ಅನುಷ್ಕಾ ಶೆಟ್ಟಿ ಚಿತ್ರವನ್ನ ತಮಿಳು ಸಿನಿ ಅಂಗಳದಲ್ಲಿ ಕೇಳೋರೇ ಇಲ್ಲ ಕಣ್ರೀ.!
Recommended Video
ಹುಟ್ಟಿ ಬೆಳೆದಿದ್ದು ಕರ್ನಾಟಕದಲ್ಲಿ ಆದರೂ, ನಟಿ ಅನುಷ್ಕಾ ಶೆಟ್ಟಿಗೆ ಖ್ಯಾತಿ ತಂದುಕೊಟ್ಟಿದ್ದು ಪಕ್ಕದ ತೆಲುಗು ಚಿತ್ರರಂಗ. 'ಸೂಪರ್', 'ವಿಕ್ರಮಾರ್ಕುಡು', 'ಅರುಂಧತಿ', 'ಬಿಲ್ಲಾ', 'ವೇದಂ', 'ನಾಗವಲ್ಲಿ', 'ಬಾಹುಬಲಿ' ಸೇರಿದಂತೆ ಹಲವು ಹಿಟ್ ಸಿನಿಮಾಗಳನ್ನು ನಟಿ ಅನುಷ್ಕಾ ಶೆಟ್ಟಿ ನೀಡಿದ್ದಾರೆ.
ಬ್ಯಾಕ್ ಟು ಬ್ಯಾಕ್ ಹಿಟ್ಸ್ ಕೊಡುತ್ತಲೇ ಬಂದಿದ್ದರೂ, ನಟಿ ಅನುಷ್ಕಾ ಶೆಟ್ಟಿ ಅಭಿನಯದ ಹೊಸ ಚಿತ್ರಕ್ಕೆ ಡಿಮ್ಯಾಂಡ್ ಇಲ್ಲ. ಅನುಷ್ಕಾ ಶೆಟ್ಟಿ ಚಿತ್ರವನ್ನ ಕಾಲಿವುಡ್ ನಲ್ಲಿ ಕೇಳೋರೇ ಇಲ್ಲ. ಅನುಷ್ಕಾ ಶೆಟ್ಟಿ ಸಿನಿಮಾವನ್ನು ಯಾರೂ ಕೊಂಡುಕೊಳ್ಳದ ಕಾರಣಕ್ಕೆ, ಚಿತ್ರದ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿದೆ.!

ಅನುಷ್ಕಾ ನಟನೆಯ 'ನಿಶಬ್ಧಂ'
ಮೂಕ ಕಲಾವಿದೆಯಾಗಿ ಅನುಷ್ಕಾ ಶೆಟ್ಟಿ ಅಭಿನಯದ ಚಿತ್ರ 'ನಿಶಬ್ಧಂ'. ಹೇಮಂತ್ ಮಧುಕರ್ ನಿರ್ದೇಶನದ ಮಾಡಿರುವ 'ನಿಶಬ್ಧಂ' ಚಿತ್ರದಲ್ಲಿ ಅನುಷ್ಕಾ ಶೆಟ್ಟಿ ಜೊತೆಗೆ ತಮಿಳು ನಟ ಮಾಧವನ್, ಅಂಜಲಿ, ಸುಬ್ಬರಾಜು, ಶಾಲಿನಿ ಪಾಂಡೆ ಸೇರಿದಂತೆ ದೊಡ್ಡ ತಾರಾಬಳಗ ಇದೆ. ಥ್ರಿಲ್ಲರ್ ಸಬ್ಜೆಕ್ಟ್ ಹೊಂದಿರುವ ಈ ಚಿತ್ರ ಮುಂದಿನ ತಿಂಗಳ ಬಿಡುಗಡೆ ಆಗಬೇಕಿತ್ತು.

