'ಜೈಲರ್' ಸೀಕ್ವೆಲ್ ಅಲ್ಲ ಪ್ರೀಕ್ವೆಲ್: ಹೀರೊ ರಜನಿನಾ? ಶಿವಣ್ಣನಾ?

By ಫಿಲ್ಮಿಬೀಟ್ ಡೆಸ್ಕ್

ನೆಲ್ಸನ್ ನಿರ್ದೇಶನದ 'ಜೈಲರ್' ಸಿನಿಮಾ ಸೆನ್ಸೇಷನ್ ಕ್ರಿಯೇಟ್ ಮಾಡಿದೆ. ಬಾಕ್ಸಾಫೀಸ್‌ನಲ್ಲಿ ಆರ್ಭಟ ಜೋರಾಗಿದೆ. ಚಿತ್ರದಲ್ಲಿ ರಜನಿಕಾಂತ್ ಸ್ಟ್ರಾಂಗ್ ಸ್ಕ್ರೀನ್ ಪ್ರೆಸೆನ್ಸ್, ಶಿವಣ್ಣ, ಮೋಹನ್ ಲಾಲ್ ಸ್ಪೆಷಲ್ ಅಪಿಯರೆನ್ಸ್ ನೋಡಿ ಸಿನಿರಸಿಕರು ಫಿದಾ ಆಗಿದ್ದಾರೆ. ಬಹಳ ದೊಡ್ಡಮಟ್ಟದಲ್ಲಿ ಸಿನಿಮಾ ಸದ್ದು ಮಾಡ್ತಿದೆ. 'ಜೈಲರ್‌' ಮುತ್ತುವೇಲ್ ಪಾಂಡಿಯನ್ ದರ್ಬಾರ್ ನೋಡಿದವರೆಲ್ಲಾ ಥ್ರಿಲ್ಲಾಗಿದ್ದಾರೆ.

ಎಲ್ಲಾ ಕಮರ್ಷಿಯಲ್ ಎಲಿಮೆಂಟ್ಸ್ ಜೊತೆಗೆ ರಜನಿಕಾಂತ್ ಅಭಿಮಾನಿಗಳು ಮೆಚ್ಚುವಂತಹ ಸಿನಿಮಾ ಮಾಡುವಲ್ಲಿ ನೆಲ್ಸನ್ ಸಕ್ಸಸ್ ಕಂಡಿದ್ದಾರೆ. ಚಿತ್ರದ ಹೀರೋ ರಜನಿಕಾಂತ್ ಆಗಿದ್ದರೂ ಮಂಡ್ಯ ಹಳೇ ಪಂಟರ್ ಆಗಿ ಶಿವಣ್ಣ ಆರ್ಭಟಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ. ಕೇವಲ ಏಳೆಂಟು ನಿಮಿಷ ತೆರೆಮೇಲೆ ಕಾಣಿಸಿಕೊಳ್ಳುವ ಹ್ಯಾಟ್ರಿಕ್ ಹೀರೊ ಫುಲ್ ಮಾರ್ಕ್ಸ್ ಗಿಟ್ಟಿಸಿಕೊಂಡಿದ್ದಾರೆ. ಪರಭಾಷಿಕರು ಕೂಡ ಶಿವಣ್ಣನ ಅಭಿನಯಕ್ಕೆ ಕ್ಲೀನ್ ಬೋಲ್ಡ್ ಆಗಿದ್ದಾರೆ. ನೆಟ್ಟಿಗರಂತೂ ಸಿನಿಮಾ ಸೀಕ್ವೆಲ್ ಮಾಡಿ ಎಂದು ಕೇಳುತ್ತಿದ್ದಾರೆ. ಶಿವಣ್ಣನ ನರಸಿಂಹ ಪಾತ್ರವನ್ನು ಕೇಂದ್ರವಾಗಿಟ್ಟುಕೊಂಡು ಕತೆ ಮಾಡಿ ಎನ್ನುತ್ತಿದ್ದಾರೆ.

