ಆರ್‌ಸಿಬಿ ಮಹಿಳಾ ತಂಡ ಟ್ರೋಫಿ ಗೆದ್ರು ಒಬ್ಬ ಮಹಿಳೆ ರಸ್ತೆಯಲ್ಲಿ ಸಂಭ್ರಮಿಸಲಿಲ್ಲ; ಸಿದ್ದಾರ್ಥ್

'ಈ ಸಲ ಕಪ್ ನಮ್ದು' ಎಂದು ಆರ್‌ಸಿಬಿ ಕ್ರಿಕೆಟ್ ಪ್ರೇಮಿಗಳು ಸಂಭ್ರಮಿಸುತ್ತಿದ್ದಾರೆ. ಐಪಿಎಲ್ 16 ಸೀಸನ್‌ಗಳಲ್ಲಿ ಪುರುಷರ ತಂಡ ಕಪ್ ಇನ್ನು ಗೆದ್ದಿಲ್ಲ. ಈ ಸಲ ಕಲ್ ನಮ್ದೆ ನಮ್ದೆ ಎಂದು ಕೇಳಿ ಅಭಿಮಾನಿಗಳು ಸುಸ್ತಾಗಿದ್ದರು. ಆದರೆ WPL 2024 ಟೂರ್ನಿಯಲ್ಲಿ ಆರ್‌ಸಿಬಿ ಮಹಿಳೆ ತಂಡ ಈ ಬಾರಿ ಟ್ರೋಫಿ ಗೆದ್ದು ಬೀಗಿದೆ.

ನವದೆಹಲಿಯ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೋಲಿಸಿ ಆರ್‌ಸಿಬಿ ಮಹಿಳಾ ತಂಡ ಪ್ರಶಸ್ತಿ ಗೆದ್ದಿದೆ. ಅತ್ತ ಮೈದಾನದಲ್ಲಿ 8 ವಿಕೆಟ್‌ಗಳಿಂದ ತಂಡ ಗೆಲ್ಲುತ್ತಿದ್ದಂತೆ ರಾಜ್ಯಾದ್ಯಂತ ಅಭಿಮಾನಿಗಳು ಪಟಾಕಿ ಸಿಡಿಸಿ, ಜೈಕಾರ ಹಾಕಿ ಸಂಭ್ರಮಿಸಿದರು. ಮಧ್ಯರಾತ್ರಿ ಕೆಲವರು ಬೀದಿಗಿಳಿದು ಸಂಭ್ರಮಿಸಿ ಖುಷಿಪಟ್ಟರು. ಅದಕ್ಕೆ ಸಂಬಂಧಿಸಿದ ಫೋಟೊ, ವಿಡಿಯೋಗಳು ವೈರಲ್ ಆಗುತ್ತಿದೆ. ಇಂತದ್ದೇ ವಿಡಿಯೋವೊಂದಕ್ಕೆ ತಮಿಳು ನಟ ಸಿದ್ದಾರ್ಥ್‌ ಪ್ರತಿಕ್ರಿಯಿಸಿದ್ದಾರೆ.

Not a single woman on the street to celebrate RCB winning WPL title says actor Siddharth

"ಮಹಿಳೆಯರ ತಂಡವು ಟೂರ್ನಿಯನ್ನು ಗೆದ್ದಿದೆ. ಆದರೆ ಓರ್ವ ಮಹಿಳೆ ಕೂಡ ರಸ್ತೆಯಲ್ಲಿ ಇದನ್ನು ಸಂಭ್ರಮಿಸಲಿಲ್ಲ. ಇದ ಭಾರತದಲ್ಲಿ ಪಿತೃಪ್ರಭುತ್ವದ ಅತ್ಯುನ್ನತ ಕ್ಷಣ" ಎಂದು ನಟ ಸಿದ್ದಾರ್ಥ್ ಟ್ವೀಟ್ ಮಾಡಿದ್ದಾರೆ. ನೋಡ ನೋಡುತ್ತಲೇ ಈ ಟ್ವೀಟ್ ವೈರಲ್ ಆಗುತ್ತಿದೆ. ಕೆಲವರು ಸಿದ್ದಾರ್ಥ್‌ ವಾದಕ್ಕೆ ತಿರುಗೇಟು ನೀಡುತ್ತಿದ್ದಾರೆ. ಮೊಸರಲ್ಲಿ ಕಲ್ಲು ಹುಡುಕುವುದನ್ನು ಬಿಡಿ ಎನ್ನುತ್ತಿದ್ದಾರೆ. ಮಹಿಳೆಯರ ಗೆಲುವನ್ನು ನಾವ್ಯಾಕೆ ಸಂಭ್ರಮಿಸಬಾರದು ಎಂದು ಕೆಲವರು ಕೇಳಿದ್ದಾರೆ.

ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿರುವ ನಟ ಸಿದ್ದಾರ್ಥ್ "ಈ ಟ್ವೀಟ್‌ಗೆ ನಾನು ಸ್ಪಷ್ಟನೆ ನೀಡಲು ಬಯಸುತ್ತೇನೆ. ರಾತ್ರಿಯ ವೇಳೆ ಸಾರ್ವಜನಿಕ ಸ್ಥಳಗಳಿಗೆ ಬರಲು ಮಹಿಳೆಯರಿಗೆ ಸಾಧ್ಯವಾಗುತ್ತಿಲ್ಲ ಎಂಬುದನ್ನು ತಿಳಿಸಲು ಈ ಟ್ವೀಟ್​ ಮಾಡಿದ್ದೇನೆ. ಮಹಿಳೆಯರ ದೊಡ್ಡ ಗೆಲುವನ್ನು ಕೂಡ ಪುರುಷರ ರೀತಿ ಬೀದಿಯಲ್ಲಿ ಮಹಿಳೆಯರು ಸಂಭ್ರಮಿಸಲು ಸಾಧ್ಯವಾಗುತ್ತಿಲ್ಲ ಎಂದು ವ್ಯಂಗ್ಯವಾಗಿ ನಾನು ಬರೆದಿದ್ದೇನೆ" ಎಂದು ಬರೆದಿದ್ದಾರೆ.

ಸಿದ್ದಾರ್ಥ್‌ ತಮ್ಮ ಟ್ವೀಟ್‌ಗೆ ಸ್ಪಷ್ಟನೆ ಕೊಟ್ಟ ಬಳಿಕ ಕೂಡ ಸಾಕಷ್ಟು ಜನ ಟೀಕೆ ಮುಂದುವರೆಸಿದ್ದಾರೆ. ನೀವು ನಿಜವಾಗಿಯೂ ಏನು ಹೇಳಲು ಬಯಸುತ್ತೀರಿ ಅನ್ನೋದು ಇಲ್ಲಿ ಯಾರಿಗೂ ಅರ್ಥವಾಗಲಿ ಎಂದು ಒಬ್ಬರು ಕಾಮೆಂಟ್ ಮಾಡಿದ್ದು "ಇದಕ್ಕೆ ನಾನೇನು ಮಾಡೋಕೆ ಸಾಧ್ಯವಿಲ್ಲ" ಎನ್ನುವಂತೆ ರಿಪ್ಲೇ ಮಾಡಿದ್ದಾರೆ. ಒಟ್ಟಾರೆ ನಟ ಸಿದ್ದಾರ್ಥ್ ಟ್ವೀಟ್ ಅಂತೂ ಸಖತ್ ವೈರಲ್ ಆಗಿ ಭಾರೀ ಚರ್ಚೆ ಹುಟ್ಟಾಕ್ಕಿದೆ.

ಈಗಾಗಲೇ WPL 2 ಸೀಸನ್ ಮುಕ್ತಾಯವಾಗಿದೆ. ಕಳೆದ ಸೀಸನ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡ ಗೆದ್ದಿತ್ತು. ಈ ಬಾರಿ ಎಲಿಮನೇಟರ್‌ ಪಂದ್ಯದಲ್ಲೇ ಹಾಲಿ ಚಾಂಪಿಯನ್‌ ತಂಡವನ್ನು ಆರ್‌ಸಿಬಿ ತಂಡ ಸೋಲಿಸಿತ್ತು. ಇದೀಗ ಫೈನಲ್‌ನಲ್ಲಿ ಗೆದ್ದು ಮೊದಲು ಟ್ರೋಫಿ ಎತ್ತಿ ಹಿಡಿದಿದೆ. ಬರೀ ಟ್ರೋಫಿ ಅಲ್ಲ ಆರೆಂಜ್‌ ಕ್ಯಾಪ್‌ ಹಾಗೂ ಪರ್ಪಲ್‌ ಕ್ಯಾಪ್‌ ಕೂಡ ಆರ್‌ಸಿಬಿ ತಂಡದ ಪಾಲಾಗಿರುವುದು ವಿಶೇಷ. ಶ್ರೇಯಾಂಕಾ ಪಾಟೀಲ್‌ ಅತಿ ಹೆಚ್ಚು ವಿಕೆಟ್‌ ಪಡೆದು ಪರ್ಪಲ್ ಕ್ಯಾಪ್ ಪಡೆದರೆ, ಎಲ್ಲಿಸ್‌ ಪೆರ್ರಿ ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ ಗಳಿಸಿ ಆರೆಂಜ್‌ ಕ್ಯಾಪ್‌ ಸ್ವೀಕರಿಸಿದರು.

More from Filmibeat

English summary
Tamil Actor Siddharth tweet about RCB fans WPL trophy winning celebration goes viral
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X