For Quick Alerts
  ALLOW NOTIFICATIONS  
  For Daily Alerts

  ತಮಿಳು ವಿಜಯ್ ಜೊತೆ ಕನ್ನಡದ ಪುನೀತ್ ಪವರ್

  |

  ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ತಮಿಳು ಸ್ಟಾರ್, 'ಇಳೆಯದಳಪತಿ' ಬಿರುದಾಂಕಿತ ವಿಜಯ್ ಅವರೊಂದಿಗೆ ಜೊತೆಯಾಗಿದ್ದರು. ಇವರಿಬ್ಬರೂ ಸೇರಿ ಸಿನಿಮಾ ಮಾಡುತ್ತಿಲ್ಲ. ಶೂಟಿಂಗ್ ಸ್ಪಾಟಿನಲ್ಲಿ ಜೊತೆಯಾಗಿದ್ದೂ ಅಲ್ಲ. ಭೇಟಿಯಾಗಿದ್ದು ಇತ್ತೀಚಿಗೆ ಒಂದು ಕಾರ್ಯಕ್ರಮದಲ್ಲಿ. ಗಂಟೆಗಟ್ಟಲೆ ವೇದಿಕೆಯಲ್ಲಿ ಇಬ್ಬರೂ ಸಂಭಾಷಣೆ ನಡೆಸಿದ್ದಾರೆ.

  ಈ ಇಬ್ಬರ ಸ್ನೇಹ, ಸಂಭಾಷಣೆ ನೋಡಿ ನೆರೆದಿದ್ದ ಚಿತ್ರರಂಗ ಆಶ್ಚರ್ಯಗೊಂಡಿದೆ. ಜೀವಾ ನಾಯಕತ್ವದ ತಮಿಳು ಸೂಪರ್ ಹೀರೋ 'ಮುಗಮೂಡಿ' ಚಿತ್ರದ ಆಡಿಯೋ ಬಿಡುಗಡೆ ಸಮಾರಂಭವದು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ನಮ್ಮ ಪುನೀತ್ ರಾಜ್‌ಕುಮಾರ್ ಹೋಗಿದ್ದರು. ಧ್ವನುಸುರುಳಿ ಬಿಡುಗಡೆ ಮಾಡಿದ್ದು ತಮಿಳು ನಟ ವಿಜಯ್. ಮೊದಲು ಡಿಸ್ಕ್ ಸ್ವೀಕರಿಸಿದವರು ಪುನೀತ್.

  ತಮಿಳು ಚಿತ್ರರಂಗದ ಕಾರ್ಯಕ್ರಮದಲ್ಲಿ ಪುನೀತ್ ಭಾಗವಹಿಸಿದ್ದು ತೀರಾ ಕಡಿಮೆ. ಹೀಗಾಗಿ ಪುನೀತ್‌ ರಾಜ್ ಕುಮಾರ್ ಅವರನ್ನು ಸೇರಿದ್ದ ಎಲ್ಲರೂ ತದೇಕಚಿತ್ತದಿಂದ ನೋಡುತ್ತಿದ್ದರು. 'ವರನಟ ಡಾ. ರಾಜ್‌ಕುಮಾರ್ ಅವರ ಪುತ್ರ' ಎಂಬುವುದು ಒಂದು ಕಾರಣವಾದರೆ ಕನ್ನಡದ ದೊಡ್ಡ ಸ್ಟಾರ್ ಎಂಬುದು ಇನ್ನೊಂದು. ಪುನೀತ್ ಕೂಡ ಚೆನ್ನಾಗಿ ಮಾತನಾಡಿ ಸೇರಿದ್ದವರ ಮೆಚ್ಚುಗೆ ಗಳಿಸಿದರು.

  ಅಂದಹಾಗೆ, 'ಮುಗಮೂಡಿ' ಎಂದರೆ ಮುಖವಾಡ ಎಂದರ್ಥ. ಚಿತ್ರದಲ್ಲಿ ಸೂಪರ್ ಹೀರೋ ಪಾತ್ರದಲ್ಲಿ ಜೀವಾ ನಟಿಸಿದ್ದಾರೆ. ಮುಂಬೈನಲ್ಲಿ ನೆಲೆಸಿರುವ ಮಂಗಳೂರು ಮೂಲದ ನಟಿ ಪೂಜಾ ಹೆಗ್ಡೆ ಈ ಚಿತ್ರಕ್ಕೆ ನಾಯಕಿ. ನರೇನ್, ನಾಸಿರ್ ಮುಂತಾದವರೂ ಮುಗಮೂಡಿ ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರದ ಆಡಿಯೋ ಬಿಡುಗಡೆಯನ್ನು ಚಿತ್ರದ ನಿರ್ಮಾಣ ಸಂಸ್ಥೆ ಯುಟಿವಿ ಹಮ್ಮಿಕೊಂಡಿತ್ತು.

  ಆಡಿಯೋ ಬಿಡುಗಡೆಗೆ ಪುನೀತ್ ಆಗಮಿಸಿರುವುದು ನಿರ್ಮಾಣ ಸಂಸ್ಥೆ ಯುಟಿವಿ ಗೆ ತುಂಬಾ ಖುಷಿ ನೀಡಿತ್ತು. ಯುಟಿವಿ ಸೌತ್ ಹೆಡ್ ಧನಂಜಯನ್, ಟ್ವೀಟರಿನಲ್ಲಿ ಪುನೀತ್ ಹಾಗೂ ವಿಜಯ್‌ ಅವರಿಬ್ಬರಿಗೂ ಧನ್ಯವಾದ ಹೇಳಿದ್ದಾರೆ. ಅಷ್ಟೇ ಅಲ್ಲ, ಚಿತ್ರದ ನಾಯಕ ಜೀವಾ ಕೂಡ ಕಾರ್ಯಕ್ರಮಕ್ಕೆ ಬಂದು ಅಪೂರ್ವ ಕಳೆ ತಂದಿದ್ದಕ್ಕಾಗಿ ಪುನೀತ್ ಹಾಗೂ ವಿಜಯ್ ಅವರಿಬ್ಬರಿಗೂ ಧನ್ಯವಾದ ಅರ್ಪಿಸಿದ್ದಾರೆ. (ಒನ್ ಇಂಡಿಯಾ ಕನ್ನಡ)

  English summary
  Power Star Puneeth Rajkumar participated in the Audio Launch of Tamil actor Jeeva starer upcoming movie 'Mugamoodi'. He is accompanied with Tamil Star Vijay in this programme and speaking continuously. Their friendship attracted Tamil movie industry. 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X