ವಿಜಯ್-ಸಂಗೀತಾ ದಾಂಪತ್ಯ ಅಂತ್ಯ ; ಸುಂದರ ಸಂಸಾರದಲ್ಲಿ ಹುಳಿ ಹಿಂಡಿದ ನಟಿಯ ವಿರುದ್ದ ಸಿಡಿದೆದ್ದ ದಳಪತಿ ಸೈನ್ಯ
ಸಂಸಾರದಲ್ಲಿ ಸಮರಸವಿದ್ದರೆ ಮಾತ್ರ ಹೊಂದಾಣಿಕೆ ಗಟ್ಟಿಯಾಗಲು ಸಾಧ್ಯ. ದಂಪತಿಗಳ ನಡುವೆ ಭಿನ್ನಾಭಿಪ್ರಾಯಗಳು ಸಹಜ. ಆದರೆ ಅದನ್ನು ಮೂರನೇ ವ್ಯಕ್ತಿಯ ನಡುವೆ ತೋರಿಸಿಕೊಂಡಾಗ ಅಥವಾ ಇದರಲ್ಲಿ ಮೂರನೇ ವ್ಯಕ್ತಿ ಮೂಗು ತೂರಿಸಿದಾಗ ಚಿಕ್ಕ ಸಮಸ್ಯೆ ಕೂಡ ದೊಡ್ಡದಾಗುತ್ತೆ. ವಿಚಾರ ವಿಚ್ಛೇದನದ ಹಂತದವರೆಗೆ ತಲುಪುತ್ತೆ. ಇದಕ್ಕೆ ವಿಜಯ್ ಮತ್ತು ಸಂಗೀತಾ ದಾಂಪತ್ಯ ಜೀವನ ಸದ್ಯದ ತಾಜಾ ಉದಾಹರಣೆ.
ಹೌದು, ಕಳೆದ ಕೆಲ ವರ್ಷಗಳಿಂದ ತಮ್ಮ ನೆಚ್ಚಿನ ''ಜನನಾಯಕ''ನ ದಾಂಪತ್ಯ ಮುರಿದು ಬೀಳುವ ಆತಂಕ ವಿಜಯ್ ಅಭಿಮಾನಿಗಳನ್ನು ಕಾಡುತ್ತಿತ್ತು. ಈ ಆತಂಕವನ್ನು ವಿಜಯ ಶಮನ ಮಾಡಬೇಕಿತ್ತು.

ಆದರೆ, ಜನರ ಸಮಸ್ಯೆಗಳನ್ನು ಬಗೆಹರಿಸುವುದರ ಕುರಿತು ಮಾತನಾಡುವ ವಿಜಯ್‌ಗೆ ಅಭಿಮಾನಿಗಳ ಕಾಳಜಿ ಕಾಣಲಿಲ್ಲ. ಮನೆಯಲ್ಲಿ ಪತ್ನಿ ಹರಿಸಿದ ಕಣ್ಣೀರಧಾರೆಯಿಂದ ಕೂಡ ಮನಪರಿವರ್ತನೆಯಾಗಲಿಲ್ಲ. ಈ ಹಿನ್ನೆಲೆ ಆತಂಕ ದಿನಗಳು ಉರುಳಿದಂತೆ ಪೆಡಂಭೂತವಾಗಿ ಕಾಡಲಾರಂಭಿಸಿತ್ತು.ಕೊನೆಗೆ ಪರಿಹಾರ ಸಿಗದೇ ಸದ್ಯ ವಿಚ್ಚೇದನದ ಹಂತಕ್ಕೆ ಈ ವಿಚಾರ ತಲುಪಿದೆ.
