ಸೂಪರ್ ಸ್ಟಾರ್ ಆಶೀರ್ವಾದ.. 75ನೇ ಸಿನಿಮಾ ಸೆಟ್‌ಗೆ ಕಾಲಿಟ್ಟ ನಯನ್: ಹಿಟ್ ಕಾಂಬಿನೇಷನ್ ರಿಪೀಟ್
ನೋಡ ನೋಡುತ್ತಲೇ ನಯನತಾರ ಚಿತ್ರರಂಗದಲ್ಲಿ 20 ವರ್ಷ ಪೂರೈಸಿದ್ದಾರೆ. ಈಗಾಗಲೇ 70ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ಮೋಡಿ ಮಾಡಿದ್ದಾರೆ. ವಯಸ್ಸು ಹೆಚ್ಚಾದಷ್ಟು ಲೇಡಿ ಸೂಪರ್ ಸ್ಟಾರ್ ಅಂದ, ಕ್ರೇಜ್ ಹೆಚ್ಚಾಗುತ್ತಿದೆ. ಇದೀಗ ಬಾಲಿವುಡ್‌ಗೂ ನಯನ್ ಅಂಗಳವನ್ನು ಪ್ರವೇಶಿಸುತ್ತಿದ್ದಾರೆ. ಸದ್ಯ ಆಕೆ ನಟಿಸುತ್ತಿರುವ 75ನೇ ಸಿನಿಮಾ ಚಿತ್ರೀಕರಣ ಅದ್ಧೂರಿಯಾಗಿದೆ ಶುರುವಾಗಿದೆ.
ಮದುವೆ ನಂತರ ಕೂಡ ನಯನತಾರಾ ಸಾಲು ಸಾಲು ಸಿನಿಮಾಗಳಲ್ಲಿ ನಟಿಸ್ತಿದ್ದಾರೆ. ಸಾರೋಗಸಿ ವಿಧಾನದಲ್ಲಿ ಅವಳಿ ಮಕ್ಕಳನ್ನು ಪಡೆದ ವಿಕ್ಕಿ- ನಯನ್ ದಂಪತಿ ಮಕ್ಕಳ ಲಾಲನೆ ಪಾಲನೆ ಜೊತೆಗೆ ಸಿನಿಮಾ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇತ್ತೀಚೆಗೆ ನಯನತಾರ ನಟನೆಯ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸುತ್ತಿವೆ. ಇನ್ನು ಮಹಿಳಾ ಪ್ರಧಾನ ಸಿನಿಮಾಗಳಲ್ಲೂ ಸೂಪರ್ ಬೆಡಗಿ ನಟಿಸುತ್ತಿದ್ದಾರೆ.

