ಟ್ರಾಫಿಕ್ ಸಿಗ್ನಲ್‌ನಲ್ಲಿ ಭಿಕ್ಷುಕನಿಂದ ನಟಿಗೆ ಕಹಿ ಅನುಭವ; ಆಕೆ ಹೇಳಿದ್ದೇನು?

ನಗರದ ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಭಿಕ್ಷುಕರು ಭಿಕ್ಷೆ ಬೇಡುವುದು ಸರ್ವೇ ಸಾಮಾನ್ಯ. ಎಳೆ ಮಕ್ಕಳನ್ನು ಕಂಕುಳಲ್ಲಿ ಇಟ್ಟುಕೊಂಡು ಭಿಕ್ಷೆ ಬೇಡುವವರು ಇರುತ್ತಾರೆ. ಇನ್ನು ಚಿಕ್ಕ ಚಿಕ್ಕ ಮಕ್ಕಳು ಕೂಡ ಶಾಲೆಗೆ ಹೋಗುವ ವಯಸ್ಸಲ್ಲಿ ರಸ್ತೆಗಳಲ್ಲಿ ಕೈಚಾಚುವುದನ್ನು ನೋಡುತ್ತೇವೆ.

ತಮಿಳು ನಟಿ ನಿವೇತಾ ಪೇತುರಾಜ್‌ಗೆ ಟ್ರಾಫಿಕ್ ಸಿಗ್ನಲ್‌ನಲ್ಲಿ ಭಿಕ್ಷೆ ಬೇಡುವ ಹುಡುಗನಿಂದ ಕಹಿ ಅನುಭವ ಎದುರಾಗಿದೆ. ಆಕೆಯ ಕೈಯಲ್ಲಿದ್ದ ಹಣವನ್ನು ಹುಡುಗ ಕಿತ್ತುಕೊಂಡು ಹೋಗಿರುವ ಘಟನೆ ನಡೆದಿದೆ. ಈ ವಿಚಾರವನ್ನು ಆಕೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಬಗ್ಗೆ ಪರ ವಿರೋಧ ಚರ್ಚೆ ಶುರುವಾಗಿದೆ.

Nivetha Pethuraj Shares Bad Experience with Beggar boy in Chennai signal

ಮಧುರೈ ಮೂಲದ ನಟಿ ನಿವೇತಾ ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕಳೆದ ಏಳೆಂಟು ವರ್ಷಗಳಿಂದ ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಚೆನ್ನೈ ನಗರದ ಅಡ್ಯಾರ್ ಸರ್ಕಲ್‌ನಲ್ಲಿ ತಮಗೆ ಎದುರಾದ ಅನಿರೀಕ್ಷಿತ ಘಟನೆ ಬಗ್ಗೆ ನಿವೇತಾ ಪ್ರತಿಕ್ರಿಯಿಸಿದ್ದಾರೆ. ಸಿಗ್ನಲ್‌ನಲ್ಲಿ ಆಕೆ ಪ್ರಯಾಣಿಸುತ್ತಿದ್ದ ಕಾರು ಕೆಲ ನಿಮಿಷಗಳ ಕಾಲ ನಿಂತಿತ್ತು.

ನಿವೇತಾ ಕಾರ್ ಬಳಿಗೆ ಬಂದ ಏಳೆಂಟು ವರ್ಷದ ಹುಡುಗನೊಬ್ಬ ಬಂದು ಹಣ ಕೇಳಿದನಂತೆ. ಬಳಿಕ ಒಂದು ಪುಸ್ತಕ ತೋರಿಸಿ 100 ರೂಪಾಯಿಗೆ ಮಾರಾಟ ಮಾಡಲು ಮುಂದಾದ. ಸರಿ ಪುಸ್ತಕ ತಗೋಳೋಣ ಎಂದು 100 ಕೊಡಲು ಹೋದರೆ ಏಕಾಏಕಿ 500 ರೂಪಾಯಿ ಕೊಡುವಂತೆ ಡಿಮ್ಯಾಂಡ್ ಮಾಡಿದ. ಹಾಗಾಗಿ ಪುಸ್ತಕ ಬೇಡ, ಏನೂ ಬೇಡ ಅಂತ 100 ರೂಪಾಯಿ ವಾಪಸ್ ತೆಗೆದುಕೊಂಡೆ ಎಂದು ನಿವೇತಾ ಹೇಳಿದ್ದಾರೆ.

