ಮೊದಲ ದಿನ ಬ್ರಹ್ಮಾಸ್ತ್ರಕ್ಕಿಂತ ಹೆಚ್ಚು ಗಳಿಸಿದ ಪೊನ್ನಿಯನ್ ಸೆಲ್ವನ್; ಹಳೆ ದಾಖಲೆಗಳೆಲ್ಲ ಪೀಸ್ ಪೀಸ್!
ಮಣಿರತ್ನಂ ನಿರ್ದೇಶನದ ಪೊನ್ನಿಯನ್ ಸೆಲ್ವನ್ ನಿನ್ನೆಯಷ್ಟೇ ( ಸೆಪ್ಟೆಂಬರ್ 30 ) ವಿಶ್ವದಾದ್ಯಂತ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗಿದೆ. ತಮಿಳು ಮಾತ್ರವಲ್ಲದೆ ಕನ್ನಡ, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿಯೂ ಡಬ್ ಆಗಿ ಬಿಡುಗಡೆಯಾಗಿರುವ ಪೊನ್ನಿಯನ್ ಸೆಲ್ವನ್ ಪ್ಯಾನ್ ಇಂಡಿಯಾ ಸಿನಿಮಾ ಎನಿಸಿಕೊಂಡಿದೆ.
ಹೀಗೆ ಪ್ಯಾನ್ ಇಂಡಿಯಾ ಸಿನಿಮಾ ಎಂದು ಕರೆಸಿಕೊಂಡಿದ್ದರೂ ಸಹ ಪೊನ್ನಿಯಿನ್ ಸೆಲ್ವನ್ ತಮಿಳು ಹೊರತುಪಡಿಸಿ ಉಳಿದ ಭಾಷೆಗಳಲ್ಲಿ ಹೆಚ್ಚೇನೂ ಸದ್ದು ಮಾಡುತ್ತಿಲ್ಲ. ಬಿಡುಗಡೆಯಾದ ದಿನ ಕೆಲವರು ಚಿತ್ರ ಸೂಪರ್ ಎಂದು ಹೊಗಳಿದರೆ ಇನ್ನೂ ಕೆಲವರು ಚಿತ್ರ ಅಷ್ಟಕ್ಕಷ್ಟೇ ಎಂದರು. ಹೀಗೆ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡ ಪೊನ್ನಿಯನ್ ಸೆಲ್ವನ್ ಮೊದಲನೇ ದಿನ ಎಷ್ಟು ಕಲೆಕ್ಷನ್ ಮಾಡಬಹುದು ಎಂಬ ಕುತೂಹಲವಿತ್ತು. ಆ ಕುತೂಹಲಕ್ಕೆ ಇದೀಗ ಲೈಕಾ ಪ್ರೊಡಕ್ಷನ್ಸ್ ಉತ್ತರಿಸಿದ್ದು ಪೊನ್ನಿಯನ್ ಸೆಲ್ವನ್ ಮೊದಲನೇ ದಿನ ವಿಶ್ವದಾದ್ಯಂತ 80 ಕೋಟಿ ರೂಪಾಯಿಗಳನ್ನು ಗಳಿಸಿದೆ ಎಂದು ವಿಶೇಷ ಪೋಸ್ಟರ್ ಒಂದನ್ನು ಹಂಚಿಕೊಂಡಿದೆ ಹಾಗೂ ಇದರಲ್ಲಿ ತಮಿಳು ಸಿನಿಮಾವೊಂದಕ್ಕೆ ಸಿಕ್ಕಿರುವ ಅತಿ ದೊಡ್ಡ ಓಪನಿಂಗ್ ಎಂದೂ ಸಹ ಚಿತ್ರತಂಡ ಕರೆದುಕೊಂಡಿದೆ.

ಹೀಗೆ ಮೊದಲ ದಿನ 80 ಕೋಟಿ ಗಳಿಸಿರುವ ಪೊನ್ನಿಯನ್ ಸೆಲ್ವನ್ ಮೊದಲನೇ ದಿನದ ಕಲೆಕ್ಷನ್ ವಿಚಾರದಲ್ಲಿ ಬ್ರಹ್ಮಾಸ್ತ್ರ ಚಿತ್ರವನ್ನು ಹಿಂದಿಕ್ಕಿದೆ. ಕಳೆದ ತಿಂಗಳಷ್ಟೇ ಬಿಡುಗಡೆಯಾಗಿದ್ದ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ನಟನೆಯ ಬ್ರಹ್ಮಾಸ್ತ್ರ ಚಿತ್ರ ಮೊದಲನೇ ದಿನ ವಿಶ್ವದಾದ್ಯಂತ 75 ಕೋಟಿ ಗಳಿಕೆ ಮಾಡಿತ್ತು. ಹೀಗೆ ಬ್ರಹ್ಮಾಸ್ತ್ರ ಚಿತ್ರದ ಕಲೆಕ್ಷನ್ ಹಿಂದಿಕ್ಕಿರುವ ಪೊನ್ನಿಯನ್ ಸೆಲ್ವನ್ ತಮಿಳಿನ ಎಲ್ಲಾ ಚಿತ್ರಗಳ ಕಲೆಕ್ಷನ್ ದಾಖಲೆಯನ್ನು ಸರಿಗಟ್ಟಿದೆ.


Click it and Unblock the Notifications











