ಚಿತ್ರರಂಗಕ್ಕೆ ವಿದಾಯ ಹೇಳಲು ಮುಂದಾಗಿದ್ದ ನಿತ್ಯಾ ಮೆನನ್, ಅಭಿಮಾನಿಗಳಿಗೆ ಶಾಕ್ ನೀಡಿದ ಸೆವೆನ್ ಓ ಕ್ಲಾಕ್ ಸುಂದರಿ..!

ಕನ್ನಡದ ಸೆವೆನ್ ಓ ಕ್ಲಾಕ್ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟವರು ನಿತ್ಯಾ ಮೆನನ್. ಆ ನಂತರ ಕನ್ನಡ ಸೇರಿದಂತೆ ಮಲಯಾಳಂ, ತೆಲುಗು, ತಮಿಳು ಭಾಷೆಗಳಲ್ಲಿ ನಟಿಸಿದ್ದ ನಿತ್ಯಾ, ಮಿಷನ್ ಮಂಗಲ್ ಚಿತ್ರದ ಮೂಲಕ ಹಿಂದಿ ಚಿತ್ರರಂಗವನ್ನು ಕೂಡ ಪ್ರವೇಶಿಸಿದರು.

ತಮ್ಮ ಅಮೋಘ ಅಭಿನಯದಿಂದನೇ ದಕ್ಷಿಣದ ಎಲ್ಲೆಡೆ ಕೀರ್ತಿಯ ಪತಾಕೆಯನ್ನ ಹಾರಿಸಿರುವ ನಿತ್ಯಾ, ಬಣ್ಣದ ಬದುಕಿನಾಚೆ ತಮ್ಮ ನೇರ ದಿಟ್ಟ ನಡುವಳಿಕೆಗಳಿಂದ ಕೂಡ ಹೆಸರುವಾಸಿಯಾದವರು. ಇಂಥಾ ನಿತ್ಯಾ ಮೆನನ್ ಕೆಲ ದಿನಗಳ ಹಿಂದೆ ಚಿತ್ರರಂಗಕ್ಕೆ ಗುಡ್ ಬೈ ಹೇಳುವ ತೀರ್ಮಾನವನ್ನು ತೆಗೆದುಕೊಂಡಿದ್ದರು. ಖುದ್ದು ನಿತ್ಯಾ ಈ ಮಾತನ್ನು ಈಗ ಹೇಳಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.

Nithya Menen wished to quit films and live a peaceful normal life

ಹೌದು, ಅಸಲಿಗೆ ನಿತ್ಯಾ ಮೆನನ್ ಅಭಿನಯದ 'ಕಾದಲಿಕ್ಕ ನೇರಮಿಲ್ಲೈ'ನಲ್ಲಿ ನಾಯಕಿಯ ಪಾತ್ರ ನಿರ್ವಹಿಸಿದ್ದಾರೆ. ಚಿತ್ರ ಇದೇ ಜನವರಿ 14ರಂದು ತೆರೆಗೆ ಬರುತ್ತಿರುವ ಹಿನ್ನೆಲೆ ಚಿತ್ರದ ಪ್ರಚಾರವನ್ನು ಮಾಡುತ್ತಿರುವ ನಿತ್ಯಾ ಬಿಹೈಂಡ್ ವುಡ್ಸ್‌ಗೆ ನೀಡಿದ ಸಂದರ್ಶನದಲ್ಲಿ ತಾವು ಚಿತ್ರರಂಗವನ್ನು ತೊರೆಯುವ ನಿರ್ಧಾರಕ್ಕೆ ಬಂದಿದ್ದಾಗಿ ಹೇಳಿದ್ದಾರೆ.

ಈ ಕುರಿತು ಮಾತನಾಡಿರುವ ನಿತ್ಯಾ ಮೆನನ್ ನನ್ನ ವ್ಯಕ್ತಿತ್ವ ಚಿತ್ರರಂಗಕ್ಕೆ ಹೊಂದುವಂತದ್ದಲ್ಲ ಎಂಬ ಭಾವನೆ ನನ್ನದು, ಸಿನಿಮಾವನ್ನು ಇಷ್ಟ ಪಡದ ವ್ಯಕ್ತಿ ನಾನು, ಈಗಲೂ ಹಾಗೇ ಇದ್ದೇನೆ ಎಂದಿದ್ದಾರೆ. ನಾನು ಈ ವಿಚಾರವನ್ನು ಹೇಳಿದರೆ ಸಿನಿಮಾ ಬಗ್ಗೆ ನಿಮಗೆ ಕೃತಜ್ಞತೆ ಇಲ್ಲ ಎಂದು ನಿಮಗೆ ಅನಿಸಬಹುದು ಆದರೆ ಚಿತ್ರರಂಗಕ್ಕೆ ಬರಬೇಕೆಂದು ನಾನು ಯಾವತ್ತು ಅಂದುಕೊಂಡೇ ಇರಲಿಲ್ಲ ಎಂದಿರುವ ನಿತ್ಯಾ ಸಿನಿಮಾ ನನ್ನ ನೆಚ್ಚಿನ ವೃತ್ತಿ ಯಾವತ್ತು ಆಗಿರಲಿಲ್ಲ ಎಂದು ಹೇಳಿದ್ದಾರೆ. ನಾನು ಈ ಕ್ಷೇತ್ರಕ್ಕೆ ಬಂದ ನಂತರವಷ್ಟೇ ದೇವರನ್ನು ನಂಬಲು ಶುರು ಮಾಡಿದೆ ಎಂದಿರುವ ನಿತ್ಯಾ ನನಗೆ ತುಂಬಾನೇ ಸರಳವಾಗಿ ಬದುಕನ್ನು ಬದುಕಲು ಇಷ್ಟ ಎಂದು ಹೇಳಿದ್ದಾರೆ. ಎಲ್ಲರಂತೆ ನೆಮ್ಮದಿಯಾಗಿ ಓಡಾಡಲು ಇಷ್ಟ ಎಂದು ಹೇಳಿದ್ದಾರೆ.

