ಪೊನ್ನಿಯಿನ್ ಸೆಲ್ವನ್ ಟೀಮ್ ಸೂಪರ್ ಫಾಸ್ಟ್ ವರ್ಕ್; ಪಾರ್ಟ್ 2 ಆಡಿಯೊ, ಟ್ರೈಲರ್ ಬಿಡುಗಡೆಗೆ ಡೇಟ್ ಫಿಕ್ಸ್
ಕಳೆದ ವರ್ಷ ಕಾಂತಾರ ಚಿತ್ರ ಬಿಡುಗಡೆಗೊಂಡಿದ್ದ ದಿನವೇ ( ಸೆಪ್ಟೆಂಬರ್ 30 ) ತಮಿಳಿನ ಬಿಗ್ ಬಜೆಟ್ ಚಿತ್ರ ಮಣಿರತ್ನಂ ಅವರ ದೃಶ್ಯಕಾವ್ಯ ಪೊನ್ನಿಯಿನ್ ಸೆಲ್ವನ್ ಕೂಡ ಬಿಡುಗಡೆಯಾಗಿತ್ತು. ತಮಿಳು ಮಾತ್ರವಲ್ಲದೇ ಕನ್ನಡ, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿಯೂ ಸಹ ಚಿತ್ರ ಡಬ್ ಆಗಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಿತ್ತು.
ಎಲ್ಲಾ ಭಾಷೆಗಳೂ ಸೇರಿದಂತೆ ವಿಶ್ವದಾದ್ಯಂತದ 490+ ಕೋಟಿ ಗಳಿಸಿದ ಪೊನ್ನಿಯಿನ್ ಸೆಲ್ವನ್ ಪಾರ್ಟ್ 1 ಸಿನಿಮಾ ತಮಿಳುನಾಡಿನ ನೂತನ ಇಂಡಸ್ಟ್ರಿ ಹಿಟ್ ಆಗಿ ಹೊರಹೊಮ್ಮಿತ್ತು. ಹೀಗೆ ಮೊದಲ ಚಿತ್ರ ದಿಗ್ವಿಜಯ ಸಾಧಿಸಿದ ಬೆನ್ನಲ್ಲೇ ಚಿತ್ರತಂಡ ತಡ ಮಾಡದೇ ಪೊನ್ನಿಯಿನ್ ಸೆಲ್ವನ್ ಪಾರ್ಟ್ 2ರ ಚಿತ್ರೀಕರಣವನ್ನು ಮುಂದುವರಿಸಿ ಇದೀಗ ಬಿಡುಗಡೆಗೆ ಸಜ್ಜಾಗಿದೆ.

ಹೌದು, ಪೊನ್ನಿಯಿನ್ ಸೆಲ್ವನ್ ಚಿತ್ರತಂಡ ವೇಗವಾಗಿ ಕೆಲಸಗಳನ್ನು ಮುಗಿಸಿದ್ದು, ಇದೀಗ ಚಿತ್ರದ ಹಾಡುಗಳ ರೆಕಾರ್ಡಿಂಗ್ ಕಾರ್ಯ ಸಹ ಮುಗಿದಿದೆ. ಈ ವಿಷಯವನ್ನು ಸಂಗೀಯ ಮಾಂತ್ರಿಕ ಎ ಆರ್ ರಹಮಾನ್ ತಮ್ಮ ಅಧಿಕೃತ ಟ್ವಿಟರ್ ಖಾತೆಯ ಮೂಲಕ ತಿಳಿಸಿದ್ದು, ವಿವಿಧ ಹಿನ್ನೆಲೆ ಗಾಯಕರ ಜತೆ ರೆಕಾರ್ಡಿಂಗ್ ಮಾಡುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಈ ವಿಡಿಯೊದಲ್ಲಿಯೇ ಚಿತ್ರದ ಹಾಡುಗಳು ಹಾಗೂ ಟ್ರೈಲರ್ ಬಿಡುಗಡೆ ಯಾವಾಗ ಬಿಡುಗಡೆಯಾಗಲಿದೆ ಎಂಬುದನ್ನು ಎ ಆರ್ ರಹಮಾನ್ ತಿಳಿಸಿದ್ದಾರೆ. ಚೆನೈನ ಜವಹರಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಇದೇ ಮಾರ್ಚ್ 29ರಂದು ಪೊನ್ನಿಯಿನ್ ಸೆಲ್ವನ್ ಪಾರ್ಟ್ 2ನ ಮ್ಯೂಸಿಕ್ ಹಾಗೂ ಟ್ರೈಲರ್ ಲಾಂಚ್ ಕಾರ್ಯಕ್ರಮ ಜರುಗಲಿದೆ ಎಂದು ಪ್ರಕಟಿಸಿದ್ದಾರೆ.
ಮೊದಲ ಭಾಗದಲ್ಲಿ ಹಾಡುಗಳು ಹಾಗೂ ಬ್ಯಾಕ್ ಗ್ರೌಂಡ್ ಮ್ಯೂಸಿಕ್ ನಿಂದ ಸದ್ದು ಮಾಡಿದ್ದ ಎ ಆರ್ ರಹಮಾನ್ ಇದೀಗ ಎರಡನೇ ಭಾಗದಲ್ಲಿಯೂ ಸಹ ಅದೇ ರೀತಿ ಸದ್ದು ಮಾಡುವ ಭರವಸೆಯನ್ನು ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ 'ಅಗ ನಗ' ಎಂಬ ಹಾಡಿನ ಮೂಲಕ ಮೂಡಿಸಿದ್ದರು. ಈ ಹಾಡಿನ ಕನ್ನಡ ವರ್ಷನ್ 'ಕಿರುನಗೆ' ಸಹ ಹಿಟ್ ಆಗಿದ್ದು, ಹಾಡು ಕೇಳಿದವರು ಫಿದಾ ಆಗಿ ಗುನುಗುತ್ತಿದ್ದಾರೆ.


Click it and Unblock the Notifications











