ಚೆನ್ನಾಗಿದ್ರು 'ಪೊನ್ನಿಯಿನ್ ಸೆಲ್ವನ್- 2' ಟ್ರೈಲರ್ ಸದ್ದು ಮಾಡ್ತಿಲ್ಲ: ಅಬ್ಬಬ್ಬಾ ಸಿನಿಮಾ ರನ್ ಟೈಮ್ 4 ಗಂಟೆನಾ?

ತಮಿಳಿನ ಬಹುನಿರೀಕ್ಷಿತ 'ಪೊನ್ನಿಯಿನ್ ಸೆಲ್ವನ್- 2' ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಸದ್ದು ಮಾಡ್ತಿಲ್ಲ. ಇತ್ತೀಚೆಗೆ ಬಿಡುಗಡೆಯಾದ ಟ್ರೈಲರ್ ಗಮನ ಸೆಳೆದರೂ ವೀವ್ಸ್ ವಿಚಾರದಲ್ಲಿ ಹಿಂದೆ ಬಿದ್ದಿದೆ. ಮಣಿರತ್ನಂ ನಿರ್ದೇಶನದ ಐತಿಹಾಸಿಕ ಕಥಾಹಂದರ ಸಿನಿಮಾದಲ್ಲಿ ಕಾಲಿವುಡ್ ಸ್ಟಾರ್‌ಗಳು ನಟಿಸಿದ್ದಾರೆ. ಆದರೂ ಸಿನಿಮಾ ಅಷ್ಟಾಗಿ ಬಝ್‌ ಕ್ರಿಯೇಟ್ ಮಾಡ್ತಿಲ್ಲ. ಇದೆಲ್ಲದರ ನಡುವೆ ಸಿನಿಮಾ ರನ್‌ ಟೈಮ್ ಬಗ್ಗೆ ಗುಸು ಗುಸು ಶುರುವಾಗಿದೆ.

ಭಾರತೀಯ ಚಿತ್ರರಂಗದಲ್ಲಿ ಪ್ಯಾನ್ ಇಂಡಿಯಾ ಸಿನಿಮಾಗಳ ಭರಾಟೆ ಜೋರಾಗಿದೆ. 'ಪೊನ್ನಿಯಿನ್ ಸೆಲ್ವನ್' ಸರಣಿ ಸಿನಿಮಾಗಳು ಕೂಡ ಏಕಕಾಲದಲ್ಲಿ 5 ಭಾಷೆಗಳಲ್ಲಿ ದೊಡ್ಡಮಟ್ಟದಲ್ಲಿ ರಿಲೀಸ್ ಆಗ್ತಿದೆ. ಆದರೆ ದೊಡ್ಡಮಟ್ಟದಲ್ಲಿ ಸಿನಿಮಾ ಸದ್ದು ಮಾಡುವಲ್ಲಿ ವಿಫಲವಾಗಿದೆ. ಚಿಯಾನ್ ವಿಕ್ರಂ, ಐಶ್ವರ್ಯ ರೈ, ಕಾರ್ತಿ, ಜಯಂ ರವಿ, ತ್ರಿಷಾರಂತಹ ಕಲಾವಿದರು ನಟಿಸಿದರೂ ಸಿನಿಮಾ ಟಾಕ್ ಕ್ರಿಯೇಟ್ ಮಾಡುವಲ್ಲಿ ಹಿಂದಿ ಬಿದ್ದಿದೆ.

Ponniyin Selvan- 2 Trailer Fails To Impress Audience: Lengthy Runtime also worrying movie

ಇತ್ತೀಚೆಗೆ 'ಪೊನ್ನಿಯಿನ್ ಸೆಲ್ವನ್- 2' ಟ್ರೈಲರ್ ರಿಲೀಸ್ ಆಗಿದ್ದು ಕೂಡ ಎಷ್ಟೋ ಜನಕ್ಕೆ ಗೊತ್ತೇ ಆಗಲಿಲ್ಲ. ಇನ್ನು ಟ್ರೈಲರ್ ರಿಲೀಸ್ ಆಗಿ 3 ದಿನ ಕಳೆದರೂ 15 ಮಿಲಿಯನ್ ವೀವ್ಸ್ ದಾಟಿಲ್ಲ. ಕಳೆದ ವರ್ಷ ರಿಲೀಸ್ ಆಗಿದ್ದ ಸರಣಿಯ ಮೊದಲ ಸಿನಿಮಾ ತಮಿಳುನಾಡಿನಲ್ಲಿ ಮಾತ್ರ ಸೂಪರ್ ಹಿಟ್ ಆಗಿತ್ತು. ಒಟ್ಟಾರೆಯಾಗಿ ಸಿನಿಮಾ 500 ಕೋಟಿ ರೂ. ಕಲೆಕ್ಷನ್ ಮಾಡಿದರೂ ಪ್ಯಾನ್ ಇಂಡಿಯಾ ಸಕ್ಸಸ್ ಸಿಗಲಿಲ್ಲ. ಹಾಗಾಗಿ 2ನೇ ಭಾಗದ ನಿರೀಕ್ಷೆ ಇರಲಿಲ್ಲ. ಆದರೆ ಟ್ರೈಲರ್ ಕೊಂಚಮಟ್ಟಿಗೆ ಭರವಸೆ ಮೂಡಿಸಿದೆ.

