100 ಕೋಟಿ ಕೊಟ್ಟರೂ ನಿಮ್ಮ ಜೊತೆ ಆಕ್ಟ್ ಮಾಡಲ್ಲ ಎಂದ ಲೇಡಿ ಸೂಪರ್ ಸ್ಟಾರ್ ; ಯಾರು ಆ ನಟ, ಯಾವುದು ಸಿನಿಮಾ..?

ಹಣ ಅಂದರೆ ಹೆಣ ಕೂಡ ಬಾಯಿ ಬಿಡುತ್ತೆ ಅನ್ನುವ ಮಾತು ಇದೆ. ಆದರೆ ಕೆಲವರು ಈ ಮಾತನ್ನ ಸುಳ್ಳಾಗಿಸುತ್ತಾರೆ. ಉದಾಹರಣೆಗೆ ನಯನತಾರಾ.ಹೌದು, ಬಹುಭಾಷಾ ತಾರೆ, ಲೇಡಿ ಸೂಪರ್ ಸ್ಟಾರ್ ನಯನತಾರ, ಚಿತ್ರವೊಂದನ್ನ ರಿಜೆಕ್ಟ್ ಮಾಡಿದ್ದ ವಿಚಾರ ಇದೀಗ ಹೊರ ಬಂದಿದೆ. ನಯನತಾರ ನಿರ್ಧಾರದ ಬಗ್ಗೆ ಚರ್ಚೆಯೂ ನಡೆಯುತ್ತಿದೆ.

ನಿಮಗೆ ನೆನಪಿದ್ದರೆ 02 ವರ್ಷದ ಹಿಂದೆ ದಿ ಲೆಜೆಂಡ್ ಎಂಬ ಸಿನಿಮಾ ಬಂದಿತ್ತು. ಸರವಣನ್ ಈ ಚಿತ್ರದ ನಾಯಕ ಕಂ ನಿರ್ಮಾಪಕ. ಚಿತ್ರಮಂದಿರದಲ್ಲಿ ನಾಲ್ಕು ದಿನವೂ ನಿಲ್ಲದ ಈ ಚಿತ್ರಕ್ಕೆ ನೀರಿನಂತೆ ಸರವಣನ್ ಹಣ ಖರ್ಚು ಮಾಡಿದ್ದರು.

Nayanthara rejected saravanan starrer the legend heroine role offer

ಇಂಟ್ರೆಸ್ಟಿಂಗ್ ಅಂದರೆ ಈ ಚಿತ್ರಕ್ಕೆ ನಾಯಕಿ ಪಾತ್ರಕ್ಕೆ ಬಣ್ಣ ಹಚ್ಚುವಂತೆ ಸರವಣನ್ ನಯನತಾರಾ ಅವರಿಗೆ ದುಂಬಾಲು ಬಿದ್ದಿದ್ದರು. ತಮ್ಮ ಐಶಾರಾಮಿ ರೋಲ್ಸ್ ರಾಯ್ ಕಾರನ್ನ ದಿನನಿತ್ಯ ನಯನತಾರಾ ಮನೆ ಬಳಿಯೂ ಕಳಿಸುತ್ತಿದ್ದರು. ಖುದ್ದು ತಾವೇ ನಯನತಾರಾ ಮನೆಗೆ ತೆರಳಿ ತಮ್ಮೆದುರು ನಾಯಕಿಯಾಗಿ ನಟಿಸಿ ಎಂಬ ಮನವಿಯನ್ನೂ ಮಾಡಿಕೊಂಡಿದ್ದರು.

ಆದರೆ ನಯನತಾರಾ ಮಾತ್ರ ಸರವಣನ್ ಮಾತಿಗೆ ಸೊಪ್ಪು ಹಾಕಲಿಲ್ಲ. ಬದಲಿಗೆ ಹತ್ತಲ್ಲ.. ಇಪ್ಪತ್ತಲ್ಲ.. ನೂರು ಕೋಟಿ ಕೊಟ್ಟರು, ನಿಮ್ಮ ಜೊತೆ ನಾನು ನಟಿಸುವುದಿಲ್ಲ ಎಂದು ಕಡ್ಡಿ ಮುರಿದಂತೆ ನಯನತಾರಾ ಸರವಣನ್ ಗೆ ಹೇಳಿದ್ದರು. ಹೀಗೊಂದು ಸುದ್ದಿ ಸದ್ಯಕ್ಕೆ ಅಂತೆ-ಕಂತೆಯ ಸಂತೆಯಲ್ಲಿ ಬಿಕರಿಯಾಗ್ತಿದೆ.

Nayanthara rejected saravanan starrer the legend heroine role offer

ಹರಿದಾಡ್ತಿರುವ ಈ ಸುದ್ದಿ ನಿಜಾನಾ..? ಖುದ್ದು ನಯನತಾರಾ ಇದಕ್ಕೆ ಉತ್ತರ ಕೊಡಬೇಕಾದರೂ, ಸದ್ಯಕ್ಕೆ ನಯನತಾರಾ ದಿ ಲೆಜೆಂಡ್ ಅಂತಹ ತೋಪು ಚಿತ್ರಕ್ಕೆ ಬಣ್ಣ ಹಚ್ಚದೇ ಇದ್ದಿದ್ದೇ ಒಳ್ಳೇಯದಾಯಿತು ಎಂದು ನಯನತಾರಾ ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ. ಲೇಡಿ ಸೂಪರ್ ಸ್ಟಾರ್ ಅಂದರೆ ಸುಮ್ನೇನಾ ಅನ್ನುತ್ತಿದ್ದಾರೆ.

ಅಂದ್ಹಾಗೇ ನಯನತಾರಾ ಅವರ ಬದಲು ಈ ಚಿತ್ರಕ್ಕೆ ಊವರ್ಶಿ ರೌಟೇಲಾ ಬಣ್ಣ ಹಚ್ಚಿದ್ದರು. ದೊಡ್ಡ ಮೊತ್ತದ ಸಂಭಾವನೆಯನ್ನೂ ಪಡೆದಿದ್ದರು. ಅವತ್ತು ಕೇಳಿ ಬಂದ ಮಾತುಗಳ ಪ್ರಕಾರ, ಸರವಣನ್ ಊವರ್ಶಿಗೆ 20 ಕೋಟಿಯನ್ನ ನೀಡಿದ್ದರು. ಚಿತ್ರದಿಂದ ಕೊನೆ ಪಕ್ಷ ಊವರ್ಶಿಗೆ ನೀಡಿದ್ದ ಸಂಭಾವನೆಯ ಮೊತ್ತವಾದರೂ ಸರವಣನ್ ಗೆ ಮರಳಿ ಬಂತಾ.? ಉತ್ತರ ಆ ದೇವರಿಗೆ ಗೊತ್ತು

More from Filmibeat

English summary
Lady Superstar Nayanthara rejected saravanan starrer the legend heroine role offer
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X