For Quick Alerts
  ALLOW NOTIFICATIONS  
  For Daily Alerts

  ಮತ್ತೆ ಚಿತ್ರೀಕರಣ ಆರಂಭಿಸಿದ ಮಣಿರತ್ನಂ: ಪಾಂಡಿಚೆರಿಗೆ ಬಂದಿಳಿದ ಐಶ್ವರ್ಯ ರೈ

  |

  ಭಾರತೀಯ ಚಿತ್ರರಂಗದಲ್ಲಿ ಭಾರಿ ಕುತೂಹಲ ಮೂಡಿಸಿರುವ ಮಣಿರತ್ನಂ ನಿರ್ದೇಶನದ 'ಪೊನ್ನಿಯನ್ ಸೆಲ್ವನ್' ಸಿನಿಮಾದ ಕೊನೆಯ ಹಂತದ ಚಿತ್ರೀಕರಣ ಜುಲೈ 20 ರಿಂದ ಶುರುವಾಗಲಿದೆ. ಕೊರೊನಾ ಲಾಕ್‌ಡೌನ್ ಕಾರಣದಿಂದ ಬ್ರೇಕ್ ತೆಗೆದುಕೊಂಡಿದ್ದ ಚಿತ್ರತಂಡ ಈಗ ಶೂಟಿಂಗ್‌ಗೆ ಮರುಚಾಲನೆ ಕೊಡ್ತಿದೆ.

  ಸದ್ಯದ ವರದಿಗಳ ಪ್ರಕಾರ, ಮಣಿರತ್ನಂ ಪೊನ್ನಿಯನ್ ಸೆಲ್ವನ್ ಸಿನಿಮಾದ ಕೊನೆಯ ಶೆಡ್ಯೂಲ್ ಚಿತ್ರೀಕರಣ ಪಾಂಡಿಚೆರಿಯಲ್ಲಿ ಪ್ಲಾನ್ ಮಾಡಿದ್ದು, ಅದಕ್ಕೆ ಅಗತ್ಯ ತಯಾರಿ ನಡೆದಿದೆ. ಜುಲೈ 20 ರಿಂದ ಪಾಂಡಿಚೆರಿಯಲ್ಲಿ ಶೂಟಿಂಗ್ ಆರಂಭಿಸುವ ಸಾಧ್ಯತೆ ಇದ್ದು, ಪ್ರಮುಖ ನಟ ಜಯಂ ರವಿ ಭಾಗಿಯಾಗಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

  ಮತ್ತೊಂದೆಡೆ ಬಾಲಿವುಡ್ ನಟಿ ಐಶ್ವರ್ಯ ರೈ ಬಚ್ಚನ್ ಸಹ ಪೊನ್ನಿಯನ್ ಸೆಲ್ವನ್ ಕೊನೆಯ ಹಂತದ ಶೂಟಿಂಗ್‌ಗಾಗಿ ಪತಿ ಹಾಗೂ ಮಗಳ ಜೊತೆ ಪಾಂಡಿಚೆರಿ ಬಂದಿಳಿದಿದ್ದಾರೆ. ಕೊನೆಯ ಶೆಡ್ಯೂಲ್‌ನಲ್ಲಿ ತಮಿಳು ನಟ ಕಾರ್ತಿ ಮತ್ತು ವಿಕ್ರಂ ಸಹ ಪಾಲ್ಗೊಳ್ಳುವ ನಿರೀಕ್ಷೆ ಇದೆ.

  ಕಳೆದ ಜನವರಿ ತಿಂಗಳಲ್ಲಿ ಹೈದರಾಬಾದ್‌ನಲ್ಲಿ ಪೊನ್ನಿಯನ್ ಸೆಲ್ವನ್ ಶೂಟಿಂಗ್ ನಡೆದಿತ್ತು. ಅದಾದ ಬಳಿಕ ಲಾಕ್‌ಡೌನ್ ಹಿನ್ನೆಲೆ ಅಲ್ಪವಿರಾಮ ತೆಗೆದುಕೊಂಡಿದ್ದರು.

  ಪೊನ್ನಿಯನ್ ಸೆಲ್ವನ್ ಚಿತ್ರವನ್ನು ಎರಡು ಭಾಗಗಳಲ್ಲಿ ತಯಾರಿಸುತ್ತಿದ್ದು, ಮೊದಲ ಭಾಗ 2022ರ ಸಮ್ಮರ್‌ನಲ್ಲಿ ತೆರೆಗೆ ಬರಬಹುದು. ಎ ಆರ್ ರೆಹಮಾನ್ ಚಿತ್ರಕ್ಕೆ ಸಂಗೀತ ಒದಗಿಸುತ್ತಿದ್ದು, ಲೈಕಾ ಪ್ರೊಡಕ್ಷನ್ ಬಂಡವಾಳ ಹಾಕಿದ್ದಾರೆ.

  Ponniyin Selvan shoot working progress going on pondicherry
  ಮೈತುಂಬ ವಿವಾದಗಳಿದ್ದರೂ ದರ್ಶನ್ ಸ್ಟಾರ್ ಗಿರಿ ಮಂಕಾಗದಿರಲು ಇಲ್ಲಿವೆ ಕಾರಣಗಳು | Filmibeat Kannada

  ಪೊನ್ನಿಯನ್ ಸೆಲ್ವನ್ ಚಿತ್ರದಲ್ಲಿ ಬಹುದೊಡ್ಡ ತಾರಬಳಗ ಇದೆ. ಚಿತ್ರದ ಪ್ರಧಾನ ಪಾತ್ರದಲ್ಲಿ ತ್ರಿಷಾ ನಟಿಸಿದ್ದಾರೆ. ಐಶ್ವರ್ಯ ರೈ ಬಚ್ಚನ್, ಅಮಿತಾಭ ಬಚ್ಚನ್, ವಿಕ್ರಂ, ವಿಕ್ರಂ ಪ್ರಭು, ಜಯ ರವಿ, ಐಶ್ವರ್ಯ ಲಕ್ಷ್ಮಿ, ಕಿಶೋರ್, ಸಾರಾ ಅರ್ಜುನ್, ಪ್ರಕಾಶ್ ರಾಜ್ ಸೇರಿದಂತೆ ಹಲವರು ನಟರು ಇರಲಿದ್ದಾರೆ.

  English summary
  Bollywood actress Aishwarya Rai Bachchan Arrived for Ponniyin Selvan Shooting. She Will be having 6 Days Continuous Shoot starting from July 20 at Pondicherry.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X