For Quick Alerts
  ALLOW NOTIFICATIONS  
  For Daily Alerts

  ಗೋವಿಂದ, ಗೋವಿಂದ ಎಂಬ ನಯನತಾರಾ, ದೀಪಿಕಾ ಪಡುಕೋಣೆ!

  |

  ನಿನ್ನೆಯಷ್ಟೆ ವಿವಾಹವಾಗಿರುವ ನಟಿ ನಯನತಾರಾ ಹಾಗೂ ನಿರ್ದೇಶಕ, ನಿರ್ಮಾಪಕ ವಿಘ್ನೇಶ್ ಶಿವನ್ ಇಂದು ತಿರುಪತಿಗೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ.

  ನಯನತಾರಾ ಹಾಗು ವಿಘ್ನೇಶ್ ಶಿವನ್ ಅವರ ವಿವಾಹ ತಿರುಪತಿಯಲ್ಲಿಯೇ ನಡೆಯಬೇಕಿತ್ತು. ಆದರೆ ಅನಿವಾರ್ಯ ಕಾರಣಗಳಿಂದ ಅದು ಆಗಲಿಲ್ಲ. ತಿರುಪತಿಯಲ್ಲಿ ಮೊದಲು ನಿಗದಿಯಾಗಿದ್ದ ವಿವಾಹ ಆ ನಂತರ ಮಹಾಬಲಿಪುರಂಗೆ ಸ್ಥಳಾಂತರಗೊಂಡಿತು.

  ಹಾಗಾಗಿ, ಮದುವೆಯಾದ ಮೊದಲ ದಿನವೇ ನಯನತಾರಾ ಹಾಗೂ ವಿಘ್ನೇಶ್ ಶಿವನ್ ಅವರುಗಳು ತಿರುಪತಿಗೆ ಆಗಮಿಸಿ ವೇಂಕಟೇಶ್ವರ ಸ್ವಾಮಿಯ ದರ್ಶನ ಪಡೆದಿದ್ದಾರೆ. ದೇವಾಲಯಕ್ಕೆ ಭೇಟಿ ಕೊಟ್ಟ ಸಮಯದಲ್ಲಿ ನಯನತಾರಾ ಹಳದಿ ಬಣ್ಣದ ಸೀರೆ, ರವಿಕೆ ತೊಟ್ಟಿದ್ದರೆ, ವಿಘ್ನೇಶ್ ಶಿವನ್ ಬಿಳಿ ಬಣ್ಣದ ಶರ್ಟ್ ಪಂಚೆ ಧರಿಸಿದ್ದರು. ಕೈ-ಕೈ ಹಿಡಿದುಕೊಂಡು ಇವರು ದೇವಾಲಯದ ಆವರಣದಲ್ಲಿ ಸುತ್ತಾಡಿದರು.

  ನಯನತಾರಾ ಹಾಗೂ ವಿಘ್ನೇಶ್ ಮಾತ್ರವೇ ಅಲ್ಲ ಇನ್ನೊಬ್ಬ ಸ್ಟಾರ್ ನಟಿಯೂ ಸಹ ಕುಟುಂಬ ಸಮೇತ ತಿರುಪತಿಗೆ ಭೇಟಿ ನೀಡಿದ್ದಾರೆ, ಅವರೇ ದೀಪಿಕಾ ಪಡುಕೋಣೆ.

  ನಟಿ ದೀಪಿಕಾ ಪಡುಕೋಣೆ, ತಮ್ಮ ತಂದೆ ಪ್ರಕಾಶ್ ಪಡುಕೋಣೆ, ತಾಯಿ ಹಾಗೂ ತಂಗಿಯೊಡನೆ ತಿರುಪತಿ ದೇವಾಲಯಕ್ಕೆ ಭೇಟಿ ನೀಡಿದ್ದರು. ವೆಂಟಕೇಶ್ವರ ಸ್ವಾಮಿಯ ಭಕ್ತೆಯಾಗಿರುವ ದೀಪಿಕಾ, ಆಗಾಗ್ಗೆ ಕುಟುಂಬದ ಜೊತೆ ದೇವಾಲಯಕ್ಕೆ ಭೇಟಿ ನೀಡುತ್ತಿರುತ್ತಾರೆ. ದೀಪಿಕಾ ಭೇಟಿ ನೀಡಿದಾಗ ದೇವಾಲಯದ ಆಡಳಿತ ಮಂಡಳಿಯು ಅವರಿಗೆ ಶಾಲು ಹೊದಿಸಿ ಸನ್ಮಾನಿಸಿದೆ.

  ದೀಪಿಕಾ ಪಡುಕೋಣೆ ಕುಟುಂಬದ ಜೊತೆಗೆ ರಣ್ವೀರ್ ಸಿಂಗ್ ದೇವಾಲಯಕ್ಕೆ ಬಂದಿರಲಿಲ್ಲ. ರಣ್ವೀರ್ ಸಿಂಗ್ ಸಿನಿಮಾದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ ಎನ್ನಲಾಗಿದೆ.

  English summary
  Actress Nayanthara and Vignesh Shivan visited Tirupathi temple today. Deepika Padukone also visited Tirupathi temple recently with her family.
  Friday, June 10, 2022, 19:45
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X