ಆದರೆ, ಚಿತ್ರರಂಗದಲ್ಲಿರುವ ನಮಗೆ ಅದೆಲ್ಲ ಕನಸು ಎಂದಿರುವ ನಿತ್ಯಾ ನನಗೆ ಪ್ರಯಾಣ ಮಾಡುವುದು ಎಂದರೆ ಇಷ್ಟ, ಪ್ರಕೃತಿಯ ಸೌಂದರ್ಯವನ್ನು ಸವಿಯುವುದು ಇಷ್ಟ ಹೀಗಾಗಿ ಚಿತ್ರರಂಗಕ್ಕೆ ಬಾರದೇ ಇದ್ದರೆ ನಾನು ಪೈಟಲ್ ಆಗುತ್ತಿದ್ದೆ ಎಂದಿರುವ ನಿತ್ಯಾ ಕೆಲ ವರ್ಷದ ಹಿಂದೆ ಒಪ್ಪಿಕೊಂಡ ಎಲ್ಲ ಚಿತ್ರಗಳನ್ನು ಮುಗಿಸಿ ಸದ್ದು ಗದ್ದಲ ಇಲ್ಲದೇ ಚಿತ್ರರಂಗದಿಂದ ದೂರು ಹೋಗುವ ಆಲೋಚನೆಯನ್ನು ನಾನು ಮಾಡಿದ್ದೆ ಈ ಕುರಿತು ನಾನು ನನ್ನ ತಂದೆ ಜೊತೆ ಕೂಡ ಚರ್ಚೆ ಮಾಡಿದ್ದೆ, ನಾನೆಲ್ಲಿದ್ದೇನೆ ಎಂದು ಯಾರಿಗೂ ಗೊತ್ತಾಗಬಾರದು ಎಂದುಕೊಂಡಿದ್ದೆ, ನಾನು ಎಲ್ಲಿ ಹೋದೆ ಎಂದು ನನ್ನ ಬಗ್ಗೆ ಜನ ಕೂಡ ಯೋಚನೆ ಮಾಡಲ್ಲ ಎಂದು ಭಾವಿಸಿದ್ದೆ ಎಂದು ಹೇಳಿದ್ದಾರೆ.

ಮುಂದುವರೆದು ಈ ಬದುಕನ್ನೇ ನಾನು ಬಯಸಿದ್ದಾ ಎಂದು ನನಗೆ ನಾನೇ ಪ್ರಶ್ನೆಯನ್ನು ಕೇಳಿಕೊಂಡಿದ್ದೇನೆ ಎಂದಿರುವ ನಿತ್ಯಾ ಮೆನನ್ ಆದರೆ ಅಷ್ಟರಲ್ಲಿ ನನಗೆ ತಿರುಚಿತ್ರಂಬಲಂ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಸಿಕ್ಕಿತು ಎಂದು ಹೇಳಿದ್ದಾರೆ. ಚಿತ್ರರಂಗದಲ್ಲಿ ನಾನು ಮುಂದುವರೆಯುವಂತೆ ಆ ದೇವರೇ ರಾಷ್ಟ್ರ ಪ್ರಶಸ್ತಿಯನ್ನು ನನಗೆ ಲಂಚದ ರೂಪದಲ್ಲಿ ಕರುಣಿಸಿದ ಎಂದು ನಾನು ಅಂದುಕೊಂಡಿದ್ದೇನೆ ಎಂದು ನಸು ನಕ್ಕಿದ್ದಾರೆ. ಅಂದ್ಹಾಗೇ ನಿತ್ಯಾ ಮೆನನ್ ಅಭಿನಯದ 'ಕಾದಲಿಕ್ಕ ನೇರಮಿಲ್ಲೈ' ನಲ್ಲಿ ಜಯಂ ರವಿ ನಾಯಕನ ಪಾತ್ರವನ್ನು ನಿರ್ವಹಿಸಿದ್ದಾರೆ. ಕಿರುತಿಗ ಉದಯನಿಧಿ ನಿರ್ದೇಶನದಲ್ಲಿ ಚಿತ್ರ ಸಿದ್ಧವಾಗಿದೆ.

More from Filmibeat

Read more about: nithya menon nitya menon actress
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X