For Quick Alerts
  ALLOW NOTIFICATIONS  
  For Daily Alerts

  ಮಾಂಸಾಹಾರ ತ್ಯಜಿಸಿ 40 ದಿನ ಉಪವಾಸ ಕೈಗೊಂಡ ನಯನತಾರಾ: ಯಾಕೆ.?

  |

  ಸಿನಿಮಾದಲ್ಲಿ ಅಭಿನಯ ಮಾಡೋದು ಸುಲಭದ ಮಾತಲ್ಲ. ಕೆಲವೊಂದು ಪಾತ್ರಗಳನ್ನು ಪೋಷಿಸಬೇಕು ಅಂದ್ರೆ ಶ್ರದ್ಧೆ, ಭಯ, ಭಕ್ತಿ ತುಂಬಾ ಮುಖ್ಯ. ಅದರಲ್ಲೂ, ಭಕ್ತಿ ಪ್ರಧಾನ ಚಿತ್ರಗಳನ್ನು ಚಿತ್ರೀಕರಣ ಮಾಡುವಾಗ ಇಡೀ ತಂಡವೇ ಕಟ್ಟುನಿಟ್ಟಿನ ವ್ರತ ಕೈಗೊಳ್ಳಬೇಕಾಗುತ್ತದೆ. ಇದಕ್ಕೆ ಲೇಟೆಸ್ಟ್ ಉದಾಹರಣೆ ಅಂದ್ರೆ ನಯನತಾರಾ ಅಭಿನಯಿಸಲು ಒಪ್ಪಿಕೊಂಡಿರುವ ತಮಿಳಿನ 'ಮೂಕುತಿ ಅಮ್ಮನ್' ಸಿನಿಮಾ.

  'ಸೈರಾ ನರಸಿಂಹ ರೆಡ್ಡಿ' ಮತ್ತು 'ಬಿಗಿಲ್' ಚಿತ್ರಗಳ ಸೂಪರ್ ಸಕ್ಸಸ್ ಬಳಿಕ ನಟಿ ನಯನತಾರಾ ಗ್ರೀನ್ ಸಿಗ್ನಲ್ ಕೊಟ್ಟಿರುವುದು 'ಮೂಕುತಿ ಅಮ್ಮನ್' ಚಿತ್ರಕ್ಕೆ. ಭಿನ್ನ-ವಿಭಿನ್ನ ಪಾತ್ರಗಳನ್ನು ನಿರ್ವಹಿಸಿಕೊಂಡು ಬಂದಿರುವ ನಯನತಾರಾ 'ಮೂಕುತಿ ಅಮ್ಮನ್' ಚಿತ್ರದಲ್ಲಿ ದೇವಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಪಾತ್ರವನ್ನು ಪೋಷಿಸುವ ಸಲುವಾಗಿ ನಟಿ ನಯನತಾರಾ ಮಾಂಸಾಹಾರ ತ್ಯಜಿಸಲು ನಿರ್ಧಾರ ಮಾಡಿದ್ದಾರೆ.

  'ಮೂಕುತಿ ಅಮ್ಮನ್' ಪಾತ್ರಕ್ಕೆ ಜೀವ ತುಂಬಲು ನಟಿ ನಯನತಾರಾ 40 ದಿನಗಳ ಕಾಲ ಉಪವಾಸ ಕೈಗೊಂಡಿದ್ದಾರೆ. ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗುವವರೆಗೂ ಬರೀ ಸಸ್ಯಹಾರ ಮಾತ್ರ ಸೇವಿಸಲು ನಯನತಾರಾ ಮನಸ್ಸು ಮಾಡಿದ್ದಾರೆ.

  ಪ್ರಚಾರಕ್ಕೆ ಬಾರದ ನಯನತಾರಾಗೆ 'ಸೈರಾ' ನಿರ್ಮಾಪಕರಿಂದ ಸಿಕ್ಕ ಸಂಭಾವನೆ ಎಷ್ಟು.?ಪ್ರಚಾರಕ್ಕೆ ಬಾರದ ನಯನತಾರಾಗೆ 'ಸೈರಾ' ನಿರ್ಮಾಪಕರಿಂದ ಸಿಕ್ಕ ಸಂಭಾವನೆ ಎಷ್ಟು.?

  ನಯನತಾರಾ ಈ ರೀತಿ ಮಾಂಸಾಹಾರ ಬಿಟ್ಟಿರುವುದು, ಉಪವಾಸ ಕೈಗೊಂಡಿರುವುದು ಇದೇ ಮೊದಲ ಬಾರಿಗೆ ಅಲ್ಲ. 2011 ರಲ್ಲಿ ಬಿಡುಗಡೆ ಆದ ತೆಲುಗಿನ 'ಶ್ರೀ ರಾಮ ರಾಜ್ಯಂ' ಚಿತ್ರದ ಚಿತ್ರೀಕರಣ ಸಂದರ್ಭದಲ್ಲೂ ನಯನತಾರಾ ಮಾಂಸಾಹಾರವನ್ನ ಮುಟ್ಟಿರಲಿಲ್ಲ.

  ಬಾಯ್ ಫ್ರೆಂಡ್ ಜೊತೆ ಹಸೆಮಣೆ ಏರಲು ಸಜ್ಜಾದ ನಟಿ ನಯನತಾರಾಬಾಯ್ ಫ್ರೆಂಡ್ ಜೊತೆ ಹಸೆಮಣೆ ಏರಲು ಸಜ್ಜಾದ ನಟಿ ನಯನತಾರಾ

  ಅಂದ್ಹಾಗೆ, 'ಮೂಕುತಿ ಅಮ್ಮನ್' ಚಿತ್ರಕ್ಕೆ ನಿರ್ದೇಶನ ಮಾಡುತ್ತಿರುವವರು ಆರ್.ಜೆ.ಬಾಲಾಜಿ. ಡಿಸೆಂಬರ್ ನಿಂದ ಈ ಚಿತ್ರದ ಶೂಟಿಂಗ್ ಶುರುವಾಗಲಿದೆ. ಕನ್ಯಾಕುಮಾರಿಯ 'ಮೂಕುತಿ ಅಮ್ಮನ್' ದೇವಾಲಯದಲ್ಲೇ ಚಿತ್ರದ ಮುಹೂರ್ತ ಸಮಾರಂಭ ನಡೆಯಲಿದೆ.

  English summary
  Nayanthara turns Vegetarian for Tamil Film Mookuthi Amman.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X