Rajinikanth- shivarajkumar- Jailer- sequel

'ಜೈಲರ್' ಚಿತ್ರದಲ್ಲಿ ಮುತ್ತುವೇಲ್‌ಗೆ ಸಹಾಯ ಮಾಡುವ ಮಂಡ್ಯದ ಹಳೇ ಪಂಟರ್ ಆಗಿ ಮಾತ್ರ ಶಿವಣ್ಣ ಕಾಣಿಸಿಕೊಂಡಿದ್ದಾರೆ. ಡಾನ್ ಆಗಿದ್ದ ನರಸಿಂಹ 'ಜೈಲರ್' ಮುತ್ತುವೇಲ್ ಕಾರಣದಿಂದ ಒಳ್ಳೆಯವನಾಗಿರುತ್ತಾನೆ. ಅದಕ್ಕಾಗಿಯೇ 'ಜೈಲರ್‌' ಸಹಾಯಕ್ಕೆ ನಿಲ್ಲುತ್ತಾನೆ. ಆದರೆ ಇಬ್ಬರು ಭೇಟಿ ಆಗುವ ಒಂದು ಸಣ್ಣ ಸನ್ನಿವೇಶ ಬಿಟ್ಟರೆ ಕ್ಲೈಮ್ಯಾಕ್ಸ್‌ನಲ್ಲೂ ಇಬ್ಬರು ಒಂದೇ ಫ್ರೇಮ್‌ನಲ್ಲಿ ಕಾಣಿಸಲ್ಲ. ಹಾಗಾಗಿ ರಜನಿಕಾಂತ್ ಹಾಗೂ ಶಿವಣ್ಣನನ್ನು ಒಟ್ಟಿಗೆ ಸೇರಿಸಿ ಒಂದು ಸಿನಿಮಾ ಮಾಡಿ ಎಂದು ಕೆಲವರು ಸಲಹೆ ನೀಡುತ್ತಿದ್ದಾರೆ. 'ಜೈಲರ್‌' ಪ್ರೀಕ್ವೆಲ್‌ ಮಾಡಿದರೂ ಸರಿಯೇ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ರೊಲೆಕ್ಸ್ ನೆನಪಿಸುವ ನರಸಿಂಹ

ಕಮಲ್ ಹಾಸನ್ ನಟನೆಯ 'ವಿಕ್ರಂ' ಸಿನಿಮಾ ಕ್ಲೈಮ್ಯಾಕ್ಸ್‌ನಲ್ಲಿ ಸೂರ್ಯ ಸಣ್ಣ ಝಲಕ್‌ನಲ್ಲಿ ಕಾಣಿಸಿಕೊಂಡು ಕಮಾಲ್ ಮಾಡಿದ್ದರು. ರೊಲೆಕ್ಸ್ ಎನ್ನುವ ಪಾತ್ರದಲ್ಲಿ ಅಬ್ಬರಿಸಿದ್ದರು. ಶಿವಣ್ಣ ಕೂಡ 'ಜೈಲರ್' ಚಿತ್ರದಲ್ಲಿ ಕೊನೆಯಲ್ಲಿ ಬಂದು ಮ್ಯಾಜಿಕ್ ಮಾಡಿದ್ದಾರೆ. ರೊಲೆಕ್ಸ್ ರೀತಿಯಲ್ಲೇ ನರಸಿಂಹ ಪಾತ್ರ ಹಿಟ್ ಆಗಿದೆ. ಲೋಕೇಶ್ ಕನಕರಾಜ್ ಮುಂದೆ ರೊಲೆಕ್ಸ್‌ ಪಾತ್ರವನ್ನೇ ಕೇಂದ್ರವಾಗಿಟ್ಟುಕೊಂಡು ಸಿನಿಮಾ ಮಾಡುತ್ತಿದ್ದಾರೆ. ನರಸಿಂಹ ಪಾತ್ರದ ಬಗ್ಗೆಯೂ ಇದೇ ರೀತಿ ಸಿನಿಮಾ ಮಾಡಿ ಎನ್ನುತ್ತಿದ್ದಾರೆ.

Rajinikanth- shivarajkumar- Jailer- sequel

ರೆಸ್ಪಾನ್ಸ್‌ ಕೇಳಿ ಶಿವಣ್ಣ ಅಚ್ಚರಿ

'ಜೈಲರ್' ಚಿತ್ರದ ಕ್ಲೈಮ್ಯಾಕ್ಸ್‌ ಸನ್ನಿವೇಶಕ್ಕೆ ಸಿಗುತ್ತಿರುವ ರೆಸ್ಪಾನ್ಸ್ ಕೇಳಿ ಸ್ವತಃ ಶಿವರಾಜ್‌ಕುಮಾರ್ ಅಚ್ಚರಿ ವ್ಯಕ್ತಪಡಿಸಿದ್ದಾರಂತೆ. ಈ ವಿಚಾರವನ್ನು ನಿರ್ದೇಶಕ ನೆಲ್ಸನ್ ಬೆಚ್ಚಿಟ್ಟಿದ್ದಾರೆ. "ಶಿವಣ್ಣ ಕರೆ ಮಾಡಿದ್ದರು. ಸಿನಿಮಾ ನೋಡಿದವರೆಲ್ಲಾ ಫೋನ್ ಮಾಡಿ ಮಾತನಾಡುತ್ತಿದ್ದಾರೆ. ಅದ್ಭುತ ಅಂತ. ನಾನು ಶೂಟಿಂಗ್ ಮಾಡಿದ್ದೆ ಅಷ್ಟೇ. ಆದರೆ ತೆರೆಮೇಲೆ ಎಂತಹ ಮ್ಯಾಜಿಕ್ ಮಾಡಿದೆ ಗೊತ್ತಿಲ್ಲ. ನಾನಿನ್ನು ಸಿನಿಮಾ ನೋಡಿಲ್ಲ. ಮೈಸೂರಿನಲ್ಲಿ ನೋಡ್ತೀನಿ" ಎಂದು ಶಿವಣ್ಣ ಹೇಳಿದ್ದಾಗಿ ನೆಲ್ಸನ್ ವಿವರಿಸಿದ್ದಾರೆ.