ಇನ್ನೂ ಈಗಾಗಲೇ ಹಿಂದಿನ ವರದಿಯಲ್ಲಿ ನಾವು ವರದಿ ಮಾಡಿದಂತೆ, ಸಾಕ್ಷಾತ್ ಸಂಗೀತಾ ವಿಶೇಷ ವಿವಾಹ ಕಾಯ್ದೆಯ ಸೆಕ್ಷನ್ 27(1)(a) ಅಡಿಯಲ್ಲಿ ತಮ್ಮ ವಿಚ್ಛೇದನದ ಅರ್ಜಿಯಲ್ಲಿ ಉಲ್ಲೇಖ ಮಾಡಿರುವಂತೆ ಇವರ ದಾಂಪತ್ಯ ಮುರಿದು ಬಿದ್ದಿದ್ದು ಯಾವುದೇ ಚಿಕ್ಕ ಪುಟ್ಟ ಮನಸ್ತಾಪದಿಂದಲ್ಲ. ಬದಲಿಗೆ ವಿಜಯ್ ಅವರ ಅಕ್ರಮ ಸಂಬಂಧದಿಂದ.
ನಿಜಾ.. ತಮ್ಮ ಸಂಸಾರದಲ್ಲಿ ಹುಳಿ ಹಿಂಡಿದ ಆ ನಟಿ ಯಾರು..? ಹೆಸರೇನು..? ಎನ್ನುವ ವಿಚಾರವನ್ನು ಸಂಗೀತಾ ತಮ್ಮ ಅರ್ಜಿಯಲ್ಲಿ ನಮೂದಿಸಿಲ್ಲ. ವಿಜಯ್ ಕಡೆಯಿಂದ ಒತ್ತಡ ಬಂದರೆ ನಟಿಯ ಹೆಸರನ್ನೇಳುವ ಮಾತುಗಳನ್ನಾಡಿದ್ದಾರೆ ಅಷ್ಟೇ.
ಆದರೆ.. ವಾಸ್ತವದಲ್ಲಿ ಆ ನಟಿ ಯಾರು ಎನ್ನುವುದು ಊರಿನವರಿಗೆಲ್ಲಾ ಗೊತ್ತು. ಈ ಹಿನ್ನೆಲೆ ಸದ್ಯ ಹಲವರು ವಿಜಯ್ ಮತ್ತು ಸಂಗೀತಾ ದೂರವಾಗಲು ಕಾರಣವಾದ ಆ ನಟಿಯ ವಿರುದ್ಧ ಕೆರಳೆ ಕೆಂಡವಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ನಟಿಗೆ ತಪರಾಕಿಯನ್ನು ಕೂಡ ಹಾಕುತ್ತಿದ್ದಾರೆ. ಹೀನಾಮಾನವಾಗಿ ಟ್ರೋಲ್ ಮಾಡುತ್ತಿದ್ದಾರೆ. ನಟಿಯ ಹೆಸರು ಮತ್ತು ಫೋಟೊಗಳನ್ನು ಹಂಚಿಕೊಂಡು ತಮ್ಮ ಆಕ್ರೋಶವನ್ನು ಹೊರ ಹಾಕುತ್ತಿದ್ದಾರೆ.

ಇನ್ನೂ ಎಲ್ಲರಿಗೆ ಗೊತ್ತಿರುವಂತೆ ರಾಜಕೀಯ ಅಗ್ನಿಪರೀಕ್ಷೆಗೆ ವಿಜಯ್ ಸರ್ವಸನ್ನದ್ಧವಾದ ಕಾಲ ಇದು. ಮೊದಲೇ ವಿರೋಧ ಪಕ್ಷದವರಿಗೆ ಇಲಿ ಹೋದರೆ ಹುಲಿ ಹೋಯ್ತು ಎಂದು ಹೇಳುವ ಚಾಳಿ. ಇಂತಹ ಕಾಲದಲ್ಲಿ ವಿಜಯ್ ಅವರ ಈ ವೈಯಕ್ತಿಕ ವಿಚಾರ ಎದುರಾಳಿಗಳ ಪಾಲಿಗೆ ''ಬ್ರಹ್ಮಾಸ್ತ್ರ''ವಾದರೂ ಆಗಬಹುದು. ಚುನಾವಣೆಯಲ್ಲಿ ಇದೇ ವಿಚಾರದಿಂದ ಇಳಯ ದಳಪತಿ ವಿಜಯ್ ಅವರಿಗೆ ದೊಡ್ಡ ಹಿನ್ನಡೆಯಾದರೂ ಆಗಬಹುದು. ನಟಿಯ ವಿರುದ್ಧ ವಿಜಯ್ ಅವರ ಅಸಂಖ್ಯಾತ ಅಭಿಮಾನಿಗಳು ಕೆರಳಲು ಇದು ಕೂಡ ಒಂದು ಕಾರಣ.
