


Click it and Unblock the Notifications











