ಮಣಿರತ್ನಂ 'PS- 2' ಚಿತ್ರಕ್ಕೆ ಸಂಕಷ್ಟ: ಫಸ್ಟ್ ಪಾರ್ಟ್ ₹500 ಕೋಟಿ ಬಾಚಿದ್ರು, ಸೆಕೆಂಡ್ ಪಾರ್ಟ್‌ ಕೇಳೋರಿಲ್ಲ!

By ಫಿಲ್ಮಿಬೀಟ್ ಡೆಸ್ಕ್

ಕಳೆದ ವರ್ಷ ತೆರೆಕಂಡ 'ಪೊನ್ನಿಯನ್ ಸೆಲ್ವನ್'- 1 ಸಿನಿಮಾ ಭಾರೀ ಸದ್ದು ಮಾಡಿತ್ತು. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ 5 ಭಾಷೆಗಳಲ್ಲಿ ಸಿನಿಮಾ ತೆರೆಕಂಡಿತ್ತು. ಮಣಿರತ್ನಂ ನಿರ್ದೇಶನದ ಈ ಐತಿಹಾಸಿಕ ಕಥಾಹಂದರದ ಚಿತ್ರದಲ್ಲಿ ವಿಕ್ರಂ, ಐಶ್ವರ್ಯ ರೈ, ತ್ರಿಷಾ, ಕಾರ್ತಿ, ಜಯಂ ರವಿ ಸೇರಿದಂತೆ ಘಟಾನುಘಟಿ ಕಲಾವಿದರು ನಟಿಸಿದ್ದರು. ಇದೀಗ ಸೀಕ್ವೆಲ್‌ ರಿಲೀಸ್‌ಗೆ ರೆಡಿಯಾಗಿದೆ.

ಮೊದಲ ಭಾಗಕ್ಕೆ ಕೆಲಸ ಮಾಡಿದ ಬಹುತೇಕ ಕಲಾವಿದರು, ತಂತ್ರಜ್ಞರು 2ನೇ ಭಾಗದಲ್ಲೂ ಮುಂದುವರೆದಿದ್ದಾರೆ. ಏಕಕಾಲಕ್ಕೆ ಎರಡು ಸಿನಿಮಾಗಳನ್ನು ಮಣಿರತ್ನಂ ಸೆರೆ ಹಿಡಿದಿದ್ದರು. ಇದೀಗ ಪೋಸ್ಟ್ ಪ್ರೊಡಕ್ಷನ್ ವರ್ಕ್ ಕಂಪ್ಲೀಟ್ ಮಾಡಿ ಸಿನಿಮಾ ಪ್ರಮೋಷನ್‌ಗೆ ಚಾಲನೆ ಕೊಡ್ತಿದೆ ಚಿತ್ರತಂಡ. ಫಸ್ಟ್ ಸಾಂಗ್ ರಿಲೀಸ್‌ಗೆ ಕೌಂಟ್‌ಡೌನ್ ಸ್ಟಾರ್ಟ್ ಆಗಿದೆ. ಇನ್ನು ತಿಂಗಳಾಂತ್ಯಕ್ಕೆ ಚೆನ್ನೈನಲ್ಲಿ ಟ್ರೈಲರ್ ರಿಲೀಸ್ ಈವೆಂಟ್ ಪ್ಲ್ಯಾನ್ ಮಾಡಲಾಗುತ್ತಿದೆ. ಏಪ್ರಿಲ್ 28ಕ್ಕೆ ಈ ದೃಶ್ಯಕಾವ್ಯ ವಿಶ್ವದಾದ್ಯಂತ ತೆರೆಗೆ ಬರ್ತಿದೆ. ಕಳೆದ 'ಕಾಂತಾರ' ಸಿನಿಮಾ ಜೊತೆಗೆ ರಿಲೀಸ್ ಆಗಿದ್ದ ಪ್ರೀಕ್ವೆಲ್ ತಮಿಳುನಾಡಿನಲ್ಲಿ ಮಾತ್ರ ಸೂಪರ್ ಹಿಟ್ ಆಗಿತ್ತು. ಇದೇ ಈಗ ತಂಡದ ಚಿಂತೆಗೆ ಕಾರಣವಾಗಿದೆ.

