ರಂಜಿತಾಗೂ ಮುನ್ನ ನಿತ್ಯಾನಂದನ ಪ್ರೀತಿಯಲ್ಲಿ ಬಿದ್ದಿದ್ದ ಭಕ್ತೆ ಯಾರು? ವಿಡಿಯೋ ಲೀಕ್ ಆಗುತ್ತಿದ್ದಂತೆ ಆಕೆ ಕಾಣೆಯಾಗಿದ್ದೇಕೆ?

By ಫಿಲ್ಮಿಬೀಟ್ ಡೆಸ್ಕ್

ಇಷ್ಟು ದಿನ ತಣ್ಣಗಾಗಿದ್ದ ನಿತ್ಯಾನಂದ ಹಾಗೂ ರಂಜಿತಾ ಮ್ಯಾಟರ್ ಈಗ ಮತ್ತೆ ಓಪನ್ ಆಗಿದೆ. ಯೂಟ್ಯೂಬ್ ಚಾನೆಲ್‌ವೊಂದರ ಸಂದರ್ಶನದಲ್ಲಿ ರಂಜಿತಾ ತಂದೆ ಅಶೋಕ್ ಕುಮಾರ್ ಮಗಳ ಬಗ್ಗೆ ಮಾಹಿತಿ ನೀಡುತ್ತಿದ್ದಂತೆ ಹಳೇ ಮ್ಯಾಟರ್‌ಗಳೆಲ್ಲ ಮತ್ತೆ ಹೊರ ಬರುತ್ತಿವೆ.

ವಿವಾದಾತ್ಮಕ ಸ್ವಾಮಿ ನಿತ್ಯಾನಂದನ ಹಾಗೂ ದಕ್ಷಿಣ ಭಾರತದ ನಟಿ ರಂಜಿತಾ ನಡುವಿನ ಮ್ಯಾಟರ್ ಹೊಸತೇನಲ್ಲ. ಇದು ತೀರಾ ಹಳೇ ವಿಚಾರ ಆಗಿದ್ದರೂ, ಇಂದಿಗೂ ಇವರಿಬ್ಬರ ಬಗ್ಗೆ ಏನಾದರೂ ಹೊಸ ವಿಷಯಗಳು ಹೊರಬರುತ್ತಲೇ ಇರುತ್ತೆ.

Nithyananda Swami Triangular Love Story With Ranjitha and Nithya Gopika

ನಿತ್ಯಾನಂದ ಬಿಡದಿಯ ಆಶ್ರಮ ಬಿಟ್ಟು ಓಡಿ ಹೋಗಿ ತನ್ನದೇ 'ಕೈಲಾಸ' ಅನ್ನೋ ದೇಶವನ್ನು ಕಟ್ಟಿಕೊಂಡಿದ್ದಾರೆ. ಅಲ್ಲಿಗೆ ಹೋದ ಬಳಿಕವೂ ಆಗಾಗ ಇವನ ಬಗ್ಗೆ ಚರ್ಚೆಯಾಗುತ್ತಲೇ ಇದೆ. ಸದ್ಯ ರಂಜಿತಾ ಕೂಡ ನಿತ್ಯಾನಂದನ ಜೊತೆ 'ಕೈಲಾಸ'ದಲ್ಲಿಯೇ ಇದ್ದಾರೆ ಎನ್ನಲಾಗಿದೆ. ಇವರಿಬ್ಬರ ಖಾಸಗಿ ವಿಡಿಯೋ ಹೊರಬೀಳುತ್ತಿದ್ದಂತೆ ಇನ್ನೊಂದು ಸುದ್ದಿ ಕೂಡ ಹರಿದಾಡಿತ್ತು. ರಂಜಿತಾಗೂ ಮುನ್ನ ನಿತ್ಯಾನಂದನಿಗೆ ಮತ್ತೊಬ್ಬ ಭಕ್ತೆ ಆತ್ಮೀಯರಾಗಿದ್ದಳು. ರಂಜಿತಾಳಿಂದಲೇ ಆಕೆ ದೂರ ಆದಳು ಅನ್ನೋ ಸುದ್ದಿ ಓಡಾಡಿತ್ತು. ಅಸಲಿಗೆ ಆಕೆ ಯಾರು? ಇವರಿಬ್ಬರ ನಡುವೆ ಬಂದ ಆ ಭಕ್ತೆ ಯಾರು?

