For Quick Alerts
  ALLOW NOTIFICATIONS  
  For Daily Alerts

  KGF 2 vs Beast: ಬೀಸ್ಟ್-ಕೆಜಿಎಫ್ ಕಾಳಗ ಅಂತ್ಯ, ಅಭಿಮಾನಿಗಳನ್ನು ಒಂದು ಮಾಡಿದ ನೀಲ್-ನೆಲ್ಸನ್!

  |

  ಯಶ್ ನಟನೆಯ 'ಕೆಜಿಎಫ್ 2' ಏಪ್ರಿಲ್ 14ರಂದು ರಿಲೀಸ್ ಆಗಲು ಸಜ್ಜಾಗಿದೆ. ಅಭಿಮಾನಿಗಳು ಕೂಡ ಸಿನಿಮಾವನ್ನು ಕಣ್ತುಂಬಿಕೊಳ್ಳಲು ಕಾತುರರಾಗಿದ್ದಾರೆ. ಈ ನಡುವೆ ವಿಜಯ್ ನಟನೆಯ 'ಬೀಸ್ಟ್' ಕೂಡ ಏಪ್ರಿಲ್ 13ರಂದೆ ತೆರೆಕಾಣುತ್ತಿದೆ. ಈ ಸುದ್ದಿ ಹೊರಬರುತ್ತಿದ್ದಂತೆ ಸಾಕಷ್ಟು ಚರ್ಚೆಗಳು ಆರಂಭವಾದವು.

  ಈ ಎರಡು ಚಿತ್ರಗಳು ಒಂದೇ ಸಮಯದಲ್ಲಿ ರಿಲೀಸ್ ಆದರೆ ಬಾಕ್ಸಾಫೀಸ್ ಕ್ಲ್ಯಾಶ್ ಏರ್ಪಡಲಿದೆಯೆ ಎಂಬ ಅನುಮಾನ ಹುಟ್ಟುಹಾಕಿತ್ತು. 'ಬೀಸ್ಟ್', 'ಕೆಜಿಎಫ್​ 2'ಗೆ ಒಂದು ದಿನ ಮೊದಲೆ ತೆರೆಕಾಣಲಿದೆ.

  Yash vs Vijay: ಹೆಚ್ಚಿನ ಬೇಡಿಕೆ ಇರೋದು ರಾಕಿಂಗ್ ಸ್ಟಾರ್‌ ಯಶ್‌ಗೆ, ಸಮೀಕ್ಷೆ ಇಲ್ಲಿದೆ!Yash vs Vijay: ಹೆಚ್ಚಿನ ಬೇಡಿಕೆ ಇರೋದು ರಾಕಿಂಗ್ ಸ್ಟಾರ್‌ ಯಶ್‌ಗೆ, ಸಮೀಕ್ಷೆ ಇಲ್ಲಿದೆ!

  ಏಪ್ರಿಲ್ 13ರಂದು ವಿಜಯ್ ನಟನೆಯ ಚಿತ್ರ ಎಲ್ಲೆಡೆ ರಿಲೀಸ್ ಆಗಲಿದೆ. ಚಿತ್ರದ ರಿಲೀಸ್ ಕುರಿತು ನಿರ್ಮಾಣ ಸಂಸ್ಥೆ 'ಸನ್ ಪಿಕ್ಚರ್ಸ್' ಟ್ವೀಟ್ ಮಾಡಿದ್ದು, ಹೊಸ ಪೋಸ್ಟರ್ ಮೂಲಕ ರಿಲೀಸ್ ದಿನಾಂಕವನ್ನು ಘೋಷಿಸಿತ್ತು.

  KGF 2 Trailer Records: ಭರ್ಜರಿ ದಾಖಲೆ ಬರೆದ 'KGF 2' ಟ್ರೈಲರ್: ಕನ್ನಡಕ್ಕಿಂತ ಇತರ ಭಾಷೆಗಳಲ್ಲಿ ಹೆಚ್ಚು ವೀವ್ಸ್!KGF 2 Trailer Records: ಭರ್ಜರಿ ದಾಖಲೆ ಬರೆದ 'KGF 2' ಟ್ರೈಲರ್: ಕನ್ನಡಕ್ಕಿಂತ ಇತರ ಭಾಷೆಗಳಲ್ಲಿ ಹೆಚ್ಚು ವೀವ್ಸ್!

