For Quick Alerts
  ALLOW NOTIFICATIONS  
  For Daily Alerts

  'ಕಥಾಸಂಗಮ' ಚಿತ್ರದಂತೆ ತಮಿಳಿನಲ್ಲಿ 'ನವರಸ': 9 ಕಥೆ 9 ನಿರ್ದೇಶಕರು 9 ಸಿನಿಮಾ

  |

  ಕನ್ನಡ ನಿರ್ದೇಶಕ ರಿಷಬ್ ಶೆಟ್ಟಿ ಸಾರಥ್ಯದಲ್ಲಿ 'ಕಥಾಸಂಗಮ' ಎಂಬ ಸಿನಿಮಾ ಬಂದಿತ್ತು. ಈ ಚಿತ್ರದಲ್ಲಿ ಏಳು ಕಥೆಗಳು, ಏಳು ನಿರ್ದೇಶಕರು ಹಾಗೂ ಏಳು ಕಥೆಗೆ ತಕ್ಕಂತೆ ಏಳು ಜನ ಪ್ರಮುಖ ಪಾತ್ರಧಾರಿಗಳು ಇದ್ದರು.

  ಇದೀಗ, ಇಂತಹದ್ದೆ ಪರಿಕಲ್ಪನೆಯಲ್ಲಿ ಮಣಿರತ್ನಂ ಒಂದು ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರವನ್ನು ನೆಟ್‌ಫ್ಲಿಕ್ಸ್ ಅಧಿಕೃತವಾಗಿ ಘೋಷಣೆ ಮಾಡಿದ್ದು, ಈ ಚಿತ್ರಕ್ಕೆ 'ನವರಸ' ಎಂದು ಹೆಸರು ಸಹ ಇಡಲಾಗಿದೆ. ಈ ಚಿತ್ರವನ್ನು ಮಣಿರತ್ನಂ ಮತ್ತು ಜಯೇಂದ್ರ ಪಂಚಪಕೇಶನ್ ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ.

  ತಮಿಳು ಸಿನಿಮಾಕ್ಕಾಗಿ ಗನ್ ಹಿಡಿದ ಸ್ವಿಂಗ್ ಮಾಸ್ಟರ್ ಇರ್ಫಾನ್ ಪಠಾಣ್ತಮಿಳು ಸಿನಿಮಾಕ್ಕಾಗಿ ಗನ್ ಹಿಡಿದ ಸ್ವಿಂಗ್ ಮಾಸ್ಟರ್ ಇರ್ಫಾನ್ ಪಠಾಣ್

  ಈ ಚಿತ್ರದಿಂದ ಬಂದ ಲಾಭವನ್ನು ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಎದುರಿಸಿದ ಎಫ್‌ಇಎಫ್‌ಎಸ್‌ಐ (ಫಿಲ್ಮ್ ಎಂಪ್ಲಾಯೀಸ್ ಫೆಡರೇಶನ್ ಆಫ್ ಸೌತ್ ಇಂಡಿಯಾ) ತಂತ್ರಜ್ಞರಿಗೆ ನೀಡಲು ತೀರ್ಮಾನಿಸಿದ್ದಾರೆ. ವಿಶೇಷ ಅಂದ್ರೆ ಈ ಚಿತ್ರದಲ್ಲಿ ಸ್ಟಾರ್ ನಟ-ನಟಿಯರು ಹಾಗೂ ತಂತ್ರಜ್ಞರು ಕೆಲಸ ಮಾಡಲಿದ್ದಾರೆ. ಮುಂದೆ ಓದಿ...

  ನವರಸಗಳನ್ನು ಒಳಗೊಂಡ ಸಿನಿಮಾ

  ನವರಸಗಳನ್ನು ಒಳಗೊಂಡ ಸಿನಿಮಾ

  ಮಣಿರತ್ನಂ ಮತ್ತು ಜಯೇಂದ್ರ ಪಂಚಪಕೇಶನ್ ನಿರ್ಮಾಣ ಈ ಚಿತ್ರದಲ್ಲಿ ಒಂಬತ್ತು ಪ್ರತ್ಯೇಕ ಕಥೆ ಇರಲಿದೆ. ನವರಸಗಳು ಎಂದು ಕರೆಯಲ್ಪಡುವ ಅಂಶಗಳನ್ನೇ ಆಧಾರವನ್ನಾಗಿಸಿ ಒಂದೊಂದು ಕಥೆ ಮಾಡಲಾಗುವುದು. (ಶೃಂಗಾರ, ಹಾಸ್ಯ, ಕರುಣ, ರೌದ್ರ, ವೀರ, ಭಯಾನಕ, ಭೀಭತ್ಸ, ಅದ್ಭುತ ಮತ್ತು ಶಾಂತ)

