twitter
    For Quick Alerts
    ALLOW NOTIFICATIONS  
    For Daily Alerts

    'ಮಾಸ್ಟರ್' ಕ್ರೇಜ್: ಕೊರೊನಾ ಭಯವಿಲ್ಲದೆ ಮಲ್ಟಿಫ್ಲೆಕ್ಸ್ ಎದುರು ಕ್ಯೂ ನಿಂತ ಜನರು

    |

    ತಮಿಳು ನಟ ವಿಜಯ್ ನಟನೆಯ ಮಾಸ್ಟರ್ ಸಿನಿಮಾ ಸಂಕ್ರಾಂತಿ ಹಬ್ಬದ ಪ್ರಯುಕ್ತ ಜನವರಿ 13 ರಂದು ಬಿಡುಗಡೆಯಾಗುತ್ತಿದೆ. ಈ ಚಿತ್ರದ ಮೇಲೆ ಇಡೀ ಸಿನಿಮಾರಂಗದ ಕಣ್ಣಿದೆ. ಏಕಂದ್ರೆ, ಕೊರೊನಾ ಭೀತಿಯಲ್ಲಿ ಈ ಚಿತ್ರವನ್ನು ಜನ ಹೇಗೆ ಸ್ವೀಕರಿಸುತ್ತಾರೆ, ಚಿತ್ರಮಂದಿರಕ್ಕೆ ಜನ ಬರ್ತಾರಾ, ಬರಲ್ವಾ ಎಂಬ ಲೆಕ್ಕಾಚಾರ ಮಾಡ್ತಿದ್ದಾರೆ.

    ಆದರೆ, 'ಮಾಸ್ಟರ್' ಕ್ರೇಜ್ ನೋಡ್ತಿದ್ರೆ ಕೊರೊನಾ ಇದೆಯಾ? ಎಂಬ ಅನುಮಾನ ಮೂಡ್ತಿದೆ. ಥಿಯೇಟರ್‌ನಲ್ಲಿ ಸಿನಿಮಾ ನೋಡಲು ಫ್ಯಾನ್ಸ್ ಎಷ್ಟರ ಮಟ್ಟಿಗೆ ಕಾಯುತ್ತಿದ್ದಾರೆ ಅಂದ್ರೆ ಕೊರೊನಾನೂ ಇಲ್ಲ, ಶೇಕಡಾ 50ರಷ್ಟು ಮಾತ್ರ ಆಸನ ಭರ್ತಿ ಎಂಬ ಯೋಚನೆಯೂ ಇಲ್ಲದಂತೆ ಕಾಣುತ್ತಿದೆ. ತಮಿಳುನಾಡಿನ ಮಲ್ಟಿಫ್ಲೆಕ್ಸ್ ಚಿತ್ರದ ಮಂದಿರದ ಬಳಿಕ ಜನರು ಟಿಕೆಟ್‌ಗಾಗಿ ಹೇಗೆ ಮುಗಿಬಿದ್ದಿದ್ದಾರೆ ಎಂಬ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮುಂದೆ ಓದಿ...

    ಟಿಕೆಟ್‌ಗಾಗಿ ಕ್ಯೂ ನಿಂತ ಜನ

    ಟಿಕೆಟ್‌ಗಾಗಿ ಕ್ಯೂ ನಿಂತ ಜನ

    ತಮಿಳುನಾಡಿನ ಕೊಯಮತ್ತೂರಿನಲ್ಲಿ ಮೀರಜ್ ಮಲ್ಟಿಫ್ಲೆಕ್ಸ್‌ನಲ್ಲಿ ಮಾಸ್ಟರ್ ಸಿನಿಮಾ ಬಿಡುಗಡೆಯಾಗುತ್ತಿದೆ. ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಅವಕಾಶ ಕೊಟ್ಟಿದ್ದರೂ ಥಿಯೇಟರ್‌ ಬಳಿಕ ನೂರಾರು ಜನರು ಸೇರಿದ್ದಾರೆ. ಆನ್‌ಲೈನ್‌ನಲ್ಲಿ ಟಿಕೆಟ್ ಬುಕ್ಕಿಂಗ್ ಸೋಲ್ಡ್ ಔಟ್ ಆದ ಹಿನ್ನೆಲೆ ಚಿತ್ರಮಂದಿರದ ಬಳಿಕ ಟಿಕೆಟ್‌ಗಾಗಿ ಮುಗಿಬಿದ್ದಿದ್ದಾರೆ. ಈ ಫೋಟೋಗಳನ್ನು ಖ್ಯಾತ ವಿಮರ್ಶಕ ಕೋಮಲ್ ನೆಹ್ತಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

    ಶೇ.100 ಆಸನ ಭರ್ತಿಗೆ ತಮಿಳುನಾಡು ಸರ್ಕಾರದ ಅನುಮತಿ; ವೈದ್ಯರಿಂದ ನಟ ವಿಜಯ್ ಗೆ ಬಹಿರಂಗ ಪತ್ರಶೇ.100 ಆಸನ ಭರ್ತಿಗೆ ತಮಿಳುನಾಡು ಸರ್ಕಾರದ ಅನುಮತಿ; ವೈದ್ಯರಿಂದ ನಟ ವಿಜಯ್ ಗೆ ಬಹಿರಂಗ ಪತ್ರ

