Leo Advance Booking: ವಿಜಯ್ ನಟನೆಯ ಲಿಯೋ ಅಡ್ವಾನ್ಸ್ ಬುಕ್ಕಿಂಗ್‌ಗೆ ಉತ್ತಮ ಪ್ರತಿಕ್ರಿಯೆ
ದಳಪತಿ ವಿಜಯ್ ಅಭಿನಯದ ಈ ವರ್ಷದ ಬಹುನಿರೀಕ್ಷಿತ ಸಿನಿಮಾ ಲಿಯೋ ಬಿಡುಗಡೆಗೆ ಸಜ್ಜಾಗುತ್ತಿದೆ. ಈಗಾಗಲೇ ವಿದೇಶದಲ್ಲಿ ಮುಂಗಡ ಟಿಕೆಟ್ ಬುಕಿಂಗ್ ಒಪನ್ ಆಗಿದೆ. ಯುನೈಟೆಡ್ ಕಿಂಗ್‌ಡಂನಲ್ಲಿ ಮುಂಬರುವ ಚಲನಚಿತ್ರ 'ಲಿಯೋ' ಅಡ್ವಾನ್ಸ್ ಬುಕ್ಕಿಂಗ್ ಹೆಚ್ಚಾಗುತ್ತಿದ್ದು, ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ.
ಲಿಯೋ ಚಿತ್ರ ಬಿಡುಗಡೆಗೆ 25 ದಿನಗಳು ಬಾಕಿಯಿದ್ದು, ಟಿಕೆಟ್ ಮಾರಾಟದ ಅಂಕಿಅಂಶಗಳು ಈಗಾಗಲೇ ಸಿನಿಮಾ ಬಗ್ಗೆ ಇರುವ ನಿರೀಕ್ಷೆಗಳನ್ನು ಹೊರಹಾಕಿದೆ. ಯುನೈಟೆಕ್ ಕಿಂಗ್‌ಡಂನಲ್ಲಿ ಸುಮಾರು 28,000 ಕ್ಕೂ ಹೆಚ್ಚು 'ಲಿಯೋ' ಟಿಕೆಟ್‌ಗಳು ಮುಂಗಡವಾಗಿ ಮಾರಾಟವಾಗಿವೆ.

ಲಿಯೋ ಅಡ್ವಾನ್ಸ್ ಬುಕ್ಕಿಂಗ್
ಅಭಿಮಾನಿಗಳು ನಟ ದಳಪತಿ ವಿಜಯ್ ಅವರ ಲಿಯೋ ಸಿನಿಮಾಗಾಗಿ ಕಾತುರದಿಂದ ಕಾಯುತ್ತಿದ್ದು, ಟಿಕೆಟ್‌ಗಳ ಅಡ್ವಾನ್ಸ್ ಬುಕ್ಕಿಂಗ್‌ನಲ್ಲಿ ಈಗಾಗಲೇ ಅಂದಾಜು 3 ಕೋಟಿಗಳ ಒಟ್ಟು ಕಲೆಕ್ಷನ್ ಮಾಡಿದೆ. ಹೀಗಾಗಿ ಸಿನಿಮಾ ಬಗ್ಗೆ ಫ್ಯಾನ್ಸ್‌ನಲ್ಲಿರುವ ಕ್ರೇಜ್ ಕಾಣಿಸುತ್ತಿದೆ. ಚಿತ್ರ ಬಿಡುಗಡೆಯಾದ ನಂತರ ಕಲೆಕ್ಷನ್ ತಾರಕಕ್ಕೆ ಏರುವ ಸಾಧ್ಯತೆಯಿದೆ.
'ಲಿಯೋ' ಚಿತ್ರಕ್ಕಾಗಿ ನಿರೀಕ್ಷೆ ಹೆಚ್ಚುತ್ತಿರುವ ಬೆನ್ನಲೇ ಇತ್ತೀಚೆಗೆ ಹಲವು ಭಾಷೆಗಳಲ್ಲಿ ಲಿಯೋ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಕನ್ನಡ, ತೆಲುಗು, ತಮಿಲು ಮತ್ತು ಹಿಂದಿ ಭಾಷೆಯಲ್ಲಿಯೂ ಪೋಸ್ಟರ್ ರಿಲಿಸ್ ಮಾಡಲಾಗಿದೆ. ಇದು ವಿಜಯ್ ಅವರ ಅಭಿಮಾನಿಗಳಲ್ಲಿ ಉತ್ಸಾಹ ಹೆಚ್ಚು ಮಾಡಿದೆ. ಮೊದಲು ಚಿತ್ರದ ತಮಿಳು ಮತ್ತು ತೆಲುಗು ಪೋಸ್ಟರ್‌ಗಳನ್ನು ಸಹ ಅನಾವರಣಗೊಳಿಸಲಾಗಿತ್ತು. ಆದಾದ ನಂತರ ಕನ್ನಡ ಮತ್ತು ಹಿಂದಿ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಿದೆ ಚಿತ್ರತಂಡ.
ಲಿಯೋ ಹಿಂದಿ ಪೋಸ್ಟರ್‌ನಲ್ಲಿ ಸಂಜಯ್ ದತ್
ಲಿಯೋ ಹಿಂದಿ ಪೋಸ್ಟರ್‌ನಲ್ಲಿ ಬಾಲಿವುಡ್ ನಟ ಸಂಜಯ್ ದತ್ ಕಾಣಿಸಿಕೊಂಡಿದ್ದು, ಟ್ಯಾಗ್‌ಲೈನ್‌ನಲ್ಲಿ 'ಶಾಂತವಾಗಿರಿ ಮತ್ತು ಡೆವಿಲ್‌ನನ್ನು ಎದುರಿಸಿ' ಎಂದು ಘೋಷಿಸಲಾಗಿದೆ. ಪೋಸ್ಟರ್ ನಲ್ಲಿ ನಟ ಸಂಜಯ್ ದತ್ ಅವರ ಕತ್ತನ್ನು ವಿಜಯ್ ಹಿಡಿದುಕೊಂಡಿದ್ದು, ಇಬ್ಬರ ನಡುವಿನ ಪ್ರಬಲ ಪೈಪೋಟಿಯನ್ನು ಸ್ಪಷ್ಟವಾಗಿ ಚಿತ್ರಿಸುತ್ತದೆ.

