6 ವರ್ಷದ ಹಿಂದೆಯೇ ಮದುವೆ? ನಯನ್- ವಿಕ್ಕಿ ಸರೋಗಸಿ ವಿವಾದಕ್ಕೆ ದುಬೈ ಟ್ವಿಸ್ಟ್.. ಸಂಕಷ್ಟದಿಂದ ದಂಪತಿ ಬಚಾವ್?

ನಟಿ ನಯನತಾರಾ ಹಾಗೂ ವಿಘ್ನೇಶ್ ಶಿವನ್ ದಂಪತಿ ಸರೋಗಸಿ ವಿಧಾನದಿಂದ ಅವಳಿ ಮಕ್ಕಳನ್ನು ಪಡೆದಿದ್ದಾರೆ ಎನ್ನಲಾಗುತ್ತಿರುವ ವಿಚಾರ ಭಾರೀ ಚರ್ಚೆ ಹುಟ್ಟಾಕಿದೆ. ದಿನದಿಂದ ದಿನಕ್ಕೆ ಈ ವಿವಾದ ದೊಡ್ಡದಾಗಿ ಸದ್ದು ಮಾಡುತ್ತಿದ್ದು, ದಂಪತಿ ಸಂಕಷ್ಟಕ್ಕೆ ಸಿಲುಕಿದ್ದಾರೆ ಎನ್ನಲಾಗುತ್ತಿತ್ತು. ಆದರೆ ಈಗ ಈ ವಿಚಾರಕ್ಕೆ ಟ್ವಿಸ್ಟ್ ಸಿಕ್ಕಿದ್ದು, ನಯನ್- ವಿಕ್ಕಿ ಜೋಡಿಗೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಇಬ್ಬರು ಬಚಾವ್ ಆಗುತ್ತಾರೆ ಎನ್ನುವ ಸುಳಿವು ಸಿಕ್ತಿದೆ.

ವಾರದ ಹಿಂದೆ ನಯನ್ ಹಾಗೂ ವಿಕ್ಕಿ ತಾವಿಬ್ಬರು ಅವಳಿ ಮಕ್ಕಳ ಪೋಷಕರಾಗಿರುವುದಾಗಿ ಘೋಷಿಸಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಫೋಟೊಗಳನ್ನು ಶೇರ್ ಮಾಡಿದ್ದರು. ಮದುವೆ ಆದ ನಾಲ್ಕೇ ತಿಂಗಳಿಗೆ ದಂಪತಿ ಮಕ್ಕಳನ್ನು ಪಡೆದಿದ್ದು ಕೆಲವರಿಗೆ ಅಚ್ಚರಿ ತಂದಿತ್ತು. ನಂತರ ಸರೋಗಸಿ ವಿಧಾನದಲ್ಲಿ ಮಕ್ಕಳನ್ನು ಪಡೆದಿದ್ದಾರೆ ಎನ್ನಲಾಗಿತ್ತು. ಆದರೆ ಈ ಬಗ್ಗೆ ಇಬ್ಬರೂ ಯಾವುದೇ ಮಾತನಾಡುವ ಗೋಜಿಗೆ ಹೋಗಿರಲಿಲ್ಲ. ಮಕ್ಕಳ ಜೊತೆ ಸಮಯ ಕಳೆಯಲು ಅರಂಭಿಸಿದ್ದರು. ಭಾರತದಲ್ಲಿ ಕೆಲವೊಂದು ಅನಿವಾರ್ಯ ಪರಿಸ್ಥಿತಿಯಲ್ಲಿ ಮಾತ್ರ ಸರೋಗಸಿ ವಿಧಾನದಲ್ಲಿ ಮಕ್ಕಳು ಪಡೆಯಲು ಅನುಮತಿ ಇದೆ. ಎಲ್ಲರಿಗೂ ಈ ಅವಕಾಶ ಇಲ್ಲ. ಹಾಗಾಗಿ ವಿಕ್ಕಿ- ನಯನ್ ಕಾನೂನು ಉಲ್ಲಂಘಿಸಿದ್ದಾರೆ. ಅವರಿಗೆ ಶಿಕ್ಷೆ ಕೂಡ ಆಗಬಹುದು ಎನ್ನುವ ಚರ್ಚೆ ನಡೆದಿತ್ತು.

