ವಿಜಯ್ 65ನೇ ಚಿತ್ರಕ್ಕೆ ಕೊನೆಗೂ ನಾಯಕಿ ಪಕ್ಕಾ: ಪೂಜಾಗೆ ಒಲಿದ ಅದೃಷ್ಟ
ತಮಿಳು ನಟ ವಿಜಯ್ ನಟಿಸಲಿರುವ 65ನೇ ಚಿತ್ರದ ಆರಂಭಕ್ಕೂ ಮುನ್ನವೇ ಹೆಚ್ಚು ಸದ್ದು ಮಾಡಿದೆ. ಈ ಮುಂಚೆ ಈ ಚಿತ್ರವನ್ನು ಎಆರ್ ಮುರುಗದಾಸ್ ನಿರ್ದೇಶನ ಮಾಡಬೇಕಿತ್ತು. ಪ್ರೊಡಕ್ಷನ್ ಸಂಸ್ಥೆ ಹಾಗೂ ವಿಜಯ್ ಜೊತೆಗಿನ ಭಿನ್ನಾಭಿಪ್ರಾಯಗಳಿಂದ ಮುರುಗದಾಸ್ ಹೊರಬಂದರು.
ಆ ನಂತರ ಆ ಜಾಗಕ್ಕೆ 'ಕೋಲಮಾವು ಕೋಕಿಲಾ' ನಿರ್ದೇಶಕ ದಿಲೀಪ್ ನೆಲ್ಸನ್ ಕುಮಾರ್ ಬಂದರು. ಈಗ, ನೆಲ್ಸನ್ ದಿಲೀಪ್ ಮತ್ತು ವಿಜಯ್ ಕಾಂಬಿನೇಷನ್‌ನಲ್ಲಿ 65ನೇ ಪ್ರಾಜೆಕ್ಟ್ ಮೂಡಿಬರುತ್ತಿದ್ದು, ಈಗ ಚಿತ್ರದ ನಾಯಕಿಯಾಗಿ ಪೂಜಾ ಹೆಗ್ಡೆ ಆಯ್ಕೆಯಾಗಿದ್ದಾರೆ. ಈ ಕುರಿತು ಸನ್ ಪಿಕ್ಚರ್ಸ್ ಅಧಿಕೃತವಾಗಿ ಘೋಷಣೆ ಮಾಡಿದೆ. ಮುಂದೆ ಓದಿ...

ಕೊನೆಗೂ ಪೂಜಾ ಹೆಗ್ಡೆಗೆ ಒಲಿದ ಅದೃಷ್ಟ
ವಿಜಯ್ ನಟಿಸಲಿರುವ 65ನೇ ಚಿತ್ರದಲ್ಲಿ ಸೌತ್ ಇಂಡಿಯಾದ ಚೆಲುವೆ ಪೂಜಾ ಹೆಗ್ಡೆ ನಾಯಕಿಯಾಗಿ ಕಾಣಿಸಿಕೊಳ್ಳುವುದು ಖಚಿತವಾಗಿದೆ. ಈ ಕುರಿತು ಸನ್ ಪಿಕ್ಚರ್ಸ್ ಅಧಿಕೃತ ಘೋಷಣೆ ಮಾಡಿದ್ದು, ದಳಪತಿ 65ನೇ ಪ್ರಾಜೆಕ್ಟ್‌ಗೆ ಸ್ವಾಗತ ಬಯಸಿದ್ದಾರೆ.

ರಶ್ಮಿಕಾ ಹೆಸರು ಚರ್ಚೆಯಲ್ಲಿತ್ತು!
ಈ ಮೊದಲು ಪೂಜಾ ಹೆಗ್ಡೆಗೂ ಮೊದಲೂ ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಟಿಸುವ ಸಾಧ್ಯತೆ ಇದೆ ಎಂಬ ಸುದ್ದಿ ಚರ್ಚೆಯಲ್ಲಿತ್ತು. ಆದರೆ, ರಶ್ಮಿಕಾ ಹೆಸರು ಅಂತಿಮವಾಗಿಲ್ಲ. ರಶ್ಮಿಕಾ ಬದಲು ಪೂಜಾ ಹೆಗ್ಡೆ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಅರುಣ್ ವಿಜಯ್ ಖಳನಟ
ದಕ್ಷಿಣ ಭಾರತದ ಖ್ಯಾತ ನಟ ಅರುಣ್ ವಿಜಯ್ ಈ ಚಿತ್ರದಲ್ಲಿ ವಿಲನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕನ್ನಡದ 'ಚಕ್ರವ್ಯೂಹ' ಹಾಗೂ ಅಜಿತ್ ನಟನೆಯ 'ಎನ್ನೈ ಅರಿಂದಾಲ್' ಅಂತಹ ಸಿನಿಮಾಗಳಲ್ಲಿ ಅರುಣ್ ವಿಜಯ್ ವಿಲನ್ ಆಗಿ ನಟಿಸಿದ್ದರು. ನಾಯಕನಾಗಿಯೂ ಹಲವು ಸಿನಿಮಾ ಮಾಡಿದ್ದಾರೆ.
Recommended Video

ಶೂಟಿಂಗ್ ಯಾವಾಗ?
ಜನವರಿ 13 ರಂದು ವಿಜಯ್ ಅಭಿನಯದ 'ಮಾಸ್ಟರ್' ಸಿನಿಮಾ ತೆರೆಕಂಡಿತ್ತು. ಬಾಕ್ಸ್ ಆಫೀಸ್‌ನಲ್ಲಿ 200 ಕೋಟಿ ಬಿಸಿನೆಸ್ ಮಾಡಿತ್ತು. ಈಗ ವಿಜಯ್ 65ನೇ ಪ್ರಾಜೆಕ್ಟ್ ಆರಂಭಿಸಬೇಕಿದೆ. ಯಾವಾಗ ಶೂಟಿಂಗ್ ಶುರುವಾಗಲಿದೆ ಎನ್ನುವುದರ ಬಗ್ಗೆ ಪಕ್ಕಾ ಮಾಹಿತಿ ಇಲ್ಲ.


Click it and Unblock the Notifications