'ಪೊನ್ನಿಯಿನ್ ಸೆಲ್ವನ್' ಸಿನಿಮಾ ಎಲ್ಲಾ ಭಾಷೆಯ ಪ್ರೇಕ್ಷಕರನ್ನು ರಂಜಿಸುವಲ್ಲಿ ಸೋತಿತ್ತು. ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದ್ದು ಸುಳ್ಳಲ್ಲ. ಚಿತ್ರದಲ್ಲಿನ ಪಾತ್ರಗಳ ಹೆಸರುಗಳು ಕೂಡ ಎಷ್ಟು ಜನರಿಗೆ ನೆನಪಿನಲ್ಲಿ ಉಳಿಯಲಿಲ್ಲ. ಕೆಲವರಿಗೆ ಸಿನಿಮಾ ಧಾರಾವಾಹಿ ನೋಡಿದ ಅನುಭವ ನೀಡಿತ್ತು. ತೆಲುಗು ಪ್ರೇಕ್ಷಕರಂತೂ ಬಹಿರಂಗವಾಗಿಯೇ ಚಿತ್ರವನ್ನು ತಿರಸ್ಕರಿಸಿದ್ದರು. ಇದೀಗ ಪಾರ್ಟ್‌-2 ರಿಲೀಸ್‌ಗೆ ರೆಡಿಯಾಗಿದೆ. ಏಪ್ರಿಲ್ 28ಕ್ಕೆ ಸಿನಿಮಾ ಬಿಡುಗಡೆಗೆ ಸಿದ್ಧತೆ ನಡೀತಿದೆ.

ಇದೀಗ 'ಪೊನ್ನಿಯಿನ್ ಸೆಲ್ವನ್'- 2 ಚಿತ್ರದ ಒಟ್ಟಾರೆ ರನ್‌ಟೈಮ್‌ ಬಗ್ಗೆ ಗುಸುಗುಸು ಶುರುವಾಗಿದೆ. ಬರೋಬ್ಬರಿ 4 ಗಂಟೆಗಳ ಕಾಲಾವಧಿಯ ಸಿನಿಮಾ ಇದು ಎನ್ನಲಾಗ್ತಿದೆ. ಅನ್‌ಕಟ್ ವರ್ಷನ್ 4 ಗಂಟೆ ಇದ್ದು ಥ್ರಿಯೇಟ್ರಿಕಲ್ ರನ್‌ಟೈಮ್ 3 ಗಂಟೆ 53 ನಿಮಿಷ ಎಂದು ಹೇಳಲಾಗ್ತಿದೆ. ಇತ್ತೀಚಿನ ವರ್ಷಗಳಲ್ಲಿ ಇಷ್ಟು ಸುದೀರ್ಘ ಕಾಲಾವಧಿಯ ಸಿನಿಮಾ ಬಂದಿರಲಿಲ್ಲ. ನಿಜಕ್ಕೂ ಸಿನಿಮಾ ಇಷ್ಟು ದೊಡ್ಡದಾಗಿ ಇದ್ದರೆ ಫಲಿತಾಂಶದ ಮೇಲೆ ಪರಿಣಾಮ ಬೀರಲಿದೆ. ಇದೇ ಈಗ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ.

Ponniyin Selvan- 2 Trailer Fails To Impress Audience: Lengthy Runtime also worrying movie

