ಬಾಯ್‌ಫ್ರೆಂಡ್ ಬಟ್ಟೆ ಹರಿದು ಸೇಡು ತೀರಿಸಿಕೊಂಡಿದ್ದ ಈ ನಟಿ ಯಾರು? ಶಕೀಲಾ ಜೊತೆಗಿನ ಸಂದರ್ಶನದಲ್ಲಿ ಹೇಳಿದ್ದೇನು?
ಈ ನಟಿಯ ಮೂಲ ಉತ್ತರ ಕರ್ನಾಟಕ ಆಗದಿದ್ದರೂ, ದಕ್ಷಿಣ ಭಾರತದಲ್ಲಿ ಜನಪ್ರಿಯತೆ ಗಳಿಸಿದ್ದಾರೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಸಿನಿಮಾಗಳಲ್ಲಿ ಹೆಚ್ಚಾಗಿ ನಟಿಸಿದ್ದಾರೆ. 2001ರಿಂದ ಬಾಲಿವುಡ್ ಸಿನಿಮಾ ಮೂಲಕ ವೃತ್ತಿ ಜೀವನ ಆರಂಭಿಸಿದ್ದರೂ, ಬಳಿಕ ತೆಲುಗು, ತಮಿಳು ಸಿನಿಮಾಗಳಲ್ಲಿ ಹೆಚ್ಚಾಗಿ ನಟಿಸುವುದಕ್ಕೆ ಶುರುವಿಟ್ಟುಕೊಂಡಿದ್ದರು. ಆಗ ಈ ನಟಿಗೆ ದಕ್ಷಿಣ ಭಾರತದಲ್ಲಿ ಎಲ್ಲಿಲ್ಲ ಕ್ರೇಜ್. ಆ ನಟಿಯ ಹೆಸರು ಕಿರಣ್ ರಾಥೋಡ್.
ಕಿರಣ್ ರಾಥೋಡ್ ಆರಂಭದಲ್ಲಿ ದಕ್ಷಿಣ ಭಾರತದಲ್ಲಿ ಮಿಂಚಿದ್ದರು. ಬಳಿಕ ಯಾಕೋ ಈಕೆಯ ಸಿನಿಮಾಗಳು ಒಂದೊಂದಾಗಿಯೇ ಸೋಲುವುದಕ್ಕೆ ಶುರುವಾಗಿತ್ತು. ಕಿರಣ್ ರಾಥೋಡ್ ಒಂದು ದಶಕಕ್ಕಿಂತಲೂ ಹೆಚ್ಚು ಕಾಲ ಸಿನಿಮಾರಂಗದಲ್ಲಿ ಬ್ಯುಸಿಯಾಗಿದ್ದರು. ಈ ವೇಳೆ ಕನ್ನಡ ಸಿನಿಮಾಗಳಲ್ಲೂ ನಟಿಸಿದ್ದಾರೆ. ಸುನೀಲ್ ಕುಮಾರ್ ದೇಸಾಯಿ ನಟಿಸಿದ 'ಕ್ಷಣ ಕ್ಷಣ' ಸಿನಿಮಾ ಕನ್ನಡದಲ್ಲಿ ನಟಿಸಿದ ಮೊದಲ ಸಿನಿಮಾ. ಆದರೆ ಈ ಸಿನಿಮಾ ಗೆಲ್ಲಲಿಲ್ಲ.