ಈ ಕಾರಣಗಳಿಂದ ಸದ್ಯ ಸಾಮಾನ್ಯವಾಗಿ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಚಿತ್ರಗಳ ವಿಚಾರದಿಂದ ಟ್ರೆಂಡ್ ಆಗುವ ವಿಜಯ್ ಇಂದು ವಿಚ್ಚೇದನದ ವಿಚಾರಕ್ಕೆ ಟ್ರೆಂಡ್ ಆಗುತ್ತಿದ್ದಾರೆ. ವಿಜಯ್ ಜೊತೆ ವಿಜಯ್ ಅವರ ಸಖಿಯ ಹೆಸರು ಕೂಡ ಭಾರತದಾದ್ಯಂತ ಟ್ರೆಂಡ್ ಆಗುತ್ತಿದೆ.
ಟ್ವಿಟರ್ (X) ಮತ್ತು ಇನ್‌ಸ್ಟಾಗ್ರಾಮ್‌ಗಳಲ್ಲಿ ಕೆಲವರು ಇದು ಅವರ ವೈಯಕ್ತಿಕ ವಿಷಯ, ಗೌರವ ಇರಲಿ ಎಂದು ಹೇಳಿದರೆ, ಇನ್ನೂ ಕೆಲವರು ಸಂಗೀತಾ ಅವರ ಪರ ಬೆಂಬಲದ ಧ್ವಜ ಹಾರಿಸುತ್ತಿದ್ದಾರೆ. ಸಂಗೀತಾ ಅವರಿಗೆ ನ್ಯಾಯ ಸಿಗಬೇಕು ಎಂದು ನಟಿಯ ವಿರುದ್ಧ ಹರಿಹಾಯುತ್ತಿದ್ಧಾರೆ. ಹೀಗೆ ಕಿಡಿ ಕಾರುತ್ತಿರುವವರಲ್ಲಿ ಮಹಿಳಾ ಮಣಿಗಳು ಕೂಡ ಇರುವುದು ವಿಶೇಷ.
ಸದ್ಯ ವಿಜಯ್ ಮತ್ತು ಸಂಗೀತಾ ಅವರ ವಿಚ್ಚೇದನದ ವಿಚಾರವನ್ನು ಹಲವರು ಕೇವಲ ಡಿವೋರ್ಸ್ ಸುದ್ದಿಯನ್ನಾಗಿ ಅಷ್ಟೇ ನೋಡುತ್ತಿಲ್ಲ. ಪರಿಗಣಿಸುತ್ತಿಲ್ಲ. ಬದಲಿಗೆ ಪ್ರೀತಿ ಮತ್ತು ನಂಬಿಕೆ ದ್ರೋಹದ ದೃಷ್ಟಿಯಿಂದ ನೋಡುತ್ತಿದ್ದಾರೆ. ಸಂಗೀತಾ ಅವರ ಮುಂದಿನ ಕಾನೂನು ಹೋರಾಟ ಹೇಗಿರುತ್ತೆ..? ಇಡೀ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಮೌನ ಮುರಿದು ಮಾತನಾಡುತ್ತಾರಾ..? ಎನ್ನುವುದನ್ನು ಕಾದು ನೋಡಬೇಕಿದೆ. ವಿಜಯ್ ಕೂಡ ತಮ್ಮ ಈ ವೈಯಕ್ತಿಕ ವಿಚಾರದ ಕುರಿತು ಮಾತನಾಡುವುದು ಇನ್ನೂ ಬಾಕಿ ಇದೆ.


Click it and Unblock the Notifications