ನಯನತಾರ ನಟನೆಯ ಇನ್ನು ಹೆಸರಿಡದ ಸಿನಿಮಾ ಚಿತ್ರಕರಣ ಶುರುವಾಗಿದೆ. ಇದು ಆಕೆಯ 75ನೇ ಸಿನಿಮಾ ಅನ್ನೋದು ವಿಶೇಷ. ಇತ್ತೀಚೆಗೆ ಸಿನಿಮಾ ಮುಹೂರ್ತ ನೆರವೇರಿತ್ತು. ಇದೀಗ ಶೂಟಿಂಗ್ ಸೆಟ್‌ಗೆ ನಯನ್ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದು ಚಿತ್ರತಂಡ ಸ್ವಾಗತ ಕೋರಿದೆ. ಅದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗ್ತಿದೆ. ಚಿತ್ರದಲ್ಲಿ ತಮಿಳು ನಟ ಜೈ ಹೀರೊ ಆಗಿ ನಟಿಸ್ತಿದ್ದಾರೆ. 10 ವರ್ಷಗಳ ಹಿಂದೆ ಈ ಜೋಡಿ 'ರಾಜ ರಾಣಿ' ಚಿತ್ರದಲ್ಲಿ ಒಟ್ಟಿಗೆ ನಟಿಸಿತ್ತು.
ಸೂಪರ್ ಸ್ಟಾರ್ ರಜನಿಕಾಂತ್ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ತಲೈವಾ ಆಶೀರ್ವಾದ ಪಡೆದು ಸಿನಿಮಾ ಚಿತ್ರೀಕರಣ ಆರಂಭಿಸಲಾಗಿದೆ. ಆದಷ್ಟು ಬೇಗ ಶೂಟಿಂಗ್ ಮುಗಿಸಿ ವರ್ಷಾಂತ್ಯಕ್ಕೆ ಸಿನಿಮಾ ತೆರೆಗೆ ತರುವ ಪ್ರಯತ್ನ ನಡೀತಿದೆ. ನಿರ್ದೇಶಕ ಶಂಕರ್ ಬಳಗದಲ್ಲಿ ಗುರ್ತಿಸಿಕೊಂಡಿದ್ದ ನೀಲೇಶ್ ಕೃಷ್ಣ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದಾರೆ. ಟ್ರಿಡೆಂಟ್ ಆರ್ಟ್ಸ್, ಜೀ ಸ್ಟುಡಿಯೋಸ್ ಹಾಗೂ ನಾದ್ಸ್ ಸ್ಟುಡಿಯೋಸ್ ಸಂಸ್ಥೆಗಳು ಜಂಟಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿವೆ.
ಇನ್ನು ಹೆಸರಿಡದ ಈ ಚಿತ್ರವನ್ನು ಲೇಡಿಸೂಪರ್ ಸ್ಟಾರ್75 ಅನ್ನೋ ಟೆಂಟೆಟಿವ್ ಟೈಟಲ್‌ನಲ್ಲಿ ಆರಂಭಿಸಲಾಗಿದೆ. 'ರಾಜ ರಾಣಿ' ಚಿತ್ರದಲ್ಲಿ ನಟಿಸಿದ್ದ ಸತ್ಯರಾಜ್ ಕೂಡ ಚಿತ್ರದ ತಾರಾಗಣದಲ್ಲಿದ್ದಾರೆ. ನಟ ಜೈ ಹುಟ್ಟುಹಬ್ಬದ ದಿನವೇ ಸಿನಿಮಾ ಚಿತ್ರೀಕರಣ ಆರಂಭವಾಗಿರುವುದು ವಿಶೇಷ. ದಿನೇಶ್ ಕೃಷ್ಣನ್ ಛಾಯಾಗ್ರಹಣ, ಎಸ್. ತಮನ್ ಸಂಗೀತ ಚಿತ್ರಕ್ಕಿದೆ. ಸದ್ಯ ನಯನತಾರ ಕೈಯಲ್ಲಿ 3 ಸಿನಿಮಾಗಳಿವೆ.

ಶಾರುಕ್ ಖಾನ್ ನಟನೆಯ 'ಜವಾನ್' ಸಿನಿಮಾ ಮೂಲಕ ನಯನತಾರ ಬಾಲಿವುಡ್‌ಗೆ ಎಂಟ್ರಿ ಕೊಡುತ್ತಿದ್ದಾರೆ. ಅಟ್ಲಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸ್ವತಃ ಕಿಂಗ್ ಖಾನ್ ನಿರ್ಮಾಣದ ಈ ಚಿತ್ರದಲ್ಲಿ ಸಂಜಯ್ ದತ್, ವಿಜಯ್ ಸೇತುಪತಿ, ಪ್ರಿಯಾಮಣಿಯಂತಹ ಘಟನುಘಟಿ ಕಲಾವಿದರು ನಟಿಸ್ತಿದ್ದಾರೆ. ದಳಪತಿ ವಿಜಯ್, ದೀಪಿಕಾ ಪಡುಕೋಣೆ ಚಿತ್ರದಲ್ಲಿ ಗೆಸ್ಟ್ ಅಪಿಯರೆನ್ಸ್ ಮಾಡುತ್ತಿದ್ದಾರೆ. ಜೂನ್ ಮೊದಲ ವಾರದಲ್ಲಿ ಸಿನಿಮಾ ರಿಲೀಸ್ ಪ್ಲ್ಯಾನ್ ನಡೀತಿದೆ.
'ಜವಾನ್' ಚಿತ್ರದಲ್ಲಿ ನಯನತಾರಾ ಬಿಕಿನಿ ತೊಟ್ಟು ನಟಿಸುತ್ತಾರೆ ಎನ್ನಲಾಗ್ತಿದೆ. ಈ ಚಿತ್ರಕ್ಕಾಗಿ ನಯನ್ 10 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗ್ತಿದೆ. 'ಇರೈವನ್' ಅನ್ನುವ ಮತ್ತೊಂದು ಚಿತ್ರದಲ್ಲೂ ಲೇಡಿ ಸೂಪರ್ ಸ್ಟಾರ್ ಬಣ್ಣ ಹಚ್ಚಿದ್ದಾರೆ.


Click it and Unblock the Notifications











