For Quick Alerts
  ALLOW NOTIFICATIONS  
  For Daily Alerts

  ಕೊರೊನಾ ನಡುವೆಯೂ ರಜನಿಕಾಂತ್ 'ಅಣ್ಣಾತೆ' ಶೂಟಿಂಗ್: ಹೈದರಾಬಾದ್‌ಗೆ ಆಗಮಿಸಿದ ನಯನತಾರಾ

  |

  ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಅಣ್ಣಾತೆ ಸಿನಿಮಾದ ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದೆ. ಕೊರೊನಾ ಹೆಚ್ಚಾಗಿರುವ ಈ ಸಮಯದಲ್ಲೂ ಅಣ್ಣಾತೆ ಚಿತ್ರೀಕರಣಕ್ಕೆ ಬ್ರೇಕ್ ಹಾಕದೆ ಚಿತ್ರೀಕರಣ ಮಾಡಲಾಗುತ್ತಿದೆ. ಅನೇಕ ಕಾರಣಗಳಿಂದ ಅಣ್ಣಾತೆ ಚಿತ್ರೀಕರಣ ತಡವಾಗುತ್ತಲೇ ಬಂದಿದೆ ಹಾಗಾಗಿ ಆದಷ್ಟು ಬೇಗ ಚಿತ್ರೀಕರಣ ಮುಗಿಸಲು ಸಿನಿಮಾ ತಂಡ ನಿರ್ಧರಿಸಿದೆ.

  ಸದ್ಯ ಚಿತ್ರೀಕರಣ ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ನಡೆಯುತ್ತಿದೆ. ಇಂದು (ಏಪ್ರಿಲ್ 27) ನಟಿ ನಯನತಾರಾ ಚಿತ್ರೀಕರಣದಲ್ಲಿ ಭಾಗಿಯಾಗಲು ಹೈದರಾಬಾದ್‌ಗೆ ಬಂದಿಳಿದಿದ್ದಾರೆ. ಹೈದರಾಬಾದ್ ಏರ್ ಪೋರ್ಟ್‌ನಲ್ಲಿ ಬಂದಿಳಿದ ನಟಿ ನಯನತಾರಾ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  ನಯನತಾರಾ ಹುಟ್ಟುಹಬ್ಬಕ್ಕೆ ಬಾಯ್‌ಫ್ರೆಂಡ್ ವಿಘ್ನೇಶ್ ಬಂದಿಲ್ಲವೇಕೆ?ನಯನತಾರಾ ಹುಟ್ಟುಹಬ್ಬಕ್ಕೆ ಬಾಯ್‌ಫ್ರೆಂಡ್ ವಿಘ್ನೇಶ್ ಬಂದಿಲ್ಲವೇಕೆ?

  ಹೈದರಾಬಾದ್‌ನಲ್ಲಿ 9 ದಿನಗಳು ನಯನತಾರಾ ಭಾಗದ ಚಿತ್ರೀಕರಣ ನಡೆಯಲಿದೆ. ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ನಡೆಯುತ್ತಿರುವ ಚಿತ್ರೀಕರಣದಲ್ಲಿ ಭಾಗಿಯಾಗಿ ಮೇ 10ರೊಳಗೆ ಚಿತ್ರೀಕರಣ ಮುಗಿಸಿ ಚೆನ್ನೈಗೆ ವಾಪಸ್ ಆಗಲಿದ್ದಾರೆ.

  ಬಹುನಿರೀಕ್ಷೆಯ ಸಿನಿಮಾ ಇದಾಗಿದ್ದು, ಚಿತ್ರದಲ್ಲಿ ರಜನಿಕಾಂತ್ ಕಾಂತ್ ಮತ್ತು ನಯನತಾರಾ ಜೊತೆ ನಟಿ ಕೀರ್ತಿ ಸುರೇಶ್ ಮತ್ತು ಹಿರಿಯ ನಟಿಯರಾದ ಮೀನಾ ಮತ್ತು ಖುಷ್ಬೂ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಚಿತ್ರದ ಬಿಡುಗಡೆ ದಿನಾಂಕ ಘೋಷಣೆ ಮಾಡಿದ್ದು, ದೀಪಾವಳಿಗೆ ಸಿನಿಮಾ ರಿಲೀಸ್ ಆಗುತ್ತಿದೆ.

  ಬಾಯ್ ಫ್ರೆಂಡ್ ಯಾರು ಅಂತ ಹೇಳಿದ ರಶ್ಮಿಕಾ ಮಂದಣ್ಣ!! | Filmibeat Kannada

  ಈ ಮೊದಲು ಹೈದರಾಬಾದ್ ನಲ್ಲಿ ಚಿತ್ರೀಕರಣ ನಡೆಯುತ್ತಿದ್ದ ಸಮಯದಲ್ಲಿ ಚಿತ್ರತಂಡದ ಅನೇಕರಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಬಳಿಕ ಚಿತ್ರೀಕರಣ ಸ್ಥಗಿತಮಾಡಲಾಗಿತ್ತು. ಆದರೀಗ ಕೆಲವು ದಿನಗಳಿಂದ ಮತ್ತೆ ಚಿತ್ರೀಕರಣ ಪ್ರಾರಂಭ ಮಾಡಿದ್ದು, ನಟಿ ನಯನತಾರಾ ಕೂಡ ಭಾಗಿಯಾಗಿದ್ದಾರೆ.

  English summary
  Actress Nayanthara reaches Hyderabad to join Rajinikanth starrer Annaatthe shooting.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X