ಫಸ್ಟ್‌ಡೇ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದ 'ಪೊನ್ನಿಯಿನ್ ಸೆಲ್ವನ್- 2'; 'ಥುನಿವು' - 'ವಾರಿಸು' ದಾಖಲೆ ಉಡೀಸ್

ಮಣಿರತ್ನಂ ನಿರ್ದೇಶನದ 'ಪೊನ್ನಿಯಿನ್ ಸೆಲ್ವನ್'- 2 ಸಿನಿಮಾ ಭರ್ಜರಿ ಓಪನಿಂಗ್ ಪಡೆದು ಮುನ್ನುಗ್ಗುತ್ತಿದೆ. ಪ್ರೀಕ್ವೆಲ್‌ಗಿಂತ ಸೀಕ್ವೆಲ್‌ಗೆ ಪ್ರೇಕ್ಷಕರಿಗೆ ಹೆಚ್ಚು ಇಷ್ಟವಾಗಿದೆ. ತಮಿಳು ಪ್ರೇಕ್ಷಕರಂತೂ ಚಿತ್ರವನ್ನು ಅಪ್ಪಿಕೊಂಡಿದ್ದು ಸಿನಿಮಾ ತಮಿಳುನಾಡಿನಲ್ಲಿ ದೊಡ್ಡಮಟ್ಟದಲ್ಲಿ ಸದ್ದು ಮಾಡುವ ಸುಳಿವು ಸಿಕ್ಕಿದೆ. ಮಣಿರತ್ನಂ ಟೇಕಿಂಗ್, ವಿಕ್ರಂ, ಐಶ್ವರ್ಯ ರೈ, ಕಾರ್ತಿ, ತ್ರಿಷಾ, ಜಯಂ ರವಿ ಅಭಿನಯಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಾರೆ.

ತಮಿಳು ಪ್ರೇಕ್ಷಕರಿಗೆ ಇಷ್ಟವಾಗಿರುವ ಸಿನಿಮಾ ಪರಭಾಷಾ ಪ್ರೇಕ್ಷಕರಿಗೆ ಅಷ್ಟಾಗಿ ರುಚಿಸುತ್ತಿಲ್ಲ. ಇನ್ನು ರಾಜಮೌಳಿ 'ಬಾಹುಬಲಿ' ಚಿತ್ರವನ್ನು ತಲೆಯಲ್ಲಿ ಇಟ್ಟುಕೊಂಡು ನೋಡುವವರಿಗೆ ಮಣಿರತ್ನಂ ದೃಶ್ಯಕಾವ್ಯ ಇಷ್ಟವಾಗದೇ ಇರಬಹುದು. ಅದೆಲ್ಲಾ ಏನೇ ಇದ್ದರೂ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮೊದಲ ದಿನವೇ ಸಖತ್ ಸದ್ದು ಮಾಡ್ತಿದೆ. ಮೊದಲ ದಿನದ ಗಳಿಕೆಯಲ್ಲಿ ಈ ವರ್ಷ ಎಲ್ಲಾ ತಮಿಳು ಸಿನಿಮಾಗಳ ದಾಖಲೆ ಮೀರಿ 'ಪೊನ್ನಿಯಿನ್ ಸೆಲ್ವನ್'- 2 ಮೊದಲ ಸ್ಥಾನಕ್ಕೇರಿದೆ.

Ponniyin Selvan 2 BoxOffice collection: Mani Ratnams film Beats Ajiths Thunivu on Day 1

ಕಳೆದ ವರ್ಷ ಬಿಡುಗಡೆಯಾಗಿದ್ದ ಸರಣಿಯ ಮೊದಲ ಸಿನಿಮಾ 500 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿತ್ತು. ಆದರೆ ತಮಿಳುನಾಡಿನಲ್ಲಿ ಅತ್ಯಧಿಕ ಗಳಿಕೆ ಕಂಡಿದ್ದ ಸಿನಿಮಾ ಹೊರ ರಾಜ್ಯಗಳಲ್ಲಿ ಸದ್ದು ಮಾಡಲಿಲ್ಲ. ಪ್ಯಾನ್ ಇಂಡಿಯಾ ಸಕ್ಸಸ್ ಸಿಗಲಿಲ್ಲ. ಆದರೂ ಈ ಕೂಡ ಈ ಚಿತ್ರವನ್ನು 5 ಭಾಷೆಗಳಲ್ಲಿ ರಿಲೀಸ್ ಮಾಡಲಾಗಿದೆ. ಮೊದಲ ಭಾಗ ಪ್ರೇಕ್ಷಕರ ನಿರೀಕ್ಷೆ ತಲುಪದ ಕಾರಣ 2ನೇ ಭಾಗದ ಬಗ್ಗೆ ಅಷ್ಟಾಗಿ ನಿರೀಕ್ಷೆ ಇರಲಿಲ್ಲ. ಬಝ್‌ ಕೂಡ ಕಮ್ಮಿ ಇತ್ತು. ಆದರೂ ಸಿನಿಮಾ ಒಂದುಹಂತಕ್ಕೆ ಪ್ರೇಕ್ಷಕರ ಮನಗೆದ್ದಿದೆ.