ಕಾನೂನಿನ ಅರಿವಿಲ್ಲದೇ ನಯನತಾರಾ ಹಾಗೂ ವಿಘ್ನೇಶ್ ಶಿವನ್ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ ಎಂದು ಕೆಲವರು ಹೇಳುತ್ತಿದ್ದರು. ಆದರೆ ಸದ್ಯ ಈ ವಿವಾದಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಎಲ್ಲದರ ಬಗ್ಗೆ ಅರಿವಿದ್ದು ಬಹಳ ಲೆಕ್ಕಾಚಾರವಾಗಿ ದಂಪತಿ ಸರೋಗಸಿ ವಿಧಾನದ ಮೂಲಕ ಮಕ್ಕಳನ್ನು ಪಡೆದುಕೊಂಡಿದ್ದಾರೆ ಎನ್ನಲಾಗುತ್ತಿದೆ.

ಸರೋಗಸಿ ವಿವಾದಕ್ಕೆ ದುಬೈ ಟ್ವಿಸ್ಟ್?

ಸರೋಗಸಿ ವಿವಾದಕ್ಕೆ ದುಬೈ ಟ್ವಿಸ್ಟ್?

ದಂಪತಿ ಕಾನೂನಿನ ಪ್ರಕಾರವೇ ಸರೋಗಸಿ ವಿಧಾನದ ಮೂಲಕ ಅವಳಿ ಮಕ್ಕಳಿಗೆ ಪೋಷಕರಾಗಿದ್ದಾರಂತೆ. ಈ ವಿವಾದದಲ್ಲಿ ನಯನ್ ಹಾಗೂ ವಿಕ್ಕಿ ದಂಪತಿ ಸಮಸ್ಯೆ ಇರುವುದಿಲ್ಲವಂತೆ. ಯಾಕಂದರೆ ಸರೋಗಸಿ ವಿಧಾನದಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ ತಾಯಿ ದುಬೈನಲ್ಲಿದ್ದಾರೆ. ನಯನತಾರ ಸಹೋದರ ಆಕೆಯನ್ನು ಒಪ್ಪಿಸಿದ್ದಾರಂತೆ. ದುಬೈನಲ್ಲಿ ಸರೋಗಸಿ ವಿಧಾನಕ್ಕೆ ಅವಕಾಶ ಇದೆ ಹಾಗಾಗಿ ನಯನತಾರ ಹಾಗೂ ವಿಘ್ನೇಶ್ ದಂಪತಿಗೆ ಸಮಸ್ಯೆ ಇಲ್ಲ ಎನ್ನಲಾಗುತ್ತಿದೆ.

ದುಬೈನಲ್ಲಿರುವ ಆ ಮಹಿಳೆ ಯಾರು?

ದುಬೈನಲ್ಲಿರುವ ಆ ಮಹಿಳೆ ಯಾರು?

ಒಂದಷ್ಟು ವರದಿಗಳ ಪ್ರಕಾರ ದಂಪತಿಗೆ ಅವಳಿ ಮಕ್ಕಳನ್ನು ಹೆತ್ತು ಕೊಟ್ಟ ಮಹಿಳೆ ನಯನತಾರಾಗೆ ದೂರದ ಸಂಬಂಧಿ ಆಗಬೇಕಂತೆ. ಆಕೆಯೇ ದುಬೈನಲ್ಲಿ ನಟಿಗೆ ಸಂಬಂಧಿಸಿದ ಬ್ಯುಸಿನೆಸ್‌ ಎಲ್ಲವನ್ನು ನೋಡಿಕೊಳ್ಳುತ್ತಾಳಂತೆ. ಕೇರಳ ಮೂಲದ ಆ ಮಹಿಳೆ ಹಲವು ವರ್ಷಗಳಿಂದ ದುಬೈನಲ್ಲಿ ನೆಲೆಸಿದ್ದಾಳಂತೆ. ಹಾಗಾಗಿ ವಿಕ್ಕಿ- ನಯನ್ ದಂಪತಿಗೆ ಈ ಸರೋಗಸಿ ವಿಧಾನದಿಂದ ಮಕ್ಕಳು ಪಡೆದಿದ್ದಕ್ಕೆ ಸಮಸ್ಯೆ ಇಲ್ಲ ಎನ್ನುವ ಮಾತುಗಳು ಕೇಳಿಬರ್ತಿದೆ.

