ಸೂಪರ್ ಸ್ಟಾರ್ ರಜನಿ ಹುಟ್ಟುಹಬ್ಬಕ್ಕೆ ಶುಭಕೋರಿದ ಪ್ರಧಾನಿ ನರೇಂದ್ರ ಮೋದಿ
ಸೂಪರ್ ಸ್ಟಾರ್ ರಜನಿಕಾಂತ್ ಇಂದು (ಡಿಸೆಂಬರ್ 12) 70ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ತಮಿಳುನಾಡು ತಲೈವಾಗೆ ದೇಶದ ಪ್ರಧಾನಿ ನರೇಂದ್ರ ಮೋದಿ ಟ್ವಿಟ್ಟರ್ ಮೂಲಕ ಶುಭಕೋರಿದ್ದಾರೆ.
''ಪ್ರೀತಿಯ ರಜನಿಕಾಂತ್ ಅವರೇ, ನಿಮ್ಮ ಜನ್ಮದಿನಕ್ಕೆ ಹುಟ್ಟುಹಬ್ಬದ ಶುಭಾಶಯಗಳು. ನಿಮಗೆ ದೀರ್ಘ ಆರೋಗ್ಯ ಸಿಗಲಿ'' ಎಂದು ವಿಶ್ ಮಾಡಿದ್ದಾರೆ.
ರಜನಿ ಬರ್ತಡೇಗೆ ಮೋದಿ ವಿಶ್ ಮಾಡಿರುವುದನ್ನು ನೋಡಿದ ತಲೈವಾ ಅಭಿಮಾನಿಗಳು ಖುಷಿಯಾಗಿದ್ದಾರೆ. ಚೆನ್ನೈನಲ್ಲಿರುವ ರಜನಿ ನಿವಾಸದ ಎದುರು ನೂರಾರು ಅಭಿಮಾನಿಗಳು ಜಮಾಯಿಸಿದ್ದು, ತಮ್ಮ ಬಾಸ್‌ಗೆ ವಿಶ್ ಮಾಡಲು ಕಾಯುತ್ತಿದ್ದಾರೆ.

ಅಂದ್ಹಾಗೆ, ರಜನಿಕಾಂತ್ ರಾಜಕೀಯ ಪ್ರವೇಶ ಖಚಿತಪಡಿಸಿದ್ದಾರೆ. ಡಿಸೆಂಬರ್ 31 ರಂದು ಅಧಿಕೃತವಾಗಿ ತಮ್ಮ ರಾಜಕೀಯ ಪಕ್ಷ ಘೋಷಣೆ ಮಾಡುವುದಾಗಿ ಘೋಷಣೆ ಮಾಡಿಸಿದ್ದಾರೆ. ಮುಂಬರುವ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ರಜನಿ ಪಕ್ಷದ ಅಭ್ಯರ್ಥಿಗಳು ಸ್ಪರ್ಧೆ ಮಾಡಲಿದ್ದಾರೆ.
ಇದಕ್ಕೂ ಮುಂಚೆ 2017ರಲ್ಲಿ ರಜನಿಕಾಂತ್ ರಾಜಕೀಯ ಪ್ರವೇಶ ಮಾಡುವುದಾಗಿ ಹೇಳಿದ್ದರು. ಆದ್ರೆ, ಮೂರು ವರ್ಷ ಆದರೂ ತಮ್ಮ ಪಕ್ಷ ಘೋಷಿಸಿರಲಿಲ್ಲ. ಇದು ಹಲವು ಅನುಮಾನಗಳಿಗೆ ಕಾರಣ ಆಗಿತ್ತು. ರಜನಿ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ರಾಜಕೀಯ ಪ್ರವೇಶ ಕಷ್ಟ ಎನ್ನಲಾಗಿತ್ತು. ಅಂತಿಮವಾಗಿ ಸ್ವತಃ ರಜನಿಕಾಂತ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಹೊಸ ವರ್ಷದಿಂದ ತಾವು ಸಂಪೂರ್ಣವಾಗಿ ರಾಜಕೀಯ ಕಾರ್ಯಗಳಲ್ಲಿ ತೊಡಗಿಕೊಳ್ಳುತ್ತೇನೆ ಎಂದಿದ್ದಾರೆ.


Click it and Unblock the Notifications