ನಿತ್ಯಾನಂದ ಆತ್ಮೀಯರಾಗಿದ್ದ ಭಕ್ತೆ ಯಾರು?

ನಟಿ ರಂಜಿತಾ ವಿವಾದಾತ್ಮಕ ಸ್ವಾಮಿ ನಿತ್ಯಾನಂದನ ಭೇಟಿಯಾಗುವುದಕ್ಕೂ ಮುನ್ನ ಮತ್ತೊಬ್ಬ ಭಕ್ತೆ ಇದ್ದಳು. ನಿತ್ಯಾನಂದನ ಎಲ್ಲಾ ವ್ಯವಹಾರವನ್ನೂ ನೋಡಿಕೊಳ್ಳುತ್ತಿದ್ದಳು. ಆಕೆಯ ಹೆಸರೇ ನಿತ್ಯಾ ಗೋಪಿಕಾ. ನಿತ್ಯಾನಂದ ಹಾಗೂ ರಂಜಿತಾ ವಿಡಿಯೋ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗುತ್ತಿದ್ದಂತೆ ನಿತ್ಯಾ ಗೋಪಿಕಾ ಅನ್ನೋ ಭಕ್ತೆ ಕಾಣೆಯಾಗಿದ್ದಳು.

Nithyananda Swami Triangular Love Story With Ranjitha and Nithya Gopika

ಅಲ್ಲಿಂದ ಮಾಧ್ಯಮಗಳು ನಿತ್ಯಾ ಗೋಪಿಕಾ ಹಿನ್ನೆಲೆಯನ್ನು ಕೆದಕುವುದಕ್ಕೆ ಶುರು ಮಾಡಿದ್ದವು. ಆ ಸಂದರ್ಭದಲ್ಲಿ ಕೆಲವು ಮಾಧ್ಯಮಗಳು ನಿತ್ಯಾನಂದ ಹಾಗೂ ನಿತ್ಯಾ ಗೋಪಿಕಾ ನಡುವೆ ಆತ್ಮೀಯತೆ ಇತ್ತು. ಇಬ್ಬರಲ್ಲೂ ಅನ್ಯೋನ್ಯತೆ ಇತ್ತು ಎಂದು ವರದಿ ಮಾಡಿದ್ದವು. ಕೆಲವು ವರದಿಗಳು ಬೇರೆಯದ್ದೇ ಕಥೆ ಹೇಳಿದ್ದವು.

ನಿತ್ಯಾ ಗೋಪಿಕಾ ಯಾರು?

ಸ್ವಯಂ ಘೋಷಿತಾ ಸ್ವಾಮಿ ನಿತ್ಯಾನಂದ ಆಗತಾನೇ ಜನಪ್ರಿಯನಾಗಿದ್ದ. ದೇಶದ ಮೂಲೆ ಮೂಲೆ ಸುತ್ತುತ್ತಿದ್ದ. ವಿದೇಶಗಳಿಗೆ ಹೋಗಿ ಪ್ರವಚನ ನೀಡುತ್ತಿದ್ದ. ಈ ವೇಳೆ ನಿತ್ಯಾ ಗೋಪಿಕಾ ಅನ್ನೋ ಭಕ್ತೆ ಸದಾ ನಿತ್ಯಾನಂದನ ಜೊತೆಯೇ ಇರುತ್ತಿದ್ದಳು ಎನ್ನಲಾಗಿದೆ.

