For Quick Alerts
  ALLOW NOTIFICATIONS  
  For Daily Alerts

  'ಖೈದಿ' ವಿಲನ್ ಅರ್ಜುನ್ ದಾಸ್ ಜತೆ ಲವ್‌ನಲ್ಲಿ ಬಿದ್ರಾ 'ಪೊನ್ನಿಯಿನ್ ಸೆಲ್ವನ್' ಚೆಲುವೆ ಐಶ್ಚರ್ಯ ಲಕ್ಷ್ಮಿ?

  |

  ಒಂದೇ ಇಂಡಸ್ಟ್ರಿಯ ನಟ ಹಾಗೂ ನಟಿ ಪ್ರೀತಿಯಲ್ಲಿ ಬೀಳುವುದು ಸಹಜ. ಅದರಲ್ಲಿಯೂ ದಕ್ಷಿಣ ಭಾರತ ಚಿತ್ರರಂಗಗಳಲ್ಲಿ ಪ್ರೀತಿಯಲ್ಲಿ ಬೀಳುವ ನಟ - ನಟಿ ಜೋಡಿ ಮದುವೆಯಾಗಿರುವ ಉದಾಹರಣೆಗಳೇ ಹೆಚ್ಚು. ಇದಕ್ಕೆ ಸಾಕಷ್ಟು ಉದಾಹರಣೆಗಳಿದ್ದು, ತಾಜಾ ಉದಾಹರಣೆಯೆಂದರೆ ಚಂದನವನದ ನಟಿ ಹರಿಪ್ರಿಯಾ ಹಾಗೂ ನಟ ವಸಿಷ್ಠ ಸಿಂಹ. ಈ ಜೋಡಿಯ ಪ್ರೀತಿ ವಿಷಯ ಬಹಿರಂಗವಾಗಿ, ನಿಶ್ಚಿತಾರ್ಥ ಮುಗಿದು, ಇದೀಗ ಮದುವೆವರೆಗೂ ಬಂದಿದೆ. ಇದೇ ರೀತಿ ತಮಿಳಿನ ನಟ ನಟಿಯ ಜೋಡಿಯೊಂದು ಗುಟ್ಟಾಗಿ ಲವ್‌ನಲ್ಲಿ ಬಿದ್ದಿದೆ ಎಂಬ ಗುಸು ಗುಸು ಕಾಲಿವುಡ್ ಅಂಗಳದಲ್ಲಿ ಹುಟ್ಟಿಕೊಂಡಿತ್ತು.

  ಹೌದು, ತಮಿಳಿನ ಖೈದಿ, ಮಾಸ್ಟರ್ ಹಾಗೂ ವಿಕ್ರಮ್ ಚಿತ್ರಗಳ ಖಳನಾಯಕನಾಗಿ ಅಭಿನಯಿಸಿರುವ ಅರ್ಜುನ್ ದಾಸ್ ಹಾಗೂ ನಟಿ ಐಶ್ವರ್ಯ ಲಕ್ಷ್ಮಿ ಇಬ್ಬರ ಫೋಟೊವೊಂದು ಇಬ್ಬರ ನಡುವೆ ಪ್ರೀತಿ ಪ್ರೇಮವಿದೆ ಎಂಬ ಅನುಮಾನವನ್ನು ಹುಟ್ಟುಹಾಕಿತ್ತು. ನಟಿ ಐಶ್ವರ್ಯ ಲಕ್ಷ್ಮಿ ಅರ್ಜುನ್ ದಾಸ್ ಜತೆಗಿನ ಸೆಲ್ಫಿ ಚಿತ್ರವನ್ನು ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡು ಹೃದಯದ ಎಮೋಜಿಯನ್ನು ಪೋಸ್ಟ್‌ನಲ್ಲಿ ಹಾಕಿಕೊಂಡಿದ್ದರು.

  ಹೀಗಾಗಿ ಸಾಮಾನ್ಯವಾಗಿ ಇಬ್ಬರೂ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂಬ ಸುದ್ದಿ ಪಸರಿಸಿತು. ಹೀಗೆ ಸುದ್ದಿ ದೊಡ್ಡ ಮಟ್ಟದಲ್ಲಿ ವೈರಲ್ ಆಗಿದ್ದನ್ನು ಕಂಡ ನಟಿ ಐಶ್ವರ್ಯ ಲಕ್ಷ್ಮಿ ತನ್ನ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಆ ಸೆಲ್ಫಿ ಕುರಿತು ಬರೆದುಕೊಂಡಿದ್ದು ತಮ್ಮಿಬ್ಬರ ನಡುವೆ ಪ್ರೀತಿ ಪ್ರೇಮವೇನಿಲ್ಲ, ಇಬ್ಬರೂ ಭೇಟಿಯಾದಾಗ ತೆಗೆದುಕೊಂಡ ಸಾಮಾನ್ಯ ಸೆಲ್ಫಿಯಷ್ಟೇ, ನಾನು ಹಾಗೂ ಅರ್ಜುನ್ ದಾಸ್ ಇಬ್ಬರೂ ಒಳ್ಳೆಯ ಸ್ನೇಹಿತರಷ್ಟೇ, ಇದರ ಮೇಲೆ ಇನ್ನೇನೂ ಸಹ ಇಲ್ಲ ಎಂದು ಬರೆದುಕೊಂಡು ಹರಿದಾಡುತ್ತಿದ್ದ ಸುದ್ದಿಗೆ ಬ್ರೇಕ್ ಹಾಕಿದ್ದಾರೆ.

  Read more about: tamil controversy
  English summary
  No love between us me and Arjun Das we are just friends says Aishwarya Lekshmi
  Friday, January 13, 2023, 6:50
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X