Ponniyin Selvan 2: ಟ್ರೈಲರ್‌ನಲ್ಲೂ..ಇವೆಂಟ್‌ನಲ್ಲೂ ಎರಡರಲ್ಲೂ ಐಶ್ವರ್ಯಾ ರೈ ಬಚ್ಚನ್ ಮಿಂಚಿಂಗ್!

By ಫಿಲ್ಮಿಬೀಟ್ ಡೆಸ್ಕ್

ಸಿನಿಮಾ ದಿಗ್ಗಜ ಮಣಿರತ್ನಂ ನಿರ್ದೇಶಕ 'ಪೊನ್ನಿಯನ್ ಸೆಲ್ವನ್ 1'(PS 1) ಬಾಕ್ಸಾಫೀಸ್‌ನಲ್ಲಿ ಸುಮಾರು 500 ಕೋಟಿ ರೂ. ಬಾಚಿಕೊಂಡಿತ್ತು. ಈಗ ಅದರ ಸೀಕ್ವೆಲ್ ರೆಡಿಯಾಗಿದೆ. 'ಪೊನ್ನಿಯನ್ ಸೆಲ್ವನ್ 2' ರಿಲೀಸ್‌ಗೆ ರೆಡಿಯಾಗಿದ್ದು, ಟ್ರೈಲರ್ ರಿಲೀಸ್ ಆಗಿದೆ.

ಇಂದು(ಮಾರ್ಚ್ 29) ಚೆನ್ನೈನ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ 'ಪೊನ್ನಿಯನ್ ಸೆಲ್ವನ್ 2' ಸಿನಿಮಾದ ಟ್ರೈಲರ್ ಬಿಡುಗಡೆ ಮಾಡಲಾಗಿದೆ. ಈ ಸಮಾರಂಭಕ್ಕೆ ಉಳಗನಾಯಗನ್ ಕಮಲ್ ಹಾಸನ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.

 Ponniyin Selvan 2 Trailer: Aishwarya Rai Hugs Suhasini touches Maniratnam Feet

ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆ ಐಶ್ವರ್ಯಾ ರೈ ಬಚ್ಚನ್. ಒಂದ್ಕಡೆ ಟ್ರೈಲರ್‌ನಲ್ಲಿ ಮಿಂಚಿದ್ರೆ, ಇನ್ನೊಂದು ಕಡೆ ಕಾರ್ಯಕ್ರಮದಲ್ಲೂ ಇವರ ಮೇಲೆ ಎಲ್ಲರ ಕಣ್ಣಿತ್ತು. ತಿಳಿ ಗುಲಾಬಿ ಹಾಗೂ ಬಂಗಾರದ ಬಣ್ಣದ ವಿನ್ನಾಸವಿರುದ ಔಟ್‌ಫಿಟ್ ಧರಿಸಿ ಐಶ್ವರ್ಯಾ ರೈ ಬಚ್ಚನ್ ಇವೆಂಟ್‌ನಲ್ಲಿ ಸೆಳೆದರು.

ಈ ವೇಳೆ ಐಶ್ವರ್ಯಾ ರೈ ಗುರು ನಿರ್ದೇಶಕ ಮಣಿರತ್ನಂ ಅವರ ಕಾಲು ಮುಟ್ಟಿ ನಮಸ್ಕರಿಸಿದ್ದಾರೆ. ಹಾಗೇ ಮಣಿರತ್ನಂ ಪತ್ನಿ ನಟಿ ಸುಹಾಸಿನಿ ಅವರನ್ನು ಅಪ್ಪಿಕೊಂಡಿದ್ದಾರೆ. ಈ ವಿಡಿಯೋ ಎಲ್ಲೆಡೆ ಈಗ ವೈರಲ್ ಆಗುತ್ತಿದೆ.

