ನನ್ನ ಖಾಸಗಿ ವಿಡಿಯೋ ಲೀಕ್ ಮಾಡಿದ್ದೇ ಆ ವ್ಯಕ್ತಿ ಎಂದು ಕೆಂಡ ಕಾರಿದ ಕಿರಾತಕ ಬೆಡಗಿ..!
ಸಿನಿಮಾ ನಟಿಯರು ಯಾರೇ ಹುಡುಗರ ಜೊತೆ ಸುಳಿದಾಡಿದರೂ ಅಭಿಮಾನಿಗಳು ತಲೆ ಕೆದರಿಕೊಂಡು ಹುಡುಕಾಟ ಶುರುವಿಟ್ಟುಕೊಳ್ಳುತ್ತಾರೆ. ಆ ಹುಡುಗಳ ಕುಲ, ಗೋತ್ರ, ಜನ್ಮ ಜಾಲಾಡೋ ವರೆಗೂ ಅವರಿಗೆ ನೆಮ್ಮದಿಯಿರುವುದಿಲ್ಲ. ಅಂಥಾದ್ದರಲ್ಲಿ ತಮ್ಮ ನೆಚ್ಚಿನ ನಾಯಕಿಯ ಖಾಸಗಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದರೆ ಅಭಿಮಾನಿಗಳ ಎದೆಯೊಡೆಯದಿರುತ್ತಾ..? ಸದ್ಯಕ್ಕೆ ಕಿರಾತಕ ಚಿತ್ರದ ಚೆಲುವೆ ಓವಿಯಾ ಅವರ ವಿಚಾರದಲ್ಲಿ ಇದೇ ಆಗಿದೆ.
ಹೌದು, ಓವಿಯಾ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. Oviya Leaked ಎಂಬ ಹ್ಯಾಶ್ ಟ್ಯಾಗ್ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಕಡಿಮೆ ಒಂದು ವಾರದಿಂದ ಟ್ರೆಂಡಿಂಗ್‌ನಲ್ಲಿದೆ. ಇನ್ನೂ ಹದಿನೇಳು ಸೆಕೆಂಡ್ ಇರುವ ಈ ವಿಡಿಯೋವನ್ನು ನೋಡಿ ಅನೇಕರು ಬೆಚ್ಚಿ ಬಿದ್ದರೆ, ಇನ್ನೂ ಕೆಲವರು ಓವಿಯಾ ಅವರಲ್ಲಿಯೇ ಈ ಕುರಿತು ಪ್ರಶ್ನೆ ಕೇಳಿದ್ದಾರೆ. ವೈರಲ್ ಆದ ವಿಡಿಯೋ ನಿಮ್ಮದೇನಾ ಎಂದಿದ್ದಾರೆ. ಇದಕ್ಕೆ ಓವಿಯಾ ಕೂಡ ಉತ್ತರವನ್ನು ನೀಡಿದ್ದಾರೆ. ನೋಡಿ ಮಜಾ ಮಾಡಿ ಎಂದಿದ್ದಾರೆ. ಮುಂದಿನ ಬಾರಿ ಪೂರ್ತಿ ವಿಡಿಯೋವನ್ನು ಹಂಚಿಕೊಳ್ಳುವುದಾಗಿ ಹೇಳಿದ್ದಾರೆ. ಈ ಮೂಲಕ ಅಭಿಮಾನಿಗಳನ್ನು ಅಚ್ಚರಿಗೆ ದೂಡಿದ್ದಾರೆ.

ಓವಿಯಾ ಅವರ ಈ ಹೇಳಿಕೆಯಿಂದ ಅನೇಕರು ವೈರಲ್ ಆದ ವಿಡಿಯೋ ಓವಿಯಾ ಅವರದ್ದೇ ಎಂದುಕೊಂಡಿದ್ದಾರೆ. ಓವಿಯಾ ಅವರ ಟ್ಯಾಟೂ ಮತ್ತು ವಿಡಿಯೋದಲ್ಲಿ ಕಾಣಿಸುವ ಟ್ಯಾಟೂನ ಹೋಲಿಕೆ ಮಾಡುತ್ತಿದ್ದಾರೆ. ಇನ್ನೂ ಕೆಲವರು ಈಗೀಗ ತಂತ್ರಜ್ಞಾನವನ್ನು ದುರ್ಬಳಕೆ ಮಾಡಿಕೊಳ್ಳುವರ ಸಂಖ್ಯೆ ಹೆಚ್ಚಾಗಿದೆ. ಓವಿಯಾ ಅವರದ್ದು ಎನ್ನಲಾದ ವಿಡಿಯೋ ಇದಕ್ಕೆ ಮತ್ತೊಂದು ಉದಾಹರಣೆ ಎನ್ನುವ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಓವಿಯಾ ಬಗ್ಗೆ ಹಾಗೆಲ್ಲ ಅಪಪ್ರಚಾರ ಮಾಡಬೇಡಿ ಎಂದು ನಟಿಯ ಪರ ಬೆಂಬಲದ ಮಾತುಗಳನ್ನಾಡುತ್ತಿದ್ದಾರೆ. ಇದರ ನಡುವೆ ಓವಿಯಾ ಪೊಲೀಸ್ ಠಾಣೆಯ ಮೆಟ್ಟಿಲನ್ನೇರಿದ್ದಾರೆ. ಖಾಸಗಿ ವಿಡಿಯೋ ಲೀಕ್ ಆಗಲು ಆ ವ್ಯಕ್ತಿಯೇ ಕಾರಣ ಎಂದು ದೂರನ್ನು ನೀಡಿದ್ದಾರೆ.
