ಮೂರನೇ ಮದುವೆಯಾದ ವನಿತಾಗೆ ಮರುದಿನವೇ ಎದುರಾಯ್ತು ಸಂಕಷ್ಟ!
ಚೆನ್ನೈನಲ್ಲಿ ಶನಿವಾರ ತಮ್ಮ ನಿವಾಸದಲ್ಲಿ ನಡೆದ ಸರಳ ಸಮಾರಂಭದಲ್ಲಿ ನಟಿ ವನಿತಾ ವಿಜಯ್ ಕುಮಾರ್, ವಿಎಕ್ಸ್ಎಫ್ ತಂತ್ರಜ್ಞ ಪೀಟರ್ ಪೌಲ್ ಅವರನ್ನು ಮದುವೆಯಾಗಿದ್ದರು. ಕ್ರಿಶ್ಚಿಯನ್ ಸಂಪ್ರದಾಯದಂತೆ ಇಬ್ಬರೂ ವೈವಾಹಿಕ ಬಂಧನಕ್ಕೆ ಒಳಗಾಗಿದ್ದರು. ವನಿತಾ ಅವರ ಇಬ್ಬರು ಹೆಣ್ಣುಮಕ್ಕಳು ಕೂಡ ಈ ಮದುವೆಯಲ್ಲಿ ಪಾಲ್ಗೊಂಡಿದ್ದರು.
Recommended Video
ಇದಕ್ಕೂ ಮೊದಲು ಎರಡು ಬಾರಿ ಮದುವೆಯಾಗಿದ್ದ ವನಿತಾ, ಇಬ್ಬರಿಂದಲೂ ವಿಚ್ಚೇದನ ಪಡೆದುಕೊಂಡಿದ್ದರು. ಹೀಗಾಗಿ ವನಿತಾಗೆ ಇದು ಮೂರನೇ ಮದುವೆ ಎನ್ನುವುದು ಸದ್ದು ಮಾಡಿತ್ತು. ಆದರೆ ಪೀಟರ್ ಪೌಲ್ ಅವರಿಗೆ ಇದು ಎರಡನೆಯ ಮದುವೆ ಎನ್ನುವುದು ಈಗ ಬಹಿರಂಗವಾಗಿದೆ. ಅದರ ಬೆನ್ನಲ್ಲೇ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಮದುವೆಯ ಖುಷಿಯಲ್ಲಿದ್ದ ಈ ದಂಪತಿ ಕಾನೂನು ಸಮರವೊಂದನ್ನು ಎದುರಿಸುವಂತಾಗಿದೆ. ಮುಂದೆ ಓದಿ...

ವಿಚ್ಚೇದನ ಪಡೆಯದೆ ಮದುವೆ
ಪೀಟರ್ ಪೌಲ್ ಅವರ ಮೊದಲ ಪತ್ನಿ ಎಲಿಜಬೆತ್ ಹೆಲೆನ್, ವಡಪಳಲಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಅದೇನೆಂದರೆ ಪೀಟರ್ ಎರಡನೆಯ ಮದುವೆಯಾಗಬೇಕೆಂದರೆ ಕಾನೂನಿನ ಪ್ರಕಾರ ಅಧಿಕೃತವಾಗಿ ವಿಚ್ಚೇದನ ಪಡೆದಿರಬೇಕು. ಆದರೆ ಪೀಟರ್ ತಮ್ಮಿಂದ ವಿಚ್ಚೇದನವನ್ನೇ ಪಡೆದಿಲ್ಲ ಎನ್ನುವುದು.

ಇಷ್ಟು ತಡವಾಗಿ ಏಕೆ ದೂರು?
ಇಬ್ಬರಿಗೂ ಎರಡು ಮಕ್ಕಳಿದ್ದಾರೆ. ಸುಮಾರು ಏಳು ವರ್ಷಗಳಿಂದ ಪ್ರತ್ಯೇಕವಾಗಿದ್ದೇವೆ ಎಂದು ಹೆಲೆನ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ವನಿತಾ ಮತ್ತು ಪೀಟರ್ ಮದುವೆಯ ಸುದ್ದಿ ಕಳೆದ ಒಂದು ವಾರದಿಂದ ಎಲ್ಲೆಡೆ ಹರಿದಾಡುತ್ತಿದೆ. ಆದರೆ ಹೆಲೆನ್ ಈಗ ಏಕೆ ದೂರು ನೀಡಿದ್ದಾರೆ ಎಂದು ಅನೇಕರು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸಿದ್ದಾರೆ.

ಹಣ ಪೀಕಿಸಲು ತಂತ್ರ
ಇದಕ್ಕೆ ಪ್ರತಿಕ್ರಿಯೆ ನೀಡಿರುವ ವನಿತಾ, ಪೀಟರ್ ಅವರ ಮೊದಲ ಪತ್ನಿ ಹಣದ ವಿಚಾರ ಕೆದಕುತ್ತಿದ್ದಾರೆ. ಒಂದು ಕೋಟಿ ರೂ ನೀಡುವಂತೆ ಬೇಡಿಕೆ ಇರಿಸಿದ್ದಾರೆ. ಆದರೆ ತಮ್ಮಿಬ್ಬರ ಬಳಿ ಅಷ್ಟು ಹಣವಿಲ್ಲ. ಏಳೆಂಟು ವರ್ಷದ ಹಿಂದೆಯೇ ಹೆಲೆನ್ ದೂರವಾಗಿದ್ದಾರೆ. ಸುಲಿಗೆ ಮಾಡುವ ಸಲುವಾಗಿಯೇ ಅವರು ಈ ದೂರು ನೀಡಿದ್ದಾರೆ. ಅದನ್ನು ಪೀಟರ್ ಕಾನೂನಾತ್ಮಕವಾಗಿಯೇ ನಿಭಾಯಿಸಲಿದ್ದಾರೆ ಎಂದು ಹೇಳಿದ್ದಾರೆ.

ದೂರಿನಿಂದ ಆಘಾತ
ಮದುವೆಯ ಬಳಿಕ ನಾನು ಬಹಳ ಖುಷಿಯಾಗಿದ್ದೇನೆ. ಹೆಲೆನ್ ಕಡೆಯಿಂದ ಏನಾದರೂ ಸಮಸ್ಯೆ ಬರಬಹುದು ಎಂದು ನಿರೀಕ್ಷಿಸಿದ್ದೆ. ಆರಂಭದಲ್ಲಿ ಆಘಾತವಾಯಿತು. ಈಗ ಸಾವರಿಸಿಕೊಂಡು ವಾಸ್ತವ ಅರ್ಥಮಾಡಿಕೊಂಡಿದ್ದೇನೆ ಎಂದು ವನಿತಾ ಪ್ರತಿಕ್ರಿಯೆ ನೀಡಿದ್ದಾರೆ.


Click it and Unblock the Notifications











