"ನಾನು ಬಿಕಿನಿ ತೊಟ್ಟಿದ್ದೇ ದೊಡ್ಡ ಇಶ್ಯೂ ಆಗೋಗಿತ್ತು"; ನಯನತಾರ ಬೇಸರ

ಬಹುಭಾಷಾ ನಟಿ ನಯನತಾರ ವಿಭಿನ್ನ ಪಾತ್ರಗಳಲ್ಲಿ ನಟಿಸಿ ಮೋಡಿ ಮಾಡುತ್ತಿದ್ದಾರೆ. ಒಂದ್ಕಾಲದಲ್ಲಿ ಬಿಕಿನಿ ತೊಟ್ಟು ಆಕೆ ಮಿಂಚಿದ್ದರು. ಸ್ಟಾರ್ ನಟರ ಜೊತೆ ತೆರೆಹಂಚಿಕೊಂಡು ಗೆದ್ದಿದ್ದಾರೆ. ಗ್ಲಾಮರಸ್, ಡಿ ಗ್ಲಾಮರಸ್ ಹೀಗೆ ಎಲ್ಲಾ ತರಹದ ಪಾತ್ರಗಳಲ್ಲಿ ಪ್ರೇಕ್ಷಕರ ಮುಂದೆ ಬಂದಿದ್ದಾರೆ.

ಕೆಲ ವಿವಾದಗಳಿಂದಲೂ ನಯನತಾರಾ ಸುದ್ದಿ ಆಗಿದ್ದು ಇದೆ. ಇತ್ತೀಚೆಗೆ ತಮ್ಮ ಡಾಕ್ಯುಮೆಂಟರಿ ಕಾರಣಕ್ಕೆ ನಟ ಧನುಷ್ ಜೊತೆ ಕಿರಿಕ್ ಮಾಡಿಕೊಂಡಿದ್ದಾರೆ. ಸದ್ಯ ಈ ವಿಚಾರ ಕೋರ್ಟ್ ಮೆಟ್ಟಿಲೇರಿದೆ. ಇದು ಡಾಕ್ಯುಮೆಂಟರಿಯಲ್ಲಿ ತಾವು ಚಿತ್ರರಂಗಕ್ಕೆ ಬಂದ ಆರಂಭದಲ್ಲಿ ಎದುರಿಸಿದ ಸಮಸ್ಯೆಗಳ ಬಗ್ಗೆ ನಯನ್ ಮಾತನಾಡಿದ್ದಾರೆ. ಮುಖ್ಯವಾಗಿ ಬಾಡಿ ಶೇಮಿಂಗ್ ವಿಚಾರ ಪ್ರಸ್ತಾಪಿಸಿದ್ದಾರೆ.

Nayanthara recalls getting body-shamed early in career also backlash for bikini scene

ಮಲಯಾಳಂ ಸಿನಿಮಾಗಳಲ್ಲಿ ಮೊದಲಿಗೆ ನಯನತಾರ ನಟಿಸಿದರು. ಬಳಿಕ ನಿಧಾನವಾಗಿ ತಮಿಳು ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದರು. ರಜನಿಕಾಂತ್ ಜೋಡಿಯಾಗಿ 'ಚಂದ್ರಮುಖಿ' ಚಿತ್ರದಲ್ಲಿ ಮಿಂಚಿದ್ದರು. ಅದರಲ್ಲಿ ಕೂಡ ಸೀರೆಯಲ್ಲಿ ಕಂಗೊಳಿಸಿದ್ದರು. ಆದರೆ ದಿಢೀರನ್ 'ಗಜಿನಿ' ಚಿತ್ರದ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಚಿತ್ರದ ಹಾಡೊಂದರಲ್ಲಿ ಹಾಟ್ ಲುಕ್‌ನಲ್ಲಿ ಹೆಜ್ಜೆ ಹಾಕಿದ್ದರು.

ನಾನು 'ಗಜಿನಿ' ಚಿತ್ರದಲ್ಲಿ ಕಾಣಿಸಿಕೊಂಡಾಗ ಸಾಕಷ್ಟು ಟೀಕೆ ಎದುರಿಸಬೇಕಾಯಿತು. ಮುಖ್ಯವಾಗಿ ನನ್ಮ ಬಾಡಿ ಶೇಮಿಂಗ್ ಮಾಡಲಾಯಿತು. ಬಹಳ ಕುಗ್ಗಿ ಹೋಗಿದ್ದೆ. ಈಕೆ ಯಾಕೆ ಇನ್ನು ನಟಿಸ್ತಿದ್ದಾಳೆ, ಯಾಕೆ ಸಿನಿಮಾದಲ್ಲಿ ಇದ್ದಾಳೆ, ದಪ್ಪ ಆಗಿದ್ದಾಳೆ, ಮಾಡ್ರನ್ ಡ್ರೆಸ್ ಸೂಟ್ ಆಗಲ್ಲ ಎಂದೆಲ್ಲಾ ಮಾತನಾಡಿದ್ದರು. ಕಲಾವಿದರ ನಟನೆ ಬಗ್ಗೆ ಮಾತನಾಡಬೇಕು, ಈ ರೀತಿ ಯಾಕೆ ಬಾಡಿ ಶೇಮಿಂಗ್ ಮಾಡಬೇಕು ಎಂದು ನಯನತಾರ ತಮ್ಮ ಡಾಕ್ಯುಮೆಂಟರಿಯಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.

