ಅಂಧಾದುನ್ ರೀಮೇಕ್‌ನಲ್ಲಿ ನಟಿಸಲಿದ್ದಾರೆ ಕೋಟಿಗೊಬ್ಬ-2 ನಿರ್ದೇಶಕ

ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಕೆಎಸ್ ರವಿಕುಮಾರ್ ತಮಿಳಿನ ಅಂಧಾದುನ್ ರೀಮೇಕ್‌ನಲ್ಲಿ ನಟಿಸಲಿದ್ದಾರೆ. ಪ್ರಶಾಂತ್ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ 'ಅಂಧಗನ್' ಚಿತ್ರದಲ್ಲಿ ಕೆಎಸ್ ರವಿಕುಮಾರ್ ವಿಶೇಷ ಪಾತ್ರ ನಿರ್ವಹಿಸುತ್ತಿದ್ದಾರೆ.

ಈ ಸುದ್ದಿಯನ್ನು ಸ್ವತಃ ಚಿತ್ರತಂಡ ಪ್ರಕಟಿಸಿದೆ. ಆದರೆ, ಯಾವ ಪಾತ್ರ ಎನ್ನುವುದನ್ನು ಬಿಟ್ಟುಕೊಟ್ಟಿಲ್ಲ.

Popular Director KS Ravikumar on board for Andhagan as Actor

ಅಂಧಾದುನ್ ಚಿತ್ರದಲ್ಲಿ ಆಯುಷ್ಮಾನ್ ಖುರಾನ್ ಕಾಣಿಸಿಕೊಂಡಿದ್ದ ಪಾತ್ರವನ್ನು ತಮಿಳಿನಲ್ಲಿ ಪ್ರಶಾಂತ್ ಮಾಡುತ್ತಿದ್ದಾರೆ. ಟಬು ನಟಿಸಿದ್ದ ಪಾತ್ರದಲ್ಲಿ ಹಿರಿಯ ನಟಿ ಸಿಮ್ರಾನ್ ಅಭಿನಯಿಸುತ್ತಿದ್ದಾರೆ.

ರಾಧಿಕಾ ಆಪ್ಟೆ ಪಾತ್ರದಲ್ಲಿ ಯಾರು ಅಭಿನಯಿಸಲಿದ್ದಾರೆ ಎನ್ನುವುದು ಸದ್ಯಕ್ಕೆ ಕುತೂಹಲವಾಗಿ ಉಳಿದಿದೆ. ಇನ್ನುಳಿದಂತೆ ಪ್ರಶಾಂತ್ ಅವರ ತಂದೆ ಹಿರಿಯ ನಟ ತ್ಯಾಗರಾಜ್ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. 'ಪೊನ್ಮಗಲ್ ವಂಧಲ್' ಖ್ಯಾತಿಯ ಜೆಜೆ ಫೆಡ್ರಿಕ್ ನಿರ್ದೇಶನ ಮಾಡ್ತಿದ್ದಾರೆ.

ತೆಲುಗಿನಲ್ಲಿ ನಿತೀನ್ ನಾಯಕರಾಗಿ ನಟಿಸುತ್ತಿದ್ದು, ಟಬು ಪಾತ್ರದಲ್ಲಿ ತಮನ್ನಾ ಭಾಟಿಯಾ ಕಾಣಿಸಿಕೊಳ್ಳುತ್ತಿದ್ದಾರೆ. ರಾಧಿಕಾ ಆಪ್ಟೆ ಪಾತ್ರದಲ್ಲಿ ನಭಾ ನಟೇಶ್ ನಟಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ತೆಲುಗು ವರ್ಷನ್ ಚಿತ್ರ ಈಗಾಗಲೇ ಅಧಿಕೃತವಾಗಿ ಆರಂಭವಾಗಿದೆ.

ಮಲಯಾಳಂ ಭಾಷೆಯಲ್ಲೂ 'ಅಂಧಾದುನ್' ರೀಮೇಕ್ ಮೂಡಿಬರುತ್ತಿದ್ದು, ಈ ಚಿತ್ರದಲ್ಲಿ ಪೃಥ್ವಿರಾಜ್ ಸುಕುಮಾರನ್ ನಾಯಕನಾಗಿ ನಟಿಸುತ್ತಿದ್ದಾರೆ ಎನ್ನಲಾಗಿದೆ. ಟಬು ನಿರ್ವಹಿಸಿದ್ದ ವಿಲನ್ ಪಾತ್ರದಲ್ಲಿ ಮಮತಾ ಮೋಹನ್‌ದಾಸ್ ಮತ್ತು ರಾಧಿಕಾ ಆಪ್ಟೆ ನಟಿಸಿದ್ದ ಪಾತ್ರದಲ್ಲಿ ಅಹನಾ ಕೃಷ್ಣ ಬಣ್ಣ ಹಚ್ಚುವ ಸಾಧ್ಯತೆ ಇದೆ.

More from Filmibeat

English summary
South indian Popular Director KS Ravikumar on board for Andhagan (andhadhun tamil remake) as a Actor.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X