ಮಲ್ಟಿಸ್ಟಾರರ್ ಸಿನಿಮಾ ಅಲ್ಲ

ನಿರ್ದೇಶಕ ನೆಲ್ಸನ್ ಮಾತನಾಡಿ "ನಾವು ಮಲ್ಟಿಸ್ಟಾರರ್ ಸಿನಿಮಾ ಮಾಡಬೇಕು ಎಂದುಕೊಳ್ಳಲಿಲ್ಲ. ಇದು ರಜನಿಕಾಂತ್ ಸರ್ ಸಿನಿಮಾ. ಆದರೆ ಶಿವಣ್ಣ, ಮೋಹನ್ ಲಾಲ್ ರೀತಿಯ ಪವರ್‌ಫುಲ್ ಪಾತ್ರಗಳಿ ಇರಬೇಕು. ಸಿಕ್ಕಾಪಟ್ಟೆ ಪವರ್‌ಫುಲ್ 'ಜೈಲರ್' ಮುತ್ತುವೇಲ್ ಸಹಾಯ ಕೇಳುತ್ತಾನೆ ಅಂದರೆ ಅವ್ರು ಅದು ಅಷ್ಟೇ ತೂಕದ ಪಾತ್ರವಾಗಿರಬೇಕು. ಅಂತಹ ನಟರು ಇರಬೇಕೆಂದು ಅವರನ್ನು ಆಯ್ಕೆ ಮಾಡಿದ್ದು. ರಜನಿಕಾಂತ್ ಸಿನಿಮಾ ಎನ್ನುವ ಕಾರಣಕ್ಕೆ ಕಥೆಯನ್ನು ಕೇಳದೇ ಎಲ್ಲರೂ ನಟಿಸಲು ಒಪ್ಪಿದರು" ಎಂದಿದ್ದಾರೆ. ಶಿವಣ್ಣ ಕೂಡ ಸೋಶಿಯಲ್ ಮೀಡಿಯಾದಲ್ಲಿ 'ಜೈಲರ್' ಚಿತ್ರಕ್ಕೆ ತಮ್ಮ ಪಾತ್ರಕ್ಕೆ ಸಿಕ್ಕ ರೆಸ್ಪಾನ್ಸ್‌ಗೆ ಧನ್ಯವಾದ ತಿಳಿಸಿದ್ದಾರೆ.

'ಕ್ಯಾಪ್ಟರ್‌ ಮಿಲ್ಲರ್' ಆಗಿ ಶಿವಣ್ಣ

'ಜೈಲರ್' ಬಳಿಕ ಶಿವರಾಜ್‌ಕುಮಾರ್ ತಮಿಳಿನ 'ಕ್ಯಾಪ್ಟನ್ ಮಿಲ್ಲರ್' ಚಿತ್ರದಲ್ಲಿ ಧನುಷ್ ಜೊತೆ ನಟಿಸಿದ್ದಾರೆ. 'ಜೈಲರ್'ನಲ್ಲಿ ಏಳೆಂಟು ನಿಮಿಷಗಳ ಸಣ್ಣ ಅತಿಥಿ ಪಾತ್ರ ಅಷ್ಟೇ. ಆದರೆ 'ಕ್ಯಾಪ್ಟನ್ ಮಿಲ್ಲರ್' ಚಿತ್ರದಲ್ಲಿ ಮುಖ್ಯವಾದ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಸಿನಿಮಾ ಟೀಸರ್ ಹಿಟ್ ಆಗಿದೆ. ಶಿವಣ್ಣನ ಲುಕ್ ನೋಡಿದವರು ಫಿದಾ ಆಗಿದ್ದಾರೆ. ಚಿತ್ರದಲ್ಲಿ ಧನುಷ್ ಅಣ್ಣನ ಪಾತ್ರದಲ್ಲಿ ಹ್ಯಾಟ್ರಿಕ್ ಹೀರೊ ನಟಿಸಿದ್ದಾರೆ ಎನ್ನಲಾಗ್ತಿದೆ.

More from Filmibeat

English summary
Netizens ask Rajinikanth, Shivarajkumar's Jailer sequel.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X