ಅಸಲಿಗೆ ನಿತ್ಯಾ ಗೋಪಿಕಾ ಎನ್‌ಆರ್‌ಐ ಆಗಿದ್ದಳು. ಅಮೆರಿಕಾದಲ್ಲಿ ನೆಲೆಸಿದ್ದಳು ಎನ್ನಲಾಗಿದೆ. ನಿತ್ಯಾನಂದ ಪ್ರವಚನದಿಂದ ಆಕರ್ಷಿತಳಾಗಿ ಈತನ ಭಕ್ತೆಯಾಗಿದ್ದಳು. ಭಾರತದಲ್ಲಿ ಬಿ.ಟೆಕ್ ಪಡೆದ ನಂತರ ಅಮೆರಿಕಾದ ಡಾಕ್ಟರೇಟ್ ಪಡೆದಿದ್ದಳು ಎಂದು ವರದಿಯಾಗಿದೆ. ಇಷ್ಟೊಂದು ಆತ್ಮೀಯಳಾಗಿದ್ದಳು ನಿತ್ಯಾನಂದ ಹಾಗೂ ರಂಜಿತಾ ವಿಡಿಯೋ ಲೀಕ್ ಆಗುತ್ತಿದ್ದಂತೆ ಕಾಣಿಯಾಗಿದ್ದಳು.

ನಿತ್ಯಾನಂದನ ತ್ರಿಕೋನ ಪ್ರೇಮಕಥೆ?

ನಿತ್ಯಾನಂದನ ಜೊತೆ ನಿತ್ಯಾ ಗೋಪಿಕಾ ಆತ್ಮೀಯಳಾಗಿದ್ದಳು. ಆದರೆ, ನಿತ್ಯಾನಂದನ ಗಮನವೆಲ್ಲವೂ ರಂಜಿತಾ ಮೇಲೆ ಇತ್ತು. ಅದ್ಯಾವಾಗ ರಂಜಿತಾ ಕೂಡ ನಿತ್ಯಾನಂದನ ಮಾತಿಗೆ ಮರುಳಾದಳೋ ಅಲ್ಲಿಂದ ನಿತ್ಯಾನಂದ ಹಾಗೂ ರಂಜಿತಾ ಇಬ್ಬರೂ ಆತ್ಮೀಯರಾದರು. ಇದನ್ನು ನಿತ್ಯಾ ಗೋಪಿಕಾಗೆ ಸಹಿಸಲು ಆಗಲಿಲ್ಲ. ಹೀಗಾಗಿ ವಿಡಿಯೋ ಲೀಕ್ ಮಾಡುವ ಪ್ಲ್ಯಾನ್ ಮಾಡಿದ್ದಳು ಎಂದು ಗುಲ್ಲೆದ್ದಿತ್ತು.

ವಿಡಿಯೋ ಲೀಕ್ ಮಾಡಿದ್ದ ನಿತ್ಯಾನಂದನ ಕಾರು ಚಾಲಕ ಲೆನಿನ್ ಜೊತೆ ಸೇರಿ ಮಾಸ್ಟರ್ ಪ್ಲ್ಯಾನ್ ಮಾಡಿದ್ದಳು ಎಂದು ಸುದ್ದಿ ಹಬ್ಬಿತ್ತು. ಆದರೆ, ಇದೂವರೆಗೂ ನಿತ್ಯಾ ಗೋಪಿಕಾ ಬಗ್ಗೆ ಹೆಚ್ಚಿನ ಮಾಹಿತಿ ಸಿಕ್ಕಿಲ್ಲ. ಆಕೆ ಮೂಲ, ಎಲ್ಲಿದ್ದಾಳೆ. ನಿತ್ಯಾನಂದನ ಪ್ರೀತಿಯ ಬಲೆಗೆ ಈಕೆನೂ ಬಿದ್ದಿದ್ದು ನಿಜವೇ? ಅನ್ನೋ ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ.

More from Filmibeat

English summary
Nithyananda Swami Triangular Love Story With Ranjitha and Nithya Gopika, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X