    ಕೊರೊನಾ ನಿಯಮ ಇಲ್ಲವೇ ಇಲ್ಲ

    ಕೊರೊನಾ ನಿಯಮ ಇಲ್ಲವೇ ಇಲ್ಲ

    ಮಲ್ಟಿಫ್ಲೆಕ್ಸ್ ಎದುರು ಸಾಮಾಜಿಕ ಅಂತರವೂ ಇಲ್ಲ, ಸರಿಯಾಗಿ ಮಾಸ್ಕ್ ಸಹ ಧರಿಸಿಲ್ಲ. ಗಲ್ಲದ ಮೇಲೆ ಮಾಸ್ಕ್ ಧರಿಸಿದ್ದಾರೆ. ಒಬ್ಬರಿಗೊಬ್ಬರು ಅಂಟಿಕೊಂಡು ಸಾಲಿನಲ್ಲಿ ನಿಂತಿದ್ದಾರೆ. ಮಾಸ್ಟರ್ ಕ್ರೇಜ್ ಮುಂದೆ ಕೊರೊನಾ ವೈರಸ್‌ ಬಗ್ಗೆ ಯಾರೂ ಯೋಚಿಸುತ್ತಿಲ್ಲ, ಯಾವ ಪೊಲೀಸರು ಸಹ ಅಲ್ಲಿ ಕಾಣಿಸಿಕೊಂಡಿಲ್ಲ.

    50 ಪರ್ಸೆಂಟ್ ಅವಕಾಶ

    50 ಪರ್ಸೆಂಟ್ ಅವಕಾಶ

    ತಮಿಳುನಾಡಿನ ಚಿತ್ರಮಂದಿರಗಳಲ್ಲಿ 100 ಪರ್ಸೆಂಟ್ ಆಸನ ಭರ್ತಿಗೆ ಅವಕಾಶ ನೀಡಲಾಗಿತ್ತು. ಕೇಂದ್ರ ಗೃಹ ಇಲಾಖೆ ಆಕ್ಷೇಪಣೆ ಎತ್ತಿದ ಬಳಿಕ ಆದೇಶ ಹಿಂಪಡೆಯಲಾಗಿತ್ತು. ಆದರೂ ಜನರು ಆ ಕುರಿತು ತಲೆ ಕೆಡಿಸಿಕೊಂಡಿಲ್ಲ. ಟಿಕೆಟ್ ಸಿಕ್ಕರೆ ಸಿನಿಮಾ ನೋಡೋದೆ ಎನ್ನುವಂತೆ ನಿರ್ಧರಿಸಿದ್ದಾರೆ.

    ವಿಜಯ್ 'ಮಾಸ್ಟರ್' ಸಿನಿಮಾ ರಿಲೀಸ್ ಗೂ ಮೊದಲೇ ಲೀಕ್; ಶೇರ್ ಮಾಡದಂತೆ ನಿರ್ದೇಶಕರ ಮನವಿವಿಜಯ್ 'ಮಾಸ್ಟರ್' ಸಿನಿಮಾ ರಿಲೀಸ್ ಗೂ ಮೊದಲೇ ಲೀಕ್; ಶೇರ್ ಮಾಡದಂತೆ ನಿರ್ದೇಶಕರ ಮನವಿ

    'ಮಾಸ್ಟರ್' ಗೆಲುವಿಗಾಗಿ ಪ್ರಾರ್ಥನೆ

    'ಮಾಸ್ಟರ್' ಗೆಲುವಿಗಾಗಿ ಪ್ರಾರ್ಥನೆ

    ಮಾಸ್ಟರ್ ಚಿತ್ರಕ್ಕೆ ಎಲ್ಲ ಕಲಾವಿದರು, ಸಿನಿಮಾರಂಗ ಬೆಂಬಲ ನೀಡಿದೆ. ಥಿಯೇಟರ್‌ಗೆ ಜನರ ಬರಲ್ಲ ಎಂಬ ಆತಂಕದಿಂದ ಸಿನಿಮಾಗಳನ್ನು ಬಿಡುಗಡೆ ಮಾಡುತ್ತಿಲ್ಲ. ಮಾಸ್ಟರ್ ಚಿತ್ರಕ್ಕೆ ಹೇಗೆ ರೆಸ್‌ಪಾನ್ಸ್ ಸಿಗಲಿದೆ ಎಂದು ನೋಡಿದ್ಮೇಲೆ ಸ್ಟಾರ್ ನಟರ ಚಿತ್ರಗಳು ತೆರೆಗೆ ಬರುವ ಯೋಚನೆಯಲ್ಲಿದೆ.

    ಕನ್ನಡದಲ್ಲೂ ಮಾಸ್ಟರ್ ತೆರೆಗೆ

    ಕನ್ನಡದಲ್ಲೂ ಮಾಸ್ಟರ್ ತೆರೆಗೆ

    ತಮಿಳು, ತೆಲುಗು, ಹಿಂದಿ ಹಾಗೂ ಕನ್ನಡದಲ್ಲಿ ಮಾಸ್ಟರ್ ಸಿನಿಮಾ ತೆರೆಗೆ ಬರ್ತಿದೆ. ಲೋಕೇಶ್ ಕನಕರಾಜ್ ನಿರ್ದೇಶನದ ಈ ಚಿತ್ರದಲ್ಲಿ ಮಾಳವಿಕಾ ಮೋಹನ್ ನಾಯಕಿಯಾಗಿದ್ದಾರೆ. ತಮಿಳು, ಆಂಧ್ರ, ತೆಲಂಗಾಣ, ಕರ್ನಾಟಕದಲ್ಲೂ ಮಾಸ್ಟರ್ ರಿಲೀಸ್ ಆಗುತ್ತಿದೆ.

    English summary
    People in queue at Miraj multiplex in Coimbatore to buy tickets for tomorrow’s show of ‘Master’.
    Tuesday, January 12, 2021, 13:17
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X