"ನಂಗೂ ಆ ಕಹಿ ಅನುಭವ ಆಗಿತ್ತು, ನನ್ನನ್ನೂ ಕಮೀಟ್‌ಮೆಂಟ್ ಕೇಳಿದ್ರು": ನಯನತಾರ

ಚಿತ್ರರಂಗದ ಕಾಸ್ಟಿಂಗ್ ಕೌಚ್ ಎನ್ನುವ ಕರಾಳ ಮುಖವನ್ನು ಈಗಾಗಲೇ ಸಾಕಷ್ಟು ನಟಿಯರು ತೆರೆದಿಟ್ಟಿದ್ದಾರೆ. ಅವಕಾಶಕ್ಕಾಗಿ ನಮ್ಮನ್ನು ಕಮೀಟ್‌ಮೆಂಟ್ ಕೇಳಿದ್ದರು ಎಂದು ಹೇಳುತ್ತಾ ಬಂದಿದ್ದಾರೆ. 'ಪಾತ್ರಕ್ಕಾಗಿ ಪಲ್ಲಂಗ' ಎನ್ನುವ ಹೀನ ಸಂಸ್ಕೃತಿ ಬಗ್ಗೆ ಇತ್ತೀಚೆಗೆ ನಟಿಯರು ಧೈರ್ಯವಾಗಿ ಮಾತನಾಡುತ್ತಿದ್ದಾರೆ. ಮೀಟು ಅಭಿಯಾನದ ಅಡಿಯಲ್ಲಿ ಹೊಸ ನಟಿಯರು ಅಷ್ಟೇ ಅಲ್ಲ, ಹಿರಿಯ ನಟಿಯರು ಕೂಡ ತಮಗಾದ ಕಹಿ ಅನುಭವಗಳನ್ನು ಬಿಟ್ಟಿಟ್ಟಿದ್ದಾರೆ.

ಸ್ಟಾರ್ ನಟಿಯರಿಗೂ ಕೂಡ ಕಾಸ್ಟಿಂಗ್ ಕೌಚ್ ಎನ್ನುವ ಸನ್ನಿವೇಶಗಳು ನಿರ್ಮಾಣವಾಗಿದೆ. ಅದಕ್ಕೆಲ್ಲಾ ಬಗ್ಗದೇ ತಮ್ಮ ಪ್ರತಿಭೆ ಮೇಲೆ ನಂಬಿಕೆಯಿಟ್ಟು ಸಾಕಷ್ಟು ನಟಿಯರು ಗೆದ್ದು ಬೀಗಿದ್ದಾರೆ. ನಟಿ ನಯನತಾರಾ ಕೂಡ ಇಂತಹ ಸನ್ನಿವೇಶವನ್ನು ಚಿತ್ರರಂಗಕ್ಕೆ ಬಂದ ಆರಂಭದಲ್ಲಿ ಎದುರಿಸಿದ್ದರಂತೆ. ಈ ಬಗ್ಗೆ ಇತ್ತೀಚಿಗೆ ಲೇಡಿ ಸೂಪರ್ ಸ್ಟಾರ್ ಮೌನ ಮುರಿದಿದ್ದಾರೆ. ಕಳೆದ ವರ್ಷ ನಿರ್ದೇಶಕ ವಿಘ್ನೇಶ್ ಶಿವನ್ ಕೈ ಹಿಡಿದಿದ್ದರು. ಮದುವೆಯಾದ ಕೆಲವೇ ತಿಂಗಳಿಗೆ ದಂಪತಿ ಸಾರೋಗಸಿ ವಿಧಾನದಲ್ಲಿ ಅವಳಿ ಗಂಡು ಮಕ್ಕಳ ಪೋಷಕರಾಗಿದ್ದರು.

