ನಯನತಾರಾ ಪತಿ ಟಿ ಶರ್ಟ್ ಮೇಲೆ ಧೋನಿ ಆಟೋಗ್ರಾಫ್; ವಿಡಿಯೊ ವೈರಲ್

ಮೊನ್ನೆ ( ಜುಲೈ 11 ) ಚೆನ್ನೈನಲ್ಲಿ ಎಂ ಎಸ್ ಧೋನಿ ನಿರ್ಮಾಣದ ಮೊದಲ ಚಿತ್ರದ ಆಡಿಯೊ ಹಾಗೂ ಟ್ರೈಲರ್ ಲಾಂಚ್ ಕಾರ್ಯಕ್ರಮ ಜರುಗಿತು. ಹೌದು, ಧೋನಿ ಎಂಟರ್‌ಟೈನ್‌ಮೆಂಟ್ಸ್ ಬ್ಯಾನರ್ ಅಡಿಯಲ್ಲಿ ಎಂ ಎಸ್ ಧೋನಿ ಪತ್ನಿ ಸಾಕ್ಷಿ ಸಿಂಗ್ ಧೋನಿ ನಿರ್ಮಾಪಕಿಯಾಗಿದ್ದು, ಮೊದಲಿಗೆ ತಮ್ಮ ಈ ಬ್ಯಾನರ್‌ನಲ್ಲಿ ತಮಿಳು ಚಿತ್ರವೊಂದನ್ನು ನಿರ್ಮಿಸಿದ್ದಾರೆ.

ಎಲ್‌ ಜಿ ಎಮ್ ಎಂಬ ಚಿತ್ರಕ್ಕೆ ಧೋನಿ ಪತ್ನಿ ಸಾಕ್ಷಿ ಸಿಂಗ್ ಧೋನಿ ಬಂಡವಾಳ ಹೂಡಿದ್ದು, ಈ ಚಿತ್ರದಲ್ಲಿ ನಾಯಕನಾಗಿ ಹರೀಶ್ ಕಲ್ಯಾಣ್ ಹಾಗೂ ನಾಯಕಿಯಾಗಿ ಇವಾನಾ ನಟಿಸಿದ್ದಾರೆ. ಇನ್ನು ಈ ಚಿತ್ರದ ಆಡಿಯೊ ಹಾಗೂ ಟ್ರೈಲರ್ ಲಾಂಚ್ ಮಾಡಲು ಎಂ ಎಸ್ ಧೋನಿ ತಮ್ಮ ಪತ್ನಿ ಜತೆ ಚೆನ್ನೈಗೆ ಆಗಮಿಸಿದ್ದರು.

Nayanthara husband Vighnesh Shivan poses with tshirt signed by MS Dhoni

ಈ ಸಂದರ್ಭದಲ್ಲಿ ತಮಿಳಿನ ಹಲವಾರು ಕಲಾವಿದರು ಎಂಎಸ್ ಧೋನಿ ಅವರನ್ನು ಭೇಟಿ ಮಾಡಿ ಫೋಟೊ ತೆಗೆಸಿಕೊಂಡು ಖುಷಿಪಟ್ಟಿದ್ದಾರೆ ಹಾಗೂ ಭಾರತ ಕಂಡ ಶ್ರೇಷ್ಠ ನಾಯಕ ತಮ್ಮ ಚಿತ್ರರಂಗಕ್ಕೆ ನಿರ್ಮಾಪಕನಾಗಿ ಆಗಮಿಸುತ್ತಿರುವುದಕ್ಕೆ ಸಂತಸ ಹೊರಹಾಕಿದ್ದಾರೆ ಹಾಗೂ ಶುಭ ಕೋರಿದ್ದಾರೆ.

ಹೀಗೆ ನಡೆದ ಲೆಟ್ಸ್ ಗೆಟ್ ಮ್ಯಾರೀಡ್ ( ಎಲ್ ಜಿ ಎಮ್ ) ಚಿತ್ರದ ಟ್ರೈಲರ್ ಹಾಗೂ ಹಾಡುಗಳ ಬಿಡುಗಡೆ ಕಾರ್ಯಕ್ರಮಕ್ಕೆ ನಟಿ ನಯನತಾರಾ ಪತಿ ವಿಘ್ನೇಶ್ ಶಿವನ್ ಸಹ ಆಗಮಿಸಿದ್ದರು. ಈ ಸಂದರ್ಭದಲ್ಲಿ ಎಂ ಎಸ್ ಧೋನಿ ಬಳಿ ವಿಘ್ನೇಶ್ ಶಿವನ್ ತಮ್ಮ ಟಿ ಶರ್ಟ್ ಮೇಲೆ ಆಟೋಗ್ರಾಫ್ ಹಾಕಿಸಿಕೊಂಡಿದ್ದಾರೆ.

