ಆಸ್ಕರ್ ಗೆದ್ದ 'ಪ್ಯಾರಸೈಟ್' ಚಿತ್ರದ ಬಗ್ಗೆ ವಿಜಯ್ ಫ್ಯಾನ್ಸ್ ಆರೋಪ!

2020ನೇ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಘೋಷಣೆಯಾಗಿದ್ದು, ದಕ್ಷಿಣ ಕೊರಿಯಾದ 'ಪ್ಯಾರಾಸೈಟ್' ಚಿತ್ರಕ್ಕೆ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಸಿಕ್ಕಿದೆ. ಈ ಚಿತ್ರಕ್ಕೆ ಆಸ್ಕರ್ ಸಿಕ್ಕಿದ ಮೇಲೆ ಭಾರತದಲ್ಲಿ ಈ ಸಿನಿಮಾ ಟ್ರೆಂಡಿಂಗ್ ಆಗಿದೆ. ಅದಕ್ಕೆ ಕಾರಣ ತಮಿಳು ನಟ ವಿಜಯ್ ಅಭಿಮಾನಿಗಳು.

ಪ್ಯಾರಾಸೈಟ್ ಸಿನಿಮಾ ಸ್ವಂತ ಕಥೆಯಲ್ಲ, ವಿಜಯ್ ನಟಿಸಿದ್ದ ಚಿತ್ರದಿಂದ ಸ್ಫೂರ್ತಿ ಪಡೆದುಕೊಂಡಿದೆ ಎಂದು ತಮಿಳು ಫ್ಯಾನ್ಸ್ ಸೋಶಿಯಲ್ ಮೀಡಿಯಾದಲ್ಲಿ ಟೀಕಿಸಿದ್ದಾರೆ.

ಅಷ್ಟಕ್ಕೂ, ವಿಜಯ್ ಫ್ಯಾನ್ಸ್ ಹೇಳುವಂತೆ ಯಾವ ಸಿನಿಮಾದಿಂದ ಪ್ಯಾರಾಸೈಟ್ ಸ್ಫೂರ್ತಿ ಪಡೆದುಕೊಂಡಿದೆ? ಮುಂದೆ ಓದಿ....

ಪ್ಯಾರಾಸೈಟ್ ಗೆ ನಾಲ್ಕು ಆಸ್ಕರ್

ಪ್ಯಾರಾಸೈಟ್ ಗೆ ನಾಲ್ಕು ಆಸ್ಕರ್

ಬಾಂಗ್ ಜೋನ್-ಹೋ ನಿರ್ದೇಶನದ ಸೌತ್ ಕೊರಿಯನ್ ಸಿನಿಮಾ 'ಪ್ಯಾರಾಸೈಟ್' ನಾಲ್ಕು ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಪಡೆದುಕೊಂಡಿದೆ. ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ಸಿನಿಮಾ, ಅತ್ಯುತ್ತಮ ಒರಿಜಿನಲ್ ಚಿತ್ರಕಥೆ ಹಾಗೂ ಅತ್ಯುತ್ತಮ ಅಂತಾರಾಷ್ಟ್ರೀಯ ಫೀಚರ್ ಸಿನಿಮಾ ಎಂಬ ಪ್ರಶಸ್ತಿ ಲಭಿಸಿದೆ. ಆದರೆ, ವಿಜಯ್ ಫ್ಯಾನ್ಸ್ ಇದು ಒರಿಜಿನಲ್ ಕಥೆಯಲ್ಲ ಎಂದು ಆರೋಪಿಸಿದ್ದಾರೆ.

ಮಿನ್ಸಾರ ಕಣ್ಣಾ ಚಿತ್ರದಿಂದ ಸ್ಫೂರ್ತಿ!

ಮಿನ್ಸಾರ ಕಣ್ಣಾ ಚಿತ್ರದಿಂದ ಸ್ಫೂರ್ತಿ!