ಕೇಳೋರೇ ಇಲ್ಲ.!
'ನಿಶಬ್ಧಂ' ಚಿತ್ರ ಏಕಕಾಲಕ್ಕೆ ತೆಲುಗು ಮತ್ತು ತಮಿಳಿನಲ್ಲಿ ತಯಾರಾಗಿದೆ. ಹಿಂದಿ ಮತ್ತು ಮಲಯಾಳಂ ಭಾಷೆಯಲ್ಲೂ ಡಬ್ ಮಾಡಿ ಚಿತ್ರವನ್ನು ಬಿಡುಗಡೆ ಮಾಡುವ ಪ್ಲಾನ್ ಚಿತ್ರತಂಡಕ್ಕಿದೆ. ಆದ್ರೆ, ತಮಿಳು ಮತ್ತು ಹಿಂದಿಯಲ್ಲಿ 'ನಿಶಬ್ಧಂ' ಚಿತ್ರಕ್ಕೆ ಬೇಡಿಕೆ ಕಂಡುಬರುತ್ತಿಲ್ಲ. ಕಾಲಿವುಡ್ ನಲ್ಲಿ 'ನಿಶಬ್ಧಂ' ಚಿತ್ರವನ್ನ ಕೇಳೋರೇ ಇಲ್ಲ.

ಬಿಡುಗಡೆ ದಿನಾಂಕ ಮುಂದಕ್ಕೆ
ಅನುಷ್ಕಾ ಶೆಟ್ಟಿ ತಮಿಳು ಚಿತ್ರರಂಗದಲ್ಲೂ ಗುರುತಿಸಿಕೊಂಡಿದ್ದಾರೆ. ಆದರೂ, 'ನಿಶಬ್ಧಂ' ತಮಿಳು ವರ್ಷನ್ ನ ಕೊಂಡುಕೊಳ್ಳಲು ಯಾವ ವಿತರಕರು/ನಿರ್ಮಾಪಕರು ಮುಂದೆ ಬರುತ್ತಿಲ್ಲ. ಹೀಗಾಗಿ, ಅನಿವಾರ್ಯವಾಗಿ 'ನಿಶಬ್ಧಂ' ಬಿಡುಗಡೆ ದಿನಾಂಕವನ್ನು ಚಿತ್ರತಂಡ ಮುಂದಕ್ಕೆ ತಳ್ಳಿದೆ. ಉತ್ತಮ ಬೆಲೆ ಸಿಗುವವರೆಗೂ ಚಿತ್ರವನ್ನ ಬಿಡುಗಡೆ ಮಾಡದಿರಲು ಚಿತ್ರತಂಡ ನಿರ್ಧರಿಸಿದೆ.
ಅನುಷ್ಕಾ ಶೆಟ್ಟಿಯ 'ಈ' ಮಾತನ್ನು ಕೇಳಿದ ಕನ್ನಡಿಗರಿಗೆ ಬೆಲ್ಲ ತಿಂದಷ್ಟೇ ಖುಷಿ ಆಗಿದೆ.!

ಒಳ್ಳೆ ರೆಸ್ಪಾನ್ಸ್ ಪಡೆದುಕೊಂಡಿದ್ದ ಟೀಸರ್
ಹಾಗ್ನೋಡಿದ್ರೆ, ಕಳೆದ ವರ್ಷದ ನವೆಂಬರ್ ತಿಂಗಳಲ್ಲಿ ಬಿಡುಗಡೆ ಆಗಿದ್ದ 'ನಿಶಬ್ಧಂ' ಚಿತ್ರದ ಟೀಸರ್ ಗೆ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿತ್ತು. ಯೂಟ್ಯೂಬ್ ನಲ್ಲಿ 'ನಿಶಬ್ಧಂ' ಟೀಸರ್ ಗೆ 70 ಲಕ್ಷಕ್ಕೂ ಹೆಚ್ಚು ವ್ಯೂಸ್ ಸಿಕ್ಕಿತ್ತು. 99 ಸಾವಿರಕ್ಕೂ ಅಧಿಕ ಮಂದಿ 'ನಿಶಬ್ಧಂ' ಟೀಸರ್ ನ ಮೆಚ್ಚಿಕೊಂಡಿದ್ದರು.


Click it and Unblock the Notifications