2 ಗಂಟೆಗೂ ಹೆಚ್ಚು ಕಾಲ ಥಿಯೇಟರ್‌ಗಳಲ್ಲಿ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವುದು ಈಗ ಕಷ್ಟದ ವಿಷಯ. ಸಿನಿಮಾ ಎರಡೂವರೆ ಗಂಟೆಗಿಂತ ಸುದೀರ್ಘವಾಗಿದ್ದರೆ ಪ್ರೇಕ್ಷಕರಿಗೆ ಬೋರ್ ಹೊಡೆಸುತ್ತದೆ. ಕಾಲಾವಧಿ ಹೆಚ್ಚಿದ್ದರೂ ನೋಡುಗರನ್ನು ಹಿಡಿದಿಟ್ಟುಕೊಳ್ಳುವುದು ಸಾಧ್ಯವಿಲ್ಲ ಅನ್ನೋಕೆ ಸಾಧ್ಯವಿಲ್ಲ. ಆದರೆ ತೀರಾ 3 ಗಂಟೆ 53 ನಿಮಿಷ ಅಂದರೆ ಯೋಚಿಸಲೇಬೇಕು. ಕಲ್ಕಿ ಕೃಷ್ಣಮೂರ್ತಿ ಬರೆದ 'ಪೊನ್ನಿಯಿನ್ ಸೆಲ್ವನ್' ಕಾದಂಬರಿ ಆಧರಿಸಿ ಮಣಿರತ್ನಂ ಸಿನಿಮಾ ನಿರ್ಮಿಸಿದ್ದಾರೆ.

ರಜನಿಕಾಂತ್, ಕಮಲ್ ಹಾಸನ್‌ ಕೂಡ 'ಪೊನ್ನಿಯಿನ್ ಸೆಲ್ವನ್' ಸಿನಿಮಾ ಮಾಡಲು ಆಸೆ ಪಟ್ಟಿದ್ದರು. ಆದರೆ 2000 ಪುಟಗಳ ಕಾದಂಬರಿಯನ್ನು ಎರಡೂವರೆ ಗಂಟೆಗಳಲ್ಲಿ ಹೇಳುವುದು ಕಷ್ಟ ಎಂದು ಸುಮ್ಮನಾಗಿದ್ದರು. ಅವತ್ತಿನ ಕಾಲಕ್ಕೆ ಅಷ್ಟು ಬಜೆಟ್ ಕಷ್ಟವಿತ್ತು. ಆದರೆ ಈ ಸೀಕ್ವೆಲ್ ಸಿನಿಮಾಗಳ ಟ್ರೆಂಡ್ ನಡಿತಿರೋದ್ರಿಂದ ಈ ಕಥೆಯನ್ನು ಮಣಿರತ್ನಂ ಸಿನಿಮಾ ಮಾಡಲು ಮುಂದಾಗಿದ್ದರು. ಅದರಲ್ಲಿ ಸಕ್ಸಸ್ ಕೂಡ ಆಗಿದ್ದಾರೆ. ಆದರೆ 2ನೇ ಭಾಗದ ರನ್‌ಟೈಮ್ 3 ಗಂಟೆ 53 ನಿಮಿಷ ಇರುತ್ತಾ ಎನ್ನುವ ಆಂತಕ ಕೆಲವರನ್ನು ಕಾಡ್ತಿದೆ.

ಚೋಳ ಸಾಮ್ರಾಜ್ಯದ ಗದ್ದುಗೆಗಾಗಿ ನಡೆಯುವ ಯುದ್ಧ, ಪಾಂಡ್ಯ ರಾಜರ ಕುತಂತ್ರ, ಚೋಳ ಸಾಮ್ರಾಜ್ಯ ನಾಶಪಡಿಸಲು ನಂದಿನಿಯ ಶಪಥ, ಕರಿಕಾಲನ್ ಆರ್ಭಟ, ನಂದಿನಿ -ಕರಿಕಾಲನ್ ಮುಖಾಮುಖಿಯಾಗುವ ಸನ್ನಿವೇಶ ಎಲ್ಲವೂ ಟ್ರೈಲರ್‌ನಲ್ಲಿ ಹೈಲೆಟ್ ಆಗಿದೆ. ಅದ್ಧೂರಿ ಮೇಕಿಂಗ್ ಹಾಗೂ ದೊಡ್ಡ ದೊಡ್ಡ ಸೆಟ್‌ಗಳಿಂದ ಟ್ರೈಲರ್‌ ಹುಬ್ಬೇರಿಸಿದೆ. ಇಷ್ಟೆಲ್ಲಾ ಇದ್ದರೂ ಅಂದುಕೊಂಡ ಮಟ್ಟಕ್ಕೆ ವೀವ್ಸ್ ಸಿಕ್ಕಿಲ್ಲ. ಇದರ ಜೊತೆಗೆ ಈಗ ಚಿತ್ರದ ರನ್‌ಟೈಮ್ ಕೂಡ ಚಿತ್ರಕ್ಕೆ ಹಿನ್ನಡೆ ಆಗುತ್ತಾ ಎನ್ನುವ ಚರ್ಚೆ ಕಾಲಿವುಡ್‌ನಲ್ಲಿ ನಡೀತಿದೆ.

More from Filmibeat

English summary
Ponniyin Selvan- 2 Trailer Fails To Impress Audience: Lengthy Runtime also Worring movie. Mani Ratnam Directed PS2 will be released on April 28, 2023. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X