ಈ ವಿಡಿಯೊವನ್ನು ವಿಘ್ನೇಶ್ ಶಿವನ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.

"ನನ್ನ ಹೀರೊ ಜತೆಗಿನ ಫೋಟೊ. ನನ್ನ ಕ್ಯಾಪ್ಟನ್, ನನ್ನ ರೋಲ್ ಮಾಡೆಲ್! ಈ ಶುದ್ಧ ಆತ್ಮದ ಪಕ್ಕದಲ್ಲಿ ಇರುವುದು ಯಾವಾಗಲೂ ಭಾವನಾತ್ಮಕವಾಗಿದೆ! ಧೋನಿ ನಾನು ತುಂಬಾ ಪ್ರೀತಿಸುವ ಮತ್ತು ಪ್ರತಿ ದಿನ ನೋಡುತ್ತಿರುವ ವ್ಯಕ್ತಿ! ನಾನು ಅವನನ್ನು ನೋಡಿದಾಗಲೆಲ್ಲಾ ನನ್ನ ಮುಖದಲ್ಲಿ ಮೂಡುವ ಸಂತೋಷವನ್ನು ನೋಡಲು ನನಗೆ ತುಂಬಾ ಖುಷಿಯಾಗುತ್ತದೆ. ಅವರು ತಮಿಳು ಇಂಡಸ್ಟ್ರಿಯಲ್ಲಿ ಸಿನಿಮಾ ಮಾಡುವುದನ್ನು ನೋಡಿ ತುಂಬಾ ಖುಷಿಯಾಗಿದೆ! ಅವರ ಚಲನಚಿತ್ರ ನಿರ್ಮಾಣ ಸಂಸ್ಥೆಯ ಪ್ರಯತ್ನಗಳನ್ನು ಪ್ರಾರಂಭಿಸಲು ತಮಿಳು ಇಂಡಸ್ಟ್ರಿಯನ್ನು ಆಯ್ಕೆ ಮಾಡಿದ್ದು ಹೆಮ್ಮಯ ವಿಷಯ. @dhoni.entertainment ನಿಂದ ಬರುವ ಚಲನಚಿತ್ರಗಳನ್ನು ವೀಕ್ಷಿಸಲು ಥಿಯೇಟರ್‌ಗಳಲ್ಲಿ ವೀಕ್ಷಿಸುವ ಮೂಲಕ ನಾವು ಪ್ರೀತಿ ಮತ್ತು ಬೆಂಬಲವನ್ನು ನೀಡಲು ಸಿದ್ಧರಿದ್ದೇವೆ. ಸಾಕ್ಷಿ ಧೋನಿ ಸಿಂಗ್ ಮೇಡಂ ಅವರಿಗೆ ಧನ್ಯವಾದಗಳು ಹಾಗೂ ತಮಿಳು ಸಿನಿಮಾಗೆ ಸ್ವಾಗತ" ಎಂದು ವಿಘ್ನೇಶ್ ಶಿವನ್ ಬರೆದುಕೊಂಡಿದ್ದಾರೆ.

ಇನ್ನು ಈ ಚಿತ್ರದಲ್ಲಿ ನಡಿಯಾ, ಯೋಗಿ ಬಾಬು, ಆರ್‌ಜೆ ಮಿರ್ಚಿ ವಿಜಯ್ ಸಹ ನಟಿಸಿದ್ದು, ನಿರ್ದೇಶಕ ರಮೇಶ್ ತಮಿಳ್‌ಮಣಿ ಸ್ವತಃ ಸಂಗೀತವನ್ನೂ ಸಹ ಸಂಯೋಜಿಸಿದ್ದಾರೆ. ಸದ್ಯ ಲೆಟ್ಸ್ ಗೆಟ್ ಮ್ಯಾರೀಡ್ ಚಿತ್ರದ ಚಿತ್ರೀಕರಣ ಸಂಪೂರ್ಣವಾಗಿ ಮುಕ್ತಾಯಗೊಂಡಿದೆ.

More from Filmibeat

English summary
Nayanthara husband Vighnesh Shivan poses with tshirt signed by MS Dhoni. Take a look.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X