For Quick Alerts
  ALLOW NOTIFICATIONS  
  For Daily Alerts

  ನಯನತಾರಾ-ವಿಘ್ನೇಶ್ ಮದುವೆ ದಿನಾಂಕ ನಿಗದಿ, ಸ್ಥಳ ಬದಲಾವಣೆ

  |

  ನಯನತಾರಾ ಹಾಗೂ ವಿಗ್ನೇಶ್ ಶಿವನ್ ಕೆಲ ವರ್ಷಗಳಿಂದಲೂ ಜೊತೆಯಾಗಿದ್ದಾರೆ. ಇದೀಗ ತಮ್ಮ ಪ್ರೀತಿಗೆ ವಿವಾಹದ ಮುದ್ರೆ ಒತ್ತಲು ಈ ಜೋಡಿ ತಯಾರಾಗಿದ್ದು, ವಿವಾಹದ ದಿನಾಂಕವನ್ನು ನಿಗಿದಿಗೊಳಿಸಿಕೊಳ್ಳಲಾಗಿದೆ.

  ಈ ಮೊದಲು, ನಯನತಾರಾ ಹಾಗೂ ವಿಘ್ನೇಶ್ ಶಿವನ್ ಜೂನ್ 5 ರಂದು ವಿವಾಹವಾಗಲಿದ್ದಾರೆ ಎನ್ನಲಾಗಿತ್ತು. ಆದರೆ ದಿನಾಂಕ ಬದಲಾಗಿದ್ದು, ಜೂನ್ 5 ರ ಬದಲಿಗೆ ಜೂನ್ 09 ರಂದು ಈ ಜೋಡಿ ವಿವಾಹ ಬಂಧಕ್ಕೆ ಕಾಲಿಡಲಿದೆ.

  ಈ ಜೋಡಿಯು ತಿರುಪತಿಯಲ್ಲಿ ವಿವಾಹವಾಗಲಿದೆ ಎನ್ನಲಾಗಿತ್ತು. ಆದರೆ ಮದುವೆ ಸ್ಥಳ ಸಹ ಬದಲಾವಣೆಗೊಂಡಿದ್ದು, ತಮಿಳಿನಾಡಿನ ಮಹಾಬ್ಸ್ ರೆಸಾರ್ಟ್‌ ನಲ್ಲಿ ಈ ಜೋಡಿ ವಿವಾಹ ಬಂಧಕ್ಕೆ ಒಳಗಾಗಲಿದೆ. ವಿವಾಹ ಕಾರ್ಯಕ್ರಮದಲ್ಲಿ ಅತ್ಯಾಪ್ತ ಗೆಳೆಯರು ಹಾಗೂ ಸಂಬಂಧಿಕರು ಮಾತ್ರವೇ ಭಾಗಿಯಾಗಲಿದ್ದಾರೆ.

  ಆ ನಂತರ ಚೆನ್ನೈನಲ್ಲಿ ಅದ್ಧೂರಿಯಾಗಿ ರಿಸೆಪ್ಷನ್ ಅನ್ನು ಆಯೋಜಿಸಲಿದ್ದಾರೆ. ರಿಸೆಪ್ಷನ್‌ಗೆ ಚಿತ್ರರಂಗದ ಹಲವು ಗಣ್ಯರು ಆಗಮಿಸಲಿದ್ದಾರೆ. ತಮಿಳು ಚಿತ್ರರಂಗ ಮಾತ್ರವೇ ಅಲ್ಲದೆ, ಹಲವು ಚಿತ್ರರಂಗದ ಗಣ್ಯರುಗಳು ರಿಸೆಪ್ಷನ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ.

  MR ಸಿನಿಮಾ ಆಗದೆ ಡೆಡ್ಲಿ 3 ಶುರುವಾಗಿದ್ದು ಹೇಗೆ? | Ravi Srivatsa | Deadly 3 | Filmibeat Kannada

  ನಯನತಾರಾ ಹಾಗೂ ವಿಘ್ನೇಶ್ ಶಿವನ್ ಕಲೆದ ಆರು ವರ್ಷಗಳಿಂದಲೂ ಪರಸ್ಪರ ಪ್ರೀತಿಸುತ್ತಿದ್ದಾರೆ. ಇಬ್ಬರೂ ಜಂಟಿಯಾಗಿ ನಿರ್ಮಾಣ ಸಂಸ್ಥೆ ಆರಂಭಿಸಿದ್ದು ಕೆಲವು ಸಿನಿಮಾಗಳನ್ನು ಸಹ ನಿರ್ಮಾಣ ಮಾಡಿದ್ದಾರೆ. ಅದರಲ್ಲಿಯೂ ನಯನತಾರಾ-ವಿಘ್ನೇಶ್ ಜಂಟಿಯಾಗಿ ನಿರ್ಮಿಸಿದ್ದ 'ಕೂಳಂಗಳ್' (ಪೆಬೆಲ್ಸ್) ಆಸ್ಕರ್‌ಗೆ ಅಧಿಕೃತ ಪ್ರವೇಶ ಪಡೆದಿತ್ತು.

  ವಿಘ್ನೇಶ್ ಶಿವನ್ ನಿರ್ದೇಶಿಸಿ ನಯನತಾರಾ ನಟಿಸಿರುವ 'ಕಾತು ವಾಕುಲ ರೆಂಡು ಕಾದಲ್' ಸಿನಿಮಾ ಕೆಲವು ದಿನಗಳ ಹಿಂದಷ್ಟೆ ಬಿಡುಗಡೆ ಆಗಿದೆ. ಸಿನಿಮಾದಲ್ಲಿ ನಯನತಾರಾ ಜೊತೆಗೆ ಸಮಂತಾ ಹಾಗೂ ನಾಯಕ ನಟನಾಗಿ ವಿಜಯ್ ಸೇತುಪತಿ ಸಹ ನಟಿಸಿದ್ದಾರೆ.

  English summary
  Nayanthara Vignesh Shivan getting marry on June 09 in Mahabalipuram in a low key function. Then they organize a lawish reception in Chennai.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X