For Quick Alerts
  ALLOW NOTIFICATIONS  
  For Daily Alerts

  ದಳಪತಿ ವಿಜಯ್ ಜೊತೆ ನಟಿಸಲು ಪೂಜಾ ಹೆಗ್ಡೆ ಇಷ್ಟೊಂದು ಸಂಭಾವನೆ ಪಡೆಯುತ್ತಿದ್ದಾರಾ?

  |

  ತಮಿಳು ನಟ ದಳಪತಿ ವಿಜಯ್ ಸದ್ಯ 65ನೇ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಇನ್ನೂ ಹೆಸರಿಡದ ಈ ಚಿತ್ರಕ್ಕೆ ನೆಲ್ಸನ್ ದಿಲೀಪ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಮಾಸ್ಟರ್ ಸಿನಿಮಾ ಬಳಿಕ ವಿಜಯ್ ನಟಿಸುತ್ತಿರುವ ಚಿತ್ರ ಇದಾಗಿದೆ.

  ಈಗಾಗಲೇ ಮೊದಲ ಹಂತದ ಚಿತ್ರೀಕರಣ ಪ್ರಾರಂಭವಾಗಿದ್ದು, ಸಿನಿಮಾತಂಡ ವಿದೇಶಕ್ಕೆ ಹಾರಿದೆ. ಜಾರ್ಜಿಯಾದಲ್ಲಿ ದಳಪತಿ 65 ಚಿತ್ರದ ಮೊದಲ ಹಂತದ ಚಿತ್ರೀಕರಣ ಶುರುವಾಗಿದೆ. ಔಟ್ ಅಂಡ್ ಔಟ್ ಆಕ್ಷನ್ ಎಂಟರ್ಟೈನರ್ ಸಿನಿಮಾ ಇದಾಗಿದೆ. ಚಿತ್ರದಲ್ಲಿ ವಿಜಯ್ ಗೆ ನಾಯಕಿಯಾಗಿ ಪೂಜಾ ಹೆಗ್ಡೆ ಕಾಣಿಸಿಕೊಳ್ಳುತ್ತಿದ್ದಾರೆ. ಮೊದಲ ಬಾರಿಗೆ ದಳಪತಿ ಜೊತೆ ತೆರೆಹಂಚಿಕೊಳ್ಳುತ್ತಿದ್ದು, ಚಿತ್ರೀಕರಣದಲ್ಲಿ ಭಾಗಿಯಾಗಲು ಉತ್ಸುಕರಾಗಿದ್ದಾರೆ. ಮುಂದೆ ಓದಿ..

  ವಿಜಯ್ 'ದಳಪತಿ 65' ಚಿತ್ರದ ಅದ್ದೂರಿ ಮುಹೂರ್ತ: ಪೂಜಾ ಹೆಗ್ಡೆ ಗೈರಾಗಿದ್ದೇಕೆ?ವಿಜಯ್ 'ದಳಪತಿ 65' ಚಿತ್ರದ ಅದ್ದೂರಿ ಮುಹೂರ್ತ: ಪೂಜಾ ಹೆಗ್ಡೆ ಗೈರಾಗಿದ್ದೇಕೆ?

  ಅತೀ ಹೆಚ್ಚು ಸಂಭಾವನೆ ಪಡೆಯುತ್ತಿರುವ ಪೂಜಾ

  ಅತೀ ಹೆಚ್ಚು ಸಂಭಾವನೆ ಪಡೆಯುತ್ತಿರುವ ಪೂಜಾ

  ಪೂಜಾ ಹೆಗ್ಡೆ ದಳಪತಿ ವಿಜಯ್ ಜೊತೆ ನಟಿಸಲು ಭರ್ಜರಿ ಮೊತ್ತದ ಸಂಭಾವನೆ ಪಡೆಯುತ್ತಿದ್ದಾರೆ. ಈಗಾಗಲೇ ತೆಲುಗು ಸಿನಿಮಾರಂಗದಲ್ಲಿ ಸ್ಟಾರ್ ಕಲಾವಿದರ ಜೊತೆ ನಟಿಸಿ ಖ್ಯಾತಿಗಳಿಸಿರುವ ಪೂಜಾ, ಹೆಚ್ಚು ಸಂಭಾವನೆ ತೆಗೆದುಕೊಳ್ಳುವ ಮೂಲಕ ಸುದ್ದಿಯಾಗಿದ್ದರು. ಇದೀಗ ತಮಿಳಿನ ಮೊದಲ ಸಿನಿಮಾಗೂ ಅತೀ ಹೆಚ್ಚು ಸಂಭಾವನೆ ತೆಗೆದುಕೊಳ್ಳುತ್ತಿದ್ದಾರೆ.

