ನ್ಯಾಷನಲ್ ಸ್ಟಾರ್ ಯಶ್ ಜೊತೆ ರೀಲ್ಸ್ ಮಾಡಿದ್ದ ಯೂಟ್ಯೂಬರ್ ಈಗ ದೊಡ್ಡ ಚಿತ್ರಕ್ಕೆ ನಾಯಕಿ..!

ಹಣೆಬರಹವನ್ನೇ ನೆಚ್ಚಿಕೊಂಡು ಕೆಲವರು ಕೂರಲ್ಲ. ಬದಲಿಗೆ ತಲುಪಬೇಕಾದ ಗಮ್ಯದ ಕಡೆ ಗಮನವಹಿಸಿ ಕೆಲಸ ಮಾಡ್ತಾರೆ. ನಿರಂತರವಾಗಿ ಪರಿಶ್ರಮವನ್ನೂ ಪಡ್ತಾರೆ. ಒಂದಿಲ್ಲೊಂದು ದಿನ ಇವರ ಈ ಬೆವರಿಗೆ ತಕ್ಕ ಪ್ರತಿಫಲ ಸಿಕ್ಕಿಯೇ ಸಿಗುತ್ತೆ. ಇದಕ್ಕೆ ನಿಹಾರಿಕಾ ಅತ್ಯುತ್ತಮ ಉದಾಹರಣೆ

ಹೌದು, ನಿಹಾರಿಕಾ.. ಅಖಂಡ ಆಂಧ್ರದ ಸೋಶಿಯಲ್ ಮೀಡಿಯಾ ಸ್ಟಾರ್. ಕೇವಲ ತೆಲುಗು ರಾಜ್ಯ ಅಷ್ಟೇ ಅಲ್ಲ ಬಾಲಿವುಡ್‌ನಲ್ಲಿ ಕೂಡ ಇವರದ್ದೇ ಹವಾ. ತಮ್ಮ ತಮ್ಮ ಚಿತ್ರಗಳ ಬಿಡುಗಡೆ ಸಮಯದಲ್ಲಿ ಪ್ರಚಾರಕ್ಕೆ ಮಹೇಶ್ ಬಾಬು, ವಿಜಯ್ ದೇವರಕೊಂಡ ಅವರಿಂದ ಹಿಡಿದು ರಣ್‌ಬೀರ್ ಕಪೂರ್, ಕರೀನಾ ಕಪೂರ್‌,ಪ್ರಿಯಾಂಕ ಚೋಪ್ರಾವರೆಗೆ ಎಲ್ಲರೂ ಇವರ ಜೊತೆ ಕೈ ಜೋಡಿಸುತ್ತಾರೆ. ವಿಶೇಷ-ವಿಭಿನ್ನ ಅನಿಸುವ ಒಂದೆರಡು ನಿಮಿಷದ ವಿಡಿಯೋಗಳನ್ನ ಮಾಡ್ತಾರೆ.

Popular Digital Content Creator Niharika NM To Make Her Acting Debut With Tamil Film

ಇನ್ನೂ ನಿಹಾರಿಕಾ ಬೇಡಿಕೆ ಎಷ್ಟಿದೆ ಅಂದರೆ ಸಾಕ್ಷಾತ್ ನ್ಯಾಷನಲ್ ಸ್ಟಾರ್ ಯಶ್ ತಮ್ಮ ಕೆ.ಜಿ.ಎಫ್ 02 ಚಿತ್ರದ ಬಿಡುಗಡೆ ಸಮಯದಲ್ಲಿ, ನಿಹಾರಿಕಾ ಅವರನ್ನ ಚಿತ್ರದ ಪ್ರಚಾರಕ್ಕೆ ಬಳಸಿಕೊಂಡಿದ್ದರು. ಆ ಕಾಲಕ್ಕೆ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಕೂಡ ಆಗಿತ್ತು. ಇಂಥ ನಿಹಾರಿಕಾ ಈಗ ಕಂಟೆಂಟ್ ಕ್ರಿಯೇಟರ್‌ನಿಂದ ನಾಯಕಿಯಾಗಿ ಬಡ್ತಿ ಪಡೆಯುತ್ತಿದ್ದಾರೆ. ತೆಲುಗು ಅಲ್ಲ ಬದಲಿಗೆ ತಮಿಳು ಚಿತ್ರರಂಗದ ಮೂಲಕ ಚಿತ್ರರಂಗವನ್ನ ಪ್ರವೇಶಿಸುತ್ತಿದ್ದಾರೆ

ನಿಹಾರಿಕಾ ನಾಯಕಿಯಾಗಿ ಅಭಿನಯಿಸಲಿರುವ ಈ ಚೊಚ್ಚಲ ಚಿತ್ರವನ್ನ, ದಕ್ಷಿಣದ ಪ್ರಖ್ಯಾತ ನಿರ್ಮಾಣ ಸಂಸ್ಥೆ ಲೈಕಾ ನಿರ್ಮಾಣ ಮಾಡುತ್ತಿದೆ. ಅಥರ್ವ ಈ ಚಿತ್ರದ ನಾಯಕ. ಇನ್ನೂ ಆಕಾಶ್ ಭಾಸ್ಕರನ್ ಈ ಚಿತ್ರವನ್ನ ನಿರ್ದೇಶಿಸಲಿದ್ದಾರೆ. ನಿರ್ದೇಶಕರಾಗಿ ಇದು ಇವರ ಮೊದಲ ಪ್ರಯತ್ನ.