  Recommended Video

  KGF 2 vs Beast | KGF 2 ಎದುರು ಕರ್ನಾಟಕದಲ್ಲಿ ತೊಡೆತಟ್ಟಲು ಮುಂದಾದ ಬೀಸ್ಟ್ | Yash | Sanjay Dutt
  ಎರಡನೇ ಭಾಗಕ್ಕೆ ಫ್ಯಾನ್ಸ್ ಸಾಕಷ್ಟು ಕಾದಿದ್ದಾರೆ

  ಎರಡನೇ ಭಾಗಕ್ಕೆ ಫ್ಯಾನ್ಸ್ ಸಾಕಷ್ಟು ಕಾದಿದ್ದಾರೆ

  ‘ಬೀಸ್ಟ್' ರಿಲೀಸ್ ದಿನಾಂಕ ಘೋಷಣೆಯಾದಂತೆಯೆ ಸಾಮಾಜಿಕ ಜಾಲತಾಣಗಳಲ್ಲಿ ‘ಕೆಜಿಎಫ್ 2' ಹಾಗೂ ‘ಬೀಸ್ಟ್' ಬಾಕ್ಸಾಫೀಸ್ ಪೈಪೋಟಿಯ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆ ಪ್ರಾರಂಭವಾಗಿದೆ. ‘ಕೆಜಿಎಫ್' ಚಿತ್ರ ಈಗಾಗಲೇ ತೆರೆಕಂಡು ವಿಶ್ವದಾದ್ಯಂತ ಮೆಚ್ಚುಗೆ ಪಡೆದಿದೆ. ಅದರ ಎರಡನೇ ಭಾಗಕ್ಕೆ ಫ್ಯಾನ್ಸ್ ಸಾಕಷ್ಟು ಸಮಯದಿಂದ ಕಾದಿದ್ದಾರೆ. ‘ಕೆಜಿಎಫ್​ 2' ಹವಾ ಎಲ್ಲಾ ಕಡೆಯಲ್ಲೂ ಜೋರಾಗಿದೆ. ಈ ಹಿನ್ನೆಲೆಯಲ್ಲಿ ‘ಬೀಸ್ಟ್' ಎದುರಿನ ಬಾಕ್ಸಾಫೀಸ್ ಸ್ಪರ್ಧೆಯಲ್ಲಿ ‘ಕೆಜಿಎಫ್ 2' ಜಯಭೇರಿ ಬಾರಿಸಲಿದೆ ಎಂದು ಫ್ಯಾನ್ಸ್ ಅನಿಸಿಕೆ ಹಂಚಿಕೊಳ್ಳುತ್ತಿದ್ದಾರೆ