ಹೌದು, ಕೇರಳದ ತ್ರಿಶೂರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಓವಿಯಾ, ತಮ್ಮ ಮಾಜಿ ಪ್ರಿಯಕರ ತಾರಿಖ್ ವಿರುದ್ಧ ಆರೋಪ ಮಾಡಿದ್ದಾರೆ. ಆ ವ್ಯಕ್ತಿಯ ನಡಾವಳಿಯಿಂದ ಬೇಸತ್ತು ನಾನು ಆತನಿಂದ ಇತ್ತೀಚೆಗೆ ದೂರವಾಗಿದ್ದೆ ಈ ಕಾರಣಕ್ಕೆ ನನ್ನ ವಿರುದ್ದ ಸೇಡು ತೀರಿಸಿಕೊಳ್ಳಲು ತಾರಿಖ್ ಈ ರೀತಿ ಮಾಡಿದ್ದಾನೆ. ವಿಡಿಯೋವನ್ನು ಮಾರ್ಫ್ ಮಾಡಿ ಅದನ್ನು ನನ್ನದೆಂಬಂತೆ ಬಿಂಬಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾನೆ ಈ ಮೂಲಕ ತನ್ನ ಕೋಪ ತೀರಿಸಿಕೊಳ್ಳುತ್ತಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಕೇವಲ ನನ್ನ ವಿಡಿಯೋ ಮಾತ್ರ ಅಲ್ಲ ಹಲವಾರು ಮಹಿಳೆಯರ ವಿಡಿಯೋಗಳನ್ನು ಆತ ಇದೇ ರೀತಿ ಮಾರ್ಫ್ ಮಾಡಿದ್ದಾನೆ ಎನ್ನುವ ಆರೋಪವನ್ನು ಕೂಡ ಓವಿಯಾ ಮಾಡಿದ್ದಾರೆ.
ಇನ್ನೂ ತನ್ನ ಹೆಸರಿಗೆ ಧಕ್ಕೆ ತರುವಂತಹ ಈ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಿಂದ ತೆಗೆದು ಹಾಕಬೇಕೆಂದು ಮನವಿಯನ್ನು ಮಾಡಿದ್ದಾರೆ. ಓವಿಯಾ ಅವರ ಈ ಮನವಿಗೆ ಮನ್ನಣೆಯನ್ನು ನೀಡಿರುವ ಸೈಬರ್ ಕ್ರೈಂ ಪೊಲೀಸರು ವಿಡಿಯೋಗಳನ್ನು ತೆಗೆದು ಹಾಕಿದ್ದಾರೆ. ಉಳಿದಂತೆ ಓವಿಯಾ ಕೈಯಲ್ಲಿ ಸದ್ಯಕ್ಕೆ ಹೇಳಿಕೊಳ್ಳುವಂತಹ ಕೆಲಸ ಇಲ್ಲ. ಇದಕ್ಕೆ ಪುರಾವೆ ಎನ್ನುವಂತೆ ಕಳೆದ ಮೂರ್ನಾಲ್ಕು ವರ್ಷದಲ್ಲಿ ಓವಿಯಾ ಮಾಡಿದ್ದು ಕೇವಲ ಎರಡು ಸಿನಿಮಾ ಮಾತ್ರ. ಸಿನಿಮಾದ ಬದಲು ಇಲ್ಲ-ಸಲ್ಲದ ಮಾತುಗಳನ್ನಾಡುವ ಮೂಲಕವೇ ಪ್ರಚಲಿತದಲ್ಲಿರುವ ಪ್ರಯತ್ನವನ್ನು ಮಾಡುತ್ತಿರುವ ಓವಿಯಾ ಸದ್ಯ ಬ್ಯಾಂಕಾಕ್ ಪ್ರವಾಸದಲ್ಲಿದ್ದಾರೆ. ತಮ್ಮ ಅಭಿಮಾನಿಗಳಿಗಾಗಿ ಬ್ಯಾಂಕಾಕ್‌ನಿಂದ ವಿಡಿಯೋವನ್ನು ಕೂಡ ಹಂಚಿಕೊಂಡಿದ್ದಾರೆ. ಇದಕ್ಕೆ ಅಭಿಮಾನಿಗಳು ಜಾಲಿ..ಜಾಲಿ..ಜಾಲಿ ಎಂದು ಕಾಮೆಂಟ್ ಮಾಡಿದ್ದಾರೆ.


Click it and Unblock the Notifications