1999 ರಲ್ಲಿ ವಿಜಯ್ ನಟಿಸಿ ಬಿಡುಗಡೆಯಾಗಿದ್ದ 'ಮಿನ್ಸಾರ ಕಣ್ಣಾ' ಚಿತ್ರದಿಂದ ಪ್ಯಾರಾಸೈಟ್ ಸ್ಫೂರ್ತಿ ಪಡೆದುಕೊಂಡಿದೆ ಎಂದು ವಿಜಯ್ ಫ್ಯಾನ್ಸ್ ಟ್ರೋಲ್ ಮಾಡ್ತಿದ್ದಾರೆ. ಕೆಎಸ್ ರವಿಕುಮಾರ್ ನಿರ್ದೇಶಿಸಿದ್ದ ಈ ಚಿತ್ರದಲ್ಲಿ ವಿಜಯ್ ಮತ್ತು ಮೋನಿಕಾ ನಟಿಸಿದ್ದರು. ಈ ಚಿತ್ರದ ಕಥೆಯನ್ನು ಸೌತ್ ಕೊರಿಯಾ ನಿರ್ದೇಶಕ ಸ್ಫೂರ್ತಿಯಾಗಿಸಿ ಸಿನಿಮಾ ಮಾಡಿದ್ದಾರೆ ಎಂದು ಹೇಳುತ್ತಿದ್ದಾರೆ.

ಪ್ಯಾರಾಸೈಟ್ ಕಥೆಗೂ ವಿಜಯ್ ಚಿತ್ರಕ್ಕೂ ಸಂಬಂಧವಿದೆ!

ಪ್ಯಾರಾಸೈಟ್ ಕಥೆಗೂ ವಿಜಯ್ ಚಿತ್ರಕ್ಕೂ ಸಂಬಂಧವಿದೆ!

ಪ್ಯಾರಾಸೈಟ್ ಹಾಗೂ ವಿಜಯ್ ಅವರ ಮಿನ್ಸಾರ ಕಣ್ಣಾ ಚಿತ್ರಗಳು ನೋಡಿರುವ ತಮಿಳು ಪ್ರೇಕ್ಷಕರು, ಮೊದಲ ಬಂದಿದ್ದು ತಮಿಳಿನಲ್ಲಿ. ಆಮೇಲೆ ಈ ಚಿತ್ರದಿಂದ ಸ್ಪೂರ್ತಿ ಪಡೆದು ಕೊರಿಯನ್ ಸಿನಿಮಾ ಮಾಡಿದ್ದಾರೆ ಎಂದು ಟ್ವಿಟ್ಟರ್ ನಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಒಂದೇ ರೀತಿ ಇದೆ

ಒಂದೇ ರೀತಿ ಇದೆ

''ಈಗ ತಾನೆ ಕೊರಿಯನ್ ಸಿನಿಮಾ ಪ್ಯಾರಾಸೈಟ್ ನೋಡಿದೆ. ನನ್ನ ತಲೆಯಲ್ಲಿ ಹಲವು ಅಂಶಗಳು ಚರ್ಚೆಯಾಗ್ತಿದೆ. ಕೆಲವು ತಿಂಗಳ ಹಿಂದೆ ನೋಡಿದ ಇನ್ನೊಂದು ಸಿನಿಮಾ ನೆನಪಾಗುತ್ತಿದೆ. ಶಾಪ್ ಲಿಫ್ಟರ್. ಈ ಎರಡು ಚಿತ್ರಗಳು ಚೆನ್ನಾಗಿದೆ. ಹಾಗೆ, ತಮಿಳಿನ ಮಿನ್ಸಾರ ಕಣ್ಣಾ ಚಿತ್ರವೂ ಕಣ್ಣ ಮುಂದೆ ಬಂತು. ಇದು ಪ್ಯಾರಾಸೈಟ್ ಚಿತ್ರದ ಕಥೆಯಂತೆ ಇದೆ. ಆದರೆ ಟ್ವಿಸ್ಟ್ ಅಂಡ್ ಟರ್ನ್ಸ್ ನಲ್ಲಿ ವ್ಯತ್ಯಾಸ ಇದೆ'' ಎಂದು ನೆಟ್ಟಿಗರೊಬ್ಬರು ಟ್ವೀಟ್ ಮಾಡಿದ್ದಾರೆ.

More from Filmibeat

English summary
Tamil star Vijay's fans are saying that oscar Winning Parasite movie is inspired by the 1999 Tamil release, Minsara Kanna.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X