ನಯನತಾರ ವಿಗ್ನೇಶ್ ಶಿವನ್ ಮದುವೆ ಫೊಟೋ ಔಟ್: ಪತ್ನಿಗೆ ಮುತ್ತಿಟ್ಟ ಪತಿ!
ಹಲವು ದಿನಗಳಿಂದ ನಯನತಾರ ಮತ್ತು ವಿಗ್ನೇಶ್ ಜೋಡಿಯ ಮದುವೆ ಸುದ್ದಿ ಹರಿದಾಡುತ್ತಲೇ ಇದೆ. 2015ರಿಂದ ಪ್ರಣಯ ಪಕ್ಷಿಗಳಂತೆ ಹಾರಾಡುತ್ತಾ ಇರುವ ಈ ಜೋಡಿ ಈಗ ಮದುವೆ ಎಂಬ ಬಂಧಕ್ಕೆ ಒಳಗಾಗಲೂ ಸಜ್ಜಾಗಿದೆ. ಸದ್ಯ ಸೌತ್‌ನಲ್ಲಿ ಇವರ ಮದುವೆ ಸುದ್ದು ಜೋರಾಗಿದೆ.
ನಟಿ ನಯನತಾರ ಮತ್ತ ವಿಗ್ನೇಶ್ ಮದುವೆ ನೆರವೇರಿದೆ. ಅಪ್ತರ ಸಮ್ಮುಖದಲ್ಲಿ ಈ ಜೋಡಿ ಸಂಪ್ರದಾಯ ಬದ್ಧವಾಗಿ ಮದುವೆ ಮಾಡಿಕೊಂಡಿದೆ. ಇಂದು (ಜೂನ್ 9)ರಂದು ನಯನತಾರ ಮದುವೆ ಅದ್ಧೂರಿಯಾಗಿ ನಡೆದಿದೆ. ಸಾಕಷ್ಟು ಸಿನಿಮಾ ಕಲಾವಿದರು ಇವರ ಮದುವೆಯಲ್ಲಿ ಭಾಗಿ ಆಗಿದ್ದಾರೆ.
ಈ ಜೋಡಿಯ ಮದುವೆ ಹೇಗೆ ನಡೆದಿದೆ. ಮದುಮಕ್ಕಳಾಗಿ ಈ ಜೋಡಿ ಹೇಗೆ ಮಿಂಚಿದೆ ಎನ್ನುವ ಕುತೂಹಕ್ಕೆ ಬ್ರೇಕ್ ಬಿದ್ದಿದೆ. ಯಾಕೆಂದರೆ ಮದುವೆಯ ಮೊದಲ ಫೋಟೋ ಹಂಚಿಕೊಂಡಿದ್ದಾರೆ ವಿಗ್ನೇಶ್ ಶಿವನ್ ಮತ್ತು ನಯನತಾರಾ.

ಮದುವೆ ಫೊಟೋ ಹಂಚಿಕೊಂಡ ಜೋಡಿ!
ಎಲ್ಲರೂ ಸಾಕಷ್ಟು ಕುತೂಹಕಲದಿಂದ ಕಾಯುತ್ತಾ ಇರುವ ನಯನತಾರ ಮತ್ತು ವಿಗ್ನೇಶ್ ಶಿವನ್ ಮದುವೆ ಫೋಟೋ ರಿವೀಲ್ ಆಗಿದೆ. ಅದ್ದೂರಿಯಾಗಿ ನಡೆದ ಮದುವೆಯಲ್ಲಿ ನಯನತಾರಾ, ವಿಗ್ನೇಶ್ ಮದುಮಕ್ಕಳಂತೆ ಸಿಂಗಾರಗೊಂಡು ಅಂದವಾಗಿ ಕಾಣಿಸಿಕೊಂಡಿದ್ದಾರೆ. ಈ ಪೋಟೋದಲ್ಲಿ ನಯನತಾರಾ ಹಣೆಗೆ ವಿಗ್ನೇಶ್ ಮುತ್ತುಡುತ್ತಿದ್ದಾರೆ. ತಾಳಿ ಕಟ್ಟಿದ ಬಳಿಕ ಕ್ಲಿಕ್ಕಿಸಿದ ಫೋಟೋ ಇದು.