  3 ಕೋಟಿ ರೂ. ಸಂಭಾವನೆ ಪಡೆದ ಪೂಜಾ

  3 ಕೋಟಿ ರೂ. ಸಂಭಾವನೆ ಪಡೆದ ಪೂಜಾ

  ಈ ಮೊದಲು ಪೂಜಾ ತೆಗೆದುಕೊಂಡ ಸಂಭಾವನೆಗಿಂತ ಹೆಚ್ಚಿನ ಮೊತ್ತವನ್ನು ದಳಪತಿ 65 ಸಿನಿಮಾಗೆ ಪಡೆಯುತ್ತಿದ್ದಾರೆ. ಮೂಲಗಳ ಪ್ರಕಾರ ಪೂಜಾ ಹೆಗ್ಡೆ 3 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ. ಅಂದಹಾಗೆ ಪೂಜಾ ಇದುವರೆಗೂ ಪಡೆದ ಸಂಭಾವನೆಗಿಂತ ಇದು ಹೆಚ್ಚು ಮೊತ್ತವಾಗಿದೆಯಂತೆ. ಪೂಜಾ ದಕ್ಷಿಣ ಭಾರತದಲ್ಲಿ ಮಾತ್ರವಲ್ಲದೇ ಹಿಂದಿ ಸಿನಿಮಾರಂಗದಲ್ಲೂ ಬ್ಯುಸಿಯಾಗಿದ್ದಾರೆ. ವಿಜಯ್ ಜೊತೆ ನಟಿಸುವ ಅವಕಾಶ ಸಿಗುತ್ತಿದ್ದಂತೆ ಡೇಟ್ ಸಮಸ್ಯೆ ಇದ್ದರೂ ಹೊಂದಾಣಿಕೆ ಮಾಡಿಕೊಂಡು ಚಿತ್ರಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ.

  ರಾಧೆ ಶ್ಯಾಮ್ ಬಿಡುಗಡೆಗೆ ಕಾಯುತ್ತಿರುವ ಪೂಜಾ

  ರಾಧೆ ಶ್ಯಾಮ್ ಬಿಡುಗಡೆಗೆ ಕಾಯುತ್ತಿರುವ ಪೂಜಾ

  ಪೂಜಾ ಸದ್ಯ ದಕ್ಷಿಣದಲ್ಲಿ ತೆಲುಗಿನ ರಾಧೆ ಶ್ಯಾಮ್ ರಿಲೀಸ್ ಗೆ ಕಾಯುತ್ತಿದ್ದಾರೆ. ಜೊತೆಗೆ ಸಲ್ಮಾನ್ ಖಾನ್ ಮುಂದಿನ ಸಿನಿಮಾದಲ್ಲಿ ಪೂಜಾ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಪೂಜಾ ಈಗಾಗಲೇ ತೆಲುಗಿನಲ್ಲಿ ಮಹೇಶ್ ಬಾಬು ಮತ್ತು ಅಲ್ಲು ಅರ್ಜುನ್ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ತೆಲುಗಿನಲ್ಲಿ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಪೂಜಾ ಅನೇಕ ಸ್ಟಾರ್ ಕಲಾವಿದರಿಗೆ ಲಕ್ಕಿ ನಾಯಕಿಯಾಗಿದ್ದಾರೆ.

  ಮೊದಲ ಮನೆ ಖರೀದಿಸಿದ ನಟಿ ಪೂಜಾ ಹೆಗ್ಡೆ: ಬೆಲೆ ಕಡಿಮೆ ಇಲ್ಲಮೊದಲ ಮನೆ ಖರೀದಿಸಿದ ನಟಿ ಪೂಜಾ ಹೆಗ್ಡೆ: ಬೆಲೆ ಕಡಿಮೆ ಇಲ್ಲ

  ಯುಗಾದಿ ಹಬ್ಬದ ದಿನ ದರ್ಶನ್ ಮುಂದಿನ ಸಿನಿಮಾ ಅನೌನ್ಸ್!!! | Filmibeat Kannada
  ಮಹೇಶ್ ಬಾಬು ಮುಂದಿನ ಸಿನಿಮಾಗೆ ಪೂಜಾ ನಾಯಕಿ

  ಮಹೇಶ್ ಬಾಬು ಮುಂದಿನ ಸಿನಿಮಾಗೆ ಪೂಜಾ ನಾಯಕಿ

  ಮಹೇಶ್ ಬಾಬು ಸದ್ಯ ಸರ್ಕಾರು ವಾರಿ ಪಾಟ ಸಿನಿಮಾದಲ್ಲಿ ನಿರತರಾಗಿದ್ದಾರೆ. ಈ ಸಿನಿಮಾ ಬಳಿಕ ಮಹೇಶ್ ಬಾಬು ತ್ರಿವಿಕ್ರಮ್ ಜೊತೆ ಸಿನಿಮಾ ಮಾಡಲಿದ್ದಾರೆ ಎನ್ನುವ ಸುದ್ದಿ ಟಾಲಿವುಡ್ ಅಂಗಳದಲ್ಲಿ ಕೇಳಿ ಬರುತ್ತಿದೆ. ಇಬ್ಬರ ಸಿನಿಮಾ ಸೆಟ್ಟೇರುವ ಮೊದಲೇ ಪೂಜಾ ಹೆಗ್ಡೆ ನಾಯಕಿ ಎನ್ನುವ ಸುದ್ದಿ ಹರಿದಾಡುತ್ತಿದೆ. ಪೂಜಾ ಈಗಾಗಲೇ ಮಹೇಶ್ ಬಾಬು ಜೊತೆ ಮಹರ್ಷಿ ಸಿನಿಮಾದಲ್ಲಿ ನಟಿಸಿದ್ದಾರೆ. ಇದೀಗ ಮತ್ತೆ ಎರಡನೇ ಭಾರಿ ಮಹೇಶ್ ಬಾಬುಗೆ ನಾಯಕಿಯಾಗುವ ಅವಕಾಶ ಒಲಿದು ಬಂದಿದೆ.

  English summary
  Actress Pooja Hegde charges whopping 3 crore for Vijay's Thalapathy 65.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X