  ಪ್ರಶಾಂತ್ ನೀಲ್ ಮತ್ತು ಬೀಸ್ಟ್ ನಿರ್ದೇಶಕ ನೆಲ್ಸನ್

  ಪ್ರಶಾಂತ್ ನೀಲ್ ಮತ್ತು ಬೀಸ್ಟ್ ನಿರ್ದೇಶಕ ನೆಲ್ಸನ್

  ಇದೆಲ್ಲದರ ಜೊತೆಗೆ ‘ಬೀಸ್ಟ್' ಸಿನಿಮಾವು ‘ಕೆಜಿಎಫ್ 2' ಸಮಯದಲ್ಲಿ ರಿಲೀಸ್ ಆಗುತ್ತಿರುವುದಕ್ಕೆ ಅಸಮಾಧಾನ ಕೂಡ ಏರ್ಪಟ್ಟಿತ್ತು. ಅಭಿಮಾನಿಗಳು ಈ ಬಗ್ಗೆ ಪರ ವಿರೋಧ ಮಾತನಾಡಿದ್ದರು. ‘ಬೀಸ್ಟ್' ಚಿತ್ರ ‘ಕೆಜಿಎಫ್​ 2' ಆಡಿಯನ್ಸ್‌ಗಳನ್ನು ತನ್ನೆಡೆ ಸೆಳೆಯಲಿದೆ, ಇದರಿಂದ ಕೆಜಿಎಫ್‌ಗೆ ಆಡಿಯನ್ಸ್ ಕಮ್ಮಿ ಆಗಲಿದ್ದಾರೆ ಎಂಬೆಲ್ಲಾ ವಾದ ವಿವಾದಗಳ ನಡುವೆ ಇದೆಲ್ಲದಕ್ಕು ಇತ್ಯರ್ಥ ಹಾಡಿದ್ದಾರೆ ‘ಕೆಜಿಎಫ್​ 2' ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ‘ಬೀಸ್ಟ್' ನಿರ್ದೇಶಕ ನೆಲ್ಸನ್ ದಿಲಿಪ್ ಕುಮಾರ್.

  ಚಿತ್ರವನ್ನು ನೋಡಲು ಕಾತರನಾಗಿದ್ದೇನೆ ಎಂದ ನೆಲ್ಸನ್

  ಹೌದು ‘ಕೆಜಿಎಫ್ 2' ಟ್ರೈಲರ್ ರಿಲೀಸ್ ಆಗುತ್ತಿದ್ದಂತೆ ಈ ಟ್ರೈಲರ್ ಅನ್ನು ನೋಡಿರುವ ‘ಬೀಸ್ಟ್' ಚಿತ್ರದ ನಿರ್ದೇಶಕ ನೆಲ್ಸನ್ ದಿಲಿಪ್ ಕುಮಾರ್ ಟ್ವೀಟ್ ಮಾಡಿದ್ದಾರೆ. ‘ಕೆಜಿಎಫ್ 2' ಟ್ರೈಲರ್ ಗೆ ಟ್ವೀಟ್ ಮಾಡಿರುವ ಅವರು "ಟ್ರೇಲರ್ ತುಂಬ ಮಾಸ್ ಆಗಿ ಮೂಡಿ ಬಂದಿದೆ. ‘ಕೆಜಿಎಫ್ 2' ಚಿತ್ರವನ್ನು ನೋಡಲು ಕಾಯುತ್ತಿದ್ದೇನೆ" ಎಂದು ಬರೆದುಕೊಂಡಿದ್ದಾರೆ. ಹಾಗೂ ನೆಲ್ಸನ್ ದಿಲಿಪ್ ಕುಮಾರ್ ಟ್ವೀಟ್‌ಗೆ ರೀ ಟ್ವೀಟ್ ಮಾಡಿರುವ ಪ್ರಶಾಂತ್ ನೀಲ್ ಧನ್ಯವಾದ ತಿಳಿಸಿದ್ದಾರೆ.