ಕೆಂಪು ಬಣ್ಣದ ಉಡುಪಿನಲ್ಲಿ ನಯನತಾರ!
ಸಿನಿಮಾ ತಾರೆಯರ ಮದುವೆ ಅಂದರೆ, ಅದರಲ್ಲೂ ನಟಿಯರ ಮದುವೆ ಅಂದರೆ ಅವರು ಯಾವ ರೀತಿಯ ಕಾಸ್ಟ್ಯೂಂಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಬಗ್ಗೆ ಸಾಕಷ್ಟು ಕುತೂಹಲ ಇದ್ದೇ ಇರುತ್ತದೆ. ಅಂತೆಯೇ ನಯನತಾರಾ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಬಗ್ಗೆಯೂ ಕುತೂಹಲ ಇತ್ತು. ನಯನತಾರ ಕೆಂಪು ಬಣ್ಣದ ಉಡುಪು ಧರಿಸಿದ್ದು, ಹರಿಸು ಬಣ್ಣದ ಒಡವೆಗಳನ್ನು ಧಸಿರಿದ್ದಾರೆ. ಇನ್ನು ವಿಗ್ನೇಶ್ ಸರಳವಾಗಿ ರೇಶ್ಮೆ ಪಂಚೆ, ಶರ್ಟು ತೊಟ್ಟಿದ್ದಾರೆ.

ಒಂದೇ ರೀತಿ ಫೊಟೋ ಹಂಚಿಕೊಂಡ ದಂಪತಿ!
ನಯನತಾರ ಮತ್ತು ವಿಗ್ನೇಶ್ ಶಿವನ್ ಇಬ್ಬರು ಕೂಡ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಒಂದೆ ರೀತಿಯ ಫೋಟೋ ಹಂಚಿಕೊಂಡಿದ್ದಾರೆ. ಜೊತೆಗೆ ಒಂದೇ ರೀತಿಯ ಕ್ಯಾಪ್ಷನ್ ಕೊಟ್ಟಿದ್ದಾರೆ. "ದೇವರ ಅನುಗ್ರಹದಿಂದ, ನಮ್ಮ ಪೋಷಕರು ಮತ್ತು ಸ್ನೇಹಿತರ ಎಲ್ಲಾ ಶುಭ ಹಾರೈಕೆಯಿಂದ. ಹೊಸ ಆರಂಭದ ಕಡೆಗೆ." ಎಂದು ಬರೆದುಕೊಂಡು, ಹೃದಯ ಮತ್ತು ಉಂಗುರದ ಚಿಹ್ನೆ ಹಾಕಿದ್ದಾರೆ.

ಸುಸೂತ್ರವಾಗಿ ನೆರವೇರಿದ ಮದುವೆ ನಯನತಾರ ಮದುವೆ!
ನಯನತಾರಾ ಮದುವೆ ಬಗ್ಗೆ ಹಲವು ದಿನಗಳಿಂದ ಚರ್ಚೆಯಲ್ಲಿತ್ತು. ಅದೆಷ್ಟೋ ಭಾರಿ ನಯನತಾರಾ ಮದುವೆ ಆಗೇ ಬಿಟ್ಟಿದೆ ಅನ್ನುವಷ್ಟು ಚರ್ಚೆಗಳು ನಡೆದಿದ್ದೂ ಇದೆ. ಕೊನೆಗೂ ನಯನತಾರ ಹಾಗೂ ವಿಗ್ನೇಶ್ ಶಿವನ್ ಮದುವೆ ಇಂದು( ಜೂನ್ 9) ಅದ್ಧೂರಿಯಾಗಿ ನಡೆದಿದೆ. ಭಾರೀ ಭದ್ರತೆಯೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಗಣ್ಯಾತಿಗಣ್ಯರು ಭಾಗವಹಿಸಿದ್ದಾರೆ.


Click it and Unblock the Notifications











