ಸಂಕಷ್ಟದಲ್ಲಿ ಸೂಪರ್ ಸ್ಟಾರ್ 'ದರ್ಬಾರ್': ರಿಲೀಸ್ ಗೆ ತಡೆ ಕೋರಿ ಕೋರ್ಟ್ ಗೆ ಅರ್ಜಿ
ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಬಹುನಿರೀಕ್ಷೆಯ ದರ್ಬಾರ್ ಚಿತ್ರಕ್ಕೆ ಸಂಕಷ್ಟ ಎದುರಾಗಿದೆ. ಸಿನಿಮಾ ನಿರ್ಮಾಣ ಸಂಸ್ಥೆ ಲೈಕಾ ವಿರುದ್ಧ ಮಲೇಶಿಯ ಮೂಲದ ಎಂಟಟೈನ್ ಮೆಂಟ್ ಸಂಸ್ಥೆ, ಸಿನಿಮಾ ರಿಲೀಸ್ ಗೆ ತಡೆ ಕೋರಿ ಮದ್ರಾಸ್ ಹೈ ಕೋರ್ಟ್ ಮೆಟ್ಟಿಲೇರಿದೆ.
ತಲೈವ ಅಭಿನಯದ ದರ್ಬಾರ್ ಸಿನಿಮಾ ಜನವರಿ 9ಕ್ಕೆ ಅದ್ದೂರಿಯಾಗಿ ತೆರೆಗೆ ಬರಲು ಸಿದ್ಧವಾಗಿತ್ತು. ಈಗ ವಿವಾದದಿಂದ ಸಿನಿಮಾ ರಿಲೀಸ್ ತಡವಾಗುವ ಸಾಧ್ಯತೆ ಇದೆ. ಲೈಕ ನಿರ್ಮಾಣ ಸಂಸ್ಥೆ ಮತ್ತು ಮಲೇಶಿಯಾ ಮೂಲದ ಎಂಟರ್ ಟೈನ್ಮೆಂಟ್ ಸಂಸ್ಥೆ ನಡುವೆ ನಡೆದ ಹಣಕಾಸಿನ ವ್ಯವಹಾರ ದರ್ಬಾರ್ ಸಿನಿಮಾ ಸಂಕಷ್ಟಕ್ಕೆ ಸಿಲುಕುವಂತೆ ಆಗಿದೆ.
ಲೈಕ ಸಂಸ್ಥೆ ನಿರ್ಮಾಣದ 2.0 ಸಿನಿಮಾ ಸಮಯದಲ್ಲಿ ನಡೆದ ಹಣಕಾಸಿನ ವ್ಯವಹಾರ ಇನ್ನು ಬಗೆಹರಿಯದ ಪರಿಣಾಮ ದರ್ಬಾರ್ ಸಿನಿಮಾ ರಿಲೀಸ್ ಗೆ ತೊಡಕಾಗುವ ಸಾಧ್ಯತೆ ಇದೆ. ಲೈಕ ಸಂಸ್ಥೆ 23.70 ಕೋಟಿ ಹಣ ಮರುಪಾವತಿಸಬೇಕಂತೆ. ಹಣ ವಾಪಾಸ್ ಕೊಡದ ಪರಿಣಾಮ ದರ್ಬಾರ್ ಸಿನಿಮಾ ರಿಲೀಸ್ ಗೆ ತಡೆಕೋರಿ ಕೋರ್ಟ್ ಮೆಟ್ಟಿಲೇರಿದೆ.

ದರ್ಬಾರ್ ಸೂಪರ್ ಸ್ಟಾರ್ ಮತ್ತು ನಯನತಾರಾ ಅಭಿನಯದ ಬಹುನಿರೀಕ್ಷೆಯ ಸಿನಿಮಾ. ಈ ಜೋಡಿ ಸುಮಾರು ದಶಕದ ನಂತರ ತೆರೆಮೇಲೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ದರ್ಬಾರ್ ನಿರ್ದೇಶಕ ಎ.ಆರ್ ಮುರುಗದಾಸ್ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಸಿನಿಮಾ. ಚಿತ್ರದಲ್ಲಿ ಬಾಲಿವುಡ್ ಸ್ಟಾರ್ ನಟ ಸುನೀಲ್ ಶೆಟ್ಟಿ ವಿಲನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.


Click it and Unblock the Notifications