ಆನಂತರ 'ಗನ್' ಹಾಗೂ 'ಮಾಣಿಕ್ಯ' ಸಿನಿಮಾದಲ್ಲಿ ಐಟಂ ಸಾಂಗ್‌ಗಳ ಮೂಲಕ ಕನ್ನಡಿಗರನ್ನು ರಂಜಿಸಿದ್ದರು. ಹೆಚ್ಚು ಕಡಿಮೆ ಸಿನಿಮಾದಲ್ಲಿ ಒಂದು ದಶಕದ ಬಳಿಕ ಕಿರಣ್ ರಾಥೋಡ್ ಜನಪ್ರಿಯತೆ ಕುಗ್ಗುವುದಕ್ಕೆ ಶುರುವಾಗಿತ್ತು. ಇದೇ ವೇಳೆ ಕೆಲವು ವಿವಾದಗಳಿಗೆ ಸಿಕ್ಕಿಕೊಂಡಿದ್ದರು. ವೆಬ್ ಸೈಟ್ ಮೂಲಕ ತನ್ನ ವಿಡಿಯೋ ಹಾಗೂ ಫೋಟೊಗಳನ್ನು ಕಳಿಸಿ ಹಣ ಗಳಿಸುತ್ತಿದ್ದದ್ದು ಬೆಳಕಿಗೆ ಬಂದ್ಮೇಲೆ ಸಿನಿಪ್ರಿಯರು ಶಾಕ್ ಆಗಿದ್ದರು. ಅಲ್ಲದೆ ಸಿಕ್ಕಾಪಟ್ಟೆ ಗಾಳಿಸುದ್ದಿಗಳು ಈಕೆಯನ್ನು ಸುತ್ತಿಕೊಂಡಿತ್ತು.
ಈ ಎಲ್ಲಾ ವಿಷಯಗಳ ಬಗ್ಗೆ ಕಿರಣ್ ರಾಥೋಡ್ ತಮಿಳಿನ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ. ಸಿನಿಮಾ ಆಫರ್‌ಗಳು ಕಡಿಮೆ ಆದಾಗ, ತನ್ನದೇ ವೆಬ್‌ಸೈಟ್ ಮೂಲಕ ವಿಡಿಯೋ ಹಾಗೂ ಫೋಟೊಗಳನ್ನು ಕಳಿಸಿದ ಹಣ ಗಳಿಸುವ ನಿರ್ಧಾರಕ್ಕೆ ಬಂದಿದ್ದಾಗಿ ಹೇಳಿಕೊಂಡಿದ್ದಾರೆಂದು ವರದಿಯಾಗಿದೆ. ಇದೆ ವೇಳೆ ತನ್ನ ಬಾಯ್‌ಫ್ರೆಂಡ್ ಜೊತೆ ಇರುವ ಸಲುವಾಗಿ ಸಿನಿಮಾವನ್ನು ಬಿಟ್ಟು ಬಂದಿದ್ದು, ತನ್ನ ತಪ್ಪು ನಿರ್ಧಾರವೆಂದು ಹೇಳಿದ್ದಾರೆ.
ಶಕೀಲಾ ಜೊತೆಗಿನ ಸಂದರ್ಶನದಲ್ಲಿ ಕಿರಣ್ ರಾಥೋಡ್ ಕೆಲವು ಶಾಕಿಂಗ್ ವಿಷಯಗಳನ್ನು ರಿವೀಲ್ ಮಾಡಿದ್ದಾರೆ. ಇತ್ತೀಚೆಗೆ ಬ್ರೇಕಪ್ ಮಾಡಿಕೊಂಡ ಬಾಯ್‌ಫ್ರೆಂಡ್ ಒಮ್ಮ ಕಿರಣ್ ರಾಥೋಡ್‌ಗೆ ಹೊಡೆದಿದ್ದನಂತೆ. ಅದರಿಂದ ಸಿಟ್ಟಿಗೆದ್ದ ನಟಿ, ಆತನಿಗೆ ರಾತ್ರೋ ರಾತ್ರಿ ಫೋನ್ ಮಾಡಿ ಕರೆದಿದ್ದರು. ಅವನು ಬರುತ್ತಿದ್ದಂತೆ ಆತನ ಬಟ್ಟೆಗಳನ್ನು ಹರಿದು ಹಾಕಿ ಸೇಡು ತೀರಿಸಿಕೊಂಡಿದ್ದರು. ಬಳಿಕ ಬಟ್ಟೆ ಇಲ್ಲದೆ ಆ ಬಾಯ್ ಫ್ರೆಂಡ್ ವಾಪಸ್ ಹೋಗಬೇಕಾಯ್ತು ಎಂದಿದ್ದಾರೆ.

ಇದೇ ಸಂದರ್ಶನದಲ್ಲಿ ಚಿತ್ರರಂಗದಲ್ಲಿರುವ ಕೆಟ್ಟ ನಡವಳಿಕೆಗಳ ಬಗ್ಗೆನೂ ಹೇಳಿದ್ದಾರೆ. ಸಿನಿಮಾರಂಗದಲ್ಲಿ ತನಗೆ ಯಾರೂ ಸ್ನೇಹಿತರಿಲ್ಲ ಅನ್ನೋದನ್ನು ಬೇಗನೇ ಕಂಡುಕೊಂಡೆ ಎಂದಿದ್ದಾರೆ. ತನ್ನ ಪರಿಸ್ಥಿತಿಯನ್ನು ಅರಿತುಕೊಂಡ ಕೆಲವರು ಕೆಲಸ ಕೊಡಿಸುವುದಾಗಿ ರಾತ್ರೋ ರಾತ್ರಿ ಫೋನ್ ಮಾಡುತ್ತಾರೆ. ಆಗ ಆ ಫೋನ್ ಹಿಂದಿರುವುದೇನು ಅನ್ನೋದು ಅರ್ಥ ಆಗುತ್ತೆ ಎಂದು ಹೇಳಿದ್ದಾರೆ.
ಇಷ್ಟೇ ಅಲ್ಲದೆ, ಕಿರಣ್ ರಾಥೋಡ್ ವೃತ್ತಿ ಬದುಕಿನ ಬಗ್ಗೆ ಓಪನ್ ಆಗಿ ಮಾತಾಡಿದ್ದಾರೆ. ಒಳ್ಳೆಯ ಸಿನಿಮಾಗಳನ್ನು ತಿರಸ್ಕರಿಸಿದೆ. ಆ ವೇಳೆ ಒಬ್ಬ ಮೂರ್ಖನನ್ನು ಪ್ರೀತಿಸುತ್ತಿದ್ದೆ. ಅವನೊಂದಿಗೆ ಮದುವೆ ಆಗಿ ಬದುಕಬೇಕು ಎಂದುಕೊಂಡೆ. ಆದು ತನ್ನ ಬದುಕಿನ ಅತ್ಯಂತ ಕೆಟ್ಟ ನಿರ್ಧಾರವಾಗಿತ್ತು ಎಂದಿದ್ದಾರೆ. ಹಾಗೇ ತನ್ನ ವೃತ್ತಿ ಬದುಕು ಹಾಳಾಗುವುದಕ್ಕೆ ಸುಳ್ಳು ಗಾಸಿಪ್‌ಗಳನ್ನು ಹಬ್ಬಿಸಲಾಗಿತ್ತು. ಕಿರಣ್ ರಾಥೋಡ್ ಮದುವೆಯಾಗಿದ್ದಾರೆ. ಆಕೆಗೆ ಮಕ್ಕಳಿದ್ದಾರೆ ಎಂದೆಲ್ಲ ಹಬ್ಬಿದ್ದವು. ಇದರಿಂದಲೂ ಆಫರ್‌ಗಳು ಕಮ್ಮಿಯಾಗಿದ್ದವು ಎಂದಿದ್ದಾರೆ.


Click it and Unblock the Notifications











