ಬಾಕ್ಸಾಫೀಸ್‌ನಲ್ಲಿ 'ಪೊನ್ನಿಯಿನ್ ಸೆಲ್ವನ್' ಆರ್ಭಟ ಹೇಗಿದೆ? ಮೊದಲ ದಿನ ಸಿನಿಮಾ ಗಳಿಸಿದ್ದೆಷ್ಟು?

ಮಣಿರತ್ನಂ ನಿರ್ದೇಶನದ 'ಪೊನ್ನಿಯಿನ್ ಸೆಲ್ವನ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದೆ. ಬಹುಕೋಟಿ ವೆಚ್ಚದ ಈ ಐತಿಹಾಸಿಕ ಕಥಾಹಂದರದ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ಆದರೂ ತಮಿಳುನಾಡಿನಲ್ಲಂತೂ ಚಿತ್ರಕ್ಕೆ ಅಭೂತಪೂರ್ವ ಓಪನಿಂಗ್ ಸಿಕ್ಕಿದೆ. 'ಪೊನ್ನಿಯಿನ್ ಸೆಲ್ವನ್' ಕಾದಂಬರಿ ಓದಿದವರು ದೃಶ್ಯರೂಪದಲ್ಲಿ ಚೋಳ ಸಾಮ್ರಾಜ್ಯದ ವೈಭವ ಕಂಡು ಬೆರಗಾಗಿದ್ದಾರೆ.

'ಪೊನ್ನಿಯಿನ್ ಸೆಲ್ವನ್' ಚಿತ್ರವನ್ನು ಕೆಲವರು ರಾಜಮೌಳಿ ನಿರ್ದೇಶನದ 'ಬಾಹುಬಲಿ' ಚಿತ್ರಕ್ಕೆ ಹೋಲಿಸಿ ನೋಡುತ್ತಿದ್ದಾರೆ. ಆದರೆ ಕೆಲವರು ಎರಡೂ ಸಿನಿಮಾಗಳು ಬೇರೆ ಬೇರೆ, ಒಂದಕ್ಕೊಂದನ್ನು ಹೋಲಿಸುವುದು ಸರಿಯಲ್ಲ ಎನ್ನುತ್ತಿದ್ದಾರೆ. ತಮಿಳುನಾಡಿನಲ್ಲಿ ಫ್ಯಾಮಿಲಿ ಅಡಿಯನ್ಸ್ ದೊಡ್ಡಮಟ್ಟದಲ್ಲಿ ಸಿನಿಮಾ ನೋಡಲು ಮುಗಿಬಿದ್ದಿದ್ದಾರೆ. ಇನ್ನು ಕಾದಂಬರಿ ಓದಿರುವ ಪ್ರೇಕ್ಷಕರು ಮಣಿರತ್ನಂ ಎಷ್ಟರಮಟ್ಟಿಗೆ ಓದಿಕೊಂಡಿದ್ದಾರೆ ಎಂದು ನೋಡಲು ಥಿಯೇಟರ್‌ಗೆ ಬರ್ತಿದ್ದಾರೆ. ತಮಿಳುನಾಡಿನಲ್ಲಿ ಮೊದಲ ದಿನ ಬಹುತೇಕ ಎಲ್ಲಾ ಶೋಗಳು ಹೌಸ್‌ಫುಲ್ ಆಗಿದೆ.

ಕಲಾವಿದರ ಅಭಿನಯ, ಮೇಕಿಂಗ್, ಗ್ರಾಫಿಕ್ಸ್, ಮಣಿರತ್ನಂ ಸ್ಕ್ರೀನ್‌ಪ್ಲೇ, ನಿರ್ದೇಶನ, ಎ. ಆರ್ ರೆಹಮಾನ್ ಮ್ಯೂಸಿಕ್ ಮೆಚ್ಚಿಕೊಂಡಿದ್ದಾರೆ. ತಮಿಳುನಾಡು ಹೊರತುಪಡಿಸಿ ಬೇರೆ ರಾಜ್ಯಗಳಲ್ಲಿ ಚಿತ್ರಕ್ಕೆ ಅಷ್ಟಾಗಿ ಸದ್ದು ಮಾಡ್ತಿಲ್ಲ.

 ವಿಶ್ವದಾದ್ಯಂತ 45 ರೂ. ಕೋಟಿ ಬಾಚಿದ ಚಿತ್ರ

ವಿಶ್ವದಾದ್ಯಂತ 45 ರೂ. ಕೋಟಿ ಬಾಚಿದ ಚಿತ್ರ

'ಪೊನ್ನಿಯಿನ್ ಸೆಲ್ವನ್' ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಸಿಕ್ಕರೂ ಮೊದಲ ದಿನ ಅಡ್ವಾನ್ಸ್ ಬುಕ್ಕಿಂಗ್ ಭರ್ಜರಿಯಾಗಿತ್ತು. ಹಾಗಾಗಿ ಸಿನಿಮಾ ಬಾಕ್ಸಾಫೀಸ್‌ ಕಮಾಯಿ ಜೋರಾಗಿದೆ. ಮೊದಲ ದಿನ ವಿಶ್ವದಾದ್ಯಂತ ಸಿನಿಮಾ 45 ಕೋಟಿ ರೂ. ಗೂ ಅಧಿಕ ಕಲೆಕ್ಷನ್ ಮಾಡಿರುವ ಮಾಹಿತಿ ಸಿಗುತ್ತಿದೆ. ದೇಶ ವಿದೇಶಗಳಲ್ಲೂ ಸಿನಿಮಾ ಕಲೆಕ್ಷನ್ ಜೋರಾಗಿದೆ.

