ಪೊಲೀಸ್ ಠಾಣೆ ಮೆಟ್ಟಿಲೇರಿದ ಮೇಲೆ ಬಂತು ಬುದ್ದಿ: ಕೊನೆಗೂ ನಟಿ ತ್ರಿಶಾ ಬಳಿ ಕ್ಷಮೆ ಕೇಳಿದ ನಟ ಮನ್ಸೂರ್ ಅಲಿ ಖಾನ್

ಕಳೆದೆರಡು ವಾರಗಳಿಂದ ಭಾರಿ ಸುದ್ದಿಯಲ್ಲಿರುವ ಮನ್ಸೂರ್ ಅಲಿ ಖಾನ್ ಮತ್ತು ನಟಿ ತ್ರಿಶಾ ವಿವಾದ ಪೊಲೀಸ್, ಕೋರ್ಟ್ ಮೆಟ್ಟಿಲೇರಿದೆ. ಇಷ್ಟು ದಿನ ಕ್ಷಮೆ ಕೇಳದೆ ಇದ್ದ ತಮ್ಮ ಅಸಭ್ಯ ಹೇಳಿಕೆಗಳನ್ನು ಸಮರ್ಥಿಸುತ್ತಿದ್ದ ಮನ್ಸೂರ್ ಅಲಿ ಖಾನ್‌ಗೆ ಬುದ್ದಿ ಬಂದಿದೆ. ಕೊನೆಗೂ ನಟಿಯ ಬಳಿ ಕ್ಷಮೆಕೇಳಿದ್ದಾರೆ.

ತಮಿಳು ಚಲನಚಿತ್ರಗಳಲ್ಲಿ ನೆಗಟಿವ್ ಪಾತ್ರಗಳಿಗೆ ಹೆಸರುವಾಸಿಯಾಗಿರುವ ಮನ್ಸೂರ್ ಅಲಿ ಖಾನ್, ಲಿಯೋ ಸಿನಿಮಾದಲ್ಲಿ ತ್ರಿಶಾ ಜೊತೆಗೆ ನಟಿಸಿದ್ದರು. ಈ ಸಿನಿಮಾದಲ್ಲಿ ತ್ರಿಶಾ ಅವರೊಂದಿಗೆ ಬೆಡ್ ರೂಂ ಸೀನ್ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾ ಅಸಭ್ಯವಾಗಿ ಮಾತನಾಡಿದ್ದರು. ಇದಕ್ಕೆ ಚಿತ್ರರಂಗದಿಂದ ಸಾಕಷ್ಟು ಖಂಡನೆ ವ್ಯಕ್ತವಾಗಿತ್ತು. ಜೊತೆಗೆ ಮಹಿಲಾ ಆಯೋಗದಿಂದ ದೂರು ದಾಖಲಾಗಿತ್ತು.

Please forgive me! : Finally Mansoor Ali Khan apologizes to Actress Trisha

ಕಾನೂನು ಕ್ರಮದ ಬಳಿಕ ಎಚ್ಚೆತ್ತ ಮನ್ಸೂರ್ ಅಲಿ ಖಾನ್

ಘಟನೆ ಬಳಿಕ ಮನ್ಸೂರ್ ಅಲಿ ಖಾನ್ ವಿರುದ್ಧ ದೂರು ದಾಖಲಾಗಿ ಪೊಲೀಸರು ಸ್ಟೇಷನ್‌ಗೂ ಕರೆಸಿದ್ದರು. ಹೀಗಾಗಿ ಕಾನೂನು ಕ್ರಮದ ಬಳಿಕ ಮನ್ಸೂರ್ ಅಲಿ ಖಾನ್ ಅವರನ್ನು ತ್ರಿಶಾಗೆ ಕ್ಷಮೆಯಾಚಿಸಿದ್ದಾರೆ. ಅದರಲ್ಲೂ ತಮ್ಮ ಮದುವೆಗೆ ಕರಿಯಿರಿ ಎಂಬುದನ್ನು ಸೂಚ್ಯವಾಗಿ ಹೇಳಿದ್ದಾರೆ. ಇದನ್ನು ಟ್ರೆಂಡ್ ಅನಲಿಸ್ಟ್ ರಮೇಶ್ ಬಾಲ ಹಂಚಿಕೊಂಡಿದ್ದಾರೆ.

ಮನ್ಸೂರ್ ಅಲಿ ಖಾನ್ ಹೇಳಿಕೆಯಲ್ಲಿ "ನನ್ನ ಸಹನಟಿ ತ್ರಿಶಾ, ದಯವಿಟ್ಟು ನನ್ನನ್ನು ಕ್ಷಮಿಸಿ! ಮಂಗಳಕರ ವೈವಾಹಿಕ ವಿಧಿಯಲ್ಲಿ ತೆಂಗಿನಕಾಯಿಯ ತಟ್ಟೆಯಲ್ಲಿ ಇರುವ ನಿಮ್ಮ ಮಾಂಗಲ್ಯವನ್ನು ಆಶೀರ್ವದಿಸುವ ಭಾಗ್ಯವನ್ನು ದೇವರು ನನಗೆ ಅನುಗ್ರಹಿಸಲಿ! ಆಮೆನ್. ಇಂತಿ ಮನ್ಸೂರ್ ಅಲಿ ಖಾನ್" ಎಂದಿದ್ದಾರೆ.