'ಗಜನಿ' ಬಳಿಕ 'ಬಿಲ್ಲಾ' ಚಿತ್ರದ ಸಶಾ ಎಂಬ ಬೋಲ್ಡ್ ರೋಲ್‌ನಲ್ಲಿ ನಟಿಸಿದ್ದೆ. ಅಲ್ಲಿಯವರೆಗೆ ನಾನು ಲಂಗಾ ದಾವಣಿ, ಸೀರೆಯಲ್ಲಿ ಮಾತ್ರ ಕಾಣಿಸಿಕೊಂಡಿದ್ದೆ. ಆಗ ಬಿಕಿನಿ ಹಾಕಬೇಕಾಯಿತು. ಇದನ್ನು ದೊಡ್ಡ ಇಶ್ಯೂ ಮಾಡಿಬಿಟ್ಟರು. ನಾನು ಬಿಕಿನಿ ತೊಟ್ಟಿದ್ದೇ ಎಲ್ಲರಿಗೂ ಸಮಸ್ಯೆ ಎನ್ನುವಂತೆ ಮಾಡಿಬಿಟ್ಟರು. ನಾನು ಏನೋ ಸಾಬೀತುಪಡಿಸಬೇಕು ಎಂದು ಆ ರೀತಿ ಕಾಣಿಸಿಕೊಂಡಿದ್ದಲ್ಲ. ಪಾತ್ರ ಬಯಸಿದ್ದಕ್ಕೆ ಬಿಕಿನಿ ತೊಟ್ಟು ಕಾಣಿಸಿಕೊಂಡಿದ್ದೆ ಎಂದು ವಿವರಿಸಿದ್ದಾರೆ. ಸದ್ಯ ನಯನ್ ಮಾತುಗಳು ವೈರಲ್ ಆಗ್ತಿದೆ.

ಇದೇ ವಿಚಾರದ ಬಗ್ಗೆ 'ಬಿಲ್ಲಾ' ಚಿತ್ರದ ನಿರ್ದೇಶಕ ವಿಷ್ಣುವರ್ಧನ್ ಸಹ ಮಾತನಾಡಿದ್ದಾರೆ. ನನಗೆ ಆಗ ಎಲ್ಲರೂ ಆ ಸಿನಿಮಾ ಯಾಕೆ ಮಾಡ್ತಿದ್ದೀಯಾ ಎಂದು ಕೇಳಿದರು. ಅದಾಗಲೇ ರಜನಿಕಾಂತ್, ಅಮಿತಾಬ್ ಬಚ್ಚನ್ ಎಲ್ಲರೂ ಆ ಕಥೆಯನ್ನು ಸಿನಿಮಾ ಮಾಡಿದ್ದರು. ಮತ್ತೆ ಯಾಕೆ ಅಂದರು. ಇನ್ನು ಆ ಪಾತ್ರಕ್ಕೆ ನಯನತಾರ ಸೂಟ್ ಆಗುತ್ತಾರೆ ಎಂದು ಅನ್ನಿಸಿತು. ಹಾಗಾಗಿ ಆಯ್ಕೆ ಮಾಡಿಕೊಂಡೆ ಎಂದು ಸಾಶಾ ಪಾತ್ರದ ಬಗ್ಗೆ ಹೇಳಿದ್ದಾರೆ.

ಸದ್ಯ ಲೇಡಿ ಸೂಪರ್ ಸ್ಟಾರ್ ಏಳೆಂಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಬಾಲಿವುಡ್‌ಗೂ ಎಂಟ್ರಿ ಕೊಟ್ಟಿದ್ದಾರೆ. ಶಾರುಖ್ ಖಾನ್ ಜೊತೆ 'ಜವಾನ್' ಚಿತ್ರದಲ್ಲಿ ಮಿಂಚಿದ್ದರು. ಇನ್ನು ಮದುವೆಯಾಗಿ ಸಾರೋಗಸಿ ಪದ್ಧತಿಯಲ್ಲಿ ಅವಳಿ ಮಕ್ಕಳನ್ನು ಪಡೆದಿದ್ದಾರೆ. ಮಕ್ಕಳ ಲಾಲನೆ ಪಾಲನೆ ಜೊತೆ ಜೊತೆಗೆ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

More from Filmibeat

English summary
Nayanthara opens up about body shamed while acting in Ghajini movie;
Read more about: ott kollywood nayanthara
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X