twitter
    For Quick Alerts
    ALLOW NOTIFICATIONS  
    For Daily Alerts

    ನಿಯಮ ಉಲ್ಲಂಘಿಸಿ ಚೆನ್ನೈನಿಂದ ಹೊರ ಹೋಗಿದ್ದಾರೆಯೇ ರಜನಿಕಾಂತ್?

    |

    ನಟ ರಜನಿಕಾಂತ್ ತಮ್ಮ ಐಷಾರಾಮಿ ಕಾರ್‌ನಲ್ಲಿ ಮಾಸ್ಕ್ ಧರಿಸಿ ಡ್ರೈವ್ ಮಾಡುತ್ತಿರುವ ಫೋಟೋ ವೈರಲ್ ಆಗಿತ್ತು. ಅದರ ಬೆನ್ನಲ್ಲೇ ಅವರು ಕೆಳಂಬಕ್ಕಮ್ ಫಾರ್ಮ್ ಹೌಸ್‌ನಲ್ಲಿ ವಾಯುವಿಹಾರ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತಲೈವಾ ಅಭಿಮಾನಿಗಳು ಆ ವಿಡಿಯೋ ನೋಡಿ ಖುಷಿ ಪಡುತ್ತಿದ್ದರೆ, ಇನ್ನು ಕೆಲವರು ಆಡಳಿತಾಧಿಕಾರಿಗಳ ಎದುರು ಪ್ರಶ್ನೆ ಇರಿಸಿದ್ದಾರೆ.

    Recommended Video

    Rakshith Shetty ಸಿನಿ ಪಯಣಕ್ಕೆ 10 ವರ್ಷ | Filmibeat Kannada

    ಲಾಕ್ ಡೌನ್ ಸಂದರ್ಭದಲ್ಲಿ ಅಗತ್ಯ ಸೇವೆಗಳನ್ನು ಒದಗಿಸುವವರು ಹಾಗೂ ಇತರರು ಹೊರಗೆ ಓಡಾಡಬೇಕೆಂದರೆ ಇ-ಪಾಸ್ ಪಡೆದುಕೊಳ್ಳಬೇಕು ಎನ್ನುವುದು ಕಡ್ಡಾಯ ಮಾಡಲಾಗಿತ್ತು. ಬಳಿಕ ಪಾಸ್ ಬಳಕೆಯಿಂದ ವಿನಾಯಿತಿ ನೀಡಲಾಗಿತ್ತು. ಆದರೆ ತಮಿಳುನಾಡಿನ ವಿವಿಧ ಸ್ಥಳಗಳಲ್ಲಿ ಈಗಲೂ ಇ-ಪಾಸ್ ಬಳಕೆ ಕಡ್ಡಾಯವಾಗಿದೆ. ಚೆನ್ನೈನಿಂದ ಕೆಳಂಬಕ್ಕಮ್‌ಗೆ ತೆರಳಿರುವ ರಜನಿಕಾಂತ್ ಬಳಿ ಇ-ಪಾಸ್ ಇತ್ತೇ ಎಂದು ಅನೇಕರು ಪ್ರಶ್ನಿಸಿದ್ದಾರೆ. ಮುಂದೆ ಓದಿ...

    ಫಾರ್ಮ್‌ ಹೌಸ್‌ನಲ್ಲಿ ರಜನಿ

    ಫಾರ್ಮ್‌ ಹೌಸ್‌ನಲ್ಲಿ ರಜನಿ

    ಚೆನ್ನೈನ ನಿವಾಸದಲ್ಲಿ ನೆಲೆಸಿದ್ದ ರಜನಿಕಾಂತ್, ಮಗಳು ಸೌಂದರ್ಯ, ಅಳಿಯ ವಿಶಾಗನ್ ವನಂಗಮುಡಿ ಮತ್ತು ಮೊಮ್ಮಗ ವೇದ್ ಕೃಷ್ಣ ಜತೆ ಚೆಂಗಲಪೆಟ್ಟು ಜಿಲ್ಲೆಯಲ್ಲಿರುವ ಕೆಳಂಬಕ್ಕಮ್‌ನ ಫಾರ್ಮ್‌ ಹೌಸ್‌ಗೆ ಕಾರ್‌ನಲ್ಲಿ ತೆರಳಿದ್ದರು. ಫಾರ್‌ ಹೌಸ್‌ನಲ್ಲಿ ಅವರು ವಾಯುವಿಹಾರ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.