ನಾನು ಪುಸ್ತಕ ಬೇಡ ಎಂದರೂ ಕೇಳದೇ ಕಾರಿನ ಒಳಗೆ ಎಸೆದು ಕೈಯಲ್ಲಿದ್ದ ಹಣ ಕಿತ್ತುಕೊಂಡು ಓಡಿ ಹೋಗಿಬಿಟ್ಟ ಎಂದು ನಿವೇತಾ ಆ ಘಟನೆ ಬಗ್ಗೆ ಹೇಳಿಕೊಂಡಿದ್ದಾರೆ. ಘಟನೆ ಬಳಿಕ ಹೀಗೆ ಬಲವಂತವಾಗಿ ಭಿಕ್ಷೆ ಬೇಡುವುದು, ಕೊಡದಿದ್ದರೆ ಕಿತ್ತುಕೊಳ್ಳುವ ಟ್ರೆಂಡ್ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಯಾರಿಗಾದರೂ ಇಂತಹ ಕಹಿ ಅನುಭವ ಆಗಿದ್ಯಾ? ಎಂದು ಪ್ರಶ್ನಿಸಿದ್ದಾರೆ.

ಭಿಕ್ಷುಕರು ಹೀಗೆ ಹಣಕ್ಕಾಗಿ ಬೆದರಿಕೆ ತಂತ್ರಗಳನ್ನು ಬಳಸುವುದನ್ನು ಸರೀನಾ? ಅದನ್ನು ಒಪ್ಪಬಹುದೇ? ಎಂದು ನಿವೇತಾ ಕೇಳಿದ್ದಾರೆ. ನಟಿಯ ಹೇಳಿಕೆ ಆಧರಿಸಿ ಅಡ್ಯಾರ್ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ. ನಟಿಯ ಎತ್ತಿರುವ ಪ್ರಶ್ನೆ ಬಗ್ಗೆ ಕೆಲವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇದೆಲ್ಲಾ ತಪ್ಪು ಎನ್ನುತ್ತಿದ್ದಾರೆ. ಕೆಲವರು ಮಾತ್ರ 100 ರೂಪಾಯಿ ಅಲ್ವಾ? ಇದಕ್ಕೆಲ್ಲಾ ಇಷ್ಟು ಚರ್ಚೆ ಬೇಕಿತ್ತಾ? ಎಂದು ಕಾಮೆಂಟ್ ಮಾಡುತ್ತಿದ್ದಾರೆ.

'ಒರು ನಾಲ್‌ ಕೂತು' ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ನಿವೇತಾ ಮುಂದೆ ಸಾಲು ಸಾಲು ಚಿತ್ರಗಳಲ್ಲಿ ನಟಿಸಿದರು. 'ಟಿಕ್‌ ಟಿಕ್‌ ಟಿಕ್', 'ಚಿತ್ರಲಹರಿ', 'ಸಂಗತಮಿಳನ್', 'ಅಲಾ ವೈಕುಂಠಪುರಂಲೊ', 'ರೆಡ್', 'ಪಾಗಲ್', 'ದಸ್ ಕಾ ದಮ್ಕಿ' ಹಾಗೂ 'ಪಾರ್ಟಿ' ಸೇರಿದಂತೆ ಒಂದಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರುವ ಚೆಲುವೆಗೆ ಇನ್‌ಸ್ಟಾಗ್ರಾಮ್‌ನಲ್ಲಿ 40 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಇದ್ದಾರೆ. ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದರೂ ನಿವೇತಾಗೆ ದೊಡ್ಡ ಬ್ರೇಕ್ ಮಾತ್ರ ಸಿಗಲಿಲ್ಲ. 'ಕಾಲಾ' ಎಂಬ ಹಿಂದಿ ವೆಬ್‌ ಸೀರಿಸ್ ಜೊತೆಗೆ 'ಪರುವು' ತೆಲುಗು ಸೀರಿಸ್‌ಗೂ ಬಣ್ಣ ಹಚ್ಚಿದ್ದರು.

More from Filmibeat

English summary
Actress opens up about boy stolen her money in traffic signal;
Read more about: actress tamil kollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X