Please forgive me! : Finally Mansoor Ali Khan apologizes to Actress Trisha


ಪ್ರಕರಣ ವಿವರ

ತಮಿಳು ನಟ ಮನ್ಸೂರ್ ಅಲಿ ಖಾನ್, ತ್ರಿಶಾ ವಿರುದ್ಧ ಅವಹೇಳನಕಾರಿ ಮತ್ತು ಅಸಹ್ಯಕರ ಹೇಳಿಕೆಗಳನ್ನು ನೀಡಿದ ಆರೋಪದ ಮೇಲೆ ರಾಷ್ಟ್ರೀಯ ಮಹಿಳಾ ಆಯೋಗವು ನಟನ ವಿವಾದಾತ್ಮಕ ವೈರಲ್ ವೀಡಿಯೊ ಬಗ್ಗೆ ಪೊಲೀಸ್ ದೂರು ದಾಖಲಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಮನ್ಸೂರ್ ಚೆನ್ನೈನ ಥೌಸಂಡ್ ಲೈಟ್‌ನಲ್ಲಿರುವ ಎಲ್ಲಾ ಮಹಿಳಾ ಪೊಲೀಸ್ ಠಾಣೆಗೆ ಬಂದು ಪೊಲೀಸರ ಮುಂದೆ ಹಾಜರಾಗಿದ್ದರು.

ಇನ್ನು, ಪ್ರಕರಣದಲ್ಲಿ ಪೊಲೀಸ್ ಠಾಣೆಗೆ ಹಾಜರಾಗುವ ಮುನ್ನ ತನಗೆ ಆರೋಗ್ಯ ಸಮಸ್ಯೆಯಿದೆ. ಪೊಲಿಸ್ ಠಾಣೆಗೆ ಬರಲು ಆಗುವುದಿಲ್ಲ ಎಂದು ನಾಟಕವಾಡಿದ್ದರು. ಸೆಷನ್ಸ್ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಅರ್ಜಿಯನ್ನೂ ಸಲ್ಲಿಸಿದ್ದರು. ಆದರೆ, ನಿರೀಕ್ಷಣಾ ಜಾಮೀನು ಅರ್ಜಿಯಲ್ಲಿನ ಲೋಪಗಳನ್ನು ಪರಿಗಣಿಸಿ ನ್ಯಾಯಾಲಯ ಛೀಮಾರಿ ಹಾಕಿತ್ತು. ಬಳಿಕ ಅವರು ಜಾಮೀನು ಅರ್ಜಿ ವಾಪಸ್ ಪಡೆದಿದ್ದರು.

ಲೋಕೇಶ್ ಕನಕರಾಜ್ ನಿರ್ದೇಶನದ ಬ್ಲಾಕ್‌ಬಸ್ಟರ್ ಚಲನಚಿತ್ರ ಲಿಯೋದಲ್ಲಿ ನಟ ವಿಜಯ್ ಮತ್ತು ತ್ರಿಶಾ ನಟಿಸಿದ್ದಾರೆ. ಇದರಲ್ಲಿ ಖಳನಾಯಕನಾಗಿರುವ ಮನ್ಸೂರ್ ಅಲಿ ಖಾನ್, "ನಾನು ತ್ರಿಷಾ ಜೊತೆ ನಟಿಸುತ್ತಿದ್ದೇನೆ ಎಂದು ಕೇಳಿದಾಗ, ಚಿತ್ರದಲ್ಲಿ ಬೆಡ್ ರೂಂ ದೃಶ್ಯವಿದೆ ಎಂದು ನಾನು ಭಾವಿಸಿದೆ. ನಾನು ನನ್ನ ಹಿಂದಿನ ಚಲನಚಿತ್ರಗಳಲ್ಲಿ ಇತರ ನಟಿಯರನ್ನು ಮಾಡಿದಂತೆಯೇ ನಾನು ಅವಳನ್ನು ಬೆಡ್‌ ರೂಂಗೆ ಎತ್ತಿಕೊಂಡು ಹೋಗುತ್ತೆನೆ. ನಾನು ಹಲವಾರು ಅತ್ಯಾಚಾರದ ದೃಶ್ಯಗಳನ್ನು ಮಾಡಿದ್ದೇನೆ. ಇದು ನನಗೆ ಹೊಸದಲ್ಲ. ಆದರೆ ಈ ಸಿನಿಮಾದ ಕಾಶ್ಮೀರದಲ್ಲಿ ಚಿತ್ರೀಕರಣದ ಸಮಯದಲ್ಲಿ ಸೆಟ್‌ಗಳಲ್ಲಿ ತ್ರಿಶಾ ಅವರನ್ನು ನನಗೆ ತೋರಿಸಲಿಲ್ಲ" ಎಂದು ಅಸಭ್ಯವಾಗಿ ಮಾತನಾಡಿದ್ದರು.

More from Filmibeat

English summary
Finally Mansoor Ali Khan apologizes to Trisha.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X