ponniyin-selvan-2-telugu-distributors-are-not-interested-in-buying-mani-ratnam-s-film

'ಪೊನ್ನಿಯಿನ್ ಸೆಲ್ವನ್' ಹೆಸರನಲ್ಲಿ ಕಲ್ಕಿ ಕೃಷ್ಣಮೂರ್ತಿ ಬರೆದ ಐತಿಹಾಸಿಕ ಕಾಲ್ಪನಿಕ ಕಾದಂಬರಿ ಆಧರಿಸಿ ಮಣಿರತ್ನಂ ಈ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ. ಲೈಕಾ ಪ್ರೊಡಕ್ಷನ್ಸ್ ಜೊತೆಗೆ ಸೇರಿ ಮಣಿರತ್ನಂ ತಮ್ಮ ಮದ್ರಾಸ್ ಟಾಕೀಸ್ ಬ್ಯಾನರ್‌ನಲ್ಲಿ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಅಂದಾಜು ₹400ರಿಂದ ₹500 ಕೋಟಿ ಬಜೆಟ್‌ನಲ್ಲಿ 2 ಭಾಗಗಳನ್ನು ನಿರ್ಮಿಸಲಾಗಿದೆ. ಮೊದಲ ಭಾಗ ತಮಿಳುನಾಡಿನಲ್ಲಿ ಮಾತ್ರ 200 ಕೋಟಿ ರೂ. ಅಧಿಕ ಕಲೆಕ್ಷನ್ ಮಾಡಿತ್ತು. ಕಾಲಿವುಡ್‌ನಲ್ಲಿ ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿದ್ದು ನಿಜ. 'ಪೊನ್ನಿಯಿನ್ ಸೆಲ್ವನ್' ಕಾದಂಬರಿ ಓದಿದವರೆಲ್ಲಾ ಸಿನಿಮಾ ನೋಡಲು ಮುಗಿಬಿದ್ದರು. ಆದರೆ ತಮಿಳುನಾಡು ಬಿಟ್ಟು ಹೊರ ರಾಜ್ಯಗಳಲ್ಲಿ ಸಿನಿಮಾ ಅಷ್ಟಾಗಿ ಸದ್ದು ಮಾಡಲಿಲ್ಲ. 'ಪೊನ್ನಿಯಿನ್ ಸೆಲ್ವನ್' ಪ್ಯಾನ್ ಇಂಡಿಯಾ ಹಿಟ್ ಆಗಲೇಯಿಲ್ಲ.

ponniyin-selvan-2-telugu-distributors-are-not-interested-in-buying-mani-ratnam-s-film

ಮಣಿರತ್ನಂ ನಿರ್ದೇಶನ, ಐಶ್ವರ್ಯ ರೈ ನಟನೆ ಸಿನಿಮಾ ಬಗ್ಗೆ ಹೈಪ್ ಕ್ರಿಯೇಟ್ ಮಾಡಿದ್ದು ನಿಜ. ಆದರೆ ರಿಲೀಸ್ ನಂತರ ಆ ಹೈಪ್ ಕಂಟಿನ್ಯೂ ಆಗಲಿಲ್ಲ. ಇದೀಗ ಸೀಕ್ವೆಲ್ ಮೇಲೆ ಭಾರೀ ನಿರೀಕ್ಷೆ ಇದೆ. ಫಸ್ಟ್ ಪಾರ್ಟ್‌ನಲ್ಲಿ ಹಾಕಿದ್ದ ಬಂಡವಾಳ ಸಂಪೂರ್ಣವಾಗಿ ವಾಪಸ್ ಬಂದಿಲ್ಲ. 2ನೇ ಭಾಗ ಗೆದ್ದರೆ ಮಾತ್ರ ಬಂಡವಾಳದ ಜೊತೆಗೆ ಲಾಭದ ಮುಖ ನೋಡಬಹುದು. ಆದರೆ ಸಿನಿಮಾ ಡಿಸ್ಟ್ರಿಬ್ಯೂಷನ್ ರೈಟ್ಸ್ ಕೊಂಡುಕೊಳ್ಳಲು ಯಾರು ಮುಂದೆ ಬರ್ತಿಲ್ಲ ಎಂದು ಕಾಲಿವುಡ್‌ನಲ್ಲಿ ಗುಲ್ಲಾಗಿದೆ. ಮುಖ್ಯವಾಗಿ ತೆಲುಗು ರಾಜಗಳ ರೈಟ್ಸ್‌ಗೆ ಕೇಳುವವರೇ ಇಲ್ಲವಂತೆ. ತಮಿಳು ಸಿನಿಮಾಗಳು ತಮಿಳುನಾಡು ಬಿಟ್ಟರೆ ಆಂಧ್ರ, ತೆಲಂಗಾಣದಲ್ಲಿ ಹೆಚ್ಚು ಸದ್ದು ಮಾಡುತ್ತವೆ. ಆದರೆ 'ಪೊನ್ನಿಯಿನ್ ಸೆಲ್ವನ್' ವಿಚಾರದಲ್ಲಿ ಅದು ಸುಳ್ಳಾಗಿತ್ತು.