'ಲಿಯೋ' ಬಿಡುಗಡೆಗೆ ಕ್ಷಣಗಣನೆ
ವಿಜಯ್ ಅಭಿಮಾನಿಗಳು 'ಲಿಯೋ' ಬಿಡುಗಡೆಗೆ ದಿನಗಳನ್ನು ಎಣಿಸುತ್ತಿದ್ದಾರೆ. ಲೋಕೇಶ್ ಕನಕರಾಜ್ ನಿರ್ದೇಶನದ ಈ ಚಿತ್ರವು ಅಕ್ಟೋಬರ್ 19, 2023 ರಂದು ದಸರಾ ಸಂಭ್ರಮ ದುಪ್ಪಟ್ಟು ಮಾಡಲು ವಿಶ್ವದಾದ್ಯಂತ ತೆರೆಗೆ ಬರಲಿದೆ. ಸಿನಿಮಾದಲ್ಲಿ ದಳಪತಿ ವಿಜಯ್ ನಾಯಕನಾಗಿದ್ದು, ಪೂಸಾ ವಸೂಲ್ ಭರವಸೆ ನೀಡಿದೆ.
ತಾರಾಗಣದಲ್ಲಿ ಸಂಜಯ್ ದತ್, ತ್ರಿಶಾ, ಅರ್ಜುನ್ ಸರ್ಜಾ, ಗೌತಮ್ ಮೆನನ್, ಮಿಸ್ಕಿನ್ ಮತ್ತು ಪ್ರಿಯಾ ಆನಂದ್ ಇದ್ದಾರೆ. ಪ್ರತಿಯೊಬ್ಬರೂ ಪ್ರಮುಖ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ ಎನ್ನಲಾಗಿದೆ. ಚಿತ್ರಕಥೆಯಲ್ಲಿಯೂ ನಿರ್ದೇಶಕ ಲೋಕೇಶ್ ಕನಕರಾಜ್ ಕೈ ಹಾಕಿದ್ದು, ಇವರ ಜೊತೆಗೆ ರತ್ನ ಕುಮಾರ್ ಮತ್ತು ದೀರಜ್ ವೈದಿ ಅವರು ಕೆಲಸ ಮಾಡಿದ್ದಾರೆ.
ಲಿಯೋ ಆಡಿಯೊ ಬಿಡುಗಡೆಯನ್ನು ಸೆಪ್ಟೆಂಬರ್ 30 ರಂದು ಚೆನ್ನೈನ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ನಿಗದಿಪಡಿಸಲಾಗಿದೆ. ಸಿನಿಮಾ ಬಿಡುಗಡೆಯ ದಿನಾಂಕ ಸಮೀಪಿಸುತ್ತಿದ್ದಂತೆ, ವಿಶ್ವಾದ್ಯಂತ ವಿಜಯ್ ಅಭಿಮಾನಿಗಳಲ್ಲಿ ಉತ್ಸಾಹ ಮತ್ತು ನಿರೀಕ್ಷೆಯನ್ನು ಹುಟ್ಟುಹಾಕುತ್ತಲೇ ಇದೆ.
ಲಿಯೋ ಒಟಿಟಿ ಬಿಡುಗಡೆ
ವಿಜಯ್ ಅವರ 'ಲಿಯೋ' ಸಿನಿಮಾ 8 ವಾರಗಳ ಥಿಯೇಟ್ರಿಕಲ್ ಬಿಡುಗಡೆ ಬಳಿಕ ಒಟಿಟಿಗೆ ಬಿಡುಗಡೆಯಾಗಲಿದೆ ಎಂಬ ಮಾಹಿತಿಯಿದೆ. ಇತ್ತೀಚಿನ ವರದಿಗಳ ಪ್ರಕಾರ, ಚಿತ್ರವು ಥಿಯೇಟರ್‌ಗಳಲ್ಲಿ 50 ದಿನಗಳ ಪ್ರದರ್ಶನ ಕಾಣಲಿದ್ದು, 8 ವಾರಗಳ ಬಳಿಕ ಒಟಿಟಿಗೆ ಬರಲಿದೆ.


Click it and Unblock the Notifications











