ಪಬ್ಲಿಕ್‌ ಪ್ಲೇಸ್‌ನಲ್ಲಿ ಶಾರುಖ್‌ ಖಾನ್‌ಗೆ ಮುತ್ತಿಟ್ಟ ನಯನತಾರಾ? ವಿಡಿಯೋ ವೈರಲ್

By ಫಿಲ್ಮಿಬೀಟ್ ಡೆಸ್ಕ್

ಕಿಂಗ್ ಖಾನ್ ಶಾರುಖ್ 'ಪಠಾಣ್' ಸಕ್ಸಸ್ ಅಲೆಯಲ್ಲಿ ತೇಲುತ್ತಿದ್ದಾರೆ. ಇದರ ಬೆನ್ನಲ್ಲೇ ಅಟ್ಲಿ ನಿರ್ದೇಶನದ 'ಜವಾನ್' ಸಿನಿಮಾ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಚಿತ್ರದಲ್ಲಿ ನಾಯಕಿಯಾಗಿ ನಯನತಾರಾ ನಟಿಸ್ತಿದ್ದಾರೆ. ಇತ್ತೀಚಿಗೆ ಶಾರುಖ್ ಚೆನ್ನೈ ಬಂದು ವಾಪಸ್ ತೆರಳಿದ್ದಾರೆ. ಈ ವೇಳೆ ಸ್ವತಃ ನಯನತಾರ ಬೀಳ್ಕೊಟ್ಟಿದ್ದಾರೆ. ಈ ವೇಳೆ ಕಿಂಗ್ ಖಾನ್ ಕೆನ್ನೆಗೆ ನಯನ್ ಮುತ್ತಿಟ್ಟಿರೋದು ಈಗ ಹಾಟ್ ಟಾಪಿಕ್ ಆಗಿದೆ.

ಶಾರುಖ್ ಖಾನ್‌ನ ನೋಡಲು ಸಾಕಷ್ಟು ಜನ ಅಭಿಮಾನಿಗಳು ಜಮಾಯಿಸಿದ್ದರು. ಅಭಿಮಾನಿಗಳ ನಡುವೆ ಕಾರಿನಲ್ಲಿ ಹೊರಟಿದ್ದ ಕಿಂಗ್ ಖಾನ್ ಮತ್ತೆ ಕಾರಿನ ಡೋರ್‌ ತೆರೆದು ನಯನತಾರ ಕಡೆ ಮುಖ ಮಾಡಿದ್ದಾರೆ. ಈ ವೇಳೆ ಮರ್ಯಾದೆ ಪೂರ್ವಕವಾಗಿ ಬಾಲಿವುಡ್ ಬಾದ್‌ಶಾ ಕೆನ್ನೆಗೆ ನಯನ್ ಮುತ್ತಿಟ್ಟು ಬೀಳ್ಕೊಟ್ಟಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸಾರ್ವಜನಿಕ ಸ್ಥಳದಲ್ಲಿ ನಟನೊಬ್ಬನಿಗೆ ಮುತ್ತಿಟ್ಟಿದ್ದು ಹಾಟ್ ಟಾಪಿಕ್ ಆಗಿದೆ. ಆನ್‌ಸ್ಕ್ರೀನ್‌ನಲ್ಲಿ ಇದೆಲ್ಲ ಸರಿ, ಆಫ್‌ಸ್ಕ್ರೀನ್‌ನಲ್ಲಿ ಇದು ಗಮನ ಸೆಳೆದಿದೆ.

nayanthara-saying-goodbye-to-shahrukh-khan-and-king-khan-gave-good-bye-kiss

ನಯನತಾರಾಗೆ ಮದುವೆ ಕೂಡ ಆಗಿದೆ. ಹಾಗಾಗಿ ಶಾರುಖ್‌ಗೆ ಮರ್ಯಾದೆ ಪೂರ್ವಕವಾಗಿ ಮುತ್ತಿಟ್ಟಿದ್ದು ಕೂಡ ಕೆಲವರ ಹುಬ್ಬೇರಿಸಿದೆ. ಈ ವಿಡಿಯೋಗೆ ಅಭಿಮಾನಿಗಳು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಆದರೆ ಇಲ್ಲಿ ನಯನತಾರ ಕಿಸ್ ಕೊಟ್ಟಿಲ್ಲ, ಬದಲಿಗೆ ಶಾರುಖ್ ಗುಡ್‌ಬೈ ಕಿಸ್‌ ಮಾಡಿದ್ದಾರೆ ಅಷ್ಟೇ ಎಂದು ಕೆಲವರು ಹೇಳುತ್ತಿದ್ದಾರೆ. 'ಜಿರೋ' ಸೋಲಿನಿಂದ ಕಂಗೆಟ್ಟಿದ್ದ ಕಿಂಗ್ ಖಾನ್ 4 ವರ್ಷಗಳ ನಂತರ 'ಪಠಾಣ್' ಆಗಿ ಥಿಯೇಟರ್‌ಗಳಲ್ಲಿ ಅಬ್ಬರಿಸುತ್ತಿದ್ದಾರೆ. 'ಜವಾನ್' ಸಿನಿಮಾ 5 ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ಆಗಿ ನಿರ್ಮಾಣವಾಗುತ್ತಿದೆ.

nayanthara-saying-goodbye-to-shahrukh-khan-and-king-khan-gave-good-bye-kiss

ತಮ್ಮದೇ ರೆಡ್‌ ಚಿಲ್ಲೀಸ್ ಬ್ಯಾನರ್‌ನಲ್ಲಿ 'ಜವಾನ್' ಚಿತ್ರವನ್ನು ಶಾರುಖ್ ಖಾನ್ ನಿರ್ಮಾಣ ಮಾಡುತ್ತಿದ್ದಾರೆ. ವಿಜಯ್ ಸೇತುಪತಿ, ಪ್ರಿಯಾಮಣಿ, ಯೋಗಿ ಬಾಬು, ಮನ್ಸೂರ್ ಅಲಿಖಾನ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಜಿ. ಕೆ ವಿಷ್ಣು ಸಿನಿಮಾಟೋಗ್ರಫಿ ಹಾಗೂ ಅನಿರುದ್ಧ್ ರವಿಚಂದರ್ ಸಂಗೀತ ಚಿತ್ರಕ್ಕಿದೆ. ಜೂನ್ 2ಕ್ಕೆ ಚಿತ್ರವನ್ನು ತೆರೆಗೆ ತರೋದಾಗಿ ಚಿತ್ರತಂಡ ಘೋಷಿಸಿದೆ.

More from Filmibeat

English summary
Nayanthara saying goodbye to ShahRukh Khan and King Khan gave good bye kiss. Nayanthara is playing the female lead in Shah Rukh Khan Starrer Jawan. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X