  ಸ್ಟಾರ್ ಕಲಾವಿದರು ಎಂಟ್ರಿ

  ಸ್ಟಾರ್ ಕಲಾವಿದರು ಎಂಟ್ರಿ

  'ನವರಸ' ಚಿತ್ರದಲ್ಲಿ ಒಂಬತ್ತು ಕಥೆಗಳಿದ್ದು, ಖ್ಯಾತ ನಟ ಸೂರ್ಯ, ರೇವತಿ, ಪ್ರಸನ್ನ, ಪಾರ್ವತಿ, ನಿತ್ಯಾ ಮೆನೆನ್, ವಿಜಯ್ ಸೇತುಪತಿ, ಸಿದ್ಧಾರ್ಥ್, ಪ್ರಕಾಶ್ ರಾಜ್, ಗೌತಮ್ ಕಾರ್ತಿಕ್, ಸಿಂಹಾ, ಪೂರ್ಣ, ಅಶೋಕ್ ಸೆಲ್ವನ್, ವಿಕ್ರಂತ್ ಮತ್ತು ಐಶ್ವರ್ಯ ರಾಜೇಶ್ ಮುಂತಾದ ಸ್ಟಾರ್ ಕಲಾವಿದರು ನಟಿಸಲಿದ್ದಾರೆ.

  ವಿಜಯ್ ಸೇತುಪತಿ ಮಗಳಿಗೆ ಅತ್ಯಾಚಾರ ಬೆದರಿಕೆ: ಕ್ಷಮೆಯಾಚಿಸಿದ ಶ್ರೀಲಂಕಾದ ವ್ಯಕ್ತಿವಿಜಯ್ ಸೇತುಪತಿ ಮಗಳಿಗೆ ಅತ್ಯಾಚಾರ ಬೆದರಿಕೆ: ಕ್ಷಮೆಯಾಚಿಸಿದ ಶ್ರೀಲಂಕಾದ ವ್ಯಕ್ತಿ

  ಒಂಬತ್ತು ನಿರ್ದೇಶಕರು

  ಒಂಬತ್ತು ನಿರ್ದೇಶಕರು

  ಒಂಬತ್ತು ಕತೆಯನ್ನು ಪ್ರತ್ಯೇಕವಾಗಿ ಒಬ್ಬೊಬ್ಬ ನಿರ್ದೇಶಕ ಸಿನಿಮಾ ಮಾಡಲಿದ್ದಾರೆ. ಕೆ.ವಿ. ಆನಂದ್, ಬೆಜಾಯ್ ನಂಬಿಯಾರ್, ಪೊನ್ರಾಮ್, ಕಾರ್ತಿಕ್ ಸುಬ್ಬರಾಜ್, ಕಾರ್ತಿಕ್ ನರೇನ್, ಹಲಿತಾ ಶಮೀಮ್, ಅರವಿಂದ ಸ್ವಾಮಿ ಮತ್ತು ರಥೀಂದ್ರನ್ ಆರ್ ಪ್ರಸಾದ್ ಸಂಭಾವನೆ ಪಡೆಯದೇ ಈ ಕಥೆಗಳಿಗೆ ಆಕ್ಷನ್ ಕಟ್ ಹೇಳಲಿದ್ದಾರೆ.

  Mahabharata ಧಾರವಾಹಿ ವೀಕ್ಷಕರಿಗೆ ಕಹಿ ಸುದ್ದಿ | Filmibeat Kannada
  9 ಜನ ಸಂಗೀತ ನಿರ್ದೇಶಕರು

  9 ಜನ ಸಂಗೀತ ನಿರ್ದೇಶಕರು

  ಎ.ಆರ್.ರೆಹಮಾನ್, ಡಿ ಇಮ್ಮನ್, ಅರುಳ್ ದೇವ್, ರಾನ್ ಎಥಾನ್, ಕಾರ್ತಿಕ್, ಗಿಬ್ರಾನ್, ಜಸ್ಟಿನ್ ಪ್ರಭಾಕರನ್ ಮತ್ತು ಗೋವಿಂದ್ ವಸಂತ ಅವರು ಒಂಬತ್ತು ಕಥೆಗಳ ಹಾಡುಗಳಿಗೆ ಮತ್ತು ಬಿಜಿಎಂ ನೀಡಲಿದ್ದಾರೆ. ಜೊತೆಗೆ ಹರ್ಷ್ವೀರ್ ಒಬೆರಾಯ್, ಸುಜಿತ್ ಸರಂಗ್, ಸಂತೋಷ್ ಶಿವನ್, ಬಾಲಸುಬ್ರಹ್ಮಣ್ಯಂ, ಮನೋಜ್ ಪರಮಹಂಸ, ಅಭಿನಂದನ್ ರಾಮಾನುಜಮ್, ಶ್ರೇಯಸ್ ಕೃಷ್ಣ, ವಿರಾಜ್ ಸಿಂಗ್ ಮತ್ತು ವಿ ಬಾಬು ಛಾಯಾಗ್ರಹಣ ನಿರ್ವಹಿಸಲಿದ್ದಾರೆ.

  English summary
  Netflix recently announced 'Navarasa' movie. Mani rathnam and jayendra will produce this project. Suriya, Revathy, Prasanna, Parvathy, Nithya Menen, Vijay Sethupathi and other playing prominet roles.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X