ಮದುವೆ ನಂತರ ನಯನತಾರಾ ನಟನೆಯ 'ಗಾಡ್ ಫಾದರ್' ಹಾಗೂ 'ಕನೆಕ್ಟ್' ಸಿನಿಮಾಗಳು ಬಿಡುಗಡೆಯಾಗಿದೆ. ಆದರೆ ಎರಡೂ ಸಿನಿಮಾಗಳನ್ನು ಪ್ರೇಕ್ಷಕರನ್ನು ರಂಜಿಸುವಲ್ಲಿ ವಿಫಲವಾಗಿತ್ತು. ಸದ್ಯ ಮತ್ತಷ್ಟು ಸಿನಿಮಾಗಳಲ್ಲಿ ನಯನ್ ಬ್ಯುಸಿಯಾಗಿದ್ದಾರೆ.

ಸಂದರ್ಶನದಲ್ಲಿ ನಯನತಾರ ಹೇಳಿಕೆ

ಸಂದರ್ಶನದಲ್ಲಿ ನಯನತಾರ ಹೇಳಿಕೆ

ಸಾಮಾನ್ಯವಾಗಿ ನಯನತಾರಾ ಸಿನಿಮಾ ಪ್ರಚಾರ ಕಾರ್ಯಕ್ರಮಗಳಿಗೆ ಹಾಜರಾಗುವುದಿಲ್ಲ. ಬರೀ ಸಿನಿಮಾದಲ್ಲಿ ನಟಿಸೋದಕ್ಕೆ ಮಾತ್ರ ಸಂಭಾವನೆ ಪಡೆದು ಒಪ್ಪಂದ ಮಾಡಿಕೊಂಡಿರುತ್ತಾರೆ. ಆದರೆ ಇತ್ತೀಚೆಗೆ 'ಕನೆಕ್ಟ್' ಚಿತ್ರವನ್ನು ತಮ್ಮದೇ ಬ್ಯಾನರ್‌ನಲ್ಲಿ ನಿರ್ಮಿಸಿ ನಟಿಸಿದ್ದರು. ಹಾಗಾಗಿ ಸಿನಿಮಾ ಪ್ರಚಾರ ಮಾಡಿದ್ದರು. ಈ ವೇಳೆ ನೀಡಿದ ಸಂದರ್ಶನದಲ್ಲಿ ಸಾಕಷ್ಟು ಸಂಗತಿಗಳನ್ನು ಲೇಡಿ ಸೂಪರ್ ಸ್ಟಾರ್ ಹಂಚಿಕೊಂಡಿದ್ದರು. ಇದೀಗ ಮತ್ತೊಮ್ಮೆ ನಯನತಾರ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.

ನನ್ನನ್ನೂ ಕಮೀಟ್‌ಮೆಂಟ್ ಕೇಳಿದ್ದರು

ನನ್ನನ್ನೂ ಕಮೀಟ್‌ಮೆಂಟ್ ಕೇಳಿದ್ದರು

ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಇದೆ, ಇಲ್ಲ ಎನ್ನುವುದರ ಬಗ್ಗೆ ನಾನು ಮಾತನಾಡುವುದಿಲ್ಲ. ಆದರೆ ಇಂತಹ ಸಮಸ್ಯೆಗಳು ನಮ್ಮ ಬಿಹೇವಿಯರ್ ಕಾರಣಕ್ಕೆ ಎದುರಾಗುತ್ತದೆ. ಕಾಸ್ಟಿಂಗ್ ಕೌಚ್ ಪರಿಸ್ಥಿತಿ ಎದುರಾದಾಗ ಅದನ್ನು ಹೇಗೆ ಎದುರಿಸಬೇಕು ಎನ್ನುವುದು ನಮ್ಮ ಕೈಯಲ್ಲಿ ಇರುತ್ತದೆ. ನಯನತಾರಾಗೂ ಕೂಡ ಆರಂಭದ ದಿನಗಳಲ್ಲಿ ಕಾಸ್ಟಿಂಗ್ ಕೌಚ್ ಎನ್ನುವುದು ತಪ್ಪಲಿಲ್ಲವಂತೆ. ತನ್ನನ್ನು ಕೂಡ ಕೆಲವರು ಕಮೀಟ್‌ಮೆಂಟ್ ಕೇಳಿದ್ದಾಗಿ ನಯನ್ ಹೇಳಿದ್ದಾರೆ.

