For Quick Alerts
  ALLOW NOTIFICATIONS  
  For Daily Alerts

  ಹೊಸ ಸಂಸತ್‌ ಭವನ: ಪ್ರಧಾನಿ ಮೇಲೆ ಕಿಡಿಕಾರಿದ ಕಮಲ್ ಹಾಸನ್

  |

  ನಟ, ರಾಜಕಾರಣಿ ಕಮಲ್ ಹಾಸನ್ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಿಡಿ ಕಾರಿದ್ದಾರೆ. ಹೊಸ ಪಾರ್ಲಿಮೆಂಟ್ ಭವನ ನಿರ್ಮಾಣಕ್ಕೆ ಮೋದಿ ಅವರು ಇತ್ತೀಚೆಗಷ್ಟೆ ಶಂಕು ಸ್ಥಾಪನೆ ನೆರವೇರಿಸಿದರು, ಇದು ಕಮಲ್ ಹಾಸನ್ ಗೆ ಸಿಟ್ಟು ತರಿಸಿದೆ.

  'ಮಕ್ಕಳ್ ನಿಧಿ ಮಯಂ' ಪಕ್ಷದ ಸಂಸ್ಥಾಪಕರಾಗಿರುವ ಕಮಲ್ ಹಾಸನ್, 2021 ರ ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ಇಂದು ಪ್ರಾರಂಭ ನೀಡಿದರು. ಅದಾದ ಕೆಲವೇ ಗಂಟೆಗಳಲ್ಲಿ ಟ್ವಿಟ್ಟರ್‌ನಲ್ಲಿ ಮೋದಿ ವಿರುದ್ಧ ಟೀಕೆಗಳ ಸುರಿಮಳೆಯನ್ನೇ ಸುರಿಸಿದರು ಕಮಲ್ ಹಾಸನ್.

  'ಭಾರತದ ಅರ್ಧದಷ್ಟು ಜನ ಹಸಿವಿನಿಂದಿರುವಾಗ 1000 ಕೋಟಿ ಖರ್ಚು ಮಾಡಿ ಹೊಸ ಪಾರ್ಲಿಮೆಂಟ್ ಕಟ್ಟುವ ಅವಶ್ಯಕತೆ ಏನಿತ್ತು?' ಎಂದು ಪ್ರಧಾನಿಯವರನ್ನು ಪ್ರಶ್ನಿಸಿದ್ದಾರೆ ಕಮಲ್ ಹಾಸನ್.

  'ಜನರ ರಕ್ಷಣೆಗೆ ಎಂದು ಹೇಳಿ ಕಟ್ಟಲ್ಪಟ್ಟ ಚೀನಾದ ಮಹಾ ಗೋಡೆ ಕಟ್ಟುವಾಗ ಸಾವಿರಾರು ಮಂದಿ ಸತ್ತಿದ್ದರು. ಹಾಗಿದ್ದರೆ ಈ ಹೊಸ ಸಂಸತ್ ಭವನವನ್ನು ಯಾರ ರಕ್ಷಣೆಗಾಗಿ ಕಟ್ಟುತ್ತಿದ್ದೀರಿ? ದಯಮಾಡಿ ನನಗೆ ಉತ್ತರ ನೀಡಿ ಚುನಾಯಿತ ಪ್ರಧಾನಿಗಳೇ' ಎಂದು ಕಮಲ್ ಹಾಸನ್ ಪ್ರಶ್ನಿಸಿದ್ದಾರೆ.

  ಕಳೆದು ಹೋದದನ್ನ ಪುನಃ ಪಡೆದುಕೊಂಡ ಮೇಘಾ ಶೆಟ್ಟಿ | Filmibeat Kannada

  ಪ್ರಧಾನಿ ಮೋದಿ ಅವರು ಕೆಲವು ದಿನಗಳ ಹಿಂದಷ್ಟೆ, ಹೊಸ ಸಂಸತ್ ಭವನ ನಿರ್ಮಿಸಲು ಶಂಕು ಸ್ಥಾಪನೆ ನೆರವೇರಿಸಿದರು. ಹೊಸ ಸಂಸತ್ ಭವನಕ್ಕೆ 1000 ಕೋಟಿ ವೆಚ್ಚ ಮಾಡಲಾಗುತ್ತಿದೆ. ಸಂಸತ್ ಭವನವು 2022 ರ ವೇಳೆಗೆ ಪೂರ್ಣಗೊಳ್ಳಲಿದೆ.

  English summary
  Actor, politician Kamal Haasan lashed out on Narendra Modi about spending 1000 cr on new Parliament building.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X