For Quick Alerts
  ALLOW NOTIFICATIONS  
  For Daily Alerts

  ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ: ಶಂಕರ್ ಅಳಿಯನ ವಿಚಾರಣೆ

  |

  'ಶಿವಾಜಿ, 'ರೋಬೊ', 'ಬಾಯ್ಸ್', 'ಇಂಡಿಯನ್' ಇನ್ನೂ ಹಲವು ಸೂಪರ್-ಡೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ತಮಿಳಿನ ಸಿನಿಮಾ ನಿರ್ದೇಶಕ ಎಸ್.ಶಂಕರ್ ಅಳಿಯನನ್ನು ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ವಿಚಾರಣೆ ನಡೆಸಲಾಗುತ್ತಿದೆ.

  ಕ್ರಿಕೆಟ್ ತರಬೇತಿ ಕಾರ್ಯಾಗಾರದ ಸಮಯದಲ್ಲಿ ಕೋಚ್ ತಾಮರೈ ಕಣ್ಣನ್ ವಿರುದ್ಧ 16 ವರ್ಷದ ಆಟಗಾರ್ತಿಯೊಬ್ಬರು ಕ್ರಿಕೆಟ್ ಬೋರ್ಡ್‌ಗೆ ದೂರು ನೀಡಿದ್ದಾರೆ. ದೂರನ್ನು ಗಂಭೀರವಾಗಿ ಪರಿಗಣಿಸದ ಕ್ರಿಕೆಟ್ ಕ್ಲಬ್ ಸದಸ್ಯರು, ಕೋಚ್‌ ಜೊತೆ ವಿವಾದ ಬೇಡೆಂದು ಹೇಳಿ ಕಳಿಸಿದ್ದಾರೆ.

  ಆಗ ಬಾಲಕಿಯು ಮಹಿಳಾ ಕಲ್ಯಾಣ ಇಲಾಖೆಗೆ ದೂರು ನೀಡಿದ್ದಾಳೆ. ಮಹಿಳಾ ಕಲ್ಯಾಣ ಇಲಾಖೆಯು ಘಟನೆ ಬಗ್ಗೆ ಮೆಟ್ಟುಪಾಳಯಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ಮುಖ್ಯ ಕೋಚ್ ತಾಮರೈ ಕಣ್ಣನ್, ಸಹ ಕೋಚ್ ಜಯಕುಮಾರ್, ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ದಾಮೋದರನ್ (ರೋಹಿತ್ ತಂದೆ), ಕಾರ್ಯದರ್ಶಿ ವೆಂಕಟ್ ಇನ್ನೂ ಕೆಲವರ ವಿರುದ್ಧ ದೂರು ದಾಖಲಿಸಲಾಗಿದೆ. ಕ್ರಿಕೆಟ್ ತಂಡದ ನಾಯಕನಾಗಿರುವ ರೋಹಿತ್ (ಶಂಕರ್ ಅಳಿಯ)ನ ಹೆಸರನ್ನೂ ದೂರಿನಲ್ಲಿ ಸೇರ್ಪಡೆಗೊಳಿಸಲಾಗಿದ್ದು, ಎಲ್ಲರ ವಿರುದ್ಧ ಪೋಕ್ಸೊ ಪ್ರಕರಣದ ದಾಖಲಿಸಲಾಗಿದೆ.

  ರೋಹಿತ್ ದಾಮೋದರನ್ ಪುದುಚೆರಿ ಕ್ರಿಕೆಟ್ ಅಸೋಸಿಯೇಷನ್‌ನ ಮಾಲೀಕ ಹಾಗೂ ಮಧುರೈ ಪ್ಯಾಂಥರ್ಸ್ ಕ್ರಿಕೆಟ್ ತಂಡದ ನಾಯಕ. ಈ ತಂಡವು ತಮಿಳುನಾಡು ಕ್ರಿಕೆಟ್ ಲೀಗ್‌ನಲ್ಲಿ ಆಡುವ ಕ್ರಿಕೆಟ್ ತಂಡವಾಗಿದೆ.

  ರೋಹಿತ್ ದಾಮೋದರನ್ ಇದೇ ವರ್ಷ ಜೂನ್ ತಿಂಗಳಲ್ಲಿ ನಿರ್ದೇಶಕ ಶಂಕರ್ ಅವರ ಜೇಷ್ಠ ಪುತ್ರಿ ಐಶ್ವರ್ಯಾ ಅವರನ್ನು ಚೆನ್ನೈನಲ್ಲಿ ಅದ್ಧೂರಿ ಸಮಾರಂಭದಲ್ಲಿ ವಿವಾಹವಾಗಿದ್ದಾರೆ. ವಿವಾಹ ಸಮಾರಂಭಕ್ಕೆ ತಮಿಳುನಾಡು ಸಿಎಂ ಸ್ಟಾಲಿನ್, ಅವರ ಪುತ್ರ ಉದಯನಿಧಿ ಸ್ಟಾಲಿನ್ ಇನ್ನೂ ಹಲವು ಗಣ್ಯಾತಿಗಣ್ಯರು ಆಗಮಿಸಿದ್ದರು.

  ರೋಹಿತ್, ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿಲ್ಲ ಆದರೆ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸಿದರು ಎಂಬ ಆರೋಪ ಅವರ ಮೇಲೆ ಬಂದಿದೆ.

  English summary
  POCSO case registered against Tamil ace director Shankar's son in law Rohit Damodaran and few others. Mettupalayam police investigating the case.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X