ಟ್ಯಾಲೆಂಟ್ ನಂಬಿ ಬಂದವಳು

ಟ್ಯಾಲೆಂಟ್ ನಂಬಿ ಬಂದವಳು

"ನಾನು ಇಂಡಸ್ಟ್ರಿಗೆ ಟ್ಯಾಲೆಂಟ್ ನಂಬಿ ಬಂದಿದ್ದೇನೆ. ಬರೀ ಟ್ಯಾಲೆಂಟ್‌ನಿಂದಲೇ ಈ ಮಟ್ಟಕ್ಕೇರಿದ್ದೀನಿ" ಎಂದು ನಯನತಾರ ಹೇಳಿದ್ದಾರೆ. ಲೇಡಿ ಸೂಪರ್ ಸ್ಟಾರ್ ಕೂಡ ಕಾಸ್ಟಿಂಗ್ ಕೌಚ್ ಸನ್ನಿವೇಶ ಎದುರಿಸಿದ್ರಾ? ಎಂದು ಕೇಳಿ ಸಿನಿರಸಿಕರು ಶಾಕ್ ಆಗಿದ್ದಾರೆ. ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ ಲೇಡಿ ಸೂಪರ್ ಸ್ಟಾರ್ ಬಗ್ಗೆ ತಮಿಳು ತಂಬಿಗಳು ಗರಂ ಆಗಿದ್ದಾರೆ. ಈ ಬಗ್ಗೆ ಮಾತನಾಡುವಂತೆ ಇದ್ದರೆ ಬಹಳ ಹಿಂದೆಯೇ ಮಾತನಾಡಬೇಕಿತ್ತು. ಸುಚಿ ಲೀಕ್ಸ್ ಗದ್ದಲ ಏರ್ಪಟ್ಟ ಸಮಯದಲ್ಲಿ ಮಾತನಾಡಬೇಕಿತ್ತು. ಈಗ ಯಾಕೆ ಮಾತನಾಡುತ್ತಿದ್ದಾರೆ? ಎಂದು ಕೇಳುತ್ತಿದ್ದಾರೆ.

ನಯನತಾರ ಬಾಲಿವುಡ್ ಎಂಟ್ರಿ

ನಯನತಾರ ಬಾಲಿವುಡ್ ಎಂಟ್ರಿ

ಸದ್ಯ ನಯನತಾರಾ ಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಅವಳಿ ಮಕ್ಕಳ ಲಾಲನೆ ಪಾಲನೆಗಾಗಿ ಹೆಚ್ಚಿನ ಸಮಯ ಮೀಸಲಿಟ್ಟಿದ್ದಾರೆ. ಇನ್ನು ಶೀಘ್ರದಲ್ಲಿಯೇ ನಯನ್ ಬಾಲಿವುಡ್‌ಗೆ ಎಂಟ್ರಿ ಕೊಡುತ್ತಿದ್ದಾರೆ. ಅಟ್ಲೀ ನಿರ್ದೇಶನದ 'ಜವಾನ್' ಚಿತ್ರದಲ್ಲಿ ನಯನ್ ಬಣ್ಣ ಹಚ್ಚಿದ್ಧಾರೆ. ಕಿಂಗ್ ಖಾನ್ ಶಾರುಖ್ ಜೊತೆ ಸ್ಕ್ರೀನ್‌ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಇನ್ನು 'ಇರೈವನ್' ಎನ್ನುವ ಮತ್ತೊಂದು ತಮಿಳು ಚಿತ್ರದಲ್ಲಿ ಕೇರಳ ಕುಟ್ಟಿ ಬಣ್ಣ ಹಚ್ಚಿದ್ದಾರೆ.

More from Filmibeat

English summary
Actress Nayanthara speaks up about casting couch in Film industry. She Said I Was Also Asked For A Commitment. Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X