'ಪೊನ್ನಿಯಿನ್ ಸೆಲ್ವನ್' ಮೇಕಿಂಗ್, ಕಲಾವಿದರ ಕಾಸ್ಟ್ಯೂಮ್ಸ್ ಎಲ್ಲಾ ನೋಡಿ 'ಬಾಹುಬಲಿ' ರೇಂಜ್ ಸಿನಿಮಾ ಎಂದುಕೊಂಡು ಹೋದವರಿಗೆ ನಿರಾಸೆ ಕಾದಿತ್ತು. ಆಕ್ಷನ್ ಸೀನ್‌ಗಳು ಕಮ್ಮಿ ಆಗಿ ಸಿನಿಮಾ ಸಪ್ಪೆ ಎನಿಸಿಬಿಟ್ಟಿತ್ತು. ಆಂಧ್ರ, ತೆಲಂಗಾಣದಲ್ಲಿ ಚಿತ್ರಕ್ಕೆ ನೆಗೆಟಿವ್ ಟಾಕ್ ಬಂದಿತ್ತು. ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಕೂಡ ಮಾಡಿದ್ದರು. ಇದೇ ವಿಚಾರಕ್ಕೆ ತಮಿಳು ಸಿನಿ ರಸಿಕರು ಹಾಗೂ ತೆಲುಗು ಸಿನಿರಸಿಕರ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ, ಕೆಸರೆರಚಾಟ ನಡೀತು. ಇದೀಗ 'ಪೊನ್ನಿಯಿನ್ ಸೆಲ್ವನ್' ತೆಲುಗು ರೈಟ್ಸ್ ಕೇಳುವವರೇ ಇಲ್ಲ ಎನ್ನುವಂತಾಗಿದೆ. ಪ್ರೀಕ್ವೆಲ್‌ಗೆ ಸಿಕ್ಕ ರೆಸ್ಪಾನ್ಸ್ ನೋಡಿ ವಿತರಕರು ರೈಟ್ಸ್ ಖರೀದಿಸಲು ಮುಂದೆ ಬರ್ತಿಲ್ಲವಂತೆ.

ಬರೀ ತೆಲುಗು ಮಾತ್ರವಲ್ಲ ಹಿಂದಿ ರೈಟ್ಸ್ ವಿಚಾರದಲ್ಲೂ ಇದೇ ಆಗ್ತಿದೆ. ಮೊದಲ ಭಾಗ ಹಿಂದಿ ಬೆಲ್ಟ್‌ನಲ್ಲೂ ಅಷ್ಟಾಗಿ ಸದ್ದು ಮಾಡ್ಲಿಲ್ಲ. ಇದೀಗ ದೊಡ್ಡಮಟ್ಟದಲ್ಲಿ ಪ್ರಮೋಷನ್ ಮಾಡಿ ಹೈಪ್ ಕ್ರಿಯೇಟ್ ಮಾಡಲು ಚಿತ್ರತಂಡ ಮುಂದಾಗಿದೆ. ಮಣಿರತ್ನಂ ಈ ಬಾರಿ ಚಿತ್ರವನ್ನು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಗೆಲ್ಲಿಸಲು ಟೊಂಕ ಕಟ್ಟಿ ನಿಂತಿದ್ದಾರೆ.

More from Filmibeat

English summary
Ponniyin Selvan- 2: Telugu Distributors Are Not Interested In Buying Mani Ratnam's Film. PS- 2 would be releasing on 28 April 2023. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X