ಭಾರತದಲ್ಲಿ ಫಸ್ಟ್ ಡೇ ಕಲೆಕ್ಷನ್

'ಪೊನ್ನಿಯಿನ್ ಸೆಲ್ವನ್'- 2 ಮೊದಲ ದಿನದ ತಮಿಳುನಾಡು ಕಲೆಕ್ಷನ್ ನೋಡುವುದಾದರೆ 21 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದೆ. ಕೇರಳದಲ್ಲಿ 2.8 ಕೋಟಿ ರೂ. ತೆಲುಗು ರಾಜ್ಯಗಳಲ್ಲಿ 3.6 ಕೋಟಿ ರೂ. ಹಾಗೂ ಕರ್ನಾಟಕದಲ್ಲಿ 3.5 ಕೋಟಿ ರೂ. ಬಾಚಿದೆ. ಹಿಂದಿ ವರ್ಷನ್ 1 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದ್ದು, ಒಟ್ಟಾರೆಯಾಗಿ ಭಾರತದಲ್ಲಿ ಮೊದಲ ದಿನ ಸಿನಿಮಾ ಅಂದಾಜು 32 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿ ಸದ್ದು ಮಾಡಿದೆ.

Ponniyin Selvan 2 BoxOffice collection: Mani Ratnams film Beats Ajiths Thunivu on Day 1

ಓವರ್‌ಸೀಸ್ ಕಲೆಕ್ಷನ್

ಮಣಿರತ್ನಂ ದೃಶ್ಯಕಾವ್ಯಕ್ಕೆ ಓವರ್‌ಸೀಸ್‌ನಲ್ಲಿ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ. ಆಸ್ಟ್ರೇಲಿಯಾದಲ್ಲಿ 2.62 ಕೋಟಿ ರೂ. ನ್ಯೂಜಿಲೆಂಡ್‌ನಲ್ಲಿ 2.21 ಕೋಟಿ ರೂ. ಯುಕೆನಲ್ಲಿ 1.64 ಕೋಟಿ ರೂ. ಸಿಂಗಾಪುರದಲ್ಲಿ 1.5 ಕೋಟಿ ರೂ. ಮಲೇಷಿಯಾದಲ್ಲಿ 2.75 ಸೇರಿದಂತೆ ಹೊರ ದೇಶಗಳಲ್ಲಿ ಭರ್ಜರಿ ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ.

ಸಿನಿಮಾ ಪ್ರೀ ರಿಲೀಸ್ ಬ್ಯುಸಿನೆಸ್

ಕಳೆದ ಮೂರ್ನಾಲ್ಕು ವರ್ಷಗಳಿಂದ 'ಪೊನ್ನಿಯಿನ್ ಸೆಲ್ವನ್'- 2 ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿತ್ತು. ಮಣಿರತ್ನಂ ಮೇಲಿನ ನಿರೀಕ್ಷೆಯಿಂದ ಒಂದು ಹಂತಕ್ಕೆ ಒಳ್ಳೆ ಮೊತ್ತಕ್ಕೆ ಥ್ರಿಯೇಟ್ರಿಕಲ್ ರೈಟ್ಸ್ ಮಾರಾಟವಾಗಿತ್ತು. ತಮಿಳುನಾಡು ರೈಟ್ಸ್ 80 ಕೋಟಿ ರೂ. ಆಂಧ್ರ- ತೆಲಂಗಾಣ 10 ಕೋಟಿ ರೂ. ಕೇರಳ 9 ಕೋಟಿ ರೂ. ಉಳಿದಂತೆ ದೇಶಾದ್ಯಂತ 20 ಕೋಟಿ ರೂ.ಗೆ ರೈಟ್ಸ್ ಬಿಕರಿಯಾಗಿತ್ತು. ಓವರ್‌ಸೀಸ್ ರೈಟ್ಸ್ 50 ಕೋಟಿ ರೂ.ಗೆ ಮಾರಾಟವಾಗಿತ್ತು.

Ponniyin Selvan 2 BoxOffice collection: Mani Ratnams film Beats Ajiths Thunivu on Day 1

'ಥುನಿವು' ದಾಖಲೆ ಮುರಿದ 'ಸೆಲ್ವನ್'

ಈ ವರ್ಷ ಸಂಕ್ರಾಂತಿ ಸಂಭ್ರಮದಲ್ಲಿ ಅಜಿತ್ ನಟನೆಯ 'ಥುನಿವು' ಹಾಗೂ ದಳಪತಿ ವಿಜಯ್ ನಟನೆಯ 'ವಾರಿಸು' ಸಿನಿಮಾಗಳು ತೆರೆಗಪ್ಪಳಿಸಿದ್ದವು. ಮೊದಲ ದಿನದ ಗಳಿಕೆಯಲ್ಲಿ 'ವಾರಿಸು' 21 ಕೋಟಿ ರೂ. ಗಳಿಸಿದರೆ 'ಥುನಿವು' 24 ಕೋಟಿ ರೂ. ಕಲೆಕ್ಷನ್ ಮಾಡಿ ಧೂಳೆಬ್ಬಿಸಿತ್ತು. ಆದರೆ 'ಥುನಿವು' ಗಳಿಕೆ ಮೀರಿ ಮೊದಲ ದಿನ 'ಪೊನ್ನಿಯಿನ್ ಸೆಲ್ವನ್'- 2 ದಾಖಲೆ ಬರೆದಿದೆ. ಆದರೆ ಇದು ಪ್ಯಾನ್ ಇಂಡಿಯಾ ಸಿನಿಮಾ ಅನ್ನೋದು ವಿಶೇಷ.

More from Filmibeat

English summary
Ponniyin Selvan 2 BoxOffice collection: Mani Ratnam's film Beats Ajith's Thunivu on Day 1. Epic historical action adventure film earns Rs 32 crore in India. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X