    ವಿಶ್ವದ ಅತಿ ವೇಗದ ಎಸ್‌ಯುವಿ ಕಾರು ಖರೀದಿಸಿದ ರಜನೀಕಾಂತ್ವಿಶ್ವದ ಅತಿ ವೇಗದ ಎಸ್‌ಯುವಿ ಕಾರು ಖರೀದಿಸಿದ ರಜನೀಕಾಂತ್

    ಅಂತರ್ ಜಿಲ್ಲಾ ಪ್ರಯಾಣಕ್ಕೆ ಪಾಸ್ ಬೇಕು

    ಅಂತರ್ ಜಿಲ್ಲಾ ಪ್ರಯಾಣಕ್ಕೆ ಪಾಸ್ ಬೇಕು

    ಈ ವಿಡಿಯೋ ನೋಡಿದ ನೆಟ್ಟಿಗರು, ಚೆನ್ನೈನಿಂದ ತೆರಳಲು ಅವರ ಕುಟುಂಬ ಇ-ಪಾಸ್ ಪಡೆದುಕೊಂಡಿತ್ತೇ? ಎಂದು ಅನುಮಾನ ವ್ಯಕ್ತಪಡಿಸಿದ್ದರು. ಚೆನ್ನೈನ ಹೊರವಲಯದಲ್ಲಿರುವ ಕೆಳಂಬಕ್ಕಂಗೆ ತೆರಳಲು ಇ-ಪಾಸ್ ಬೇಕಾಗಿದೆಯೇ ಎಂದು ಚೆನ್ನೈನ ಪಾಲಿಕೆ ಆಯುಕ್ತ ಜಿ. ಪ್ರಕಾಶ್ ಅವರನ್ನು ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದಾಗ ಒಂದು ಜಿಲ್ಲೆಯಿಂದ ಮತ್ತು ಜಿಲ್ಲೆಗೆ ಹೋಗಲು ಇ-ಪಾಸ್ ಅಗತ್ಯವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

    ತನಿಖೆ ನಡೆಸಬೇಕಿದೆ

    ತನಿಖೆ ನಡೆಸಬೇಕಿದೆ

    ರಜನಿಕಾಂತ್ ಮತ್ತು ಅವರ ಕುಟುಂಬ ಇ-ಪಾಸ್ ಪಡೆಯಲು ಅರ್ಜಿ ಸಲ್ಲಿಸಿತ್ತೇ ಎಂದು ಕೇಳಿದಾಗ, ಇದರ ಬಗ್ಗೆ ನಾವು ತನಿಖೆ ನಡೆಸಬೇಕಿದೆ. ನೀವು ಒಂದೆರಡು ಘಟನೆಗಳನ್ನು ಉಲ್ಲೇಖಿಸಿದರೆ ಈ ಬಗ್ಗೆ ವಿವರವಾದ ವಿಚಾರಣೆ ನಡೆಸಿ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡುತ್ತೇವೆ. ಈ ಪ್ರಕರಣದ ಬಗ್ಗೆ ನಿರ್ದಿಷ್ಟವಾಗಿ ಪರಿಶೀಲಿಸುತ್ತೇವೆ ಎಂದು ತಿಳಿಸಿದ್ದಾರೆ.

    ಎರಡು ದಿನಗಳ ಚಿತ್ರೀಕರಣಕ್ಕಾಗಿ ರಜನಿಕಾಂತ್ ಪಡೆದುಕೊಂಡಿದ್ದ ಸಂಭಾವನೆ ಎಷ್ಟು ಗೊತ್ತೇ?ಎರಡು ದಿನಗಳ ಚಿತ್ರೀಕರಣಕ್ಕಾಗಿ ರಜನಿಕಾಂತ್ ಪಡೆದುಕೊಂಡಿದ್ದ ಸಂಭಾವನೆ ಎಷ್ಟು ಗೊತ್ತೇ?

    ಸೀಮಿತ ಇ-ಪಾಸ್

    ಸೀಮಿತ ಇ-ಪಾಸ್

    ತಮಿಳುನಾಡಿನಲ್ಲಿ ಜುಲೈ 31ರವರೆಗೂ ಲಾಕ್ ಡೌನ್ ಮುಂದುವರಿಯಲಿದ್ದು, ವೈದ್ಯಕೀಯ ತುರ್ತು ಸೇವೆ, ಮದುವೆ, ಅಂತ್ಯಸಂಸ್ಕಾರ ಮತ್ತು ಬೇರೆ ಬೇರೆ ಕಡೆಗಳಲ್ಲಿ ಸಿಲುಕಿರುವ ನಾಗರಿಕರಿಗೆ ಮಾತ್ರವೇ ಇ-ಪಾಸ್ ಸೌಲಭ್ಯ ನೀಡಲಾಗುತ್ತಿದೆ.

    ಕಮಲ್ ಹಾಸನ್-ರಜನಿಕಾಂತ್ ಕನಸಿನ ಸಿನಿಮಾ ನಿಂತೋಯ್ತಾ? ಇಲ್ಲಿದೆ ಅಪ್ ಡೇಟ್ಕಮಲ್ ಹಾಸನ್-ರಜನಿಕಾಂತ್ ಕನಸಿನ ಸಿನಿಮಾ ನಿಂತೋಯ್ತಾ? ಇಲ್ಲಿದೆ ಅಪ್ ಡೇಟ್

    English summary
    Netizens questioned authorities did Rajinikanth and his family got E-pass to go to Kelambakkam formhouse as per the rules.
    Thursday, July 23, 2020, 15:33
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X