  'ಬೀಸ್ಟ್' ಗೆ ಆಲ್ ದಿ ಬೆಸ್ಟ್ ಎಂದ ಪ್ರಶಾಂತ್ ನೀಲ್

  ನೆಲ್ಸನ್ ದಿಲಿಪ್ ಕುಮಾರ್ ಟ್ವೀಟ್‌ಗೆ ಪ್ರತಿಕ್ರೀಯಿಸಿರುವ ಪ್ರಶಾಂತ್ ನೀಲ್ " ಧನ್ಯವಾದಗಳು ನೆಲ್ಸನ್ ದಿಲಿಪ್ ಕುಮಾರ್. 'ಬೀಸ್ಟ್' ಚಿತ್ರ ನೋಡಲು ನನಗೂ ಕಾಯಲು ಸಾಧ್ಯವಾಗುತ್ತಿಲ್ಲ. ನಟ ವಿಜಯ್ ಅವರ ಸಿನಿಮಾವನ್ನು ಬಿಗ್ ಸ್ಕ್ರೀನ್ ಮೇಲೆ ನೋಡಲು ನಾನು ಯಾವತ್ತು ಕಾಯುತ್ತೇನೆ. 'ಬೀಸ್ಟ್' ಗೆ ಆಲ್ ದಿ ಬೆಸ್ಟ್" ಎಂದಿದ್ದಾರೆ ಪ್ರಶಾಂತ್ ನೀಲ್. ಈ ಮೂಲಕ ‘ಬೀಸ್ಟ್' ಮತ್ತು ‘ಕೆಜಿಎಫ್ 2' ನಟುವೆ ನಡೆಯುತ್ತಿದ್ದ ಚರ್ಚೆಗೆ ಇವರಿಬ್ಬರು ಇತಿಶ್ರಿ ಹಾಡಿದ್ದಾರೆ. ಸಿನಿಮಾವನ್ನು ಸಿನಿಮಾವಾಗಿ ಅಷ್ಟೇ ನೋಡೋಣ, ಸಿನಿಮಾಗಳ ನಡುವೆ ಈ ಕಿತ್ತಾಟ ಬೇಡ ಅನ್ನೋದನ್ನ ಸಾರಿದ್ದಾರೆ. ಈ ಮೂಲಕ ಫ್ಯಾನ್ಸ್ ಕೂಡ ತಣ್ಣಗಾಗಿದ್ದಾರೆ.

  ಇದು ರಾಜಕೀಯ ಅಲ್ಲ ಎಂದ ಯಶ್

  ಇದು ರಾಜಕೀಯ ಅಲ್ಲ ಎಂದ ಯಶ್

  ಇನ್ನು ‘ಕೆಜಿಎಫ್ 2' ಟ್ರೈಲರ್ ರಿಲೀಸ್ ಕಾರ್ಯಕ್ರಮದಲ್ಲಿ ನಟ ಯಶ್ ಕೂಡ ಈ ಬಗ್ಗೆ ಮಾತನಾಡಿದ್ದರು. "ನಾವು ತುಂಬ ಮುಂಚೆಯೆ ರಿಲೀಸ್​ ಡೇಟ್​ ಅನೌನ್ಸ್​ ಮಾಡಿದ್ವಿ. ಯಾವ ಸಿನಿಮಾ ರಿಲೀಸ್​ ಆಗುತ್ತದೆ ಅನ್ನೋದು ನಮಗೆ ಗೊತ್ತಿರಲಿಲ್ಲ. ಈಗ ವಿಜಯ್​ ಅವರ ಬೀಸ್ಟ್​ ಚಿತ್ರ ಬರುತ್ತಿದೆ. ಬೀಸ್ಟ್​ ವರ್ಸಸ್​ ಕೆಜಿಎಫ್​ ಅಂತ ಹೇಳಬಾರದು. ಬೀಸ್ಟ್​ ಮತ್ತು ಕೆಜಿಎಫ್​ ಎನ್ನಬೇಕು. ಎರಡೂ ಕೂಡ ಇಂಡಿಯನ್​ ಸಿನಿಮಾ. ಇದು ಎಲೆಕ್ಷನ್​ ಅಲ್ಲ, ಸಿನಿಮಾ. ಯಾರು ಗೆಲ್ಲುತ್ತಾರೆ, ಯಾರು ಸೋಲುತ್ತಾರೆ ಎಂಬ ಮಾತು ಇದರಲ್ಲಿ ಬರಲ್ಲ. ಎರಡೂ ಸಿನಿಮಾವನ್ನೂ ನೋಡೋಣ. ವಿಜಯ್ ಸರ್​ ನನಗಿಂತ ಸೀನಿಯರ್​. ನಾವು ಅವರಿಗೆ ಗೌರವ ಕೊಡಬೇಕು. ವಿಜಯ್​ ಅವರ ಅಭಿಮಾನಿಗಳಿಗೂ ‘ಕೆಜಿಎಫ್​ 2' ಸಿನಿಮಾ ಇಷ್ಟ ಆಗಲಿದೆ" ಎಂದು ಯಶ್​ ಹೇಳಿದ್ದರು.

  English summary
  Beast movie director Nelson Dilipkumar praises the trailer of Yash's KGF 2.And here is Prashanth Neel's reply for that.
  Tuesday, March 29, 2022, 13:24
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X