 ತಮಿಳುನಾಡಿನಲ್ಲಿ 25.86 ಕೋಟಿ ರೂ. ಕಲೆಕ್ಷನ್

ತಮಿಳುನಾಡಿನಲ್ಲಿ 25.86 ಕೋಟಿ ರೂ. ಕಲೆಕ್ಷನ್

ಈ ವರ್ಷದಲ್ಲಿ 'ವಾಲಿಮೈ' ಹಾಗೂ 'ಬೀಸ್ಟ್' ಸಿನಿಮಾಗಳು ತಮಿಳುನಾಡು ಬಾಕ್ಸಾಫೀಸ್‌ನಲ್ಲಿ ಕೋಟಿ ಕೋಟಿ ಕೊಳ್ಳೆ ಹೊಡೆದು ದಾಖಲೆ ಬರೆದಿದ್ದವು. ಮಿಶ್ರಪ್ರತಿಕ್ರಿಯೆ ಸಿಕ್ಕರೂ 'ಬೀಸ್ಟ್' ಸಿನಿಮಾ 26.40 ರೂ. ಕೋಟಿ ಕಲೆಕ್ಷನ್ ಮಾಡಿದ್ರೆ, 'ವಾಲಿಮೈ' ಸಿನಿಮಾ ಅಂದಾಜು 36 ಕೋಟಿ ರೂ. ದೋಚಿತ್ತು. ಇವೆರಡು ಸಿನಿಮಾಗಳ ನಂತರದ ಸ್ಥಾನದಲ್ಲಿ 'ಪೊನ್ನಿಯಿನ್ ಸೆಲ್ವನ್' ಇದ್ದು 25.86 ಕೋಟಿ ಕಲೆಕ್ಷನ್ ಮಾಡಿದೆ.

 ಬಾಲಿವುಡ್‌ನಲ್ಲಿ ಭರ್ಜರಿ ಕಲೆಕ್ಷನ್

ಬಾಲಿವುಡ್‌ನಲ್ಲಿ ಭರ್ಜರಿ ಕಲೆಕ್ಷನ್

ನಿಧಾನವಾಗಿ ದಕ್ಷಿಣದ ಸಿನಿಮಾಗಳು ಹಿಂದಿಗೆ ಡಬ್ ಆಗಿ ಉತ್ತರ ಭಾರತದಲ್ಲಿ ಸದ್ದು ಮಾಡ್ತಿದೆ. 'ಪೊನ್ನಿಯಿನ್ ಸೆಲ್ವನ್' ಕೂಡ ತಕ್ಕ ಮಟ್ಟಿಗೆ ಪ್ರೇಕ್ಷಕರನ್ನು ಸೆಳೆಯುವಲ್ಲಿ ಸಕ್ಸಸ್ ಕಂಡಿದೆ. ಹಿಂದಿ ಬೆಲ್ಟ್‌ನಲ್ಲಿ ಸಿನಿಮಾ ಅಂದಾಜು 2 ಕೋಟಿ ರೂ. ಕಲೆಕ್ಷನ್ ಮಾಡಿದೆ. ವೀಕೆಂಡ್‌ನಲ್ಲಿ ಪ್ರೇಕ್ಷಕರನ್ನು ಸೆಳೆಯುವ ಸುಳಿವು ಸಿಕ್ತಿದೆ.

 ಓವರ್‌ಸೀಸ್‌ನಲ್ಲಿ ಧೂಳೆಬ್ಬಿಸಿದ ಸಿನಿಮಾ

ಓವರ್‌ಸೀಸ್‌ನಲ್ಲಿ ಧೂಳೆಬ್ಬಿಸಿದ ಸಿನಿಮಾ

'ಪೊನ್ನಿಯಿನ್ ಸೆಲ್ವನ್' ಸಿನಿಮಾ ವಿದೇಶಗಳಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದೆ. ಅಮೆರಿಕಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಮಲೇಷಿಯಾದಲ್ಲಿ ಕೋಟಿ ಕೋಟಿ ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ. 15 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಎಲ್ಲರ ಹುಬ್ಬೇರಿಸಿದೆ. 'ಕಬಾಲಿ' ನಂತರ 'ಪೊನ್ನಿಯಿನ್ ಸೆಲ್ವನ್‌' ಚಿತ್ರಕ್ಕೆ ಮೊದಲ ದಿನ ದೊಡ್ಡಮಟ್ಟದ ಓಪನಿಂಗ್ ಸಿಕ್ಕಿದಂತಾಗಿದೆ.

More from Filmibeat

English summary
Ponniyin Selvan Box Office Day 1 Mani Ratnam’s Film Collects Rs 45 Crore. Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X