Popular Digital Content Creator Niharika NM To Make Her Acting Debut With Tamil Film

ಇನ್ನೂ.. ದಕ್ಷಿಣದ ಖ್ಯಾತ ಸಂಗೀತ ನಿರ್ದೇಶಕ ಎಸ್.ಥಮನ್ ಈ ಚಿತ್ರದ ಸಂಗೀತ ನಿರ್ದೇಶಕರು. ಅಷ್ಟೇ ಅಲ್ಲ.. ಚಿತ್ರದಲ್ಲಿ ಪಾತ್ರವೊಂದನ್ನು ಕೂಡ ನಿರ್ವಹಿಸುತ್ತಿದ್ದಾರೆ ಎಸ್ ಥಮನ್. ಉಳಿದಂತೆ ಇನ್ನೂ ಹೆಸರಿಡದ ಈ ಚಿತ್ರ ಪಕ್ಕಾ ಹಾಸ್ಯ ಪ್ರಧಾನ ಸಿನಿಮಾ. ಪ್ರಣಯ-ಹಾಸ್ಯ-ಭಗ್ನಪ್ರೇಮ ಮತ್ತು ರೋಡ್‌ ಟ್ರಿಪ್ ಈ ಚಿತ್ರದ ಜೀವಾಳ.ಚಿತ್ರದ ತಾಂತ್ರಿಕ ವಿಭಾಗದಲ್ಲಿ ಯಾರೆಲ್ಲ ಕೆಲಸ ಮಾಡಲಿದ್ದಾರೆ ಅನ್ನುವ ಪ್ರಶ್ನೆಗೆ ಸದ್ಯಕ್ಕೆ ಉತ್ತರ ಇಲ್ಲ. ಸದ್ಯ ಚಿತ್ರ ಪ್ರೀ ಪ್ರೊಡಕ್ಷನ್ ಕೆಲಸ ಆರಂಭವಾಗಿದ್ದು, ಶೀಘ್ರದಲ್ಲಿಯೇ ಚಿತ್ರದ ಮುಹೂರ್ತ ನೆರವೆರಲಿದೆ.

ಒಟ್ನಲ್ಲಿ ಇನ್​ಸ್ಟಾಗ್ರಾಮ್​ನಲ್ಲಿ ಹೆಚ್ಚು ಕಡಿಮೆ 30 ಲಕ್ಷ ಹಿಂಬಾಲಕರನ್ನ ಹೊಂದಿರುವ ನಿಹಾರಿಕಾ ಎನ್.ಎಂ ಈಗ ನಾಯಕಿಯಾಗಿ ಹೊಸ ಅಧ್ಯಾಯ ಆರಂಭ ಮಾಡಲು ಅಣಿಯಾಗಿದ್ದಾರೆ. ಮೊನ್ನೆ ಜಗದ್ವಿಖ್ಯಾತ ಕಾನ್ ಫಿಲ್ಮ್ ಫೆಸ್ಟಿವಲ್ ನಲ್ಲಿಯೂ ಕೂಡ ಮಿಂಚಿದ್ದಾರೆ. ರತ್ನಗಂಬಳಿ ಮೇಲೆ ಮಾರ್ಜಾಲ ನಡಿಗೆಯನ್ನ ಮಾಡುವುದರ ಮೂಲಕ ಜಾಗತಿಕ ಮಟ್ಟದಲ್ಲಿಯೂ ಸದ್ದು ಮಾಡಿದ್ದಾರೆ.

ತಮ್ಮ ಹಾಸ್ಯ ಪ್ರಜ್ಞೆಯ ಮೂಲಕವೇ ಹೆಸರುವಾಸಿಯಾದ ನಿಹಾರಿಕಾ ನಾಯಕಿಯಾಗಿ ನೆಲೆಯೂರುತ್ತಾರಾ, ಇವರ ರೀಲ್ಸ್ ನೋಡಿ ಹೊಟ್ಟೆ ಹುಣ್ಣಾಗುವಂತೆ ನಕ್ಕ ಸಾಮಾಜಿಕ ಜಾಲತಾಣದ ಬಳಕೆದಾರರು ನಾಯಕಿಯಾಗಿ ಇವರನ್ನ ಅಪ್ಪಿ-ಒಪ್ಪಿಕೊಳ್ಳುತ್ತಾರಾ ಅನ್ನುವುದನ್ನ ಈಗ ಕಾದು ನೋಡಬೇಕಿದೆ.

More from Filmibeat

English summary
Renowned for her humorous digital content, popular creator Niharika NM is poised to mark her cinematic debut in a Tamil film alongside lead actor Atharvaa
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X