ಇನ್ನು 'ಪೊನ್ನಿಯನ್ ಸೆಲ್ವನ್ 2' ಸಿನಿಮಾದ ಟ್ರೈಲರ್‌ನ ಹೈಲೈಟ್ ಕೂಡ ಐಶ್ವರ್ಯಾ ರೈ ಬಚ್ಚನ್. ಈ ಸಿನಿಮಾದಲ್ಲಿ ಐಶ್ವರ್ಯಾ ಡಬಲ್ ರೋಲ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಂದಿನಿ ಹಾಗೂ ಮಂದಾಕಿನಿ ಎರಡು ಪಾತ್ರಗಳಲ್ಲಿ ಮಿಂಚಿದ್ದಾರೆ. ಈ ಟ್ರೈಲರ್‌ನಲ್ಲೂ "ಚೋಳರನ್ನು ನಾಶ ಮಾಡಬೇಕು" ಅನ್ನೋ ಡೈಲಾಗ್ ಸಿನಿ ಪ್ರೇಕ್ಷಕರಿಗೆ ಕಿಕ್ ಕೊಟ್ಟಿದೆ.

'ಪೊನ್ನಿಯನ್ ಸೆಲ್ವನ್ 2' ಸಿನಿಮಾ ಟ್ರೈಲರ್ ಅನ್ನು ಕಮಲ್ ಹಾಸನ್ ರಿಲೀಸ್ ಮಾಡಿದ್ದು ಈ ಕಾರ್ಯಕ್ರಮದ ವಿಶೇಷತೆಯಾಗಿತ್ತು. ಈ ಕಾರ್ಯಕ್ರಮಕ್ಕೆ ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸಿರೋ ಕಾರ್ತಿ, ವಿಕ್ರಂ, ಜಯಂ ರವಿ, ತ್ರಿಶಾ ಹಾಗೂ ಶೋಭಿತಾ ಧುಲಿಪಲಾ ಆಗಮಿಸಿದ್ದರು. ಈ ಸಿನಿಮಾಗೆ ಸಂಗೀತ ನೀಡಿರುವ ಎ.ಆರ್ ರೆಹಮಾನ್ ಉಪಸ್ಥಿತಿಯಿತ್ತು.

'ಪೊನ್ನಿಯನ್ ಸೆಲ್ವನ್ 1'ರಲ್ಲಿ ಜಯಂ ರವಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದ, ಅರುಲ್‌ಮೊಳಿವರ್ಮನ್ (ಪೊನ್ನಿಯನ್ ಸೆಲ್ವನ್) ಪಾತ್ರದಲ್ಲಿ ನಟಿಸಿದ್ದಾರೆ. ಈ ರಾಜನ ಆರಂಭದ ದಿನಗಳನ್ನು ಇಲ್ಲಿ ತೋರಿಸಲಾಗಿದೆ. 'ಪೊನ್ನಿಯನ್ ಸೆಲ್ವನ್' ಸೀಕ್ವೆಲ್ ಏಪ್ರಿಲ್ 28, 2023ಕ್ಕೆ ರಿಲೀಸ್ ಆಗುತ್ತಿದೆ.

 Ponniyin Selvan 2 Trailer: Aishwarya Rai Hugs Suhasini touches Maniratnam Feet

'ಪೊನ್ನಿಯನ್ ಸೆಲ್ವನ್ 1' ಬಾಕ್ಸಾಫೀಸ್‌ನಲ್ಲಿ 500 ಕೋಟಿ ರೂ. ಗಳಿಸುವ ಮೂಲಕ ತಮಿಳುನಾಡಿನಲ್ಲಿ ಅತೀ ಹೆಚ್ಚು ಗಳಿಸಿದ ಸಿನಿಮಾಗಳ ಪಟ್ಟಿ ಸೇರಿತ್ತು. ಈ ಹಿಂದೆ ತೆರೆಕಂಡ ಹಲವು ಸಿನಿಮಾಗಳ ದಾಖಲೆಯನ್ನು ಮುರಿದು ಹಾಕಿತ್ತು.

More from Filmibeat

English summary
Ponniyin Selvan 2 Trailer: Aishwarya Rai Hugs Suhasini touches Maniratnam Feet, Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X