For Quick Alerts
  ALLOW NOTIFICATIONS  
  For Daily Alerts

  'ಜಯಲಲಿತಾ ಪಾತ್ರಕ್ಕೆ ನನ್ನ ಆಯ್ಕೆ ಪರ್ಫೆಕ್ಟ್' ಎಂದ ಕನ್ನಡದ ಈ ನಟಿ

  |

  ಖ್ಯಾತ ರಾಜಕಾರಣಿ, ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ತಮಿಳು ಚಿತ್ರರಂಗದ ಸ್ಟಾರ್ ನಟಿ ಜಯಲಲಿತಾ ಬಗ್ಗೆ ಎರೆಡೆರಡು ಬಯೋಪಿಕ್ ತಯಾರಾಗುತ್ತಿದೆ. ಇತ್ತೀಚಿಗೆ ಜಯಲಲಿತಾ ಅವರ ಬಯೋಪಿಕ್ 'ತಲೈವಿ' ಚಿತ್ರದ ಫಸ್ಟ್ ಟೀಸರ್ ರಿಲೀಸ್ ಆಗಿದೆ. ಬಾಲಿವುಡ್ ನ ಖ್ಯಾತ ನಟಿ ಕಂಗನಾ ರಣಾವತ್ ಜಯಲಲಿತಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

  ಭಾರಿ ನಿರೀಕ್ಷೆ ಮೂಡಿಸಿದ್ದ 'ತಲೈವಿ' ಟೀಸರ್ ಗೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಭಿಮಾನಿಗಳ ನಿರೀಕ್ಷೆ ಮಟ್ಟವನ್ನು ಮುಟ್ಟುವಲ್ಲಿ 'ತಲೈವಿ' ಟೀಸರ್ ವಿಫಲವಾಗಿದೆ. ಇದರ ಬೆನ್ನಲೆ ದಕ್ಷಿಣ ಭಾರತೀಯ ಚಿತ್ರರಂಗದ ಖ್ಯಾತ ನಟಿ ನಿತ್ಯಾ ಮೆನನ್ 'ಜಯಲಲಿತಾ ಪಾತ್ರಕ್ಕೆ ನನ್ನ ಆಯ್ಕೆ ಪರ್ಫೆಕ್ಟ್' ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ.

  ಊಹೆ ಮಾಡಿದ್ದು ಒಂದು, ಆಗಿದ್ದೇ ಇನ್ನೊಂದು: ನಿತ್ಯಾ ಮೆನನ್ ಗೆ ಇದು ಅದೃಷ್ಟ.!ಊಹೆ ಮಾಡಿದ್ದು ಒಂದು, ಆಗಿದ್ದೇ ಇನ್ನೊಂದು: ನಿತ್ಯಾ ಮೆನನ್ ಗೆ ಇದು ಅದೃಷ್ಟ.!

  'ತೈಲವಿ' ಹೆಸರಿನಲ್ಲಿ ಕಂಗನಾ ಜಯಲಲಿತಾ ಆಗಿ ಕಾಣಿಸಿಕೊಳ್ಳುತ್ತಿದ್ರೆ, ಮತ್ತೊಂದೆಡೆ ಜಯಲಲಿತಾ ಅವರ ಮತ್ತೊಂದು ಬಯೋಪಿಕ್ 'ದಿ ಐರನ್ ಲೇಡಿ'ಯಲ್ಲಿ ನಿತ್ಯಾ ಮೆನನ್ ಕಾಣಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಇತ್ತೀಚಿಗೆ ಮಾತನಾಡಿದ ನಿತ್ಯಾ, "ಜಯಲಲಿತಾ ಪಾತ್ರಕ್ಕೆ ನನ್ನ ಆಯ್ಕೆ ಪರ್ಫೆಕ್ಟ್. ಯಾಕಂದರೆ ನನಗೆ ಮತ್ತು ಜಯಲಲಿತಾ ಅವರಿಗೆ ಸಾಕಷ್ಟು ವಿಚಾರದಲ್ಲಿ ಸಾಮ್ಯತೆ ಇದೆ. ಇಬ್ಬರು ಕೂಡ ಬೆಂಗಳೂರಿನಲ್ಲಿ ಓದಿದ್ದೀವಿ. ಅವರ ಹವ್ಯಾಸಗಳು, ಮಾತನಾಡುವ ಶೈಲಿ, ನಡವಳಿಕೆ ಎಲ್ಲಾ ವಿಚಾರಗಳಲ್ಲಿ ಸಾಮ್ಯತೆ ಇದೆ. ಈ ಬಗ್ಗೆ ನಿರ್ದೇಶಕರು ಕೂಡ ಹೇಳುತ್ತಿರುತ್ತಾರೆ" ಎಂದು ಹೇಳಿದ್ದಾರೆ.

  ಜೊತೆಗೆ "ಜಯಲಲಿತಾ ಅವರು ಇಷ್ಟ ಪಡದ ವಿಚಾರಗಳನ್ನು ನೇರವಾಗಿ ಹೇಳುತ್ತಿದ್ದರು. ಅವರು ಸಾಕಷ್ಟು ಉತ್ತಮ ಗುಣಗಳನ್ನು ಹೊಂದಿದ್ದಾರೆ" ಎಂದು ನಿತ್ಯಾ, ಜಯಲಲಿತಾ ಅವರನ್ನು ಹಾಡಿ ಹೊಗಳಿದ್ದಾರೆ. ಅವರ ಪಾತ್ರ ಮಾಡಲು ನನ್ನ ಆಯ್ಕೆ ಸರಿಯಿದೆ ಎಂದು ನಿತ್ಯಾ ಹೇಳಿದ್ದಾರೆ.

  'ದಿ ಐರನ್ ಲೇಡಿ' ಸಿನಿಮಾ ಕೂಡ ಮುಂದಿನ ವರ್ಷ ತೆರೆಗೆ ಬರುವ ಸಾಧ್ಯತೆ ಇದೆ. ಜಯಲಲಿತಾ ಬಗ್ಗೆ ಎರಡು ಬಯೋಪಿಕ್ ಬರುತ್ತಿರುವ ಕಾರಣ ಚಿತ್ರಾಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ. ಯಾವ ಬಯೋಪಿಕ್ ಆಕರ್ಷವಾಗಿರಲಿದೆ ಎನ್ನುವ ಕಾತರ ಚಿತ್ರಾಭಿಮಾನಿಗಳಲ್ಲಿದೆ. ಸದ್ಯ 'ತಲೈವಿ' ಟೀಸರ್ ನಿರೀಕ್ಷೆ ಹುಸಿ ಮಾಡಿದ ಕಾರಣ 'ದಿ ಐರನ್ ಲೇಡಿ' ಮೇಲೆ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ.

  English summary
  South Indian Famous Actress Nithya Menen said 'I am the perfect choice to play Jayalalitha'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X