ಮದುವೆಗೂ ಮೊದಲೇ ನಿರ್ಧಾರ

ಮದುವೆಗೂ ಮೊದಲೇ ನಿರ್ಧಾರ

ಮದುವೆಗಿಂತ ಸುಮಾರು 5 ತಿಂಗಳ ಮೊದಲೇ ನಯನ್-ವಿಕ್ಕಿ ದಂಪತಿಯ ಅವಳಿ ಮಕ್ಕಳ ಸರೋಗಸಿ ಪ್ರಾಸೆಸ್ ಶುರುವಾದಂತೆ ಕಾಣುತ್ತಿದೆ. ಮದುವೆಗೂ ಮೊದಲೇ ಬಾಡಿಗೆ ಗರ್ಭದಲ್ಲಿ ಮಕ್ಕಳು ಬೆಳೆಯಲು ಪ್ರಾರಂಭಿಸಿದ ಸಾಧ್ಯತೆಯಿದೆ. ಹಲವು ವರ್ಷಗಳಿಂದ ದಂಪತಿ ಪ್ರೀತಿಸುತ್ತಿದ್ದರು. ಆದರೆ ಈ ಬಗ್ಗೆ ಎಲ್ಲೂ ಮಾತನಾಡಿರಲಿಲ್ಲ. ಸಹಜೀವನ ನಡೆಸುತ್ತಿದ್ದ ಜೋಡಿ ಮದುವೆಗೂ ಮೊದಲೇ ಸರೋಗಸಿ ವಿಧಾನದಿಂದ ಮಕ್ಕಳನ್ನು ಪಡೆಯಲು ನಿರ್ಧರಿಸಿದ್ದರು ಎನ್ನುವುದು ಗೊತ್ತಾಗುತ್ತಿದೆ.

ಸರೋಗಸಿ ವಿಧಾನ ಎಂದರೇನು?

ಸರೋಗಸಿ ವಿಧಾನ ಎಂದರೇನು?

ಬಾಡಿಗೆ ಗರ್ಭದ ಮೂಲಕ ಮಕ್ಕಳನ್ನು ಪಡೆಯುವುದಕ್ಕೆ ಸರೋಗಸಿ ವಿಧಾನ ಎನ್ನುತ್ತಾರೆ. ಅಂದರೆ ಬೇರೆ ಮಹಿಳೆ ಹಾಗೂ ಪುರುಷನಿಗೆ ಸೇರಿದ ಮಗುವನ್ನು ಮತ್ತೊಬ್ಬ ಮಹಿಳೆ ತನ್ನ ಗರ್ಭದಲ್ಲಿ ಹೊತ್ತು ಹೆರುವ ವಿಧಾನ. ಪ್ರಸವದ ನಂತರ ಮಗುವನ್ನು ಹೊತ್ತು ಹೆತ್ತ ಮಹಿಳೆಗೆ ಆ ಮಗುವಿನ ಮೇಲೆ ಯಾವುದೇ ಹಕ್ಕು ಇರುವುದಿಲ್ಲ. ಅಂಡಾಣು, ವೀರ್ಯ ಕೊಟ್ಟವರೇ ಆ ಮಗುವಿಗೆ ಪೋಷಕರಾಗುತ್ತಾರೆ. ಈ ವಿಧಾನದಲ್ಲಿ ಪ್ರಿಯಾಂಕ ಚೋಪ್ರಾ, ಮಂಚು ಲಕ್ಷ್ಮಿ, ಶಾರುಕ್ ಖಾನ್ ಸೇರಿದಂತೆ ಸಾಕಷ್ಟು ಸೆಲೆಬ್ರೆಟಿಗಳು ಮಕ್ಕಳನ್ನು ಪಡೆದಿದ್ದಾರೆ.

6 ವರ್ಷದ ಹಿಂದೆ ವಿಕ್ಕಿ- ನಯನ್ ಕಲ್ಯಾಣ?

6 ವರ್ಷದ ಹಿಂದೆ ವಿಕ್ಕಿ- ನಯನ್ ಕಲ್ಯಾಣ?

ತಮಿಳುನಾಡು ಸರ್ಕಾರ ಕೂಡ ನಯನ್- ವಿಕ್ಕಿ ದಂಪತಿ ಹೇಗೆ ಮಕ್ಕಳನ್ನು ಪಡೆದರು ಎನ್ನುವ ಮಾಹಿತಿ ಕೇಳಿತ್ತು. 6 ವರ್ಷಗಳ ಹಿಂದೆಯೇ ಜೋಡಿ ಮದುವೆ ರಿಜಿಸ್ಟರ್ ಮಾಡಿಸಿತ್ತು ಎನ್ನಲಾಗ್ತಿದ್ದು, ಇದಕ್ಕೆ ಸಂಬಂಧಿಸಿದ ಅಫಿಡವಿಟ್‌ ಅನ್ನು ಸರ್ಕಾರಕ್ಕೆ ಸಲ್ಲಿಸಲಿದೆಯಂತೆ. ಹಾಗಾಗಿ ಯಾವುದೇ ಸಮಸ್ಯೆ ಇಲ್ಲದೇ ಈ ವಿವಾದದಿಂದ ಹೊರಬರುವ ಸಾಧ್ಯತೆಯಿದೆ.

More from Filmibeat

English summary
Nayanthara Vignesh shivan surrogacy row Will the couple be saved from the case. Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X